Wednesday, 22 November 2017

ಕೇಂದ್ರ ಸರಕಾರದ ತರಬೇತಿ ಯೋಜನೆ.

ದಿನಭತ್ಯೆಯೊಂದಿಗೆ ಕೇಂದ್ರ ಸರಕಾರದ ತರಬೇತಿ ಯೋಜನೆ, ಎಲ್ಲಾ ನಿರುದ್ಯೋಗಿ ಯುವಕ ಯುವತಿಯರು ಪ್ರಯೋಜನ‌ ಪಡೆಯಿರಿ, ತರಬೇತಿ ನಂತರ ಖಚಿತ ಉದ್ಯೋಗ ಅವಕಾಶವಿದೆ..

Sunday, 19 November 2017

ಉಡುಪಿ ದೇವಾಡಿಗ ಸಂಘ ಕದಮ್ ಮ ಎ ಸೌ ಎ (MASA).

ಕೆಲವು ಸಂಘಟನೆಗಳ ಸಾಮಾಜಿಕ ಬದ್ದತೆಯುಳ್ಳ ಕಾರ್ಯ ಚಟುವಟಿಕೆಗಳು ಇತರ ಸಂಘ ಸಂಸ್ಥೇಗಳಿಗೆ ಪ್ರೇರಣೆಯಾಗುತ್ತದೆ. ಉಡುಪಿ ದೇವಾಡಿಗ ಸಂಘ ಕಳೆದ ಎರಡು ವರ್ಷಗಳಿOದ ರಾಜ್ಯದ ಎಲ್ಲಾ ಪ್ರತಿಭಾ ದೇವಾಡಿಗ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಅವರ ಕಾರ್ಯವೈಖರಿಯನ್ನು ಸಾಕ್ಷೀಕರಿಸುತ್ತದೆ. ಇದರಲ್ಲೀ ಇವರಿಗೆ ಮುOಬೈ ಸಂಘದ ಸಹಕಾರವನ್ನು ಸ್ಮರಿಸಬೇಕಾಗುತ್ತದೆ. ಈಗ ಉಡುಪಿ ಸಂಘ ಅವರ ಕಾರ್ಯ ವ್ಯಾಪ್ತಿಗೆ ಬರುವ ವಿಕಲಾಂಗ ಸ್ವಜಾತಿ ಭಾಂಧವರಿಗೆ ಅಪಂಗ ವೇತನ ನೀಡುವ ಮೂಲಕ ದೇವಾಡಿಗ ಸಂಘಗಳ ಇತಿಹಾಸದಲ್ಲಿ ಒಂದು ಹೊಸ ಅದ್ಯಾಯವನ್ನು ಬರೆದಿದೆ..ಏನಾದರೂ ಒಂದು ಹೊಸದನ್ನು ಮಾಡಬೇಕು, ಸಾಧಿಸಬೇಕೆನ್ನುವ ಈ  ಸಂಘದ ಛಲ ನಿಜಕ್ಕೂ ಶ್ಲಾಘನೀಯ.ಉಡುಪಿ ಜಿಲ್ಲೆಯಲ್ಲಿ  ಸ್ವಜಾತಿ ಭಾಂಧವರ ಮನೆಗಳು ಪ್ರಕ್ರತಿ ವಿಕೋಪಕ್ಕೆ ಒಳಗಾದಾಗ ಅಲ್ಲಿಯೂಁ ಧಾವಿಸಿ ಆಳಿಲು ಸೇವೆ ಮಾಡುವುದನ್ನು ನೋಡುವಾಗ ಹೆಮ್ಮೆಯೆನಿಸುತ್ತದೆ.
    ಇನ್ನು ಕದಮ್, ಈ ದೇವಾಡಿಗ ಮಿತ್ರರನ್ನು ನೋಡುವಾಗ ಇವರು ದೇವಾಡಿಗ ಮಿತ್ರರು ಅನ್ನುವುದಕ್ಕಿOತ ದೇವಾಡಿಗ ಆಪತ್ ಭಾಂದವರು ಎನ್ನುವುದು ಹೆಚ್ಚು ಸೂಕ್ತವೆನಿಸಬಹುದು. ಜೀವನ ನಿರ್ವಹಣೆಗಾಗಿ ಹೊರ ದೇಶ ಸೇರಿ ತನ್ನ ಕುಟುOಬಕ್ಕೆ ಸೀಮಿತವಾಗಿರದೆ ಇಡೀ ದೇವಾಡಿಗ ಸಾಮಾಜಕ್ಕೆ ವೈದ್ಯಕೀಯ ಸಹಾಯ ಹಸ್ತ ನೀಡುವ ಇವರ ಕಾರ್ಯ ಅಭಿನಂದನೀಯ.
  Masa ಅನ್ನುವ ದೇವಾಡಿಗೇತರ ಸೌದಿ ಅರೇಬಿಯಾದ ಚಾರಿಟಿ ಸಂಸ್ಥೇ  ದೇವಾಡಿಗರಿಗೆ ನಿರಂತರ ಸಹಾಯ ಹಸ್ತ ನೀಡುತ್ತಾ ಬಂದಿದೆ. ಸೌದಿ ಅರೇಬಿಯಾ ಸೇರಿ  ಬಂದ ಆದಾಯದ ಮೂಲಕ ಊರಿನಲ್ಲಿ ಪ್ರೊಪರ್ಟಿ ಮೇಲೆ ಪ್ರೊಪರ್ಟಿಗಳನ್ನು ಮಾಡಬಹುದಿತ್ತು .ಆದರೆ ಇದಕ್ಕೆಲ್ಲ ಗಮನ ಕೊಡದ ಮಾಸ ಸದಸ್ಯರು  ಕಳೆದ ಹತ್ತು ವರ್ಷಗಳಲ್ಲಿ  ಒಂದು ಕೋಟಿಗೂ ಮೀರಿ ಅವಿಭಜಿತ ದಕ್ಷಿಣ ಕನ್ನಡ ತುಳು ಕನ್ನಡ ಜನತೆಗೆ ಜಾತಿ ಮತಭೇದವಿಲ್ಲದೆ  ವೈದ್ಯಕೀಯ ನೆರವು ಮತ್ತು ಶೈಕ್ಷಣಿಕ ಸಹಾಯ ನೀಡಿದೆ. ಇಂತಹ ಹೊರ ನಾಡ ಚಾರಿಟಿ ಸಂಸ್ಥೇಗಳನ್ನು ಕರ್ಣಾಟಕ ಸರಕಾರ ಗೌರವಿಬೇಕು. ಕದಮ್, ಮಾಸಾ ದ ವೈದ್ಯಕೀಯ ನೆರವಿನ ಬಗೆಗಿನ ತತ್ಪರತೆ ಹಾಗು ಉಡುಪಿ ಸಂಘದ ವಿಕಲಾಂಗ ವೇತನದ ಮಹತ್ತರ ನಿರ್ಣಯಗಳಿಗೆ ನಾನು ತಲೆ ತಗ್ಗಿಸಿ ನಮಿಸುವೆ.
ಆಟ, ಊಟ, ಆಟಿದ ಕೂಟ,ಪಿಕ್ನಿಕ್, ವಾರ್ಶಿಕೋತ್ಸವಗಳ ಭರಾಟೆಗಳ ದರ್ಭಾರಿನಲ್ಲಿ ಸಂಘ ಸಂಸ್ಥೇಗಳ ಹುಟ್ಟುವಿಕೆಯ ಮೂಲ ಉದ್ದೇಶಗಳೇ ಅದ್ರಶ್ಯವಾಗುತ್ತಿದೆಯೋ ಎOದೆಣಿಸುವಾಗ ಮೇಲೆ ಹೇಳಿದ ಚಾರಿಟಿ ಸಂಸ್ಥೇಗಳ ಕಾರ್ಯ ವೈಖರಿಯು ಮನಸ್ಸಿಗೆ  ಮುದ ನೀಡುತ್ತದೆ. ದೇಶದ ಎಲ್ಲ ಸಂಘಟನೆಗಳು ಇವರು ಮೂಡಿಸಿದ ಹೆಜ್ಜೆ ಗುರುತುಗಳ ಪಥದತ್ತ ಸಾಗುವಂತಾಗಲಿ ಎOದು ಆಶಾವಾದ ವ್ಯಕ್ತ ಪಡಿಸುತ್ತಾ ..........ಒಹ್ ನನ್ನ ತಂಗುದಾಣ ಸಮೀಪಿದೆ, ಇಳಿಯತ್ತಿದ್ದೇನೆ.
ಮತ್ತೆ ಭೇಟಿಯಾಗೋಣವೇ.

Thursday, 16 November 2017

ಕುಂದಾಪುರ ಕದಂ ದುಬೈ ಸದಸ್ಯರ ವತಿಯಿಂದ ಧನ  ಸಹಾಯ.

ದಿನೇಶ್ ದೇವಾಡಿಗರ ನೇತ್ರತ್ವದಲ್ಲಿ ದೇವಾಡಿಗ ಮಿತ್ರ ಕುಂದಾಪುರ ಕದಂ ದುಬೈ ಸದಸ್ಯರ ವತಿಯಿಂದ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೇರಂಜಾಲಿನ ಸತೀಶ್ ದೇವಾಡಿಗ ಮತ್ತು ಗಂಗೊಳ್ಳಿಯ ಗಣೇಶ್ ದೇವಾಡಿಗ ಇವರಿಗೆ ತಲಾ 10000 ದಂತೆ 20000 ಧನ  ಸಹಾಯವನ್ನು ಪಲಾನೂಭವಿಗಳಿಗೆ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯರಾದ ತ್ರಾಸಿ ರಾಜು ದೇವಾಡಿಗ, ಶೀನ ದೇವಾಡಿಗ ಮರವಂತೆ, ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹನಾಧಿಕಾರಿಯಾದ ರವಿ ದೇವಾಡಿಗ ತಲ್ಲೂರು, ಮಹಾಬಲ ದೇವಾಡಿಗ ಗಂಗೊಳ್ಳಿ ಮೊದಲಾದವರು ಉಪಸ್ತಿತರಿದ್ದರು.

Wednesday, 8 November 2017

Congratulations Mukesh Devadiga.

Mr Mukesh devadiga Mangalore won Gold Medal in Karnataka state Junior  Powerlifting ChampionShip held at Kinnigoli on 05/11/2017.

Tuesday, 7 November 2017

ಬಿ ಜೆ ಪಿ ಗೆ ಕರ್ನಾಟಕದ ಚುನಾವಣೆ ಕಬ್ಬಿಣದ ಕಡಲೆಯಾಗಬಹುದೇ ?

ಕರ್ಣಾಟಕದ ಮುOಬರುವ ವಿಧಾನಸಭಾ ಚುನಾವಣೆಯOತೂ ತ್ರಿಕೋನ  ಸರಣಿಯಾಗಿ ಮಾರ್ಪಟ್ಟು ಇಡೀ ದೇಶದ ಗಮನ ಸೆಳೆಯುತ್ತಿದೆ. ಶತಾಯ ಗತಾಯ ಅಧಿಕಾರ ಹಿಡಿದೆ ತೀರಬೇಕೆOಬ ಉದ್ದೇಶದಿOದ  ಬಿ ಜೆ ಪಿ ಪರಿವರ್ತನಾ ಯಾತ್ರೆ  ಆರಂಭಿಸಿದೆ. ಆದರೆ ದೌರ್ಭಾಗ್ಯವೆOದರೆ ಬಿ ಜೆ  ಪಿ ಯ ಓಳ ಜಗಳ ನಿಲ್ಲುವ ಸೂಚನೆ ಕಾಣದೆ ಅದು ಮಾರಕವಾಗುವ ಸೂಚನೆ ಕಾಣುತ್ತಿದೆ. ಪರಿವರ್ತನಾ ಯಾತ್ರೆ ಯ ಉದ್ಘಾಟನ ಸಭೆಗೆ ನಿರೀಕ್ಷಿತ ಮಟ್ಟಿನ ಕಾರ್ಯಕರ್ತರು ಹಾಜರಾಗದೆ ಶ್ರೀಮಾನ್ ಯಡಿಯೂರಪ್ಪ ಮುಖಭಂಗ ಅನುಭವಿಸಿದ್ದಾರೆ.ಇದೆಲ್ಲಕ್ಕೊ ಮಾಜಿ ಮುಖ್ಯಮಂತ್ರಿ ಆರ್ ಅಶೋಕ್ ಕಾರಣವೆOದು ಬಿಜೆಪಿ ರಾಸ್ಟ್ರಾಧ್ಯಕ್ಸ್ಜರಿಗೆ ದೂರು ಕೂಡ ಹೋಗಿದೆ ಎOಬ  ಸುದ್ಧಿ ಇದೆ. ಅಲ್ಲಿಂದ ಮುOದೆ ಶ್ರೀಮಾನ್ ಎಸ್ ಈಶ್ವರಪ್ಪನವರು ತುಮಕೂರ್ ನಲ್ಲಿ ಏನೋ ಹೇಳಲು ಹೋಗಿ ಸವಿತಾ ಸಮಾಜದ ಕೆOಗಣ್ಣ ಗೆ  ಗುರಿಯಾಗಿದ್ದಾರೆ. ಇದೂ ಸಾಲದೆOಬOತೆ ಬಿ ಜೆ ಪಿ ಮಾಜಿ ಸಚಿವ ಸೊಗಡೂರು ಶಿವಣ್ಣ ಇದು ಬಿ ಜೆ ಪಿ ಯಾತ್ರೆ ಅಲ್ಲ ಇದು ಕೆ ಜೆ ಪಿ ಯಾತ್ರೆ ಎ Oದೂ , ಈ ಯಾತ್ರೆಗೆ ರೂಪಾಯಿ 500, 1000 ಕೊಟ್ಟು ಜನರನ್ನು ಕರೆ ತರುತ್ತಿದ್ದಾರೆ ಎOದು ಪತ್ರಿಕಾ ಗೋಸ್ಟಿ ಯಲ್ಲಿ ಹೇಳುವ ಮೂಲಕ ಬಿ ಜೆ ಪಿ ಮುಜುಗರ ಪಡುವOತೆ ಮಾಡಿದ್ದು ಅಲ್ಲದೆ  ಶ್ರೀ ಯಡಿಯೂರಪ್ಪ ನವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿ ಜೆ  ಪಿ ಗೇ ಖಳನಾಯಕನಾದುದನ್ನು ಕೆದಕಿ   ನೆನಪಿಸುವOತಾಗಿದೆ. ಇಸ್ಟೂ ಸಾಲದಕ್ಕೆ ಶ್ರೀ ಯಡಿಯೂರಪ್ಪನವರ ಉತ್ತರ ಕರ್ನಾಟಕದ ವೋಟ್ ಬ್ಯಾOಕ್ ಆದ ಲಿಂಗಾಯಿತ ವೀರಶೈವ ಜನತೆ ಈಗ ತುOಬಾ ಸಂಕೀರ್ಣ ಸ್ಥಿತಿಯಲ್ಲಿದೆ. ಮೊನ್ನೆ  ಕೂಡಲ ಸಂಗಮ ಪಂಚಮ ಸಾಲಿ ಪೀಠದ ಬಸವ ಜಯ ಮ್ರತ್ಯುಂಜಯ ಸ್ವಾಮೀಜಿ   ಲಿಂಗಾಯಿತರು ಒಂದೇ ತಂದೆಗೆ ಹುಟ್ಟಿದ್ದು ,ಆದರೆ ವೀರಶೈವರು ಐವರು ತಂದೆಗೆ ಹುಟ್ಟಿದ್ದು ಎಂದು ಹಾದರ ಭಾಷೆಯ ತರ  ಹೇಳುವ ಮೂಲಕ ಸರ್ವ ಹಿOದು ಜನತೆಗೆ ಆಘಾತವಾಗಿದೆ. ಖಂಡಿತವಾಗಿಯೂ ಈ ಸ್ವಾಮಿಯನ್ನೂ ಇಡೀ ಹಿOದೂ ಸಮಾಜ ಖಂಡಿಸಿ ಬಹಿಸ್ಕರಿಸಬೇಕಿದೆ. ಆದರೆ ಹಿOದೂ ಸಂಘಟನೆಗಳಾದ ವಿಶ್ವ ಹಿOದು ಪರಿಶತ್, ಆರ್ ಎಸ್ ಎಸ್ ,ಶ್ರೀರಾಮ ಸೇನೆ ,ಭಜರಂಗ ದಳ ಹಾಗು ಬಿ ಜೆ ಪಿ  ಈ ಸ್ವಾಮೀಜಿಯ ಹೊಲಸು ಮಾತನ್ನು ಖಂಡಿಸಿ ಪ್ರತಿಭಟಿಸದಿರುವುದು ಸೋಜಿಗವೆನಿಸುತ್ತಿದೆ. ನಿಮಗೆ ವೀರಶೈವರು ಬೇಡದಿದ್ದರೆ ಬೇಡ,ಹಿOದೂ ಧರ್ಮವೂ ಬೇಡದಿದ್ದರೆ ಬೇಡ ,ಸರಕಾರ ಯಾ ಸOವಿಧಾನ ಮಾನ್ಯ ಮಾಡಲಿ  ಬಿಡಲಿ ನಿಮಗೆ ಬೇಕಾದ ಧರ್ಮದ ಹಾದಿಯಲ್ಲಿ ನಡೆಯಿರಿ, ಬೇಡವೆOದವರು ಯಾರು? ನೀವು ಸ್ವಂತಂತ್ರರು ಆದರೆ ಬೇರೆಯವರನ್ನು ಹಾದರಕ್ಕೆ ಹುಟ್ಟಿದವರು ( ಐವರಿಗೆ ಹುಟ್ಟಿದವರು) ಹೇಳುವ ಹಕ್ಕು ನಿಮಗಿಲ್ಲ.  ಅಂದು ಶ್ರೀ ಬಸವಣ್ಣನವರು ಎಲ್ಲರನ್ನು ಉದ್ದೇಶಿಸಿ  ಅಂದಿದ್ದರು  " ಅವನಾರಯ್ಯ ಅವನಾರಯ್ಯ ಅವ ನಮ್ಮವನಯ್ಯ" ಸಕಲ ಮನುಜ ಕುಲದವರು ನಮ್ಮವರು ಎಂದು ಸಾರಿದ್ದರು.  ಆದರೆ ಇಂದು ಅದೇ ಲಿಂಗಾಯಿತರ ಸ್ವಾಮೀಜಿ ಇಸ್ಟೋOದು ವರ್ಷಗಳ ಕಾಲ ಜೊತೆಗಿದ್ದ  ವೀರಶೈವರನ್ನು  ಅತ್ಯಂತ ಹೊಲಸು ಮಾತುಗಳಿOದ ತೇಜೋವಧೆ ಮಾಡುವುದನ್ನು ನೋಡುವಾಗ ಆ ಸ್ವಾಮಿ ಪೀಠಕ್ಕೆ ಅವಮಾನವಾಗಿದೆ. ಇದು ಚುನಾವಣೆ ಇನ್ನೂ ಹತ್ತಿರವಾಗುತ್ತಿದOತೆ ಯಾವ ಮಟ್ಟಕ್ಕೆ ಹೋಗುತ್ತದೆ ಎOದು ಹೇಳಲಾಗದು.ಇದು ಬಿ ಜೆ ಪಿ ಗೆ ಮಾತ್ರವಲ್ಲ ಶ್ರೀ ಯಡಿಯೂರಪ್ಪನವರ ನಿದ್ದೆ ಕೆಡಿಸಿದೆ ಅಂದರೆ ತಪ್ಪಲ್ಲ. ಬಿ ಜೆ ಪಿ ಯು  ಐಟಿ ಯನ್ನು ತನ್ನ ದಾಳವಾಗಿ ಉಪಯೋಗಿಸಿಕೊOಡರೆ ಕರ್ನಾಟಕದ ಕಾಂಗ್ರೇಸ್ ಎಸ್ ಐ ಟಿ  ಯನ್ನು ತನ್ನ ದಾಳವನ್ನಾಗಿ ಉಪಯೋಗಿಸಲು ಚಿಂತನೇ ನಡೆಸಿದೆ. ಬೆಲೆಕೇರಿ ಮಂಗಳೂರು ಅಕ್ರಮ ಆದಿರು ರಫ್ತು ಪ್ರಕರಣದ  ಎಲ್ಲ  ಆರೋಪಿಗಳ ಆಟ ಬಟ್ಟಮ್ ಬಯಲಾದರೆ , ಬಿಜೆಪಿ ಅಧಿಕಾರದಲ್ಲಿದ್ದಾಗ ಇಂಧನ ಖರೀದಿಯ ಆಕ್ರಮಗಳು ಸಾಭೀತಾದರೆ ಬಿ ಜೆ  ಪಿ ಅಧಿಕಾರ ಹಿಡಿಯುವುದು ಕಗ್ಗಂಟಾಗಬಹುದು. ಇತ್ತ ಶ್ರೀ ಯಡಿಯೂರಪ್ಪನವರು ಶ್ರೀ ಸೀದ್ದರಾಮಯ್ಯನ ಅಧಿಕಾರವದಿಯಲ್ಲಿ ನಡೆದ ಭೂ ಹಗರಣಗಳನ್ನು ಸುದ್ದಿಗೋಸ್ಟಿಯಲ್ಲಿ ಬಯಲು ಪಡಿಸಿದ್ದರು. ಇದು ಬರೀ ಆಪಾದನೆಯೇ ಯಾ ನಿಜಾಂಶವಿದೇಯೇ ಎOಬುದು ಜನತೆಗೆ ತಿಳಿಯಬೇಕಿದೆ. ಸುಪ್ರೀಮ್ ಕೋರ್ಟ್ ಮದ್ಯೆ ಪ್ರವೇಶಿಸಿ ಈ ಎರಡೂ ಕಡೇಯವರು ಮಾಡಿರುವ ಆಪಾದನೆಗಳ ಬಗ್ಗೆ ನಿಷ್ಪಕ್ಷ ತನಿಖೆಗೆ ಆದೇಶಿಸಬೇಕು. ಸತ್ಯಾಂಶ ಹೊರ ಬಂದು ಬ್ರಸ್ಟ ರಾಜಕಾರಣಿಗಳು  ಚುನಾವಣೆಯ ಮೊದಲೇ ಜೈಲು ಸೇರಬೇಕು. ಸ್ವಚ್ಛ ಭಾರತದ ಅಭಿಯಾನದOತೆ  ಸ್ವಚ್ಛ ರಾಜಕಾರಣ ಅಭಿಯಾನವೂ ಆರOಭವಾಗಲಿ. ಸ್ವಚ್ಛ ಆಡಳಿತ ಜನತೆಗೆ ಸಿಗುವOತೆ ಆಗಲಿ.  ಒಂದು ಕಾಲದಲ್ಲಿ ಬಿ ಜೆ ಪಿ ಉಚ್ರಾಯ ಸ್ಥಿತಿಗೆ ಬರಲು ಶ್ರೀ ಯಡೆಯೂರಪ್ಪನವರೆ ಕಾರಣೀಕರ್ತರಾಗಿದ್ದರು.ಆದರೆ  ಇಂದು ಬಿ ಜೆ ಪಿ ನೆಲಕಚ್ಚಲು ಇವರೆ ಕಾರಣವಾಗಬಹುದು. ಒಂದೊಮ್ಮೆ ಬಿ ಜೆ ಪಿ ಶ್ರೀ ಯಡಿಯೂರಪ್ಪನವರ  ನೇತ್ರತ್ವದಲ್ಲಿ  ಬಹುಮತ ಗಳಿಸಲು ವಿಫಲವಾದಲ್ಲಿ ಶ್ರೀ ಯಡಿಯೂರಪ್ಪನವರಿಗೆ ಅವರ ರಾಜಕೀಯ ಭವಿಶ್ಯವೇ ಮುಗಿದOತೆ. ಕಳೆದ ಭಾರೀ ಮುಖ್ಯಮಂತ್ರಿ ಗಾದಿ ಸಿಕ್ಕಿದಾಗ   ಅದನ್ನು ಚೆನ್ನಾಗಿ ಐದು ವರ್ಷಗಳ ಕಾಲ ನಿಭಾಯಿಸಿದ್ದರೆ ಇಂದು ಪರಿಸ್ಥಿತಿಯೇ ಬೇರೆ ಇರುತಿತ್ತು. ಆದರೆ ಸಮಯ ಮೀರಿ ಹೋಗಿದೆ. ಇಂದು ಕರ್ನಾಟಕದಲ್ಲಿ ಬಿ ಜೆ ಪಿ ಯನ್ನು ಉಳಿಸಬೇಕಾದರೆ, ಬಹುಮತ ಗಳಿಸಬೇಕಿದ್ದಲ್ಲಿ ಸ್ವತಃ ಶ್ರೀ ಯಡಿಯೂರಪ್ಪನವರೆ ಖುದ್ದಾಗಿ  ಮುOದಿನ ಮುಖ್ಯಮಂತ್ರಿ ಶ್ರೀ ಅನಂತ್ ಕುಮಾರ್ ಹೆಗಡೆ ಯಾ ಶ್ರೀ ಸುರೇಶ್ ಕುಮಾರ್ ಎOದು ಘೋಷಿಸಿದರೆ  ನಿಜವಾಗಿಯೂ ಕರ್ನಾಟಕದಲ್ಲಿ ಒಂದು ಬದಲಾವಣೆ ಬರಬಹುದು

ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್

9594228684

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...