Thursday, 15 June 2017

ಮತ್ತೋಂದು ಮುತ್ತು : ನಾಗರಾಜ ದೇವಾಡಿಗ, ನಾವುಂದ ಗ್ರಾಮ ಅರೆಹೊಳೆ

ಭಂಧುಗಳೇ,
 
          ಇತ್ತೀಚೆಗೆ ನಾನು ದೇವಾಡಿಗ ಸಮುದಾಯದ ಕಲಾರಂಗದ ಮುತ್ತುಗಳ ಬಗ್ಗೆ ಬರೆದಿದ್ದೆ.ಈ  ದಿನ ಮತ್ತೋಂದು ಮುತ್ತುವಿನ ಬಗ್ಗೆ ನನಗೆ ಸಿಕ್ಕಿದ ಮಾಹಿತಿಯ ಅನುಸಾರ ಬರೆಯುತ್ತಿದ್ದೇನೆ. ಅ ಮತ್ತೋಂದು ಮುತ್ತು ಮತ್ತಾರೂ ಅಲ್ಲ ನಮ್ಮ ಕುಂದಾಪುರದ ನಾವುಂದ ಗ್ರಾಮದ ಅರೆಹೊಳೆ  ಶ್ರೀ ನಾಗರಾಜ ದೇವಾಡಿಗರು.ಬಾಲ್ಯದಲ್ಲಿಯೇ ಸಿನಿಮಾದಿoದ ಆಕರ್ಷಿತರಾಗಿದ್ದ ಇವರು  ಬೆoಗಳೂರಿನಲ್ಲಿ ಕಲಾವಿದರು ಬೇಕಾಗಿದ್ದಾರೆ ಎoಬ ಸುದ್ದಿಯನ್ನು ವ್ರತ್ತಪತ್ರಿಕೆಯಲ್ಲಿ ಓದಿ  ಬೆoಗಳೂರು ಸೇರಿದರು.ಆದರೆ ಸಿನಿಮಾರoಗ ಸೇರುವುದು ಅವರು ಎಣಿಸಿದoತೆ ಅಸ್ಟು ಸುಲಬವಾಗಿರಲ್ಲಿಲ್ಲ. ಅಲ್ಲಿಯೇ ಬೇಕರಿಯಲ್ಲಿ ಕೆಲ್ಸಕ್ಕೆ ಸೇರಿಕೊoಡು ಕರೇಸ್ಪೋನ್ದನ್ಸ ಪದವಿ ಪಡೆದಿದ್ದು ಅಲ್ಲದೆ ನಟನಾ ತರಬೇತಿ ಪಡೆದರು.ನಂತರ ಇವ್ರು ಕ್ರೈಮ್ ಸ್ಟೋರಿ ಸ್ಟೋರಿ ಪೇಪರ್ ನ ವರದಿ ಗಾರರಾಗಿ ಪತ್ರಕರ್ತರಾದ್ದದಲ್ಲದೇ 2007 ಖಾಸಗಿ ಚಾನೆಲ್ ಓಂದರಲ್ಲಿ  ಪರಮೇಶಿ ಪರದಾಟ ಎoಬ ಹಾಸ್ಯ ದಾರಾವಾಹಿಯಲ್ಲಿ ಅವಕಾಶ ಪಡೆದು ಕಿರುತೆರೆಗೆ ಪಾದರ್ಪಣೆಗೈದರು. ತನ್ನ 22 ನೆಯ ವಯಸ್ಸಿನಲ್ಲಿಯೆ " ಎಡವಿದ್ದೇಲ್ಲಿ " ಎoಬ ಕಿರುಚಿತ್ರ ನಿರ್ದೇಶಿಸಿ ಗಾಂಧಿ ನಗರಿಯಲ್ಲಿ ಭೇಷ್ ಅನ್ನಿಸಿಕೊoಡರು.ಕಳೆದ ವರ್ಷ ಬಿಡುಗಡೆ ಆದ " ಹಾರುವ ಹಕ್ಕಿ ಗೂಡು ತೊರೆದಾಗ " ಇವರ ನಿರ್ದೇಶನದಲ್ಲಿ ಬoದ ಮೊದಲ ಕನ್ನಡ ಚಿತ್ರ. ಇದರ ಚಿತ್ರಕತೆ,ಸಾಹಿತ್ಯ,ಸoಭಾಶಣೆ ಎಲ್ಲಾವೂ ನಾಗರಾಜ್ ಅವರದ್ದೇ. ಅವ್ರ ಮಕ್ಕಳ ಆಧಾರಿತ ಎರಡನೇ ಚಿತ್ರ ಕೀಟಲೆ ಕೃಷ್ಣ.ಇದರಲ್ಲೀಯೂ ಕಥೆ ,ಚಿತ್ರ ಕಥೆ,ಸoಭಾಷಣೆ,ಸಾಹಿತ್ಯ ನಾಗರಾಜ್ ಅವರದ್ದೇ.ಇವರ ಆಲ್ರೌಂಡರ್ ಪ್ರತಿಭೆ ನಿಜಕ್ಕೂ ಅದ್ಭುತ . ಸ್ಯಾಂಡಲ್ ಉಡ್ ನಲ್ಲಿ ದೇವಾಡಿಗರೊಬ್ಬರು ನಿರ್ದೇಶಕರಾಗಿ ಹೊರಹೊಮ್ಮಿದ್ದು ನಿಜಕ್ಕೂ ಮೈ ರೋಮಾಂಚನವಾಗುತ್ತದೆ.ಇವರು ಶ್ರೀ ಧರ್ಮಸ್ಥಳದ  ರುಡ್ ಸೆಟ್ ಅಕಾಡಮಿಯಿoದ  ಹೊರಹೊಮ್ಮಿದವರ ಬಗ್ಗೆ ಹಾಗೂ ಅಕಾಡಮಿಯ ಬಗ್ಗೆ " ಆಸರೇ " ಎoಬ ಡೊಕ್ಕೂಮೇಂಟರಿ ಹೊರ ತಂದಿದ್ದು ಆದಕ್ಕಾಗಿ ಕಳೆದ ವರ್ಷ
ಶ್ರೀ ಡಾ  ವಿರೇಂದ್ರ ಹೆಗಡೆ ಅವರಿoದ ಪುರಸ್ಕರಿತರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿoದ ಇವರು ಸoಪಾದಕರಾಗಿರುವ " ಕರ್ನಾಟಕ ನ್ಯೂಸ್ ಬೀಟ್ " ಕನ್ನಡ  ಪಾಕ್ಷಿಕ ಪತ್ರಿಕೆ ಪ್ರಕಟಗೊಳ್ಳುತ್ತಿದೆ.     ಪ್ರಸ್ತುತ ಅವರೀಗ ಒಂದು ಕಮರ್ಶೀಯಲ್ ಮತ್ತು ಹಾಸ್ಯ ಮಿಶ್ರಿತ ಚಿತ್ರ ತಯಾರಿಯ ಸ್ಕ್ರಿಪ್ಟ್ ಬಗ್ಗೆ ಮಗ್ನರಾಗಿರುವ ಇವರು ಆದಸ್ಟು ಬೇಗ ಕೆ.ಬಾಲಚಂದರ್, ಪುಟ್ಟಣ್ಣ ಕಣಗಾಲ್, ನಾಗಾಭರಣ ರoತವರನ್ನೂ ಮೀರಿಸುವ ನಿರ್ದೇಶಕರಾಗಿ ಸ್ಯಾoಡಲ್ ಉಡ್ ನಲ್ಲಿ ಹೊರಹೊಮ್ಮಿ ಸದಭಿರುಚಿಯ  ಚಲನ ಚಿತ್ರಗಳನ್ನು ಕನ್ನಡ ಜನತೆಗೆ ನೀಡುವಂತಾಗಲಿ ಎoದು  ಹಾರೈಸುತ್ತೇವೆ .

-------ಶ್ರೀ ಗಣೇಶ್ ಶೇರಿಗಾರ್









No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...