ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇವರ 8ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಕದಂ ರೂವಾರಿ ಎಲಿಗೆಂಟ್ ಗ್ರೂಪ್ ಕಂಪೆನಿಯ ಆಡಳಿತ ನಿರ್ಧೇಶಕರಾದ ದಿನೇಶ್ ದೇವಾಡಿಗ ನಾಗೂರೂ ಇವರ ನೇತ್ರತ್ವದಲ್ಲಿ ಆಜಮಾನ ಬೀಚ್ ಪೋರ್ಟ್ ನಲ್ಲಿ ಜರುಗಿತು.ರಾಮಚಂದ್ರ ದೇವಾಡಿಗ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು.ಕದಂ ದುಬೈ ಮಹಿಳಾ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ರವಿ ದೇವಾಡಿಗ ನಾಗೂರೂ ಸಂದೇಶ ವಾಚನಗೈದರು.
ಸಭೆಯಲ್ಲಿ ದೇವಾಡಿಗ ಸಂಘ ಮುಂಬೈನ ಅಧ್ಯಕ್ಷರಾದ ರವಿ ಎಸ್ ದೇವಾಡಿಗ,ವಿಮರ್ಶಕ ಶ್ರಮಿಕ ಸಂಘಟಕ ವಾಗ್ಮಿಯಾದ ಹಿರಿಯಡ್ಕ ಮೋಹನ್ ದಾಸ್,ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಂಬಿಕಾ ರಾಜು ದೇವಾಡಿಗ ತ್ರಾಸಿ,ಮೊದಲಾದವರನ್ನು ಅಬಿನಂದಿಸಲಾಯಿತು.ಮನುಕುಲದ ಶ್ರೇಷ್ಠ ದೇವಾಡಿಗ ಸಾಧಕ ಪ್ರಶಸ್ತಿಯನ್ನು ಜಿಲ್ಲಾಪಂಚಾಯತ್ ಸದಸ್ಯೆ ಶ್ರೀಮತಿ ಗೌರಿ ದೇವಾಡಿಗ ಇವರಿಗೆ ನೀಡಲಾಯಿತು.ಕದಂ ವಾರ್ಷಿಕ ವರದಿಯನ್ನು ಕದಂ ಸದಸ್ಯ ವಾಸು ದೇವಾಡಿಗ ಮಂಡಿಸಿದರು.ಸಭೆಗೆ ಆಗಮಿಸಿದ ಸಭಿಕರಿಗೆ ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರವನ್ನು ಸದಸ್ಯ ಶ್ರೀಧರ್ ದೇವಾಡಿಗ ಮತ್ತು ಮಕ್ಕಳಿಗೆ ವಿವಿಧ ಬಗೆಯ ಸ್ಪರ್ಧೆಗಳನ್ನು ಆಶಾ ದೇವಾಡಿಗ ನೆರವೇರಿಸಿದರು .ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ
ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ ತ್ರಾಸಿ, ಶೀನ ದೇವಾಡಿಗ ಮರವಂತೆ ಮೊದಲಾದವರು ಉಪಸ್ಥಿತರಿದ್ದರು.ಶಾರದಾ ದೇವಾಡಿಗ ನಾಗೂರೂ,ಸಪ್ತ ಸ್ವರ ಸಹಕಾರಿ ಕಾರ್ಯನಿರ್ವಾಹಣಾಧಿಕಾ ರಿಯಾದ ರವಿ ದೇವಾಡಿಗ ತಲ್ಲೂರು,ಲೀಲಾವತಿ ದೇವಾಡಿಗ ಮತ್ತು ರೇವತಿ ದೇವಾಡಿಗ ಇವರನ್ನು ಗುರುತಿಸಿ ಅಭಿನಂದಿಸಲಾಯಿತು.ನಿತ್ಯಾನಂದ ದೇವಾಡಿಗ ಸಬೆಗೆ ಬಂದ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ನಿರೂಪಿಸಿದರು. ವಿಶಾಲಾಕ್ಷಿ ದಿನೇಶ್ ದೇವಾಡಿಗ ವಂದಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಯುವರಾಜ್ ಕೆ ದೇವಾಡಿಗ,ಮನೋಜ್ ದೇವಾಡಿಗ ಹಾಗೂ ಸಂತೋಷ್ ದೇವಾಡಿಗ ನಿರ್ವಹಿಸಿದರು.
No comments:
Post a Comment