Saturday, 14 October 2017

ರಿಶಾಂಕ್‌ ದೇವಾಡಿಗ ಅವರ ಅಬ್ಬರಕ್ಕೆ ಜೈಪುರ ಚಿತ್‌

ಕನ್ನಡಿಗ ರಿಶಾಂಕ್‌ ದೇವಾಡಿಗ ಅವರ ಅಬ್ಬರದ ರೈಡಿಂಗ್‌ನ ಫ‌ಲದಿಂದಾಗಿ ಯುಪಿ ಯೋಧಾ ತಂಡ ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ 53-32ರಿಂದ ಭಾರೀ ಜಯ ಸಾಧಿಸಿದೆ.

ಜೈಪುರ ಆತಿಥ್ಯದಲ್ಲೇ ನಡೆದ ಈ ಪಂದ್ಯ ಪ್ಲೇಆಫ್ ಪ್ರವೇಶದ ಹಿನ್ನೆಲೆಯಲ್ಲಿ ಯುಪಿ ಯೋಧಾಕ್ಕೆ ಮಹತ್ವದ್ದಾಗಿತ್ತು. ಈ ನಿಟ್ಟಿನಲ್ಲಿ ಛಲದಿಂದಲೇ ಕಣಕ್ಕೆ ಇಳಿದ ಯೋಧಾ ಆರಂಭದಿಂದಲೇ ಆಕ್ರಮಣಕಾರಿ ಆಟವನ್ನು ಆರಂಭಿಸಿತು. ಇದರಿಂದ ಯೋಧಾ ಅಂಕ ಭಾರೀ ಪ್ರಮಾಣದಲ್ಲಿಯೇ ಏರಿಕೆ ಪಡೆಯುತ್ತಾ ಸಾಗಿತು. ಯೋಧಾ ಹೋರಾಟದ ಮುಂದೆ ಜೈಪುರ ಹೋರಾಟ ಮಂಕಾಯಿತು. ಪಂದ್ಯ ಆರಂಭವಾಗಿ 4ನೇ ನಿಮಿಷದಲ್ಲಿಯೇ ಯೋಧಾ 11-3ರಿಂದ ಭಾರೀ ಮುನ್ನಡೆ ಪಡೆದಿತ್ತು. ಅಂತಿಮವಾಗಿ ಮೊದಲ ಅವಧಿಯ ಅಂತ್ಯದಲ್ಲಿ ಯೋಧಾ 28-16ರಿಂದ ಮುನ್ನಡೆ ಪಡೆಯಿತು. ಯೋಧಾ ತಂಡ ಎರಡನೇ ಅವಧಿಯಲ್ಲಿಯೂ ಅಂಕದ ಬೇಟೆಯನ್ನು ಮುಂದುವರಿಸಿತು. ಈ ಹಂತದಲ್ಲಿ ಜೈಪುರ ಪ್ರತಿ ಹೋರಾಟ ಪ್ರದರ್ಶಿಸಿದರೂ ಪ್ರಯೋಜನವಾಗಲಿಲ್ಲ.

28 ಅಂಕ ಗಳಿಸಿ ರಿಶಾಂಕ್‌ ದಾಖಲೆ
ಪಂದ್ಯದಲ್ಲಿ ಯೋಧಾ ತಂಡದಲ್ಲಿರುವ ಕನ್ನಡಿಗ ಮತ್ತು ಈ ಪಂದ್ಯದಲ್ಲಿ ನಾಯಕನ ಜವಾಬ್ದಾರಿ ಹೊತ್ತ ರಿಶಾಂಕ್‌ ದೇವಾಡಿಗ 28 ರೈಡಿಂಗ್‌ ಅಂಕ ಪಡೆದು ದಾಖಲೆ ನಿರ್ಮಿಸಿದ್ದಾರೆ. ಒಟ್ಟು 27 ರೈಡಿಂಗ್‌ ಮಾಡಿದ ರಿಶಾಂಕ್‌ 28 ಅಂಕ ಪಡೆದಿದ್ದಾರೆ. ಇದರಲ್ಲಿ 23 ಟಚ್‌ ಪಾಯಿಂಟ್‌, 5 ಬೋನಸ್‌ ಪಾಯಿಂಟ್‌ ಸೇರಿವೆ. ಇದು ಪ್ರೊ ಕಬಡ್ಡಿಯ 5ನೇ ಆವೃತ್ತಿಯ ಪಂದ್ಯವೊಂದರಲ್ಲಿ ವೈಯಕ್ತಿಕ ಗರಿಷ್ಠ ಅಂಕದ ಸಾಧನೆಯಾಗಿದೆ.

No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...