Monday, 31 July 2017
ದುಬೈ ಶ್ರೀ ದಿನೇಶ ಸಿ ದೇವಾಡಿಗರು Rs.25,000/ ವನ್ನು ಇಂದು ಉಡುಪಿ ಸಂಘದ ಪಧಾದಿಕಾರಿಗಳಿಗೆ ನೀಡಿದರು.
Friday, 28 July 2017
Thursday, 27 July 2017
ಮರವಂತೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ
ಗುರುವಾರ ನಾಗರ ಪಂಚಮಿಯ ದಿನದಂದು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನೆಡೆಯಿತು
ಈ ಕಾರ್ಯಕ್ರಮದಲ್ಲಿ ನಾಗಸ್ವರ ವಾದನದಲ್ಲಿ ಪರಿಣಿತರಾಗಿ ರಾಜ್ಯ ವಿವಿದೆಡೆಗಳಲ್ಲದೇ ಅನ್ಯ ರಾಜ್ಯದಲ್ಲಿಯೂ ತನ್ನ ಕಲಾ ನೈಪುಣ್ಯತೆಯನ್ನು ಮೆರೆದ ಶ್ರೀ ರಾಘವೇಂದ್ರ ದೇವಾಡಿಗ ಹೆಮ್ಮಾಡಿ ಅವರಿಗೆ ಗಣ್ಯರ ಸಮ್ಮಖದಲ್ಲಿ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿ ಮಾಜಿ ಆಡಳಿತ ಧರ್ಮದರ್ಶಿ ಕೊಲ್ಲೂರು ವಹಿಸಿದ್ದರು ಉದ್ಘಾಟನೆಯನ್ನು ತಿಮ್ಮ.ವಿ. ದೇವಾಡಿಗ ಧರ್ಮದರ್ಶಿಗಳು ಶ್ರೀ ಸುಬ್ರಮಣ್ಯ ದೇವಸ್ಥಾನ ಮರವಂತೆ ನೆರವೇರಿಸಿದರು
ಮುಖ್ಯಅತಿಥಿಗಳಾಗಿ ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಆಡಳಿತ ಧರ್ಮದರ್ಶಿ ರಾಮಚಂದ್ರ ಹೆಬ್ಬಾರ್, ನಾಗೇಶ್ ಹೆಬ್ಬಾರ್ ಉದ್ಯಮಿ ಮರವಂತೆ ಪುರುಷೋತ್ತಮ್ ದಾಸ್ ಉಪ್ಪುಂದ
ಪ್ರಕಾಶ್ ದೇವಾಡಿಗ ಕುದ್ರೊಕೋಡು, ಉಪಸ್ಥಿತರಿದ್ರು.
ಜೆ.ಪಿ ಬಡಾಕೆರೆ ಸ್ವಾಗತಿಸಿದರು, ಪ್ರಸನ್ನ ಮರವಂತೆ ಧನ್ಯವಾದಗೈದುರು, ಪೂರ್ಣಿಮಾ ಆಚಾರ್ಯ ನಿರೂಪಿಸಿದರು.
Monday, 24 July 2017
ದೇವಾಡಿಗ ಮಿತ್ರ ( ಕದಂ )ದುಬೈ ಸದಸ್ಯರ ವತಿಯಿಂದ 6 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ತ್ರಾಸಿ ಅಣ್ಣಪ್ಪ ಸಭಾಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಜು ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ತುಂಗಾ ದೇವಾಡಿಗ ಉದ್ಯಮಿ ಮುಂಬೈ ಇವರು ನೆರವೇರಿಸಿದರು.ವೆಂಕಟರಮಣ ಭಟ್ ನೆಂಪೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು ಯೋಗೀಶ್ ಬಂಕೇಶ್ವರ ಕಿರುತೆರೆ ಕಲಾವಿದರು ಹಾಗೂ ಶ್ರೀಮತಿ ಅಂಬಿಕಾ ರಾಜು ದೇವಾಡಿಗ ತ್ರಾಸಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಶ್ರೀ ಮುಕಾಂಬಿಕಾ ದೇವಸ್ಥಾನ ಕೊಲ್ಲೂರು ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ದ್ವಿತೀಯ ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕು/ರಾಧಿಕಾ ಎಮ್ ಪೈ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ರಂಜಿತಾ ಆಚಾರ್ಯ ಇವರ ಪ್ರತಿಭೆಯನ್ನು ಗೌರವಿಸಿ ಪುರಸ್ಕರಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ
ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರಾದ ಶ್ವೇತಾ ಎಸ್ ದೇವಾಡಿಗ ಮರವಂತೆ,ಅಭಿಷೇಕ್ ಕೆ ದೇವಾಡಿಗ ನಾಗೂರೂ,ಪ್ರಜ್ವಲ್ ದೇವಾಡಿಗ ಉಪ್ಪಿನಕುದ್ರು,ರಕ್ಷಿತಾ ದೇವಾಡಿಗ ಉಪ್ಪುಂದ,ನಿವೇದಿತಾ ಎಸ್ ದೇವಾಡಿಗ ಆಲೂರು,ಇವರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಲಾಯಿತು.ಅತೀ ಹೆಚ್ಚು ಅಂಕ ಗಳಿಸಿದ 161 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಿತು.
ಅನಾರೋಗ್ಯ ಪೀಡಿತರಿಗೆ 20000 ಮಿಕ್ಕಿ ಧನ ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಗೌರಿ ದೇವಾಡಿಗ ಜಿಲ್ಲಾ ಪಂಚಾಯತ್ ಸದಸ್ಯರು, ಶೀನ ದೇವಾಡಿಗ ಮರವಂತೆ ,ರಮೇಶ್ ದೇವಾಡಿಗ ವಂದ್ಸೇ,ಸುಧಾಕರ ದೇವಾಡಿಗ ಕದಂ ದುಬೈ,ಲಕ್ಷ್ಮಣ್ ದೇವಾಡಿಗ ಕದO ದುಬೈ ಬಚ್ಚ ದೇವಾಡಿಗ ಆಲೂರು, ರಘುರಾಮ ದೇವಾಡಿಗ ಆಲೂರು,ಜನಾರ್ದನ ದೇವಾಡಿಗ ಬೈಂದೂರು,ಶಾರದಾ ದೇವಾಡಿಗ ನಾಗೂರೂ,ಶ್ರೀಮತಿ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರು,ಶ್ರೀ ರಾಮ ದೇವಾಡಿಗ ಉಪಪ್ರಾಂಶುಪಾಲರು,ತಮ್ಮಯ್ಯ ದೇವಾಡಿಗ,ವಿವಿಧ ದೇವಾಡಿಗ ಸಂಘಗಳ ಅಧ್ಯಕ್ಷರಾದ ಮಂಜು ದೇವಾಡಿಗ ಉಪ್ಪುಂದ,ನಾಗರಾಜ ರಾಯಪ್ಪನಮಠ ಕುಂದಾಪುರ,ರಮೇಶ್ ದೇವಾಡಿಗ ಕೋಟೇಶ್ವರ, ಮೊದಲಾದವರು ಉಪಸ್ಥಿತರಿದ್ದರು.ರಾಜೇಶ್ ದೇವಾಡಿಗ ಸ್ವಾಗತಿಸಿದರು.ರವಿ ದೇವಾಡಿಗ ತಲ್ಲೂರು ಮತ್ತು ಮಹೇಶ ಹಟ್ಟಿಯಂಗಡಿ ಕಾರ್ಯಕ್ರಮ ನಿರೂಪಿಸಿದರು ಪುರುಷೋತ್ತಮದಾಸ್ ಉಪ್ಪುಂದ ವಂದಿಸಿದರು.
ನವಿ ಮುOಬೈ ದೇವಾಡಿಗ ಭವನದಲ್ಲಿ ನವಿ ಮುOಬೈ ಪ್ರದೇಶಿಕ ಸಮಿತಿಯಿಂದ "ಆಷಾಡದಲ್ಲೋಂದು ದಿನ ಸ್ನೇಹ ಸಮ್ಮಿಲನ" ಆಯೋಜನೆ.
ದೇವಾಡಿಗ ಭವನದಲ್ಲಿ ನವಿಮುOಬೈ ಪ್ರದೇಶಿಕ ಸಮಿತಿ ದೇವಾಡಿಗ ಸಂಘ ಮುOಬೈ ಇವರು ನಿನ್ನೆ ಆಷಾಡ ಮಾಸದ ಅಂಗವಾಗಿ ಸ್ನೇಹ ಸಮ್ಮಿಲನ ಆಯೋಜಿಸಿದ್ದರು.ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಶ್ರೀ ಪ್ರಭಾಕರ ದೇವಾಡಿಗರು ಆಷಾಡ ತಿಂಗಳಿನ ಮತ್ತು ಆಷಾಡ ಅಮಾವಾಸ್ಯೆಯ ಬಗ್ಗೆ ,ಶ್ರಾವಣ ಮಾಸದ ಬಗ್ಗೆ ತುಳು ಕನ್ನಡಿಗರು ಹಿOದೆ ಆಚರಿಸುತ್ತಿದ್ದ ಆಚಾರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು ಪ್ರಾದೇಶಿಕ ಸಮಿತಿಯು ಹೀಗೆಯೇ ಸಣ್ಣ ಸಣ್ಣ ಕಾರ್ಯಕ್ರಮಗಳು ಸದಸ್ಯರ ಪರಸ್ಪರ ಭಾಂಧವ್ಯ ಹೆಚ್ಚಿಸುವು ದಲ್ಲದೆ, ಸಮಿತಿಗಳ ಸದಾ ಕ್ರಿಯಾಶೀಲವಾಗಿರುವುದನ್ನು ತೋರಿಸುತ್ತದೆ ಎOದರು.ಸಂಘದ ಜತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ಮಾತನಾಡುತ್ತಾ ಇಂತಹ ಆಷಾಡದ ಕಾರ್ಯಕ್ರಮಗಳು ಇಂದಿನ ಗ್ಲೋಬಲ್ ಯುಗದಲ್ಲಿ ತುಳು ಕನ್ನಡಿಗರ ಸಂಸ್ಕ್ರತಿಯನ್ನು ಜೀವಂತವಾಗಿಡುವಲ್ಲಿ ಸಹ಼ಕಾರಿಯಾಗುತ್ತದೆ ಮಾತ್ರವಲ್ಲ ಇಂದಿನ ಜನಾOಗಕ್ಕೆ ನಮ್ಮ ಸಂಸ್ಕ್ರತಿಯ ಮಾಹಿತಿ ನೀಡುತ್ತದೆ ಅಂದರು.ಸಂಘದ ಮಾಜಿ ಅಧ್ಯಕ್ಷ ರಾದ ಶ್ರೀ ಎಸ್ ಪಿ ಕರ್ಮರನ್, ಸಂಘದ ವೈದ್ಯ ಕೀಯ ಮತ್ತು ಸಾಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ ಸಂದರ್ಭೋಚಿತವಾಗಿ ಮಾತನಾಡಿದರು.ಅಲ್ಲದೆ ಮಾಜಿ ಕಾರ್ಯಾಧ್ಯಕ್ಷರಾದ ಪಿ ವಿ ಎಸ್ ಮೊಯಿಲಿ,ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಭಾವತೀ ದೇವಾಡಿಗ ಆಷಾಡ ಮಾಸದ ಬಗ್ಗೆ ಮಾಹಿತಿ ನೀಡಿದರು.ಮರಾಟಿ ಸಿನಿಮಾದಲ್ಲಿ ಕಿರು ಪಾತ್ರದಲ್ಲಿ ಅಭಿನಯಿಸುತ್ತಿರುವ ದೇವಾಡಿಗ ಸಂಘದ ಮಾಜಿ ಜತೆ ಕೋಶಾಧಿಕಾರಿ,ಕಲಾವಿದ ಶ್ರೀ ರಮೇಶ ದೇವಾಡಿಗರನ್ನು ಅಭಿನಂದಿಸಲಾಯಿತು.ನಂತರ ನಮ್ಮ ಶ್ರೀ ಗಿರೀಶ್ ಕೇಶವ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಒಟ್ಟಾರೆಯಾಗಿ ಕಾರ್ಯಕ್ರಮದಿOದ ಸದಸ್ಯರೇಲ್ಲರು ಸ್ನೇಹ ಸೌಹಾರ್ದತೆಯ ಸಿಂಚನದ ಸವಿಯನ್ನುOಡು ಮನೆಗೆ ತೆರಳಿದರು.
ಗಣೇಶ್ ಎಸ್ ಬ್ರಹ್ಮಾವರ್
ವಾಶಿ ,ನವಿ ಮುOಬೈ
Saturday, 22 July 2017
ದೇವಾಡಿಗ ಸೇವಾ ಸಂಘ(ರಿ.)ನಾವುಂದ ದೇವಾಡಿಗ ಸಮಾಜದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಸಮಾರಂಭ.
ದೇವಾಡಿಗ ಸೇವಾ ಸಂಘ(ರಿ.)ನಾವುಂದ ಇದರ ದೇವಾಡಿಗ ಸಮಾಜದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಸಮಾರಂಭ ಮಹಾಗಣಪತಿ ಮಾಂಗಲ್ಯ ಮಂಟಪ ನಾವುಂದದಲ್ಲಿ ನಡೆಯಿತು.
ಎನ್.ರಮೇಶ ದೇವಾಡಿಗ ಅಡಿಕೆಕೊಡ್ಲು ವಂಡ್ಸೆ ಕಾರ್ಯಕ್ರಮ ಉದ್ಘಾಟಿಸಿದರು.ಶ್ರೀಸುಬ್ರಹ್ಮಣ್ಯ ದೇವಸ್ಥಾನ ಮರವಂತೆ ಧರ್ಮದರ್ಶಿ ತಿಮ್ಮ.ವಿ.ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾ.ಪಂ ಸದಸ್ಯ ರಾಜು ದೇವಾಡಿಗ, ನಾವುಂದ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ,ಗೋಪಾಲ ದೇವಾಡಿಗ ಮರವಂತೆ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಪ್ರಕಾಶ ದೇವಾಡಿಗ ಉದ್ಯಮಿ ಕುದ್ರುಕೋಡು, ಲಕ್ಷ್ಮಿ ಜನಾರ್ಧನ ದೇವಸ್ಥಾನ ಜೀಣೋದ್ದಾರ ಸಮಿತಿ ಅಧ್ಯಕ್ಷ ಜನಾರ್ಧನ ಎಮ್.ದೇವಾಡಿಗ,ಕೊಲ್ಲೂರು ಡಾಟ್ ಕಾಮ್‌ನ ಸಂಯೋಜಕಿ ಪ್ರಿಯದರ್ಶಿನಿ ದೇವಾಡಿಗ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸಿದರು.
ಸುಬ್ಬಯ್ಯ ದೇವಾಡಿಗ ಸ್ವಾಗತಿಸಿದರು.ರವಿ ದೇವಾಡಿಗ ತಲ್ಲೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಉಪ್ಪುಂದ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಉಪ್ಪುಂದ: ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟನೆ, ಆರೋಗ್ಯ ರಕ್ಷಣೆಯ ಸಮಗ್ರ ಮಾಹಿತಿ ದೊರೆಯುವುದಲ್ಲದೇ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಮಂಜು ದೇವಾಡಿಗ
ಬ್ಯೆಂದೂರು: ಜೆ.ಸಿ.ಐ ಉಪ್ಪುಂದ, ದೇವಾಡಿಗ ಸಂಘ(ರಿ.)ಉಪ್ಪುಂದ,ಗ್ರಾಮೀಣ ವಿಕಾಸ ಸಮಿತಿ ಉಪ್ಪುಂದ, ಶ್ರೀಮೂಡುಗಣಪತಿ ಶಿಶುಮಂದಿರ ಉಪ್ಪುಂದ,ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮಾತೃಶ್ರೀ ಸಭಾಭವನ ಶಾಲೆಬಾಗಿಲು ಉಪ್ಪುಂದದಲ್ಲಿ ನಡೆಯಿತು.ಉಪ್ಪುಂದ ದೇವಾಡಿಗ ಸಂಘದ ಅಧ್ಯಕ್ಷ ಮಂಜು ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಇಂತಹ ಜನಜಾಗೃತಿ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಆರೋಗ್ಯ ರಕ್ಷಣೆಯ ಸಮಗ್ರ ಮಾಹಿತಿ ದೊರೆಯುವುದಲ್ಲದೇ ರೋಗಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ವೇದಿಕೆಯಲ್ಲಿ ಉಪ್ಪುಂದ ಜೇಸಿ ಅಧ್ಯಕ್ಷ ಮಂಜುನಾಥ ದೇವಾಡಿಗ,ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ಪ್ರಸನ್ನ ಕುಮಾರ್ ಉಪ್ಪುಂದ,ಪ್ರಸಾದ ಪ್ರಭು ಶಿರೂರು ಮೊದಲಾದವರು ಉಪಸ್ಥಿತರಿದ್ದರು.
:-ಪುರುಷೋತ್ತಮ ದಾಸ್ ಉಪ್ಪುಂದ
Friday, 21 July 2017
ನಮಗಿನ್ನೂ ಜಾತಿ ಆಧಾರಿತ ಮೀಸಲಾತೀ ಬೇಕೇ ?
ನಮಗೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಲಳಾ ಗುತ್ತಾ ಬಂತು.ಅಂದು ಸOವಿದಾನ ರಚನೆಯಾದಾಗ ಹಿOದುಳಿದ ವರ್ಗಗಳ ಆರ್ಥಿಕ ಸಬಲೀಕರಣದ ಅಗತ್ಯತೆ ಇತ್ತು. ಜಾತಿ ಆಧಾರಿತ ಮೀಸಲಾತೀಯ ಅನುಸ್ಟಾನವೂ ಆಯಿತು. ಆದರೆ ಇಂದು ವಸ್ತುಸ್ಠಿತಿ ಬದಲಾವಣೆಯಾಗಿದೆ.ಸಾಕಸ್ಟು ಸಬಲೀಕರಣವೂ ಆಗಿದೆ.ಜಾತಿ ಜಾತಿಗಳ ಒಳಗೆ ಈಗ ಸಂಘರ್ಷವು ಪರಾಕಾಸ್ಟತೆಗೆ ಏರಿದೆ.ನಾನು ಹೇಳ ಹೊರಟಿರುವುದು ಕರ್ನಾಟಕದಲ್ಲಿನ ಲಿಂಗಾಯಿತ ವರ್ಗದ ಬಗ್ಗೆ.ಅಖಿಲ ಭಾರತ ವೀರಶೈವ ಸೆಭಾದ ಒಳಗೆ ವೀರಶೈವರ ಜೊತೆಗಿದ್ದ ಲಿಂಗಾಯಿತರು ಇಸ್ಟು ವರ್ಷಗಳ ನಂತರ ತಮಗೆ ಜೈನರ ಹಾಗೆ ಸಿಖ್ ಸಮುದಾಯದ ಹಾಗೆ ಪ್ರತ್ಯೇಕ ಅಲ್ಪ ಸಂಖ್ಯಾತ ಧರ್ಮದ ಸ್ಥಾನಮಾನದ ಬೇಡಿಕೆ ಇಟ್ಟಿರುವುದು ಹಿOದೂ ಧರ್ಮಕ್ಕೆ ಆಘಾತಕಾರಿ ಬೆಳವಣಿಗೆ.ವೀರಶೈವರು ನಾವು ಬೇರೆ ಬೇರೆ ಅಂತಿರುವುದು ಸೋಜಿಗದ ಸಂಗತಿ.ಇಸ್ಟೋOದು ವರ್ಷಗಳು ಇವರು ಹಿOದು ಧರ್ಮದಲ್ಲಿದ್ದಾಗ ಇವರ ಜೀವನ ಸ್ಥಿತಿ ಸಾರಿಯಾಗಿರಲಿಲ್ಲವೇ? ಪ್ರತ್ಯೇಕ ಧರ್ಮ ಸ್ಥಾಪಿಸಿದರೆ ಇವರೀಗಾಗುವ ಲಾಭವೇನು ? ಅಂತ ಅವ್ರೇ ಸಮಾಜಕ್ಕೆ ತಿಳಿಸಬೇಕು.ಒಂದುವೇಳೆ ಅಲ್ಪ ಸಂಖ್ಯಾತ ಮೀಸಲಾತೀ ಲಾಭಕ್ಕಾಗಿದ್ದರೆ ಖಂಡಿತವಾಗಿಯೂ ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿ ರದ್ದುಗೊಳಿಸಿ ಆರ್ಥಿಕ ಆಧಾರಿತ ಮೀಸಲಾತೀ ಜಾರಿಗೊಳಿಸಬೇಕು.ಇಲ್ಲವಾದಲ್ಲಿ ಇನ್ನುಳಿದ ಜಾತಿಗಳು ಲಿಂಗಾಯಿತರು ಹಿಡಿದ ದಾರಿ ಹಿಡಿಯಬಹುದು.ಇದು ಧರ್ಮ ಧರ್ಮಗಳ ನಡುವೆ ಜಾತಿ ಜಾತಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು.ಹೀಗಾಗಿ ಭಾರತಕ್ಕೀಗ ಒಂದೇ ದೇಶ ಒಂದೇ ಕಾನೂನು ಇದರ ಅವಶ್ಯಕತೆಯಿದೆ.ಭಾರತ ಹೇಳಲಿಕ್ಕೆ ಜಾತ್ಯತೀತ ರಾಷ್ಟ್ರವಾದರೂ ಇಲ್ಲಿ ಎಲ್ಲವೂ ಜಾತಿ ಆಧರಿತ ವ್ಯವಸ್ಠೇ.
ಜೂನ್ ತಿಂಗಳು ಪ್ರಾರOಭವಾಗುತ್ತಿದ್ದOತೆ ಎಲ್ಲಾ ಸಂಘ ಸಂಸ್ಥೇಗಳು ವಿಧ್ಯಾರ್ಥಿಗನ್ನು ಪ್ರೋತ್ಸಾಹ ನೀಡುವುದಕ್ಕಾಗಿ ವಿಧ್ಯಾರ್ಥಿ ವೇತನ,ಪುಸ್ತಕ ವಿತರಣೆ ಕಾಯಕ್ರಮಗಳನ್ನು ಹೊಮ್ಮಿಕೊOಡು ಸಮಾಜಸೇವೆ ಮಾಡುತ್ತಲಿವೆ.ಈ ಪುಸ್ತಕ ವಿತರಣೆಯ ಬಗ್ಗೆ ನನ್ನ ಅಭಿಪ್ರಾಯವೆOದರೆ ರೂಪೈ 300 ರಿOದ 500ರೂ ಬೆಲೆಯ ಪುಸ್ತಕಗಳನ್ನು 100 ಮಕ್ಕಳಿಗೆ ಹಂಚುದಕ್ಕಿOತ ಅದಕ್ಕೆ ಒಟ್ಟಾರೆ ತಗಲುವ ವೆಚ್ಚವನ್ನು ಆರ್ಥಿಕವಾಗಿ ಹಿOದುಳಿದ 10 ಮಕ್ಕಳ ಸOಪೂರ್ಣ ಶಾಲಾ ಶುಲ್ಕವನ್ನು ಭರಿಸಿದರೆ ಖಂಡಿತವಾಗಿಯೂ ಅ ಮಕ್ಕಳ ಶಾಲಾ ಜೀವನದಲ್ಲಿ ಪರಿಣಾಮ ಬೀರಬಹುದು.ರುಪೈ 600/ ಬೆಲೆಯ ನೋಟ್ ಪುಸ್ತಕ ಯಾ ರು 500 ರಿOದ 1500/ ತನಕ ಕೊಡುವ ವಿಧ್ಯಾರ್ಥಿವೇತನ ಸಿಕ್ಕರೂ ಸಿಗದಿದ್ದರು ಅ ಮಕ್ಕಳು ಶಾಲೆಗೆ ಹೋಗುವುದನ್ನು ಬಿಡರು.ಆದರೆ ಆರ್ಥಿಕ ವಾಗಿ ಹಿOದುಳಿದ ವಿಧ್ಯಾರ್ಥಿಗಳನ್ನು ಗುರುತಿಸಿ ಸಾಧ್ಯವಾದಸ್ಟು ಶಾಲಾ ಶುಲ್ಕ ಭರಿಸಿದರೆ ಖಂಡಿತವಾಗಿಯೂ ಶತ ಪ್ರತಿಶತ ಆರ್ಥಿಕವಾಗಿ ಹಿOದುಳಿದವರು ಸಾಕ್ಶರತೇ ಕಾಣಬಲ್ಲರು.ದಯವಿಟ್ಟು ಸಂಘ ಸಂಸ್ಥೇಗಳು ನನ್ನ ಬರೆವಣಿಗೆಯನ್ನು ತಪ್ಪಾಗಿ ತಿಳಿಯದಿರಿ.ಈಗಿರುವ ವ್ಯವಸ್ಠೇ ವಿಧ್ಯಾರ್ಥಿಗಳಿಗೆ ಪ್ರೊತ್ಸಾಹವಾಗಿ ನೀಡುತ್ತಿರುವುದು ಎOದು ಬಲ್ಲೆ . ಆದರೆ ಕಾಲಕ್ಕೆ ತಕ್ಕಂತೆ ವ್ಯವಸ್ಥೇ ಬದಲಾವಣೆಯಾದರೆ ಚೆನ್ನ.ಕೆಲವು ಸಂಸ್ಥೇಯವರು ಬೆರಳೆಣಿಕೆಯ ಮಕ್ಕಳ ಕೈಗೆ ನೋಟ್ ಪುಸ್ತಕ ಕೊಟ್ಟು ವಾರ್ತಾ ಪತ್ರಿಕೆಗಳಲ್ಲಿ ಫೋಟೋ ಫೋಸ್ ನೀಡುವುದನ್ನು ನೋಡುವಾಗ ಮುಜುಗರವೇನಿಸುತ್ತದೆ.ಈ ಎಲ್ಲ ವಿಚಾರಗಳನ್ನು ಬರೆಯುವವಾಗ ಡಾ.ರಾಜಕುಮಾರ್ ರವರ ಹಳೆ ಹಾಡು ನೆನಪಾಗುತ್ತದೆ. "ಮುತ್ತಿನಂತ ಮಾತೊOದು ಗೋತ್ತೇನಮ್ಮ ,
ನಾವು ತಾಳಕ್ಕೆ ತಕ್ಕಂತೆ ಕುಣಿಯಬೇಕು
ನಾವು ಕಾಲಕ್ಕೆ ತಕ್ಕಂತೆ ನೆಡೆಯಬೇಕು.
ಆಚರಣೆಗಳು ವ್ಯಕ್ತಿ ಪ್ರತಿಸ್ಟೇ ಗಾಗಿರದೆ , ವೈಭವೀಕರಣಕ್ಕಾಗಿರದೆ, ಇ ತರ ಸಂಸ್ಥೇಗಳ ಜೊತೆಗೆ ಸ್ಪರ್ಧೆಗಾಗಿಯೂ ಆಗಿರದೆ, ವಸ್ತುನಿಸ್ಟವಾಗಿದ್ದು ನೊOದವರ, ಆರ್ಥಿಕವಾಗಿ ಹಿOದುಳಿದವರ,ದೀನರ, ,ಶೋಷಿತರ ಪುನರುತ್ಥಾನಕ್ಕೆ ಅಭಿವೃಧಿಗಾಗಿ ಮೀಸಲಿರಬೇಕು.
ಏನಂತೀರಿ ?
ಗಣೇಶ್ ಎಸ್ ಬ್ರಹ್ಮಾವರ್
ವಾಶಿ ,ನವಿ ಮುOಬೈ
9594228684
Thursday, 20 July 2017
Wednesday, 19 July 2017
ಸ್ವಂತಿಕೆ ಮರೆಯುತ್ತಿರುವ ಜನತೆ.
ಇತ್ತೀಚಿಗಿನ ವಿದ್ಯಾಮಾನಗಳನ್ನೆಲ್ಲ ನೋಡುವಾಗ ಭಾರತೀಯರು ತಮ್ಮ ಸ್ವಂತಿಕೆ ಕಳೆದುಕೊಳ್ಳುತ್ತಿರುವOತೆ ಭಾಸವಾಗುತ್ತಿದೆ.ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಡೆದ ಅಕ್ರಮಗಳನ್ನು ಬಯಲಿಗೆಳೆದ ಡಿಐಜಿ ರೂಪ ಅವರನ್ನು ಅಲ್ಲಿಂದ ವರ್ಗಾವಣೇ ಮಾಡಲಾಗಿದೆ.ಮುಖ್ಯಮಂತ್ರಿ ಶ್ರೀ ಸೀದ್ದರಾಮಯ್ಯ ಡಿಐಜಿ ರೂಪ ಅವರಿಗೆ ಇನ್ನಸ್ಟು ಸಹಕಾರ ನೀಡಿ ಎಲ್ಲ ಅಕ್ರಮಗಳಿಗೆ ಕಾರಣರಾದವರಿಗೆ ಶಿಕ್ಷಿಸುವುದನ್ನು ಬಿಟ್ಟು ತಮ್ಮ ಸ್ವಂತ ಚಿಂತನೆ ಬಿಟ್ಟು ಜೈಲಿನಲ್ಲಿದ್ದ ಕೆಲವು ಕೈದಿಗಳನ್ನು ಬೇರೆ ಜೈಲಿಗೆ ಸ್ಥಳಾO ತ ರಿಸುವುದರ ಜತೆ ಡಿಐಜಿ ರೂಪ ಅವನ್ನಲ್ಲದೆ ಹಲವು ಐಪಿಸ್ ಅಧಿಕಾರಿಗಳನ್ನು ಬೇರೆಡೇಗೆ ವರ್ಗಾಯಿಸುವುದರ ಮೂಲಕ ಡಿಐಜಿ,ಐಪಿಸ್ ಅಧಿಕಾರಿಗಳು ಮತ್ತು ಕೈದಿಗಳಿಗೂ ವ್ಯತ್ಯಾಸವೇ ಇಲ್ಲ ಎOಬOತೆ ನಡೆದು ಕೊOಡಿರುವುದು ಅವರ ಸ್ವಂತಿಕೆ ಮರೆತೆದಕ್ಕೆ ಸಾಕ್ಷಿಯಾಗಿದೆ.ದೇಶದಲ್ಲಿನ ಕಾರಾಗೃಹಗಳೆಲ್ಲಾ ಹಣ ಇದ್ದ ಕೈದಿಗಳಿಗೆ ಜೈಲಿನ ಒಳಗೂ ಹೊರಗೂ ವ್ಯತ್ಯಾಸ ಇಲ್ಲ ಎOಬOತೆ ಇಂದು ಪರಿವರ್ತನೆ ಯಾಗಿದೆ ಎOದರೆ ತಪ್ಪಲ್ಲ.ಅತ್ತ ಕಾಶ್ಮೀರದಲ್ಲಿ ಜನರಲ್ ಗೋಗಾಯಿ ಅವ್ರು ಮತದಾನದ ವೇಳೆ ಪ್ರತಿಭಟನೆ ಹತ್ತಿಕ್ಕಲು ಆ ಪ್ರತಿಭಟನೆಕಾರರಲ್ಲೂಬ್ಬನನ್ನು ಜೀಪಿಗೆ ಕಟ್ಟಿ ಆಗುವ ಅನಾಹುತ ತಪ್ಪಿಸಿದ ವಿಷ್ಯ ಎಲ್ಲರಿಗೂ ತಿಳಿದ ವಿಷಯ.ಆದರೆ ಮಾನವ ಹಕ್ಕುಗಳ ಆಯೋಗ ಯಾರನ್ನು ಆ ಜೀಪಿಗೆ ಕಟ್ಟಿದ್ದರೋ ಅವನಿಗೆ ಹತ್ತು ಲಕ್ಷ ರುಪೈ ಪರಿಹಾರ ಕೊಡಬೇಕೆOದು ಜಮ್ಮು ಕಾಶ್ಮೀರ ಸರಕಾರಕ್ಕೆ ಆದೇಶಿಸಿದೆ.ಆದರೆ ಅದೇ ಕಾಶ್ಮೀರದಲ್ಲಿ ಕೆಲವು ತಿಂಗಳ ಹಿOದೆ ವಿಶ್ವಕರ್ಮ ಎOಬ ಸೈನಿಕನಿಗೆ ಅಲ್ಲಿನ ಪ್ರತಿಭಟನಾಕಾರರು ಸಿಕ್ಕಾಪಟ್ಟೆ ಹಿOಸೆ ಕೊಡುವ ದೄಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ನಾವೆಲ್ಲ ಮರೆತಿಲ್ಲ.ಆದರೆ ದುರಂತದ ವಿಷಯ ಅಂತಂದ್ರೆ ಮಾನವ ಹಕ್ಕುಗಳ ಆಯೋಗಕ್ಕೆ ಇದು ಗOಭೀರವಾಗಿ ತೋರಲಿಲ್ಲ.ಇದು ಮಾನವ ಹಕ್ಕುಗಳ ಆಯೋಗದ ತಾರತಮ್ಯವವಲ್ಲವೇ ? ಇOತಹ ವಿದ್ಯಾಮಾನಗಳನ್ನು ನೋಡಿ ಬುದ್ದಿಜೀವಿಗಳು ಚಕಾರವೆತ್ತದಿರುವುದು ಅವರುಗಳು ಸ್ವಂತಿಕೆ ಮರೇತೀರುವುದೇ ಆಗಿದೆ.ಭಾರತದ ಮುOದಿನ ರಾಸ್ಟ್ರಪತಿ ಆಯ್ಕೆಗಾಗಿ ಮತದಾನ ನಡೆದಿದೆ. ಸುಮಾರು 33% ರೆಸ್ಟು ಸಂಸದರು ಕ್ರಿಮಿನಲ್ ಹಿನ್ನಲೆಯುಳ್ಳವರು ಎOದು ಅಸೋಸಿಯೇಶನ್ ಆಫ್ ಡೆಮೊಕ್ರಟಿಕ್ ರೇಫಾರ್ಮ್ಸ ವರದಿ ಮಾಡಿದೆ.ಇದು ನಿಜಕ್ಕೂ ಆಘಾತಕಾರಿ ವಿಷಯ.ಈ ಕ್ರಿಮಿನಲ್ ಸಂಸದರ ಆ ಲೋಕಸಭಾ ಕ್ಸೇತ್ರಗಳಲ್ಲಿ ಯಾವ ರೀತಿಯ ಸ್ವಾತಂತ್ರ್ಯ ಅಲ್ಲಿನ ಸಾಮಾನ್ಯ ಜನತೆಗಿರಬಹುದು.ಮತದಾನದ ವೇಳೆ ಅಲ್ಲಿ ಭಯದ ಭೀತಿ ವಾತಾವಾರಣ ಆವರಿಸಬಹುದು.ಅಲ್ಲಿನ ಜನತೆ ಹಣ ತೋಳ್ಬಲಕ್ಕೆ ಬಲಿಯಾಗಿ ತಮ್ಮ ಸ್ವಂತಿಕೆ ಕಳಕೊOಡಿರುವುದOತು ನಿಜ.ರಾಜ್ಯಾಂಗದ ಮುOದೆ ನ್ಯಾಯಾOಗ ಬಲಹೀನಗೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯವೇ ಸರಿ. ಅವಿಭಜಿತ ದಕ್ಷಿಣಕನ್ನಡದ ಒಂದು ವಿಧಾನಸೆಭಾ ಕ್ಷೇತ್ರದಲ್ಲಿ ಒಂದು ಸಾಮುದಾಯದಕ್ಕೆ ಸೇರಿದ ಸುಮಾರು 25 ರಿOದ 30 ಸಾವಿರ ಮತದಾರರಿದ್ದಾರೆ,ವಿಪರ್ಯಾಸ ಏನೆOದರೆ ಇನ್ನೂ ಆ ಸಾಮುದಾಯಕ್ಕೆ ನಮ್ಮಲ್ಲಿನ ಒಬ್ಬನನ್ನು ಶಾಸಕನಾಗಿ ಕಳುಹಿಸುವ ಸ್ವಂತ ಚಿಂತನೆ ಇನ್ನೂ ಮೂಡಿಲ್ಲ.ಒಡೆದು ಆಳುವ ರಾಜಕೀಯ ಪಕ್ಷಗಳ ರಾಜಕೀಯಕ್ಕೆ ಬಲಿಯಾಗಿ ಏಕತೆಯನ್ನು ಕಳಕೊOಡು ಸ್ವ ಚಿಂತತೆ ಕಳಕೊOದಿರುವುದು ಆ ಸಾಮುದಾಯದ ದೌರ್ಭಾಗ್ಯ.ರಾಜಕೀಯ ಪಕ್ಷಗಳ, ಸಂಘಟನೆಗಳ ನಾಯಕರುಗಳ ಘೋಷಣೆ ಭಾಷಣಗಳನ್ನು ಸರಿ ಯಾಗಿ ಅರ್ಥೈಸದೆ ಜನತೆ ಸ್ವಂತಿಕೆ ಮರೆತಲ್ಲಿ ಆಗುವ ಎಲ್ಲಾ ಅನಾಹುತಗಳಿಗೆ ಜನತೆಯೇ ಕಾರಣರಾಗುತ್ತಾರೆ.
ಏನಂತೀರಿ ?
ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿಮುOಬೈ
9594228684
Tuesday, 18 July 2017
ಕುಂದಾಪುರ ದೇವಾಡಿಗ ಮಿತ್ರ ( ಕದಮ್ ) ದುಬೈ, ವೈದ್ಯಕೀಯ ನೆರೆವನ್ನು ನೀಡಿದರು.
Whole Devadiga community must thankfull to KaDaM ( Dubai ) Devadigas. today . Today given Medical help to father of Navya Devadiga.( Rs 66,000/-) Mangalore. KaDaM's dedication to Devadiga community is marvelous.God bless all KaDaM members.
ಮಂಗಳೂರಿನಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ಕುಮಾರಿ ನವ್ಯ ದೇವಾಡಿಗಳ ತಂದೆಯವರಿಗೇ ಇಂದು ಸುಮಾರು ರೂಪಾಯಿ 66,000/- ವೈದ್ಯಕೀಯ ನೆರೆವನ್ನು ಕುಂದಾಪುರ ದೇವಾಡಿಗ ಮಿತ್ರ ( ಕದಮ್ ) ದುಬೈ ನೀಡಿದರು.ಕದಮ್ ದೇವಾಡಿಗರ ಈ ಸಾಮಾಜಸೇವೆ ನಿಜಕ್ಕೂ ಶ್ಲಾಘನೀಯ.ದೇವರು ಅವರೆಲ್ಲರಿಗೂ ಉತ್ತಮ ಆರೋಗ್ಯ,ಉನ್ನತಿ ನೀಡಲಿ.
Tuesday, 11 July 2017
ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.
ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...
-
Miss Rashmi V Devadiga has been elected as UG division VICE PRESIDENT OF ABVP(Akhila Bharathiya Vidyarthi Parishad) of Mangalore universit...
-
Mr Mukesh devadiga Mangalore won Gold Medal in Karnataka state Junior Powerlifting ChampionShip held at Kinnigoli on 05/11/2017.
-
ದಿನೇಶ್ ದೇವಾಡಿಗರ ನೇತ್ರತ್ವದಲ್ಲಿ ದೇವಾಡಿಗ ಮಿತ್ರ ಕುಂದಾಪುರ ಕದಂ ದುಬೈ ಸದಸ್ಯರ ವತಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೇರಂಜಾಲಿನ ಸತೀಶ್ ದೇವಾಡಿಗ ಮತ...