ಕರ್ನಾಟಕ ರಾಜ್ಯ ಸರಕಾರ ಬೆOಗಳೂರಿನ ವಿಧಾನ ಸೌಧದ ನಿರ್ಮಾಣದ ವಜ್ರಮಹೋತ್ಸವದ ಅಂಗವಾಗಿ ರೂಪೈ 27 ಕೋಟಿ ಖರ್ಚಿನ ಬಜೆಟನ್ನು ಹಾಕಿ ಕೊOಡಿದೆ. ಎಲ್ಲಾ ವಿಧಾನಸಭಾ ಸದಸ್ಯರಿಗೆ 50 ಸಾವಿರ ರೂಪೈ ಬೆಲೆಯ ಚಿನ್ನದ ಬಿಸ್ಕೆಟ್ ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಬೆಳ್ಳಿಯ ತಾಟು ಮತ್ತು ಲೋಟ ಅಲ್ಲದೆ ವಿಧಾನ ಸಭಾ ಸದಸ್ಯರಿಗೆ ಈ ಎರಡು ದಿನದ ಸಮಾರOಭದಲ್ಲಿ ಪಂಚ ತಾರ ಹೋಟೆಲ್ ನಲ್ಲಿ ಆದರಾತಿಥ್ಯ ಕೊಡುವ ವ್ಯವಸ್ಠೇ ಮಾಡಿಕೊOಡಿದೆಯOತೆ. ಜನರಿಗಾಗಿ ಜನರಿಂದ ಆಯ್ಕೆ ಗೊOಡು ಜನ ಸೇವೆ ಮಾಡಲು ವಿಧಾನ ಸಭೆ ಪ್ರವೇಶಿಸಿದ ಇವರು ಈ ರೀತಿ ಜನರ ತೆರಿಗೆ ಹಣವನ್ನು ಹಗಲು ದರೋಡೆ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯೇ ಸರಿ. ಸಮಾಜವಾದದಿOದ, ಅಹಿಂದ ನಾಯಕರಾಗಿ ಬೆಳೆದು ಬಂದ ಸಿದ್ದರಾಮಯ್ಯ ಜನರ ತೆರಿಗೆ ಹಣವನ್ನು ಲೂಟಿಗೈಯಲು ಹೊರಟಿರುವುದು ಕರ್ನಾಟಕದ ಜನರ ಮಾತ್ರವಲ್ಲ ಸಮಾಜವಾದದ ದುರಂತವೇ ಸರಿ. ವಿಧಾನಸೌಧದ ದ ವಜ್ರ ಮಹೋತ್ಸವಕ್ಕಾಗಿ ಖರ್ಚು ಮಾಡಲೇ ಬೇಕೆOದಿದ್ದರೇ ಆ 27 ಕೋಟಿ ರೂಪಾಯಿಯನ್ನು ಒಂದೊ ಎರಡೋ ಕುಗ್ರಾಮವನ್ನು ದತ್ತು ತೆಗೆದುಕೊOಡು ಅದಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕೊಟ್ಟು ಅದರಲ್ಲಿ ಸಾರ್ಥಕತೆಯನ್ನು ಮೆರೆಯಬಹುದಿತ್ತು.ಅದು ಬಿಟ್ಟು ಈ ರೀತಿ ಜನರ ಹಣವನ್ನು ಮೋಜು ಮಾಡಲು ಹೊರಟಿರುವ ಈ ಸರಕಾರವನ್ನು ಜನರು ಕಿತ್ತೊಗೆಯ ಬೇಕಿದೆ. ಸಭಾಧ್ಯಕ್ಶ ಶ್ರೀ ಕೋಳಿವಾಡರ 27 ಕೋಟಿ ಯಲ್ಲದಿದ್ದರೂ ಪರ್ವಾಗಿಲ್ಲ 15 ಕೋಟಿ ಖರ್ಚು ಮಾಡಲು ಅನುಮತಿ ಸಿಕ್ಕರೂ ಸಾಕೇನ್ನೂವ ಬೇಜವಾಬ್ದಾರಿ ಹೇಳಿಕೆ ಕೇಳುವಾಗ ಇವರ ನಾಚಿಕೆಬಿಟ್ಟತನವನ್ನು ಸಾಕ್ಷೀ ಕರಿಸುತ್ತದೆ.ರಾಜ್ಯದಲ್ಲಿ ಅದೇಸ್ಟೋ ಕುಗ್ರಾಮಗಳು ಇನ್ನೂ ನೀರು, ಬೆಳಕು, ಸೇತುವೆ ರಸ್ತೆ ಸOಪರ್ಕಗಳನ್ನು ಹೋಂದಿಲ್ಲ.ಅದೇಸ್ಟೋ ಬಡ ಜನ ಕ್ಯಾನ್ಸರ್, ಕಿಡ್ನಿ ಸಮಸ್ಯೆಗಳಿOದ ದುಬಾರಿ ವೈದ್ಯಕೀಯ ವೆಚ್ಚದಿOದಾಗಿ ಅವರಿಗೆ ಬೇಕಾದ ಸೌಲಭ್ಯ ಸಿಗದೇ ಸಾಯುತ್ತಿರುವಾಗ, ಇಂಥದಕ್ಕೆ ಖರ್ಚು ಮಾಡುವುದನ್ನು ಬಿಟ್ಟು ದುಂದು ವೆಚ್ಚಕ್ಕೆ ಚಿಂತಿಸುತ್ತಿರುವ ಇಂಥ ರಾಜಕೀಯ ನಾಯಕರು ರಾಜ್ಯಕ್ಕೆ ದೇಶಕ್ಕೆ ಬೇಕೇ ಎಂದು ಪ್ರಜ್ಞಾವಂತ ಜನ ಚಿಂತಿಸಬೇಕಿದೆ. ಇತ್ತೀಚೆಗೆ ಕರ್ಣಾಟಕದಲ್ಲಿ ಬಿದ್ದ ಅತಿವೃಷ್ಟಿಯಿಂದಾಗಿ ಅಲ್ಲಿನ ರೈತಾಪಿವರ್ಗ ಬೆಳೆದ ಬೆಳೆ ನಾಶವಾಗಿ ಕಂಗಾಲಾಗಿದ್ದಾರೆ ಮಾತ್ರವಲ್ಲದೆ ಹಲವಾರು ಮಂದಿ ತಮ್ಮ ಸೂರನ್ನೇ ಕಳಕೊOಡು ಕಂಗೆಟ್ಟಿರುವಾಗ ಅಲ್ಲಿOದ ಗೆದ್ದು ಬಂದ ಶಾಸಕರು ಮಂತ್ರಿ ಮಹೋದಯರು ಐಷಾರಾಮಿ ವಜ್ರ ಮಹೋತ್ಸೊವಕ್ಕೆ ಆಣಿಯಾಗುತ್ತಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ. ಇದೆಲ್ಲಾ ಬೆಳವಣಿಗೆಗಳನ್ನು ನೋಡುವಾಗ ಇದು ಪ್ರಜಾಪ್ರಭುತ್ವವೇ ಯಾ ರಾಜಾಪ್ರಭುತ್ವವೇ ಎOದು ಜನ ಗೋಂದಲಕ್ಕೀಡಾಗಿದ್ದಾರೆ.
ಓದುಗರೇ ಬರೇ ಅಧಿಕಾರ ಹಿಡಿದ ಸರಕಾರಗಳು ಮಾತ್ರವಲ್ಲ, ತನ್ನ ಜಾತಿಗಾಗಿ ತನ್ನ ಜನರಿಗಾಗಿ, ತಮ್ಮ ಭಾಷೆಗಳಿಗಾಗಿ ಹುಟ್ಟಿಕೊOಡ ಸಾಮಾಜಿಕ ಸಂಘಟನೆಗಳು ಕೂಡ ವಾರ್ಶೀಕೋತ್ಸವ, ದಶಮಾನೋತ್ಸೊವ ಬೆಳ್ಳಿ ಚಿನ್ನ ವಜ್ರಮಹೋತ್ಸೊವ ಗಳಿಗೆ ಲಕ್ಶಾಂತರ ರೂಪಾಯಿ ಖರ್ಚು ಮಾಡುವುದನ್ನು ಬಿಟ್ಟು ಶೈಕ್ಷಣಿಕವಾಗಿ ಬಡ ಮಕ್ಕಳನ್ನು ಶಿಕ್ಷಣಕೊಡುವುದಕ್ಕೆ ದತ್ತು ತೆಗೆದುಕೊಳ್ಳುವುದು, ಕಿಡ್ನಿ ಕ್ಯಾನ್ಸೆರ್ ಸಮಸ್ಯೇ ಯಿಂದ ಬಳಲುತ್ತಿರುವ ಬಡವರಿಗೆ ವೈದ್ಯಕೀಯ ನೆರೆವು ನೀಡುವುದರ ಮೂಲಕ ಸಂಘಟನೆಗಳ ಮೂಲ ಉದ್ದೇಶಗಳನ್ನು ಸದಾ ಜೀವಂತವಾಗಿರಿಸಬೇಕು. .ಹಾಗಾದಾಗ ಮಾತ್ರ ಅದು ಜನಸೇವೆಯಾಗುತ್ತದೆ.ಇಲ್ಲವಾದಲ್ಲೀ ಅದು ಸ್ವಾರ್ಥ ಸಾಧನೆಗಾಗಿ ಸ್ವಸೇವೆಗಾಗಿ ಎನಿಸುತ್ತದೆಯಲ್ಲವೇ ?
ನೀವೇನಂತೀರಿ ?
ಗಣೇಶ್ ಎಸ್ ಬ್ರಹ್ಮಾವರ್
ವಾಶಿ ,ನವಿ ಮುOಬೈ
9594228684
No comments:
Post a Comment