ವರದಿ : ಪುರುಷೋತ್ತಮ್‍ದಾಸ್ ಉಪ್ಪುಂದ
ದಿನಾಂಕ 10/10/2017 ರಿಂದ 12/10/2017 ರವರೆಗೆ ಮಂಗಳೂರಿನಲ್ಲಿ ನೆಡೆದ 14 ವರ್ಷದೊಳಗಿನ ಬಾಲಕೀಯರ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ 4 ನೇ ಸ್ಥಾನ ಪಡೆದು ನವೆಂಬರ್ ನಲ್ಲಿ ತೆಲಂಗಾಣದಲ್ಲಿ ನೆಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಕರ್ನಾಟಕವನ್ನು ಸತತ ಏರಡನೇ ಬಾರಿ ಪ್ರತಿನಿಧಿಸುತ್ತಿದ್ದಾಳೆ. ಬೈಂದೂರಿನ ಮಂಗಳಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶಾಖಾ ವ್ಯವಸ್ಥಾಪಕರಾದ ಸುಬಾಸ್ ದೇವಾಡಿಗ ಹಾಗೂ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಪ್ರಬಂಧಕರಾದ ಚಂದ್ರಶೇಖರ್ ದೇವಾಡಿಗರ ಸೊಸೆಯಾದ ಇವಳು ಸಾಗರದ ಪ್ರಗತಿ ಸಂಯುಕ್ತ ಶಾಲೆಯಲ್ಲಿ 8ನೇ ತರಗತಿ ಕಲಿಯುತ್ತಿದ್ದು ಶಿಕ್ಷಕರಾದ ವೈ ಮೂರ್ತಿ ದೇವಾಡಿಗ ಹಾಗೂ ಸುಜಾತ ದೇವಾಡಿಗ ದಂಪತಿಯ ಪುತ್ರಿಯಾಗಿರುತ್ತಾಳೆ.ಇವಳ ಸಾಧನೆಗೆ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀ ಪಿ ಲಿಂಗಪ್ಪ,ದೈಹಿಕ ನಿರ್ಧೇಶಕರಾದ ಕೆ ಏನ್ ಗಾವುಡಿ,ಹಾಗೂ ಸಾಗರದ ಚೆಸ್ ಅಸೋಸಿಯೇಷನ್ ಪ್ರಮುಖರಾದ ಹುಚ್ಚುರಾಯಪ್ಪ,ಮಂಜುನಾಥ,ಸುರೇಶ್ ಪ್ರಮೋದ ಹೆಗಡೆ,ಛಾಯಾ ಹೆಗಡೆ,ಗವಿಯಪ್ಪ,ಶುಭ ಹಾರೈಸಿದ್ದಾರೆ.
No comments:
Post a Comment