ಭಾರತ ಸ್ವತಂತ್ರಗೊOಡು 70 ವರ್ಷಗಳು ಕಳೆದರೂ ಭಾರತ ಸಾದಿಸಿದ್ದು ಅಂಗೈಸ್ಟು. ಸಾದಿಸಲು ಬಾಕಿ ಉಳಿದಿರುವುದು ಸಾಗರದಸ್ಟು. ಓದುಗರೆ ಇಂದು ಭಾರತದಲ್ಲಿ ಮುಖ್ಯವಾಗಿ ಬದಲಾವಣೆ ಆಗಬೇಕಿರುವುದು ಒಂದು ಶಿಕ್ಷಣ ಕ್ಷೇತ್ರ , ಎರಡನೇಯಾಗಿ ಆರೋಗ್ಯ ಕ್ಷೇತ್ರ,ಮೂರನೆಯದಾಗಿ ಕಾನೂನು ಕ್ಷೇತ್ರ, ನಾಲ್ಕನೆಯದಾಗಿ ಸಣ್ಣ ಅಂದರೆ ಲಘು ಉದ್ಯೋಗ ಕ್ಸೇತ್ರ. ವಿಧ್ಯಾಭ್ಯಾಸದ ವಿಷಯಕ್ಕೆ ಬಂದರೆ ಇಂದು ಸಾಮಾನ್ಯ ಮತ್ತು ಬಡ ಜನತೆಗೆ ಉನ್ನತಮಟ್ಟದ ವಿಧ್ಯಾಬ್ಯಾಸ ಅನ್ನುವಂತದ್ದು ಗಗನ ಕುಸುಮವಾಗಿದೆ.ಖಾಸಗಿ ಶಾಲೆಗಳ ಶುಲ್ಕ( ಡೋನೇಶನ್ ಬೇರೆ ) ಎನ್ನುವಂತದ್ದು ಬಡ ಹಾಗು ಸಾಮಾನ್ಯ ಜನತೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸಲಾಸಧ್ಯವಾಗಿದೆ.ಇನ್ನು ಸರಕಾರಿ ಶಾಲೆಗಳ ದುರವಸ್ತೇ ನೋಡಿದರೆ ಜಾನುವಾರುಗಳ ದೊಡ್ಡಿಗೇ ಸಮ.ಸ್ವಾತಂತ್ರ್ಯದ 70 ವರ್ಷಗಳ ನಂತರವೂ ಸಾರಕಾರೀ ಶಾಲೆಗಳ ಗುಣಮಟ್ಟ ಖಾಸಗಿ ಶಾಲೆಗಳಿಗೆ ಸಮನಾಗಿ ಏರದೆ ಇರುವುದು ಸಾರಕಾರಗಳ ಅಲಕ್ಷ್ಯ ಮತ್ತು ಅಸಡ್ಡೆಯೆ ಕಾರಣ.ಇಂದು ಸಾರಕಾರೀ ಶಾಲಾ ಕಾಲೇಜುಗಳು ಖಾಸಗಿ ಗೆ ತಕ್ಕಂತೆ ಪೈಪೋಟಿ ನೀಡುವOತಾಗಿದ್ದರೆ ಇಂದು ದೇಶ ಸOಪೂರ್ಣ ಸಾಕ್ಶರತೇ ಕಾಣುವುದರಲ್ಲಿ ಸಾಧ್ಯತೆ ಇರುತಿತ್ತು.ಆದರೆ ಅಧಿಕಾರ ಹಿಡಿದವರು ಅದಕ್ಕೆ ಕೈ ಹಾಕದೆ ಬಡ ಜನತೆ ವಿಧ್ಯಾ ವಂಚಿತರನ್ನಾಗಿ ಮಾಡಿದೆ.ಇನ್ನು ಶಿಕ್ಷಣ ಸಂಸ್ಥೇ ಗಳನ್ನು ಸ್ಥಾಪಿಸಿಕೊOಡ ಧಾರ್ಮಿಕ ಕೇOದ್ರಗಳು ಜನರಿOದ ಬಂದ ಹಣವನ್ನು ಒಂದಿಸ್ಟು ಜನರಿಗೇ ಖರ್ಚು ಮಾಡುವುದನ್ನು ಬಿಟ್ಟು ಅಂದರೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡುವುದನ್ನು ಬಿಟ್ಟು ಅವುಗಳು ಇನ್ನಸ್ಟು ಹಣ ಲೂಟುತ್ತಿರುವುದು ಭಾರತದ ಬಡ ಜನತೆಯ ದೌರ್ಭಾಗ್ಯ.ಹೀಗಾಗಿ ಸಾರಕಾರಗಳು ದೇಶದ ಸಾರಕಾರೀ ಶಾಲಾಕಾಲೇಜುಗಳ ಕಲಿಕೆಯ ಗುಣಮಟ್ಟವನ್ನು ಏರಿಸಿ ಸರ್ವರಿಗೂ ವಿದ್ಯೆ ಕೈಗೇಟಗುವOತೆ ಮಾಡುವುದು ಮಾತ್ರವಲ್ಲದೇ ಖಾಸಗಿಯವರ ಮೊನೊಪಲಿಯನ್ನು ತಡೆಗಟ್ಟಬೇಕಿದೆ.ಎರಡನೆಯದು ಆರೋಗ್ಯ ಕ್ಷೇತ್ರ.ಇದನ್ನು ಹೇಳಲೇ ಬೇಕಿಲ್ಲ.ಖಾಸಗಿ ಆಸ್ಪತ್ರೆಗಳ ಶುಲ್ಕ ನೋಡಿದರೆ ಜನ ಸಾಮಾನ್ಯರಿಗೆ ಅಲ್ಲಿ ಶುಶ್ರೂಷೆ ಪಡೆಯುವಂತಿಲ್ಲ.ಏಳು ಎಂಟು ತಿOಗಳಿಗೆ ಮಗುವನ್ನು ಹಡೆದರೆ ಆ ಮಕ್ಕಳನ್ನು ತುರ್ತುಚಿಕಿತ್ಸಾ ಘಟಕದಲ್ಲಿ ಇಡಬೇಕೇಂದರೆ ಕನಿಸ್ಟ ನಾಲ್ಕು ಲಕ್ಷ ರುಪೈ ಆಸ್ಪತ್ರೆಗೆ ತೆರಬೇಕಿದೆ.ಬಡ ಜನತೆ ಅಸ್ಟೊOದು ಹಣ ಹೋಂದಿಸುದಾದರೂ ಏಲ್ಲಿಂದ ? ಇನ್ನೂOದು ಕಡೆ ಬಡ ಜನತೆಗಾಗಿ ನೀಡಿರುವ ಸವಲತ್ತು ಮುಖ್ಯಮಂತ್ರಿ ಪರಿಹಾರ ನಿಧಿ ಯೋಜನೆಯ ಹಣ,ರಾಜೀವ್ಗಾಂಧಿ ಯೋಜನೆಯ ಹಣವನ್ನೆಲ್ಲಾ ಸOಪೂರ್ಣ ನುಂಗುವಂತ ಪರಿಪಾಠವನ್ನು ಖಾಸಗಿ ಆಸ್ಪತ್ರೆಗಳು ಶುಲ್ಕಗಳನ್ನು ಸರಿದೂಗಿಸಿ ಕೊಳ್ಳೆಹೊಡೆಯುತ್ತಿವೆ.ಇದನ್ನೆಲ್ಲ ಸಾರಕಾರ ಕಣ್ಮುಚ್ಚಿಕೊOಡು ಕುಳಿತಿವೆ.ಆದರೆ ಸಾರಕಾರಗಳು ಈ ಖಾಸಗಿ ಆಸ್ಪತ್ರೆಗಳ ಈ ಅತೀ ಶುಲ್ಕಾಟದ ಹುಚ್ಚಿಗೆ ಕಡಿವಾಣ ಹಾಕಬೇಕು.ಅಂತೆಯೇ ಪ್ರತೀ ತಾಲೂಕಿಗೆ ಎಲ್ಲಾ ವ್ಯವಸ್ಥೇ ಹೋಂದಿರುವ ಸುಸಜ್ಜಿತ ಸಾರಕಾರೀ ಆಸ್ಪತ್ರೆಗಳನ್ನು ಸ್ಥಾಪಿಸಿ ಬಡ ಜನತೆಗೆ ಅವಶ್ಯವಿರುವ ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡಬೇಕಿದೆ.ಹಾಗಾದಾಗ ಮಾತ್ರ ಖಾಸಗಿ ಆಸ್ಪತ್ರೆಗಳ ಮದ ಅಡಗಬಹುದು.ಮೂರನೆಯದು ನ್ಯಾಯಾOಗ ಕ್ಷೇತ್ರ. ಮೊನ್ನೆ ಸ್ವಯಮ್ ಘೋಷಿತ ದೇವಮಾನವ ಗೂರ್ಮಿತ್ ಸಿOಗ್ ಗೆ ಅತ್ಯಾಚಾರ ಪ್ರಕರಣದಲ್ಲಿ ಕೊನೆಗೂ ಅಂದರೆ ಅದಸ್ಟೋ ವರ್ಷಗಳ ನಂತರ ತೀರ್ಪು ಹೊರಬಿದ್ದು ಜೈಲು ಪಾಲಾಗಿದ್ದಾನೆ.ಆದರೆ ಓದುಗರೇ ಅತ್ಯಾಚಾರ ಮತ್ತು ಭ್ರಸ್ಟಾಚಾರ ಪ್ರಕರಣಗಳಲ್ಲಿ ನಮ್ಮ ದೇಶದಲ್ಲಿ ತ್ವರಿತ ಕೋರ್ಟುಗಳು ಅದಕ್ಕಾಗಿಯೇ ಸ್ಥಾಪನೆಗೊOಡು ತೀರ್ಪು ಅನ್ನುವಂತದ್ದು ಮೂರು ತಿOಗಳ ಒಳಗೇನೇ ಹೊರಬಿದ್ದು ಅಪರಾಧಿಗಳು ಜೈಲು ಪಾಲಾಗಬೇಕು. ತಪ್ಪಿತಸ್ಥರು ವಿಚಾರಣಾದೀನವೆOದು ಹತ್ತಿಪ್ಪತ್ತು ವರ್ಷಗಳು ಹೊರಗಿದ್ದು ಮಜಾ ಮಾಡಲು ಅವಕಾಶ ಕೊಡಲೇಬಾರದು. ಅಲ್ಲದೇ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯೇ ಅಂತಿಮವಾಗಬೇಕು.ಹಾಗಾದಾಗ ಮಾತ್ರ ಕಾನೂನಿನ ಬಗ್ಗೆ ಭಯವಿರುತ್ತದೆ.ಇಂದು ಅತ್ಯಾಚಾರ ಎಗ್ಗಿಲ್ಲದೆ ನಡೆದು ಮಹಿಳೆ ಹಾಗು ಹೆಣ್ಣು ಮಕ್ಕಳ ಕೊಲೆಗೆ ಕಾರಣವೇ ಭಾರತದ ಕಾನೂನಿನ ಬಗ್ಗೆ ಭಯ ಇಲ್ಲದೆ ಇರುವುದು. ದುಬೈ ನಲ್ಲಿ ಇಂದು ಮಹಿಳೆ ಚಿನ್ನಾಭರಣ ಹಾಕಿಕೊOಡು ಒಬ್ಬಳೆ ರಾತ್ರಿ 12 ಗಂಟೆಗೆ ತಿರುಗಬಲ್ಲಳು ಆದರೆ ಮಾಹಾತ್ಮ ಗಾಂಧಿಯ ಕನಸಿನ ಭಾರತದಲ್ಲಿ ಇದು ಸಾಧ್ಯವಾಗದಿರುವುದು ಸ್ವಾತಂತ್ರ್ಯಾ ನಂತರ ಅಧಿಕಾರ ಹಿಡಿದವರ ಇಚ್ಛಾ ಶಕ್ತಿಯ ವೈಫಲ್ಯವಲ್ಲವೇ ?
ನಾಲ್ಕನೆಯದು ಉದ್ಯಮ ಕ್ಷೇತ್ರ.ಇಂದು ಭಾರತದಲ್ಲಿ ಬ್ರಹತ್ ಉದ್ಯಮಗಳಿಗೆ ಮಾತ್ರ ಉತ್ತಮ ಅವಕಾಶ.ಸಣ್ಣ ಲಘು ಉದ್ಯಮಗಳು ಸಾರಕಾರದ ನೀತಿಯಿOದಾಗಿ ನೆಲಕಚ್ಚಿವೇ.ಸಿದ್ದ ಉಡುಪುಗಳ ರಪ್ತು, ಸ್ಟೀಲ್ ಪಾತ್ರೆಗಳ ರಪ್ತು ಕOಪನಿಗಳು, ಚರ್ಮಕೈಗಾರಿಕ ಘಟಕಗಳು ಇಂದು ಬಾಗಿಲು ಎಳೆದುಕೊOಡಿವೆ.ಅದನ್ನು ಅವಲOಬಿಸಿಕೊOಡಿದ್ದ ಅದೇಸ್ಟೋ ಕ್ರಾಫ್ಟ್ ಪೇಪರ್,ಪ್ಲಾಸ್ಟಿಕ್ ಬ್ಯಾಗ್ ಘಟಕಗಳು ಬಾಗಿಲು ಮುಚ್ಚಿವೆ.ಒಂದೊಮ್ಮೆ ಸಿದ್ದ ಉಡುಪುಗಳ ತಯಾರಿಕಾ ಘಟಕ ಮತ್ತು ರಪ್ತು ಘಟಕಗಳ ಸ್ವರ್ಗವಾಗಿದ್ದ ಲೋವರ್ ಪರೇಲ್, ಸಿವ್ರಿ, ಜೋಗೇಶ್ವರಿ,ಗೋರೇಗಾವ್ ಗಳಲ್ಲಿನ ಇಂಡಸ್ಟ್ರಿಯಲ್ ಏಸ್ಟೇಟ್ಗಲ್ಲಿನ ಅವಸ್ಥೇ ನೋಡಿದರೆ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.ಒಂದೊಮ್ಮೆ ಸ್ಟೀಲ್ ಅಟೇನ್ಸಿಲ್ಸ್ ನ ಸ್ವರ್ಗವಾಗಿದ್ದ ಕಲ್ಬಾದೇವೀ, ಸಿ ಪಿ ಟ್ಯಾOಕ್ ನ ಮಾರುಕಟ್ಯೇಗಳು ಬಿಕೋ ಅನ್ನುತ್ತಿದೆ.ಅಲ್ಲೆಲ್ಲ ಕೆಲಸ ಮಾಡುತಿದ್ದ ಕೆಲಸಗಾರರು ಬೀದಿಪಾಲಾಗಿದ್ದಾರೆ.ಬಟ್ಟೆ ಗಿರಣಿಗಳು ಮೊದಲೇ ಕಾರ್ಮಿಕ ಸಂಘಟನೆ ಮತ್ತು ಸಾರಕಾರದ ಆರ್ಥಿಕ ನೀತಿಯಿOದಾಗಿ ದ್ವಿ ದಶಕದ ಮೊದಲೇ ಸ್ವರ್ಗವಾಸಿಯಾಗಿದೆ. ಸರಕಾರಗಳು ಮಂದಿರ ಮಸೀದಿಗಳಿಗೆ ಅನುದಾನ ನೀಡುವುದನ್ನು ತಕ್ಷಣವೇ ನಿಲ್ಲಿಸಿ ಆ ಹಣವನ್ನು ಸಾರಕಾರೀ ಆಸ್ಪತ್ರೆಗಳು ಮತ್ತು ಸಾರಕಾರೀ ಶಾಲಾಕಾಲೇಜುಗಳ ಗುಣಮಟ್ಟವನ್ನು ಏರಿಸೂವಲ್ಲಿ ನೀಡಬೇಕು.ಮಂದಿರ ಮಸೀದಿ ಚರ್ಚುಗಳ ಆಡಳಿತಕ್ಕೊಳಪಟ್ಟಿರುವ ಶಾಲಾಕಾಲೇಜುಗಳ ಆಸ್ಪತ್ರೆಗಳು ಜನರ ಮೇಲೆ ಹೇರುವ ಅತ್ಯಧಿಕ ಶುಲ್ಕಗಳಿಗೆ ತಕ್ಷಣವೇ ಕಡಿವಾಣ ಹಾಕಿ ಜನ ಸಾಮಾನ್ಯರಿಗೆ ಕೈಗೆಟುವ ದರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಎಲೆಕ್ಟ್ರೋನಿಕ್ ಮಾದ್ಯಮಗಳು 24 ಗಂಟೆ ಸಿನಿಮಾ ರಂಗ, ಕ್ರಿಕೆಟ್ ರಂಗದ ಬೆನ್ನು ಹಿOದೆ ಸುತ್ತುವುದನ್ನು ಬಿಟ್ಟು ಈ ಮೇಲಿನ ಸಮಸ್ಯೇಗಳ ಮೇಲೆ ಸಾಧ್ಯವಿದ್ದಸ್ಟು ಪದೇ ಪದೇ ಬೆಳಕು ಚೆಲ್ಲಿದರೆ, ಆಗಲಾ ದರೂ ಅಧಿಕಾರ ಹಿಡಿದ ಸರಕಾರಗಳು ಎಚ್ಚೆತ್ತು ತಮ್ಮ ಇಚ್ಛಾ ಶಕ್ತಿಯನ್ನು ಜಾಗ್ರತಗೊಳಿಸಿ ಶಿಕ್ಷಣ,ವೈದ್ಯಕೀಯ, ಕಾನೂನು ಮತ್ತು ಸಣ್ಣ ಮತ್ತು ಲಘು ಕೈಗಾರಿಕಾ ಉದ್ಯಮಗಳ ಮೇಲೆ ಸುಧಾರೀಕರಣ ನೀತಿಯನ್ನು ಜಾರಿಗೊಳಿಸಿದರೆ ಖಂಡಿತವಾಗಿಯೂ ಆಧುನಿಕ ಸಮ್ರದ್ದಿಯ ಭಾರತವನ್ನು ಕಾಣಲು ಸಾಧ್ಯ.
ಏನಂತೀರಿ ?
ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ
No comments:
Post a Comment