Sunday, 19 November 2017

ಉಡುಪಿ ದೇವಾಡಿಗ ಸಂಘ ಕದಮ್ ಮ ಎ ಸೌ ಎ (MASA).

ಕೆಲವು ಸಂಘಟನೆಗಳ ಸಾಮಾಜಿಕ ಬದ್ದತೆಯುಳ್ಳ ಕಾರ್ಯ ಚಟುವಟಿಕೆಗಳು ಇತರ ಸಂಘ ಸಂಸ್ಥೇಗಳಿಗೆ ಪ್ರೇರಣೆಯಾಗುತ್ತದೆ. ಉಡುಪಿ ದೇವಾಡಿಗ ಸಂಘ ಕಳೆದ ಎರಡು ವರ್ಷಗಳಿOದ ರಾಜ್ಯದ ಎಲ್ಲಾ ಪ್ರತಿಭಾ ದೇವಾಡಿಗ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿರುವುದು ಅವರ ಕಾರ್ಯವೈಖರಿಯನ್ನು ಸಾಕ್ಷೀಕರಿಸುತ್ತದೆ. ಇದರಲ್ಲೀ ಇವರಿಗೆ ಮುOಬೈ ಸಂಘದ ಸಹಕಾರವನ್ನು ಸ್ಮರಿಸಬೇಕಾಗುತ್ತದೆ. ಈಗ ಉಡುಪಿ ಸಂಘ ಅವರ ಕಾರ್ಯ ವ್ಯಾಪ್ತಿಗೆ ಬರುವ ವಿಕಲಾಂಗ ಸ್ವಜಾತಿ ಭಾಂಧವರಿಗೆ ಅಪಂಗ ವೇತನ ನೀಡುವ ಮೂಲಕ ದೇವಾಡಿಗ ಸಂಘಗಳ ಇತಿಹಾಸದಲ್ಲಿ ಒಂದು ಹೊಸ ಅದ್ಯಾಯವನ್ನು ಬರೆದಿದೆ..ಏನಾದರೂ ಒಂದು ಹೊಸದನ್ನು ಮಾಡಬೇಕು, ಸಾಧಿಸಬೇಕೆನ್ನುವ ಈ  ಸಂಘದ ಛಲ ನಿಜಕ್ಕೂ ಶ್ಲಾಘನೀಯ.ಉಡುಪಿ ಜಿಲ್ಲೆಯಲ್ಲಿ  ಸ್ವಜಾತಿ ಭಾಂಧವರ ಮನೆಗಳು ಪ್ರಕ್ರತಿ ವಿಕೋಪಕ್ಕೆ ಒಳಗಾದಾಗ ಅಲ್ಲಿಯೂಁ ಧಾವಿಸಿ ಆಳಿಲು ಸೇವೆ ಮಾಡುವುದನ್ನು ನೋಡುವಾಗ ಹೆಮ್ಮೆಯೆನಿಸುತ್ತದೆ.
    ಇನ್ನು ಕದಮ್, ಈ ದೇವಾಡಿಗ ಮಿತ್ರರನ್ನು ನೋಡುವಾಗ ಇವರು ದೇವಾಡಿಗ ಮಿತ್ರರು ಅನ್ನುವುದಕ್ಕಿOತ ದೇವಾಡಿಗ ಆಪತ್ ಭಾಂದವರು ಎನ್ನುವುದು ಹೆಚ್ಚು ಸೂಕ್ತವೆನಿಸಬಹುದು. ಜೀವನ ನಿರ್ವಹಣೆಗಾಗಿ ಹೊರ ದೇಶ ಸೇರಿ ತನ್ನ ಕುಟುOಬಕ್ಕೆ ಸೀಮಿತವಾಗಿರದೆ ಇಡೀ ದೇವಾಡಿಗ ಸಾಮಾಜಕ್ಕೆ ವೈದ್ಯಕೀಯ ಸಹಾಯ ಹಸ್ತ ನೀಡುವ ಇವರ ಕಾರ್ಯ ಅಭಿನಂದನೀಯ.
  Masa ಅನ್ನುವ ದೇವಾಡಿಗೇತರ ಸೌದಿ ಅರೇಬಿಯಾದ ಚಾರಿಟಿ ಸಂಸ್ಥೇ  ದೇವಾಡಿಗರಿಗೆ ನಿರಂತರ ಸಹಾಯ ಹಸ್ತ ನೀಡುತ್ತಾ ಬಂದಿದೆ. ಸೌದಿ ಅರೇಬಿಯಾ ಸೇರಿ  ಬಂದ ಆದಾಯದ ಮೂಲಕ ಊರಿನಲ್ಲಿ ಪ್ರೊಪರ್ಟಿ ಮೇಲೆ ಪ್ರೊಪರ್ಟಿಗಳನ್ನು ಮಾಡಬಹುದಿತ್ತು .ಆದರೆ ಇದಕ್ಕೆಲ್ಲ ಗಮನ ಕೊಡದ ಮಾಸ ಸದಸ್ಯರು  ಕಳೆದ ಹತ್ತು ವರ್ಷಗಳಲ್ಲಿ  ಒಂದು ಕೋಟಿಗೂ ಮೀರಿ ಅವಿಭಜಿತ ದಕ್ಷಿಣ ಕನ್ನಡ ತುಳು ಕನ್ನಡ ಜನತೆಗೆ ಜಾತಿ ಮತಭೇದವಿಲ್ಲದೆ  ವೈದ್ಯಕೀಯ ನೆರವು ಮತ್ತು ಶೈಕ್ಷಣಿಕ ಸಹಾಯ ನೀಡಿದೆ. ಇಂತಹ ಹೊರ ನಾಡ ಚಾರಿಟಿ ಸಂಸ್ಥೇಗಳನ್ನು ಕರ್ಣಾಟಕ ಸರಕಾರ ಗೌರವಿಬೇಕು. ಕದಮ್, ಮಾಸಾ ದ ವೈದ್ಯಕೀಯ ನೆರವಿನ ಬಗೆಗಿನ ತತ್ಪರತೆ ಹಾಗು ಉಡುಪಿ ಸಂಘದ ವಿಕಲಾಂಗ ವೇತನದ ಮಹತ್ತರ ನಿರ್ಣಯಗಳಿಗೆ ನಾನು ತಲೆ ತಗ್ಗಿಸಿ ನಮಿಸುವೆ.
ಆಟ, ಊಟ, ಆಟಿದ ಕೂಟ,ಪಿಕ್ನಿಕ್, ವಾರ್ಶಿಕೋತ್ಸವಗಳ ಭರಾಟೆಗಳ ದರ್ಭಾರಿನಲ್ಲಿ ಸಂಘ ಸಂಸ್ಥೇಗಳ ಹುಟ್ಟುವಿಕೆಯ ಮೂಲ ಉದ್ದೇಶಗಳೇ ಅದ್ರಶ್ಯವಾಗುತ್ತಿದೆಯೋ ಎOದೆಣಿಸುವಾಗ ಮೇಲೆ ಹೇಳಿದ ಚಾರಿಟಿ ಸಂಸ್ಥೇಗಳ ಕಾರ್ಯ ವೈಖರಿಯು ಮನಸ್ಸಿಗೆ  ಮುದ ನೀಡುತ್ತದೆ. ದೇಶದ ಎಲ್ಲ ಸಂಘಟನೆಗಳು ಇವರು ಮೂಡಿಸಿದ ಹೆಜ್ಜೆ ಗುರುತುಗಳ ಪಥದತ್ತ ಸಾಗುವಂತಾಗಲಿ ಎOದು ಆಶಾವಾದ ವ್ಯಕ್ತ ಪಡಿಸುತ್ತಾ ..........ಒಹ್ ನನ್ನ ತಂಗುದಾಣ ಸಮೀಪಿದೆ, ಇಳಿಯತ್ತಿದ್ದೇನೆ.
ಮತ್ತೆ ಭೇಟಿಯಾಗೋಣವೇ.

No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...