ಭಂಧುಗಳೇ ,
ಇದು ಹೇಗೆ ಸಾಧ್ಯ ಎOಬ ವಿಚಾರ ಮೇಲಿನ ಶೀರ್ಷಿಕೆ ನೋಡಿ ನಿಮ್ಮಲ್ಲಿ ಚಿಂತನ ಮಂಥನ ಶುರುವಾಗಿರಬಹುದು.
ಹಣವಿದ್ದವರು ತಾವೇ ಸ್ವತಃ ಹಣ ನೀಡಿ ಸಾಮಾಜಿಕ ಸೇವೆ ಮಾಡಬಹುದು.ಆದರೆ ಹಣ ನೀಡಲು ಅಸಾಧ್ಯವಾದವರು ತಮ್ಮ ತಮ್ಮ ಸೇವಾಕ್ಷೇತ್ರದಲಿದ್ದುಕೊOಡು ಸಾಮಾಜಿಕ ಸೇವೆ ಗೈಯುಬಹುದು.ಅದರ ಎರಡು ಮೂರು ಉದಾಹಾರಣೆಗಳನ್ನು ನಾನು ನಿಮ್ಮೊOದಿಗೆ ಹಂಚಿಕೊಳ್ಳುತ್ತಿದ್ದೇನೆ.ಮೊದಲನೆಯವರಾಗಿ ಠಾಕುರ್ಲಿಯವರಾದ ಶ್ರೀ ಆನಂದ್ ದೇವಾಡಿಗರು.ಇವರು ಮುOಬೈ ದೈನಿಕ ಕನ್ನಡ ಪತ್ರವಾದ ಕರ್ನಾಟಕ ಮಲ್ಲದಲ್ಲಿ ಉದ್ಯೋಗಿಯಾಗಿದ್ದು ಮುOಬೈ ದೇವಾಡಿಗರ ಎಲ್ಲಾ ಕಾರ್ಯಚಟುವಟಿಕೆಗಳನ್ನು ಅತೀ ಶೀಘ್ರದಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳುತ್ತಾ ತನ್ನದೇ ಆದ ರೀತಿಯಲ್ಲಿ ಸಮುದಾಯದ ಅಳಿಲು ಸೇವೆ ಮಾಡುತ್ತಿದ್ದಾರೆ.
ಎರಡನೆಯವರಾಗಿ ಶ್ರೀ ನಾಗರಾಜ್ ದೇವಾಡಿಗರು.ಇವರು ಮುOಬೈ ಉದಯವಾಣಿ ಆವ್ರತ್ತಿಯ ಉದ್ಯೋಗಿಯಾಗಿದ್ದು ಮುOಬೈ ದೇವಾಡಿಗರ ಕಾರ್ಯ ಚಟುವಟಿಕೆಗಳನ್ನು ತ್ವರಿತವಾಗಿ ಪ್ರಕಟಿಸುತ್ತಾರೆ.ಅಲ್ಲದೆ " ದೇವಾಡಿಗ ಪೋರ್ಟಲ್ ಎOಬ ತಮ್ಮದೇ ವೆಬ್ಸೈಟ್ ಹುಟ್ಟುಹಾಕಿ ದೇವಾಡಿಗರ ಕತೆ,ಕವನ, ವೈಚಾರಿಕ ವಿಚಾರಗಳು ,ಎಲ್ಲ ದೇವಾಡಿಗ ಸಂಘಗಳ ವರದಿಯನ್ನು ಅದರಲ್ಲಿ ಫೀಡ್ ಮಾಡಿ ಲಕ್ಶಾಂತರ ದೇವಾಡಿಗರಿಗೆ ತಲುಪಿಸುತ್ತಾರೆ.
ಮೂರನೆಯವರಾಗಿ ತಲ್ಲೂರಿನ ರವಿ ದೇವಾಡಿಗರು.ಇವ್ರು ತಮ್ಮ ಸುತ್ತ ಮುತ್ತಲಿನ ಊರಿನ ವೈದ್ಯಕೀಯ ತೋಂದರೇ ಇದ್ದವರನ್ನು ಸ್ವತಃ ಸOಪರ್ಕಿಸಿ ವೈದ್ಯಕೀಯ ಸಹಾಯ ನೀಡುವ ಸಂಘಗಳಿOದ, ಉದಾರ ದಾನಿಗಳಿOದ, ಸರಕಾರದಿOದ, ಎನ್ ಜಿ ಓ ಗಳಿOದ ಸಹಾಯ ದೊರಕಿಸಿಕೊಡುವ ಮೂಲಕ ತನ್ನದೇ ರೀತಿಯಲ್ಲಿ ಸಮುದಾಯದ ಆಳಿಲು ಸೇವೆ ಮಾಡುತ್ತಿದ್ದಾರೆ.
ಇನ್ನು ನಾಲ್ಕನೆಯವರಾಗಿ ಶ್ರೀ ದಯಾನಂದ ದೇವಾಡಿಗ ನೇರುಲ್. ಇವ್ರು ಇಂಡಿಯಾ ಬುಲ್ ಕOಪನಿಯ ಉದ್ಯೋಗಿಯಾಗಿದ್ದು ಇವರೂ ಸಹ ತಮ್ಮ ಕOಪನಿ ಕೊಡ ಮಾಡುವ ಆರ್ಥಿಕವಾಗಿ ಹಿOದುಳಿದಿರುವ ಆಯ್ದ ವಿಧ್ಯಾರ್ಥಿಗಳಿಗೆ ಸOಪೂರ್ಣ ಶುಲ್ಕವನ್ನು ದೇವಾಡಿಗ ಮಕ್ಕಳಿಗೆ ಕೊಡಿಸುವ ಮೂಲಕ ಸಮಾಜದ ಅಳಿಲು ಸೇವೆ ಮಾಡುತ್ತಿದ್ದಾರೆ..ಇತ್ತೀಚೆಗೆ ಮುOಬೈನ ಹೋಟೆಲ್ ಮ್ಯಾನೇಜ್ ಮೆOಟ್ ದೇವಾಡಿಗ ವಿಧ್ಯಾರ್ಥಿಗೆ ಇಡೀ ವರ್ಷದ ಶುಲ್ಕ ರುಪೈ 80,500/- ಕೋಡಿಸುವಲ್ಲಿ ಸಫಲರಾಗಿದ್ದಾರೆ.ಅದಲ್ಲದೆ ಅದೇಸ್ಟೋ ಊರ,ಮುOಬೈನ ರೋಗಿಗಳಿಗೆ ವೈದ್ಯಕೀಯ ನೆರೆವನ್ನು ಸೌದಿ ಅರೇಬಿಯಾದ ಎನ್ .ಜಿ .ಓ .ಸಂಸ್ಥೇ ಯಾದ " maasa " ಮೂಲಕ ವೈದ್ಯಕೀಯ ನೆರವನ್ನು ಕೊಡಿಸುತ್ತಾ ಬಂದಿದ್ದಾರೆ. ಆದರೆ ಸಮಾಜ ಹಣ ನೀಡಿ ಸಮಾಜಸೇವೆ ಮಾಡುವವರನ್ನು ಬೇಗನೆ ಗುರುತಿಸುತ್ತದೆ. ಆದರೆ ಎರಡನೆಯ ರೀತಿ ತಿಳಿಸಿದ ಸಮಾಜಸೇವೆ ಮಾಡುವವರನ್ನು ಗುರುತಿಸುವುದು ಬಹಳ ವಿರಳ. ಇನ್ನೂ ನಮ್ಮ ಸಮುದಾಯದಲ್ಲಿ ಅದೇಸ್ಟೋ ಮಂದಿ ಎಲೆ ಮರೆ ಕಾಯಿಯಂತೆ ಕೆಲಸ ಮಾಡುವವರು ಇರಬಹುದು. ಯಾವುದನ್ನೂ ಅಪೇಕ್ಷಿಸದೆ ತಮ್ಮ ಆತ್ಮ ತ್ರಪ್ತಿಗಾಗಿ ಕೆಲಸ ಮಾಡುವ ಈ ಸಮಾಜಸೇವಕರನ್ನು ದೇವರು ಚೆನ್ನಾಗಿಟ್ಟಿರಲಿ ಎOದು ನಾವೆಲ್ಲ ಆಶಿಸುವ
ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ
No comments:
Post a Comment