-------ಶ್ರೀ ಗಣೇಶ್ ಶೇರಿಗಾರ್
ಬಂಧುಗಳೇ ,
ಕೆಲವು ದಿನಗಳ ಹಿoದೆ ನಾನು ಸಮುದಾಯದ 4 ಮುತ್ತುಗಳ ಬಗ್ಗೆ ನನಗೆ ತಿಳಿದ ಮಟ್ಟಿಗೆ ವಿವರಗಳನ್ನು ಬರೆದಿದ್ದೆ. ಇಂದು 5 ನೇ ಮುತ್ತು ವಿನ ಬಗ್ಗೆ ಬರೆಯುತ್ತಿದ್ದೇನೆ.ಹೌದು ಮಿತ್ರರೇ ಅವರು ಬೇರಾರೂ ಅಲ್ಲ ರಂಗಭೂಮಿ ನಟ ಬೈಂದುರು ಸಮೀಪದ ಶ್ರೀ ಯೋಗೀಶ್ ಬಂಕೇಶ್ವರ. ಕಳೆದ 25 ವರ್ಷಗಳಿoದ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊoಡಿಸಿದ್ದಾರೆ.ಕಳೆದ ವರ್ಷ ನಾಯಕ ನಟನಾಗಿ ಅಭಿನಯಿಸಿದ ತುಳು ಚಲನಚಿತ್ರ ವಿಷತ ಬರ್ಸ ಚಿತ್ರಕ್ಕೆ ಕಳೆದ ಬಾರಿ ಅತ್ಯುತ್ಯಮ ಪ್ರಾದೇಶಿಕ ಚಿತ್ರ ರಾಜ್ಯ ಪ್ರಶಸ್ತಿ ದೊರಕಿತ್ತು.
ಇವರು ನಡೆದು ಬಂದ ನಾಟಕ, ಟಿ.ವಿ. ಸಿನಿಮಾ ಪ್ರಯಾಣದ ಒಂದು ಇಣುಕು ನೋಟ ನಿಮ್ಮೆಲ್ಲರ ಮುoದಿಡುತ್ತಿದ್ದೇನೆ.
25 ವರ್ಷಗಳಿಂದ ರಂಗಭೂಮಿ ಕಲಾವಿದ... 24 ನಾಟಕಗಳಲ್ಲಿ ಅಭಿನಯ.. ಎರಡು ಮಕ್ಕಳ ನಾಟಕ (ಇದರಲ್ಲಿ ಒಂದು ಅವರೇ ರಚಿಸಿದ್ದು) ಸೇರಿ ಒಟ್ಟು 13 ನಾಟಕಗಳ ನಿರ್ದೇಶನ..
ಪಡೆದ ಪ್ರಶಸ್ತಿ:
ರಂಗಭೂಮಿ (ರಿ.) ಉಡುಪಿ ಆಯೋಜಿಸಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ದೃಷ್ಟಿ ನಾಟಕದ ವಿಶ್ವಾಮಿತ್ರ ಪಾತ್ರಕ್ಕೆ (2005), ಪೊಲೀಸ್ ನಾಟಕದÀ ಕೃಷ್ಣ ಪಾತ್ರಕ್ಕೆ (2007), ಹಾಗೂ ಮರಣ ಮೃದಂಗ ನಾಟಕದ ನರಸಿಂಹ ರಾವ್ ಪಾತ್ರಕ್ಕೆ (2013) ಶ್ರೇಷ್ಟನಟ ಪ್ರಶಸ್ತಿ
ಕಿರುತೆರೆ:
1. ಅಕ್ಕು (2002ರಲ್ಲಿ ಚಂದನ ವಾಹಿನಿಗಾಗಿ ಭಾರ್ಗವರವರ ನಿರ್ದೇಶನದ ಧಾರಾವಾಹಿ)
2. ಬಂಧ (2002ರಲ್ಲಿ ಚಂದನ ವಾಹಿನಿಗಾಗಿ ಸುನಿಲ್ ಪುರಾಣಿಕ್ ರವರ ನಿರ್ದೇಶನದ ಧಾರಾವಾಹಿ)
3. ಭಗೀರಥ (2003ರಲ್ಲಿ ಚಂದನ ವಾಹಿನಿಗಾಗಿ ನಿಖಿಲ್ ಮಂಜೂ ರವರ ನಿರ್ದೇಶನದ ಧಾರಾವಾಹಿ)
4. ಏಸು ಸ್ವಾಮಿ ಸಾಮತಿಗಳು (ಸ್ಥಳಿಯ ವಾಹಿನಿಗಾಗಿ ವಿನೋದ್ ಗಂಗೊಳ್ಳಿ ರವರ ನಿರ್ದೇಶನದ ಕಿರುಚಿತ್ರ)
5. ಯಶೋದೆ (20014ರಲ್ಲಿ ಈ ಟಿವಿ, ಕನ್ನಡ ವಾಹಿನಿಗಾಗಿ ವಿನೋದ್ ವಿ. ಧೋಂಡಾಳೆ ರವರ ನಿರ್ದೇಶನದ ಧಾರಾವಾಹಿ)
6. ಚಂದನ ಮಾಝಾ (20014ರಲ್ಲಿ ಏಷ್ಯಾನೆಟ್ ಮಲಯಾಳಂ ವಾಹಿನಿಗಾಗಿ ಸುಜಿತ್ ಸುಂದರ್ ರವರ ನಿರ್ದೇಶನದ ಧಾರಾವಾಹಿ)
7. ಅಣ್ಣು (ಸ್ಥಳಿಯ ವಾಹಿನಿಗಾಗಿ ಬಾಸುಮ ಕೊಡಗು ರವರ ನಿರ್ದೇಶನದ ಕಿರುಚಿತ್ರ)
8. ಅಕ್ಕ (20017ರಲ್ಲಿ ಕಲರ್ಸ್ ಕನ್ನಡ ವಾಹಿನಿಗಾಗಿ ರಾಮ್ ಜಿ ಕೆ.ಎಸ್. ರವರ ನಿರ್ದೇಶನದ ಧಾರಾವಾಹಿ)
9. ಶಾಂತಂ ಪಾಪಂ (20017ರಲ್ಲಿ ಕಲರ್ಸ್ ಸೂಪರ್ ವಾಹಿನಿಗಾಗಿ ರವಿ ಬಸಪ್ಪನದೊಡ್ಡಿ ರವರ ನಿರ್ದೇಶನದ ಧಾರಾವಾಹಿ)
ಸಿನೆಮಾ:
ಕುರುನಾಡು (ಜಿ. ಮೂರ್ತಿ ರವರ ನಿರ್ದೇಶನದ ಕಲಾತ್ಮಕ ಚಲನಚಿತ್ರ )ದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯ.
ಹಜ್ (ನಿಖಿಲ್ ಮಂಜೂ ರವರ ನಿರ್ದೇಶನದ ಕಲಾತ್ಮಕ ಚಲನಚಿತ್ರ )ದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯ...
ವಿಷತ ಬರ್ಸಾ (ಅಂಬಳಿಕೆ ರವಿ ರವರ ನಿರ್ದೇಶನದ ಕಲಾತ್ಮಕ ತುಳು ಚಲನಚಿತ್ರ )ದಲ್ಲಿ ನಾಯಕ ನಟನಾಗಿ ಅಭಿನಯ...
ಗೆರೆಗಳು (ನಿಖಿಲ್ ಮಂಜೂ ರವರ ನಿರ್ದೇಶನದ ಕಲಾತ್ಮಕ ಚಲನಚಿತ್ರ )ದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯ...
ಹರಿಕಥಾ ಪ್ರಸಂಗ (ಅನನ್ಯ ಕಾಸರವಳ್ಳಿ ರವರ ನಿರ್ದೇಶನದ ಕಲಾತ್ಮಕ ಚಲನಚಿತ್ರ )ದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯ....
ವೈಷ್ಣವಿ (ಜಿ. ಮೂರ್ತಿ ರವರ ನಿರ್ದೇಶನದ ಕಲಾತ್ಮಕ ಚಲನಚಿತ್ರ )ದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯ.
ಆದರೆ ಕಳೆದ ಬಾರಿ ತಿಳಿಸಿದoದೆ ಇವರನ್ನೂ ಸಹ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಶಮಾನೋತ್ಸವ, ಬೆಳ್ಳಿ ಹಬ್ಬ, ವಜ್ರ ಮಹೋತ್ಸವಗಳನ್ನು ಆಚರಿಸಿಕೊಳ್ಳುತ್ತಿರುವ ದೇವಾಡಿಗ ಸಂಘಗಳು ಈ ಪ್ರತಿಭೆಯನ್ನೂ ಸಹ ಪುರಸ್ಕರಿಸದಿರುವುದು ದುರಂತವೇ ಸರಿ.ಸಂಘಗಳು ಸತ್ಕರಿಸಿದವರನ್ನೇ ಸತ್ಕರಿಸುವ ಪದ್ದತಿಗೆ ತಿಲಾಂಜಲಿಯಿತ್ತು ಹೊಸ ಯುವ ಪ್ರತಿಭೆಗಳನ್ನು ಪುರಸ್ಕರಿಸುವ ,ಪ್ರೊತ್ಸಾಹಿಸುವತ್ತ ಮನ ಮಾಡಿದರೆ ಖಂಡಿತವಾಗಿಯೂ ಅವ್ರ ಕಾರ್ಯಕ್ರಮಗಳ ಗುಣಮಟ್ಟ ಏರಬಹುದು.ಏನೇ ಇರಲಿ ಶ್ರೀ ಯೋಗೀಶ್ ಬಂಕೇಶ್ವರ, ಶ್ರೀ ಲೋಕು ಕುಡ್ಲ ,ಶ್ರೀ ವಿಜೇಶ್ ದೇವಾಡಿಗ, ಶ್ರೀ ಶ್ರೀನಿವಾಸ್ ದೇವಾಡಿಗ, ಶ್ರೀ ವಿ.ಜೆ.ವಿನೀತ್ ಅವರುಗಳು ಕಲಾರಂಗದಲ್ಲಿ ಉಜ್ವಲ ಭವಿಷ್ಯವನ್ನು ಕಾಣಲಿ ಎoದು ಹಾರೈಸುತ್ತಾ ಇವರುಗಳನ್ನು ದೇವಾಡಿಗ ಸಮಾಜದ ಪಂಚ ಮಾಣಿಕ್ಯಗಳು ಎoದರೆ ಖಂಡಿತಾ ಸರಿ.
ಏನoತೀರಿ ?
No comments:
Post a Comment