Friday, 23 February 2018

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.


ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ
ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂದು ಖ್ಯಾತ ನ್ಯೂರೋ ಸರ್ಜನ್‌ ಡಾ| ಕೆ.ವಿ. ದೇವಾಡಿಗ ಮಂಗಳೂರು ಹೇಳಿದರು.
ಅವರು ಗುರುವಾರ ಬಾರಕೂರು ಶ್ರೀ ಏಕ ನಾಥೇಶ್ವರೀ ದೇಗುಲದಲ್ಲಿ ದೇವಿ ಪ್ರತಿಷ್ಠಾಪನೆಮತ್ತು ಬ್ರಹ್ಮಕುಂಭಾಭಿಷೇಕ ಪ್ರಯುಕ್ತ ದೇವಾಡಿಗ ಸಮಾಜೋತ್ಸವ ಉದ್ಘಾಟಿಸಿ ಮಾತನಾಡಿದರು.
ಜನಸೇವೆಯೇ ದೇವಿ ಸೇವೆ. ಈ ನಿಟ್ಟಿನಲ್ಲಿ ಸ್ವತ್ಛತೆ, ಅನ್ನದಾನ, ಶಿಕ್ಷಣ, ಆರೋಗ್ಯ ಸುಧಾರಣೆ ಯತ್ತ ದೇಗುಲ ಗಮನ ಹರಿಸಬೇಕು, ಸಮು ದಾಯದ ಕೌಶಲ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಬಿ. ಅಣ್ಣಯ್ಯ ಶೇರಿಗಾರ್‌ ಪುಣೆ, ಬಿ. ಜನಾರ್ದನ ದೇವಾಡಿಗ ಬಾಕೂìರು, ನರಸಿಂಹ ಬಿ. ದೇವಾಡಿಗ ಉಡುಪಿ, ಹಿರಿಯಡ್ಕ ಮೋಹನ್‌ದಾಸ್‌, ಪಿ. ರಾಮಣ್ಣ ಶೇರಿಗಾರ್‌ ಬೆಳಗಾವಿ, ವಾಮನ ಮರೋಳಿ ಮಂಗಳೂರು, ಗೋಪಾಲ ಎಂ. ಮೊಲಿ ಮುಂಬಯಿ, ಸುರೇಶ್‌ಡಿ. ಪಡುಕೋಣೆ. ತುಂಗಾ ಕೃಷ್ಣ ದೇವಾಡಿಗ ಮುಂಬಯಿ, ನಾರಾಯಣ್‌ ಎಂ.ಡಿ. ದುಬಾೖ, ಹರೀಶ್‌ ಶೇರಿಗಾರ್‌ ದುಬಾೖ, ದಿನೇಶ್‌ ಸಿ. ದೇವಾಡಿಗ ನಾಗೂರು, ಎನ್‌. ರಘುರಾಮ ದೇವಾಡಿಗ ಶಿವಮೊಗ್ಗ, ದಿನೇಶ್‌ ಕುಮಾರ್‌ ದುಬಾೖ, ಸುರೇಶ್‌ ದೇವಾಡಿಗ ದುಬಾೖ, ಜನಾರ್ದನ ಎಸ್‌. ದೇವಾಡಿಗ ಉಪ್ಪುಂದ, ನಾಗರಾಜ್‌ ಪಡುಕೋಣೆ, ಸುಬ್ಬ ಜಿ. ದೇವಾಡಿಗಮುಂಬಯಿ, ಸುರೇಶ್‌ ದೇವಾಡಿಗ ಕಂಚಿಕಾನ್‌,ರಾಜೀವ ದೇವಾಡಿಗ ತ್ರಾಸಿ, ಶೀನ ದೇವಾಡಿಗ ತ್ರಾಸಿ, ಡಾ| ಕೆ. ದೇವರಾಜ್‌ ಮಂಗಳೂರು, ರವಿ ಎಸ್‌. ದೇವಾಡಿಗ ಮುಂಬಯಿ, ಸೀತಾರಾಮ ಕೆ. ಉಡುಪಿ, ರಾಘವೇಂದ್ರ ದೇವಾಡಿಗ ಸಾಂಗ್ಲಿ, ಶೇಖರ ದೇವಾಡಿಗ ಐರೋಳಿ, ರಮೇಶ್‌ ದೇವಾಡಿಗ ವಂಡ್ಸೆ, ವಾಸು ಎಸ್‌. ದೇವಾಡಿಗ ಮುಂಬಯಿ, ಮಂಜುನಾಥ ದೇವಾಡಿಗ ಪಡುಕೋಣೆ, ಕೆ. ನಾರಾಯಣ ದೇವಾಡಿಗ ಕುಂದಾ ಪುರ, ಗಣೇಶ ದೇವಾಡಿಗ ಇಸ್ಲಾಂಪುರ, ಎಸ್‌.ಎಂ. ಚಂದ್ರ ಬೆಂಗಳೂರು, ನರಸಿಂಹ ದೇವಾಡಿಗ ಪುಣೆ, ಮಹಾಬಲೇಶ್ವರ ದೇವಾಡಿಗ ಪುಣೆ, ಕೆ.ಮಂಜುನಾಥ ದೇವಾಡಿಗ ದಾವಣಗೆರೆ, ಮಹಾ ಬಲ ದೇವಾಡಿಗ ಹೊಸದಿಲ್ಲಿ, ಗಣೇಶ್‌ ಆರ್‌. ದೇವಾಡಿಗ ಬೆಂಗಳೂರು, ಬಿ.ವಿ. ಪ್ರಶಾಂತ್‌ ಬಾಕೂìರು, ರಾಜು ದೇವಾಡಿಗ ಕಾರ್ಕಡ, ಕೆ. ಗೋವಿಂದ ದೇವಾಡಿಗ ದಾಸರಹಳ್ಳಿ, ಅಣ್ಣು ದೇವಾಡಿಗ ಧರ್ಮಸ್ಥಳ, ನೆಲ್ಲಿಬೆಟ್ಟು ನರಸಿಂಹ ದೇವಾಡಿಗ ಕಾರ್ಕಡ, ಬಿ. ನರಸಿಂಹನ್‌ ಪೊವಾç, ಚೆನ್ನಪ್ಪ ಮೊಲಿ ಉಡುಪಿ, ನಿತೇಶ್‌ ದೇವಾಡಿಗ ಬೆಂಗಳೂರು, ರಮೇಶ್‌ ಜಿ. ದೇವಾಡಿಗ ಮಾರ್ಪಳ್ಳಿ, ಸಿಎ ಸಾರಿಕಾ ದೇವಾಡಿಗ ಬೆಂಗಳೂರು, ಗೋಪಾಲ ದೇವಾಡಿಗ ಕಾರ್ಕಡ ಉಪಸ್ಥಿತರಿದ್ದರು.
ಸಮಾಜೋತ್ಸವ ಸಂಯೋಜಕ ಹಿರಿಯಡ್ಕ ಮೋಹನದಾಸ್‌ ದಂಪತಿಯನ್ನು ಸಮ್ಮಾನಿಸ ಲಾಯಿತು. ಜನಾರ್ದನ ದೇವಾಡಿಗ ಸ್ವಾಗತಿಸಿ, ರವಿ ದೇವಾಡಿಗ  ನಿರೂಪಿಸಿದರು.













ನೀತಿಯಿಂದ ಸತ್ಯವಂತರಾಗಿ ಬಾಳುವುದೇ ಧರ್ಮ: ಡಾ| ವೀರೇಂದ್ರ ಹೆಗ್ಗಡೆ.



ಧರ್ಮ ಸಹಜ ಜೀವನದ ಭಾಗ. ನ್ಯಾಯ, ನೀತಿಯಿಂದ ಸತ್ಯವಂತರಾಗಿ ಬಾಳುವುದೇ ಧರ್ಮ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಬುಧವಾರ ಬಾರಕೂರು ಶ್ರೀ ಏಕನಾಥೇ ಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೈತಿಕ ಶಿಕ್ಷಣ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ ಮಾತನಾಡಿ, ಶ್ರದ್ಧೆ, ನಂಬಿಕೆ, ಸಂಸ್ಕಾರ ನಮ್ಮ ಜೀವನದಲ್ಲಿ ಅಳವಡಿಸಬೇಕು. ಜತೆಗೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂದರು. ಮೊಲಿ ಅವರು ದೇಗುಲಕ್ಕೆ ಸರಕಾರದಿಂದ 2 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದರು.
ಮಣಿಪಾಲ ಮಾಹೆ ವಿಶ್ವಸ್ತ ಟಿ. ಅಶೋಕ್‌ ಪೈ, ಮಾಲತಿ ವಿ. ಮೊಲಿ ಬೆಂಗಳೂರು, ಶಾಸಕರಾದ ಗೋಪಾಲ ಪೂಜಾರಿ, ವಿನಯ ಕುಮಾರ್‌ ಸೊರಕೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅದಾನಿ ಸಮೂಹ ಸಂಸ್ಥೆ ಜತೆ ಆಡಳಿತ ನಿರ್ದೇಶಕ ಕಿಶೋರ್‌ ಆಳ್ವ, ಉದ್ಯಮಿ ಅನಿಲ್‌ ಜೈನ್‌, ದೇವಸ್ಥಾನ ನಿರ್ಮಾಣ ಸಮಿತಿ ಗೌರ ವಾಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಬಿ. ಅಣ್ಣಯ್ಯ ಶೇರಿಗಾರ್‌, ಪ್ರಧಾನ ಕಾರ್ಯದರ್ಶಿ ನರಸಿಂಹ ಬಿ. ದೇವಾಡಿಗ, ಕೋಶಾಧಿಕಾರಿ ಬಿ. ಜನಾರ್ದನ ದೇವಾಡಿಗ, ಮುಖ್ಯ ಸಂಚಾಲಕ ಹಿರಿಯಡ್ಕ ಮೋಹನ್‌ದಾಸ್‌, ವಿಶ್ವಸ್ತರಾದ ಸುರೇಶ ಡಿ. ಪಡುಕೋಣೆ, ಹರೀಶ್‌ ಶೇರಿಗಾರ್‌, ನಾರಾಯಣ ಎಂ. ದೇವಾಡಿಗ, ದಿನೇಶ್‌ ಸಿ. ದೇವಾಡಿಗ, ಜನಾರ್ದನ ಎಸ್‌. ದೇವಾಡಿಗ ಎನ್‌. ರಘುರಾಮ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಡಾ| ದೇವರಾಜ್‌ ಕೆ. ಸ್ವಾಗತಿಸಿ, ಮೋಹನದಾಸ್‌ ಹಿರಿಯಡ್ಕ ಸಮ್ಮಾನಿತರನ್ನು ಪರಿಚಯಿಸಿದರು. ವಿಜೇಶ್‌ ದೇವಾಡಿಗ, ನಾರಾಯಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು

Tuesday, 20 February 2018

ಬಾರ್ಕೂರು: ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಸಂಭ್ರಮ, ನೆರೆದ ಸಾವಿರಾರು ಭಕ್ತರು.



ಕುಂದಾಪುರ: ಜಿಲ್ಲೆಯ ಬಾರ್ಕೂರಿನ ಕಚ್ಚೂರು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದ ಸಮೀಪದ ವಿಶಾಲ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಏಕನಾಥೇಶ್ವರೀ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ, ಸುತ್ತು ಪೌಳಿ, ರಕ್ತೇಶ್ವರೀ, ಗುಳಿಗ, ಬ್ರಹ್ಮ, ನಾಗದೇವರ ಗುಡಿ ಮತ್ತು ಸುತ್ತು ಪೌಳಿ ಸಮರ್ಪಣೆಯೊಂದಿಗೆ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ಸೋಮವಾರ ಬೆಳಿಗ್ಗೆನಿಂದ ಶ್ರೀದೇವಳದಲ್ಲಿ ನಡೆಯುತ್ತಿದೆ.

ಶ್ರೀ ಏಕನಾಥೇಶ್ವರೀ ದೇವಿ ವಿಗ್ರಹ ಪ್ರತಿಷ್ಠೆ ಮಹೋತ್ಸವವು ಭವ್ಯ ಶಿಲಾಮಯ ಮಂದಿರದಲ್ಲಿ ವಿದ್ವಾನ್ ಶ್ರೀ ಲಕ್ಷ್ಮೀನಾರಾಯಣ ಸೋಮಯಾಜಿಯವರ ಆಚಾರ್ಯ ಅವರ ನೇತ್ರತ್ವದಲ್ಲಿ ನಡೆಯುತ್ತಿದ್ದು ಪ್ರಾತಃಕಾಲ 6.30ರಿಂದ ಪುಣ್ಯಾಹವಾಚನ ಸಂಕಲ್ಪ ರತ್ನನ್ಯಾಸಪೂರ್ವಕ ನಡೆದಿದ್ದು ಬಳಿಕ 8.00 ಗಂಟೆಗೆ ಶುಭಲಗ್ನ ಸುಮುಹೂರ್ತದಲ್ಲಿ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನಾ ಕಾರ್ಯವು ನೆರವೇರಿತು. ಬಳಿಕ ಅಷ್ಟಬಂಧ ಮಂತ್ರನ್ಯಾಸ ನಿದ್ರಾ ಕಲಶಾಭಿಷೇಕ, ಜೀವಕಲಶಾಭಿಷೇಕ, ಅಲಂಕಾರ ಮಹಾಪೂಜೆ, ಮಹಾಮಂಗಳಾರತಿ ಈ ಮಧ್ಯೆ ಶಿಖರ ಪ್ರತಿಷ್ಠೆ ನೆರವೇರಿತು. ಪ್ರತಿಷ್ಠಾಫಲ, ಕೀರ್ತನೆ ಪ್ರಸಾದ ವಿತರಣೆ, ಆ ಮೇಲೆ ನಿತ್ಯ ಪೂಜೆ ವೇದಪಾರಾಯಣ ಪೂಜಾ ಹೋಮಾದಿಗಳು ಸದ್ಯ ನಡೆಯುತ್ತಿದೆ. ಸಾಂಸ್ಕೃತಿಕ  ಕಾರ್ಯಕ್ರಮದ ಅಂಗವಾಗಿ ಸಾಕ್ಸೋಫೋನ್ ವಾದನ ಹಾಗೂ ವಿವಿಧ ಭಜನಾತಂಡಗಳಿಂದ ಭಕ್ತಿ ಸಂಕೀರ್ತನೆ ಮೊದಲಾದವು ನಡೆಯುತ್ತಿದೆ.

ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ (ರಿ.) ಬಾರ್ಕೂರಿನ ಪರವಾಗಿ ಅಧ್ಯಕ್ಷರು ಮತ್ತು ಆಡಳಿತ ವಿಶ್ವಸ್ಥರಾದ ಬಿ. ಅಣ್ಣಯ್ಯ ಶೇರಿಗಾರ್, ಪುಣೆ, ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವಸ್ಥ ನರಸಿಂಹ ಬಿ. ದೇವಾಡಿಗ ಉಡುಪಿ, ಕೋಶಾಧಿಕಾರಿ ಹಾಗೂ ವಿಶ್ವಸ್ಥ ಬಿ. ಜನಾರ್ಧನ ದೇವಾಡಿಗ ಬಾರ್ಕೂರು, ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಹಾಗೂ ವಿಶ್ವಸ್ಥರಾದ ಧರ್ಮಪಾಲ ಯು ದೇವಾಡಿಗ ಮುಂಬೈ, ಮುಖ್ಯ ಸಂಚಾಲಕರು ಮತ್ತು ವಿಶ್ವಸ್ಥರಾದ ಹಿರಿಯಡ್ಕ ಮೋಹನ್‌ದಾಸ್ ಮುಂಬೈ, ವಿಶ್ವಸ್ಥರಾದ ಸುರೇಶ ಡಿ. ಪಡುಕೋಣೆ ಮುಂಬೈ, ಹರೀಶ್ ಶೇರಿಗಾರ್ ದುಬೈ, ನಾರಾಯಣ ಎಂ. ದೇವಾಡಿಗ ದುಬೈ, ದಿನೇಶ್ ಸಿ. ದೇವಾಡಿಗ ದುಬೈ, ಜನಾರ್ಧನ ಎಸ್. ದೇವಾಡಿಗ ಮುಂಬೈ, ಎನ್. ರಘುರಾಮ ದೇವಾಡಿಗ ಶಿವಮೊಗ್ಗ ಇದ್ದರು. ದೇವಾಡಿಗ ಸಮಾಜದ ಮುಖಂಡರಾದ ಶರ್ಮಿಳಾ ಹರೀಶ್ ಶೇರಿಗಾರ್, ಗಣೇಶ್ ಶೇರಿಗಾರ್ ಮುಂಬೈ, ನಾರಾಯಣ ದೇವಾಡಿಗ ಕುಂದಾಪುರ, ಯುವರಾಜ್ ದೇವಾಡಿಗ ದುಬೈ, ಗೌರವ ಸಲಹೆಗಾರರು, ದೇವಸ್ಥಾನ ನಿರ್ಮಾಣ ಸಮಿತಿ ಸದಸ್ಯರು, ದೇವಾಡಿಗ ಸಮಾಜದ ಸರ್ವ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಸಮಸ್ತ ದೇವಾಡಿಗ ಬಂಧುಗಳು ಇದ್ದರು.


















Friday, 16 February 2018

ಶ್ರೀ ಏಕನಾಥೇಶ್ವರೀ ಭಕ್ತಿ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.


ಶ್ರೀ ಜನಾರ್ದನ ದೇವಾಡಿಗ ಪಡುಪಣoಬೂರು ಮತ್ತು ಶ್ರೀ ಯುವರಾಜ್ ದೇವಾಡಿಗ ದುಬೈ ಇವರ ಭಕ್ತಿ ಧ್ವನಿ ಸುರುಳಿಯನ್ನು ಶ್ರೀ ಏಕನಾಥೇಶ್ವರೀ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ದೇವಳದ ವಿಶ್ವಸ್ಠರು ಮತ್ತು ದೇವಾಡಿಗ ಸಂಘ ಮುoಬೈ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಿನ್ನೆ ಬಿಡುಗಡೆಗೊಳಿಸಲಾಯಿತು.

'ಮಣಿಪಾಲ್ ಮ್ಯಾರತಾನ್ 2018' ರ 5 ಕಿಮಿ ಓಟದಲ್ಲಿ ಚೈತ್ರ ದೇವಾಡಿಗ ಪ್ರಥಮ ಸ್ಥಾನ.


ಇತ್ತೀಚೆಗೆ ಮಣಿಪಾಲದಲ್ಲಿ ನಡೆದ 'ಮಣಿಪಾಲ್ ಮ್ಯಾರತಾನ್ 2018' ರ 5 ಕಿಮಿ ಓಟದಲ್ಲಿ ಆಳ್ವಾಸ್ ಕಾಲೇಜಿನ ಪ್ರಥಮ ಬಿ. ಕಾಮ್ ವಿಧ್ಯಾರ್ಥಿನಿ ಚೈತ್ರ ದೇವಾಡಿಗ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಇಥಿಯೋಪಿಯಾ, ಆಫ್ರಿಕ , ಅಮೇರಿಕ ದಂತಹ ರಾಷ್ಟ್ರಗಳಿಂದ ಆಗಮಿಸಿದ್ದ ಸ್ಪರ್ಧಿಗಳನ್ನು ಹಿಂದಿಕ್ಕಿದ ಈ ದೇವಾಡಿಗರ ಹುಡುಗಿಗೆ ನಮ್ಮ ಹ್ಯಾಟ್ಸ್ ಆಫ್.

ನಿರ್ದೇಶಕ ಗಣೇಶ್ ದೇವಾಡಿಗ ಇವರ ಚೊಚ್ಚಲ ನಿರ್ದೇಶನದಲ್ಲಿ " ನಿಲುಕದ ನಕ್ಷತ್ರ " ಸದ್ಯದಲ್ಲಿ ತೆರೆಕಾಣಲಿದೆ.

ರುದಿರಾ ಪಿಲಂಸ್ ರವರ ಮೋದಲ ಕಾಣಿಕೆ....





ಬಹು ಅಪೇಕ್ಷಿತ...
ಕರಾವಳಿಯ ಯುವ ಪ್ರತಿಬೆಗಳು ಅಬಿನಯಿಸಿರುವ
ನಯನ ಮನೋಹರ ತಾಣಗಳಲ್ಲಿ ಚಿತ್ರೀಕಣಗೋಂಡ
ನಿಲುಕದ ನಕ್ಷತ್ರ
ಕನ್ನಡ ಚಲನಚಿತ್ರದ ಸುಂದರ ಹಾಡುಗಳ ಟೀಸರ್ ಇಂದು ಬಿಡುಗಡೆಗೋಂಡಿದೆ...

ಈ ಚಿತ್ರದ ನಂತರ ಇನ್ನೂ ಎರಡು ಕನ್ನಡ ಹಾಗು ಎರಡು ತುಳು ಚಿತ್ರ ನಿರ್ಮಾಣದ ಜವಾಬ್ದಾರಿ ಇದೆ. ಇವರನ್ನು ದೇವಾಡಿಗ ಸಮಾಜ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ.
ಈ ಚಿತ್ರದಲ್ಲಿ ಇವರು ನಿರ್ದೇಶನ ಮಾತ್ರವಲ್ಲದೆ, ಕಥೆ ,ಚಿತ್ರಕಥೆ ,ಸಂಭಾಷಣೆ ,ಸಂಗೀತ ,ಸಾಹಿತ್ಯ, ರಾಗ ಸಂಯೋಜನೆ ಹಾಗು ಗೌರವ ಪಾತ್ರ ಮಾಡುವುದರ ಮೂಲಕ ತನ್ನ ಆಲ್ ರೌಂಡರ್ ಪ್ರತಿಬೆಯನ್ನು ಮೆರೆದಿದ್ದಾರೆ.




Thursday, 15 February 2018

ದಿವ್ಯಾ ದೇವಾಡಿಗ ತ್ರಾಸಿ ಇವರು ಬಿ ಕಾಂ ವಿಭಾಗದಲ್ಲಿ ಏಳನೇ ರ‍್ಯಾಂಕ್ ಪಡೆದಿದ್ದಾರೆ.


ಮಂಗಳೂರು ವಿಶ್ವವಿದ್ಯಾಲಯವು ಕಳೆದ 2017 ರ ಏಪ್ರಿಲ ಹಾಗೂ ಮೇ ತಿಂಗಳಿನಲ್ಲಿ ನೆಡೆಸಿದ ಪದವಿ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾದ ದಿವ್ಯಾ ದೇವಾಡಿಗ ತ್ರಾಸಿ ಇವರು ಬಿ ಕಾಂ ವಿಭಾಗದಲ್ಲಿ ಏಳನೇ ರ‍್ಯಾಂಕ್ ಪಡೆದಿದ್ದಾರೆ

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...