Friday, 15 December 2017

ಸಂಗೀತ ರಸ ಮಂಜರಿ ಮತ್ತು ನಾಟಕ ಪ್ರದರ್ಶನ.


ರಂಗಭೂಮಿಯಲ್ಲಿ ಕಲಾವಿದನಾಗಿ, ನ್ರತ್ಯ ಸಂಯೋಜಕನಾಗಿ ಸದಾ ತನ್ನ ಕಲಾ ಸೇವೆಯನ್ನು ಗೈಯುತ್ತಾ ಚಿರಪರಿಚಿತರಾಗಿರುವ ಸತೀಶ್ ದೇವಾಡಿಗ, ಮುಂಡ್ಕೂರು ಹಾಗೂ  ಹರೀಶ್ ಕೋಟ್ಯಾನ್ ಪಡು ಇನ್ನಾಇವರ ಪ್ರಾಯೋಜಕತ್ವದಲ್ಲಿ  ಕಮಲಕಲಾವೇದಿಕೆಯ ಲಾಂಛನದಡಿಯಲ್ಲಿ  ಇದೇ ಬರುವ ಶನಿವಾರ ದಿನಾಂಕ 16/12/17 ರಂದು ಶ್ರೀ ಶ್ರೀ ಶ್ರೀ ಪರಮಪೂಜ್ಯ ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ  ಲಯನ್ ಕಿಶೋರ್ ಡಿ.ಶೆಟ್ಟಿ ಮತ್ತು ನವೀನ್ ಶೆಟ್ಟಿ ಅಳಕೆ ಇವರ ಮಾರ್ಗದರ್ಶನ, ಶೋಭಾ ಶೆಟ್ಟಿ ಶಕ್ತಿನಗರ ಇವರ ಸಲಹೆಯೊಂದಿಗೆ ಪ್ರಶಾಂತ್ ಗುರುಪುರ ಸಾರಥ್ಯದಲ್ಲಿ ಗುರುದಯ ತಂಡದ ರಂಗ್ ದ  ಕಲಾವಿದೆರ್ ಗುರುಪುರ ಇವರ  ದಾಯೆ ಬದ್ಕೆರಾಪುಜಿ...!? ಎಂಬ  ತುಳುಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಸಾಯಂಕಾಲ 4:00 ರಿಂದ 9:00 ರವರೆಗೆ ನಡೆಯಲಿರುವ ಈ  ಕಾರ್ಯಕ್ರಮದಲ್ಲಿ ಗೀತಾಂಜಲಿ ತಂಡದ ರಾಜೇಶ್ ಕೆ. ಬೆಳ್ತಂಗಡಿ ಮತ್ತು  ಮಮತ ಕೆ.  ಇವರಿಂದ ಸಂಗೀತ ರಸಮಂಜರಿ, ಸಭಾಕಾರ್ಯಕ್ರಮ ಹಾಗೂ ನಾಟಕವು  ಸಾಂತಕ್ರೂಜ್ ನ ಬಿಲ್ಲವ ಭವನದ ಸಭಾಗ್ರಹದಲ್ಲಿ ಪ್ರದರ್ಶನಗೊಳ್ಳಲಿದೆ.  ಈ ಕಾರ್ಯಕ್ರಮಕ್ಕೆ ಆಗಮಿಸಲಿರುವ ಅತಿಥಿ ಗಣ್ಯರೊಂದಿಗೆ ತುಳುಚಲನ ಚಿತ್ರ ತಾರೆಯರಾದ ರೂಪಶ್ರೀ ವರ್ಕಾಡಿ, ಶ್ರದ್ಧಾ ಸಾಲಿಯಾನ್,ರಾಜೇಶ್ ಮೂಲ್ಯ,  ಹಾಗೂ ಕಬಡ್ಡಿ ಆಟಗಾರನಾದ  ರಿಶಾಂಕ್ ದೇವಾಡಿಗ ಉಪಸ್ಥಿತರಿರುವರು.
ಮುಂಬಯಿಯ  ಹೆಸರಾಂತ ರಂಗನಟ /ನಿರ್ಧೇಶಕರಾದ ಶ್ರೀ ಮನೋಹರ್ ಶೆಟ್ಟಿ ನಂದಳಿಕೆ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ವನ್ನು  ನವೀನ್ ಪಡು ಇನ್ನಾ,
ಪ್ರಭಾಕರ ಬೆಳುವಾಯಿ,ಸತೀಶ್ ಎರ್ಮಾಳ್,ವಿಶ್ವನಾಥ್ ಪೇತ್ರಿ, ಭಾಸ್ಕರ ಸಸಿಹಿತ್ಲು,ಶಿವಪ್ರಸಾದ್ ಪುತ್ತೂರು, ಮಾಧವ ಪಡೀಲ್,ಪ್ರಸನ್ನ ಕುಂಟಾಡಿ,ಸಂದೇಶ್ ಕುಂಟಾಡಿ, ಸುನೀಲ್ ಪಲಿಮಾರು, ಜಗದೀಶ್ ಕೇಮಾರ್,ಸುಧಾಕರ ನಾರಾವಿ, ನಿಶಾಂತ್ ಕಳತ್ತೂರು, ಸಪ್ತಸ್ವರ ಕಲ್ಚರಲ್ ಅಸೋಸಿಯೇಶನ್,ನಮನ ಫ್ರೆಂಡ್ಸ್ ಮುಂಬಯಿ.

ಉಚಿತ ಪ್ರವೇಶವಿರುವ ಈ ಕಾರ್ಯಕ್ರಮಕ್ಕೆ
ಕಲಾಭಿಮಾನಿಗಳೆಲ್ಲರಿಗೂ ಆದರದ ಸ್ವಾಗತ ಬಯಸುವ :
ಸತೀಶ್ ದೇವಾಡಿಗ ಮುಂಡ್ಕೂರು. ಮತ್ತು ಹರೀಶ್ ಕೋಟ್ಯಾನ್ ಪಡು ಇನ್ನಾ

ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ.


(ಒಂದು ಕುಟುಂಬದಿಂದ ಒಂದು ಅರ್ಜಿ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ)

ಅರ್ಜಿದಾರರ ಅರ್ಹತೆ:
👉🏽 ಕುಟುಂಬದ ವಾರ್ಷಿಕ‌ ಆದಾಯ ಗರಿಷ್ಠ ರೂ.87,000₹ ಮೀರಿರಬಾರದು.

👉🏽 ಕನಿಷ್ಠ 5 ವರ್ಷಗಳಿಂದ ಮೇಲ್ಪಟ್ಟು ಬೆಂಗಳೂರು ನಿವಾಸಿಯಾಗಿರಬೇಕು.
(BDA ವ್ಯಾಪ್ತಿಯಲ್ಲಿ)

👉🏽 ಆಧಾರ್ ಕಾರ್ಡ್ ಹೊಂದಿರಬೇಕು.

👉🏽 ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಯಾಗಿರಬಾರದು.

👉🏽 ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಮನೆ ಹೊಂದಿರಬಾರದು.

ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳು:
(ಕಂದಾಯ ಇಲಾಖೆಯ RD ನಂಬರನ್ನು ಮಾತ್ರ ನಮೂದಿಸುವುದು)
⏩ ಜಾತಿ‌ ಪ್ರಮಾಣ ಪತ್ರ ಸಂಖ್ಯೆ
⏩ ಆದಾಯ ಪ್ರಮಾಣ ಪತ್ರ ಸಂಖ್ಯೆ
⏩ ವಾಸ ಸ್ಥಳ‌ ದೃಢೀಕರಣ ಪತ್ರ ಸಂಖ್ಯೆ
⏩ ಪಡಿತರ ಚೀಟಿ(ರೇಷನ್ ಕಾರ್ಡ್) ಸಂಖ್ಯೆ
⏩ ಆಧಾರ್ ಕಾರ್ಡ್ ಸಂಖ್ಯೆ
⏩ ಕಾರ್ಮಿಕ‌ ಇಲಾಖೆಯ ನೋಂದಣಿ ಸಂಖ್ಯೆ (ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದಲ್ಲಿ)
⏩ ಚುನಾವಣಾ ಆಯೋಗದ ಗುರುತಿನ ಚೀಟಿ ಸಂಖ್ಯೆ
⏩ ಬ್ಯಾಂಕ್ ಅಕೌಂಟ್ ನಂಬರ್

ಮೀಸಲಾತಿ:
👉🏽 ಪರಿಶಿಷ್ಟ ಜಾತಿಗೆ ಶೇ.30%,
ಪರಿಶಿಷ್ಟ ಪಂಗಡಕ್ಕೆ ಶೇ.10%

👉🏽 ಅಲ್ಪಸಂಖ್ಯಾತರಿಗೆ ಶೇ.10 ರಷ್ಟು, ಸಾಮಾನ್ಯ ವರ್ಗ ಶೇ.50%

★ ಪ್ರತೀ ಘಟಕದ ಅಂದಾಜು ವೆಚ್ಚ ರೂ. 5.50 ಲಕ್ಷದಿಂದ ರೂ.6 ಲಕ್ಷ ₹ರೂಪಾಯಿ. ಘಟಕ ವೆಚ್ಚದ ಬಾಕಿ ಮೊತ್ತವನ್ನು ಅರ್ಜಿದಾರರು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಸೂಚಿಸಿದ ಸಂದರ್ಭದಲ್ಲಿ ಪಾವತಿಸಬೇಕು.

ಸಹಾಯಧನ:
👉🏽 ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳಿಗೆ: ₹ 3.50 ಲಕ್ಷ

👉🏽 ಸಾಮಾನ್ಯ‌ ವರ್ಗಗಳಿಗೆ: ₹ 2.70 ಲಕ್ಷ

ಅರ್ಜಿ ಶುಲ್ಕ: 100₹ ರೂ.

ಅರ್ಜಿ ಶುಲ್ಕ ಪಾವತಿ:
ಆನ್ ಲೈನ್ ನ ಮೂಲಕ ಅರ್ಜಿ ಸಲ್ಲಿಸುವವರು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ನಗದಾಗಿ ಪಾವತಿಸುವವರು ಬೆಂಗಳೂರು ONE ಕೇಂದ್ರಗಳು, ಆ್ಯಕ್ಸಿಸ್, HDFC ಬ್ಯಾಂಕ್ ಗಳಲ್ಲಿ ಪಾವತಿಸಬಹುದಾಗಿದೆ‌.

ಅರ್ಜಿ ಸಲ್ಲಿಕೆ:
ಬೆಂಗಳೂರು One ಕೇಂದ್ರಗಳು, BBMP ಯ ಎಲ್ಲಾ ವಾರ್ಡ್ ಕಚೇರಿಗಳಲ್ಲಿ, ಯಾವುದೇ ಬ್ರೌಸಿಂಗ್ ಸೆಂಟರ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಯಾವುದೇ ಪ್ರಮಾಣ ಪತ್ರಗಳನ್ನು ನೀಡುವ ಅಗತ್ಯವಿರುವುದಿಲ್ಲ.


ಅರ್ಜಿ ಸಲ್ಲಿಕೆ, ಮನೆಯ ವಿನ್ಯಾಸ, ಮಾದರಿ, ಸ್ಥಳ, ಇತ್ಯಾದಿಗಳ‌ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ನೋಡಿ:
*http://www.ashraya.kar.nic.in/cmonelakh*

ಅರ್ಜಿ‌ ಸಲ್ಲಿಕೆಗೆ ಕೊನೆಯ ದಿನಾಂಕ: 05 ಜನವರಿ 2018

👉🏽 ಇದು ಆನ್ ಲೈನ್ ಅರ್ಜಿಯಾಗಿರುವುದರಿಂದ ಕೈಬರಹದ ಅರ್ಜಿ ಸಲ್ಲಿಸುವಂತಿಲ್ಲ.
👉🏽 ಎಲ್ಲಾ ಸೂಚನೆಗಳನ್ನು ಕಾಲಕಾಲಕ್ಕೆ ವೆಬ್ ಸೈಟ್ ನಲ್ಲಿ ನೀಡಲಾಗುತ್ತದೆ.
👉🏽 ಮಧ್ಯವರ್ತಿಗಳಿಗೆ ಯಾವುದೇ ಅವಕಾಶವಿರುವುದಿಲ್ಲ.
👉🏽 ವಸತಿ ನಿರ್ಮಾಣ: ಲಭ್ಯವಿರುವ ಸರ್ಕಾರಿ‌ ಜಮೀನಿನಲ್ಲಿ.




ವಸತಿ ಇಲಾಖೆ, ಕರ್ನಾಟಕ ಸರ್ಕಾರ

Thursday, 14 December 2017

ಅವ್ಯವಸ್ಥೆಯ ಆಗರವಾಗಿರುವ ಸರಕಾರಿ ಆಸ್ಪತ್ರೆಗಳು . ಇವುಗಳ ಕಾಯಕಲ್ಪ ಎOದು ?

ಹಿOದೆ ಬಾಲ್ಯದಲ್ಲಿರುವಾಗ ನೆರೆ ಮನೆಯ ಅಜ್ಜಿ ಹೇಳುತಿದ್ದರು ಮನುಶ್ಯನಿಗೆ  ಯಾವ ಸಹವಾಸವಾದರೂ ಆಗಬಹುದು ಆದರೆ ಕೋರ್ಟು ಮತ್ತು ಆಸ್ಪತ್ರೆಯ ಸಹವಾಸ ಖಂಡಿತಾ ಬೇಡ. ಈ ವಿಷಯ ಈಗ ಯಾಕೆ ಬಂತೆOದರೆ ನಿನ್ನೆ ನಾನು ಮತ್ತು ನನ್ನ ಮಿತ್ರ ದಯಾನಂದ್ ದೇವಾಡಿಗರು ಠಾಣೆ ಸಿವಿಲ್ ಆಸ್ಪತ್ರೆಗೆ ಒಬ್ರು ದೇವಾಡಿಗ ಭಂಧುವಿನ ಮಗನಿಗೆ ವಿಕಲಾಂಗ ಸರ್ಟಿಫಿಕೇಟ್ ಕೊಡಿಸುವ ಸಲುವಾಗಿ ಹೋಗಿದ್ದೆವು.ಸರಿ ಸುಮಾರು 250ಕ್ಕೂ ಹೆಚ್ಚು ಅಪಂಗ ಜನರು ಸರ್ಟಿಫಿಕೇಟ್ ಅಪೇಕ್ಷಿತರು ಅಲ್ಲಿ ಜಮಾಯಿಸಿದ್ದರು. ಆಸ್ಪತ್ರೆಯ ಪ್ರಾಧಿಕಾರ ಅಲ್ಲಿ ವಾರಕ್ಕೆ ಒಂದು ಬಾರಿ ಬುದವಾರ  ಮಾತ್ರ ಈ ಸರ್ಟಿಫಿಕೇಟ್ ಪಡೆಯಲು ಕೌಂಟರು ತೆರೆಯುತ್ತಾರೆ. ಇಡೀ ಠಾಣೆ ಜಿಲ್ಲೆಯ ಪ್ರಾಮಾಣಪತ್ರ ಅಪೇಕ್ಷಿತರು ಒಮ್ಮೆಗೆ ಅ ಮುಗಿಬೀಳುವ ದೄಶ್ಯ ನಿಜಕ್ಕೂ ಹ್ರದಯವಿಧ್ರಾಹಕ. ಅಲ್ಲಿ ಸರಿಯಾದ ವ್ಯವಸ್ಥೆಯಿಲ್ಲ. ಮನೆಯವರು ತಮ್ಮ ಹೆಳವ ಅಭ್ಯರ್ಥಿಗಳನ್ನು ಹಿಡಿದು ಐದಾರು ಕೌOಟರ್ ಗಳತ್ತ ಆಲೆದಾಡುವುದನ್ನು ನೋಡುವಾಗ  ಸಾರಕಾರ ಮತ್ತು ಸರಕಾರಿ ವ್ಯವಸ್ಥೇಗಳ ಬಗ್ಗೆ ಹಿಡಿಶಾಪ ಮನದಲ್ಲಿ ಮೂಡಿಬರುತ್ತದೆ. ವಾರಕ್ಕೆ ನಾಲ್ಕು ದಿನ ಇವರುಗಳು ಈ ಕೌಂಟರ್ ತೆರೆದಿಟ್ಟರೆ ಇವರಪ್ಪನ ಆಸ್ತಿ ಏನು ಹೋಗುತ್ತದೆಯೇ ಎನ್ನುವ ಅಲ್ಲಿನವರ ಮಾತುಗಳು ಸಮಂಜಸವೆನಿಸುತ್ತದೆ.ಅಂತೂ ಇಂತೂ ಬೆಳಿಗ್ಗೆ 9 ಗಂಟೆಗೆ ಹೋಗಿ ಸಾಕಸ್ಟು ಒದ್ದಾಟಗಳ ನಂತರ  ಮಧ್ಯಾಹ್ನ 3 ಗಂಟೆಗೆ ಅಪಂಗ ಪ್ರಾಮಾಣ ಪತ್ರ ಕೈಸೇರುವಾಗ ಯುದ್ದದಲ್ಲಿ ಗೆದ್ದು ಬಂದOತೆ ಭಾಸವಾಗುತ್ತದೆ ಮಾತ್ರವಲ್ಲದೆ ಮನದಲ್ಲಿ  ಒಂದು ಕೆಲ್ಸ ಆಯಿತಲ್ಲ ಎನ್ನುವ ಆತ್ಮತ್ರಪ್ತಿ  ಟಸಿಲೊಡೆಯುತ್ತದೆ. ಕೊನಗೆ ಈ ಸರಕಾರಿ ಅವ್ಯವಸ್ಥೆಗಳಿಗೆ ಮುಕ್ತಿ ಯಾವಾಗ ಎOಬ ಪ್ರೆಶ್ನೆ ಗೆ ಉತ್ತರ ನಮ್ಮ ದೇಶದಲ್ಲಿಲ್ಲವೇ ಎOಬ ವಿಚಾರ ಮನಸ್ಸಿನಲ್ಲಿ ಮೂಡಿ ಹ್ರದಯ ಭಾರವೆನಿಸುತ್ತದೆ ?

ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ

Friday, 8 December 2017

ಒಲವೇ ಬದುಕಿನ ಚಿತ್ತಾರ .

ಸಮಾಜದ ಗಂಡ - ಹೆಂಡತಿಯರೆಲ್ಲರೂ ಪರಸ್ಪರ ತೃಪ್ತಿದಾಯಕ ಬದುಕು ಸಾಗಿಸುತ್ತಿದ್ದಾರೆಯೇ? ಮದುವೆಯೊಂದಿಗೆ ಕಟ್ಟಿಕೊಂಡಿದ್ದ ಅವರ ಕನಸುಗಳು ನನಸಾಗಿವೆಯೇ? ಅಥವಾ ಯವ್ವನದ ಕನಸುಗಳನ್ನ ಪಕ್ಕಕ್ಕಿಟ್ಟು ಮದುವೆಯ ಬಳಿಕ ಹೊಸ ಪ್ರಾಯೋಗಿಕ ಕನಸುಗಳು ಅನಿವಾರ್ಯವಾಗಿ ಹುಟ್ಟಿಕೊಂಡವೇ? ಗಂಡ - ಹೆಂಡತಿಯರಿಂದ ನಿರೀಕ್ಷಿತ ಪ್ರೀತಿ ಪರಸ್ಪರ ಸಿಗುತ್ತಿವೆಯೇ? ಪ್ರೀತಿಸಿ ಮದುವೆಯಾಗಿರುವವರು ಹೆಚ್ಚು ಸುಖ ಅನುಭವಿಸುತ್ತಿದ್ದಾರೆಯೇ?... ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ‘ಇಲ್ಲ' ಎಂಬುದು ನನ್ನ ಅಭಿಮತ. ಆದರೂ ಸಮಾಜದ ಬಹುತೇಕ ಗಂಡ - ಹೆಂಡತಿಯರು ತಮ್ಮ ಮಕ್ಕಳೊಂದಿಗೆ ನೆಮ್ಮದಿಯಾಗಿದ್ದಾರೆ ಅಥವಾ ನಾವು ಖುಷಿಯಾಗಿದ್ದೇವೆ ಎನ್ನುತ್ತಿದ್ದಾರೆ ಯಾಕೆ? 
ಮದುವೆ ಎಂಬುದು ನಮ್ಮ ಸಮಾಜದಲ್ಲಿ ಪವಿತ್ರ ಬಂಧ. ಇದನ್ನ ಅಪವಿತ್ರಗೊಳಿಸಲು ಯಾರೂ ತಯಾರಿಲ್ಲ. ಯಾಕೆಂದರೆ ನಾವ್ಯಾರೂ ಮಿಸ್ಟರ್ ಪರ್ಫೆಕ್ಟ್ ಗಳಲ್ಲ ತಾನೇ. ಸಿಟ್ಟು, ವೈಮನಸ್ಸು, ನೋವು, ಜಗಳ, ಕೋಪ, ಹತಾಶೆ, ನಿರಾಶೆ...ಎಲ್ಲದರ ಹೊರತಾಗಿಯೂ ಪರಸ್ಪರ ಹೊಂದಾಣಿಕೆಯ ಬದುಕು ಮುಂದೆ ಸಾಗುತ್ತಿರುವುದು ಇದೇ ಕಾರಣಕ್ಕೆ. ಕೆಲವರು ತಮ್ಮ ನೋವನ್ನ ಆತ್ಮೀಯರಲ್ಲಿ ಹಂಚಿಕೊಂಡರೂ, ಬಹುತೇಕ ಗಂಡ - ಹೆಂಡತಿಯರು ತಮ್ಮೊಳಗೆ ಕೊರಗುತ್ತಾ ಬದುಕು ಸವೆಸುತ್ತಿರುತ್ತಾರೆ. ನಾನು ಮತ್ತು ನನ್ನ ಹೆಂಡತಿ ಕೂಡಾ ಇದರಿಂದ ಹೊರತಲ್ಲ. ಅದೇನೋ ಕನಸುಗಳನ್ನ ಹೊತ್ತು ಬಂದ ನನ್ನಾಕೆಗೆ ಸಿಕ್ಕಿದ್ದು ನನ್ನಂತಹ ಸಿಡುಕಿನ  ಗಂಡ. ಹೆಂಡತಿಯಾದವಳಲ್ಲಿ ಏನೇನೋ ಗುಣಗಳಿರಬೇಕೆಂದು ನಾನು ಬಯಸಿದ್ದರೂ ಅವುಗಳಲ್ಲಿ ಕೆಲವು ಆಕೆಯಲ್ಲಿಲ್ಲ. ಆದರೂ ಒಂದಾಗಿ ಬದುಕಿದ್ದೇವೆ. 
ಇದನ್ನ ಯಾಕಿಲ್ಲಿ ಪ್ರಸ್ತಾಪಿಸುತ್ತಿದ್ದೇನೆಂದರೆ  ನಮ್ಮ ದಾಂಪತ್ಯ ಜೀವನಕ್ಕೆ 22  ವರ್ಷಗಳು  ತುಂಬುತ್ತಿದೆ. ನಮ್ಮ ಬದುಕಿನುದ್ದಕ್ಕೂ ಅನೇಕ ಏರು-ಪೇರುಗಳನ್ನು ಕಂಡಿದ್ದೇವೆ. ಮಾನವ ಸಹಜ ಎಲ್ಲ ಕೊರತೆಗಳೂ ನಮ್ಮಿಬ್ಬರಲ್ಲಿವೆ. ಇವೆಲ್ಲದರ ಜೊತೆಗೆ ಚಿನ್ನದಂತಹಾ ಎರಡು  ಮಕ್ಕಳನ್ನ ಬೆಳೆಸಿದ್ದೇವೆ. ಅನೇಕ ಮಿತ್ರರು ನಿನ್ನ ಬದುಕಿನ ಸಾಧನೆಯೇನು? ಎಂದು ಕೆಣಕುವುದಿದೆ. ಅವರೆಲ್ಲರಿಗೆ ನಾನು ಕೊಡುವ ಉತ್ತರ ‘ನನ್ನ ಮಕ್ಕಳು’ ಎಂದು.  ಓದುತ್ತಿರುವ  ಈ ಮಕ್ಕಳೇ ನಮ್ಮ ಹೆಮ್ಮೆ, ಭವಿಷ್ಯ ಕೂಡಾ.
. ಸುಳ್ಳು ಹೇಳಲು ಗೊತ್ತಿಲ್ಲದ ನನ್ನಾಕೆ  ಮುಗ್ದೆ. ಇತರರ ಕಷ್ಟಗಳಿಗೆ ಮರುಗುವ ಗುಣವಂತೆ. ಹಗೆತನ, ಮತ್ಸರ ಆಕೆಯ ಹತ್ತಿರವೂ ಸುಳಿದಾಡೋದಿಲ್ಲ. 22 ವರ್ಷ ನನ್ನಂತಹ ದುಡುಕು ಸಿಡುಕು  ಸ್ವಭಾವದ ಗಂಡನನ್ನ ಸಹಿಸಿರೋದು ಆಕೆಯ ತಾಳ್ಮೆಗೆ ಕೈಕನ್ನಡಿ. ನನ್ನ ಎಲ್ಲ ಸಾಮಾಜಿಕ ಚಟುವಟಿಕೆಗಳಿಗೆ ನನ್ನಾಕೆ ಮತ್ತು ನಮ್ಮ ಮಕ್ಕಳು ನೀಡಿರುವ ಸಹಕಾರ, ಪ್ರೋತ್ಸಾಹಗಳೇ ನನ್ನ ಈ  ಬರಹಗಳಿಗೆ ಪ್ರೇರಣೆ.
ಹುಟ್ಟು,  ಮದುವೆ...ಇತ್ಯಾದಿಗಳ ವಾರ್ಷಿಕ ಆಚರಣೆಗಳು ನಮ್ಮಲ್ಲಿಲ್ಲ. ಆದರೂ  ದಾಂಪತ್ಯ ಜೀವನದ ಬಗ್ಗೆ ಯಾಕೋ ನಾಲ್ಕಕ್ಷರ ಗೀಚಬೇಕೆನಿಸಿತು.
   ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಜಗತ್ತೇ ಮುಷ್ಠಿಯೊಳಗಿರುವಾಗ ನಮ್ಮ ಆಪ್ತ ಸಂಬಂಧಗಳು ಪರಸ್ಪರ ಗಟ್ಟಿಗೊಳ್ಳಬೇಕಾಗಿತ್ತು. ಆದರೆ ಹಾಗಾಗಿಲ್ಲ. ಜಗತ್ತಿನಲ್ಲಿ ಇಂದು ಭರವಿರುವುದು ಪ್ರೀತಿಗೆ. ಒಬ್ಬರನ್ನೊಬ್ಬರು ಎದುರುಗೊಂಡಾಗ ನಗುವುದಕ್ಕೂ ಸಾಧ್ಯವಿಲ್ಲದಷ್ಟರ ಮಟ್ಟಿಗೆ ಈ ಭರ ಬೆಳೆದಿದೆ.
ಗಂಡ - ಹೆಂಡತಿಯರೂ ಇದರಿಂದ ಹೊರತಾಗಿಲ್ಲ. ಪ್ರೀತಿ ಇದ್ದರೂ ಅದನ್ನು ವ್ಯಕ್ತಪಡಿಸುವಲ್ಲಿನ ವಿಫಲತೆ, ಪ್ರೀತಿ ಸಿಗುತ್ತಿದ್ದರೂ ಅದನ್ನು ಅನುಭವಿಸುವಲ್ಲಿನ ಕೊರತೆ ಸಮಾಜದ ಅನೇಕ ಗಂಡ - ಹೆಂಡತಿಯರನ್ನು ಕಾಡುತ್ತಿರುವ ಮೂಲ ಸಮಸ್ಯೆ. ಇಂದಿನ ತಾಂತ್ರಿಕ ಜೀವನದಲ್ಲಿ ಕೆಲವು ಕಡೆ ವಿದ್ಯಾಮಾನಗಳನ್ನು ನೋಡುವಾಗ ಕೆಲವು ಗಂಡ ಹೆOಡತಿಯ ನಡುವೆ ಇರಬೇಕಾಗಿದ್ದ ಓಲವು ಪ್ರೀತಿ ಸೆಳೆತ ಬಲಹೀನಗೊOಡು ಪರ ಸ್ತ್ರೀ, ಪರ ಪುರುಷರತ್ತ ಆಕರ್ಷಿತವಾಗುತ್ತಿರುವ ವಿದ್ಯಾಮಾನಗಳು ಹೆಚ್ಚಾಗುತ್ತಿದೆ.ಹೈ ಫೈ ಸೊಸೈಟಿಗOತು ಇದೊOದು ಹೊಸ ಟ್ರೇಂಡ್ ಆಗಿ ಮೇಳೈಸಿರುವುದು ಭಾರತೀಯ ಸಂಸ್ಕ್ರತಿಯ ದುರಂತವೇ ಸರಿ. ತಪ್ಪು ತಪ್ಪೇ . ಅದು ಪುರುಷ ಮಾಡಿದರೂ ತಪ್ಪು, ಸ್ತ್ರೀ ಮಾಡಿದರೂ ತಪ್ಪು. ಲೈಂಗಿಕತೆ ಎನ್ನುವಂತದ್ದು ಜೀವನದ ಒಂದು ಭಾಗವೇ ಹೊರತು, ಜೀವನವೇ ಲೈಂಗಿಕತೆ ಅಲ್ಲ. ಆದರೆ ಇತ್ತೀಚಿನ ನೌಕರಿ ರಂಗದಲ್ಲಿ ಕೆಲವು ಕಡೆ   ಮತ್ತು  ಹೈ ಸೊಸೈಟಿಗಳಲ್ಲಿ ಸಾಮನ್ಯವೆOಬOತೆ ಕಾಣಸಿಗುತ್ತಿರುವ ಅನೈತಿಕ ಸOಬOದಗಳು ಭಾರತೀಯ ಸಮಾಜದ ಸ್ವಾಸ್ಟ್ಯವನ್ನು ಕೆಡಿಸಿದೆ. ಭಾರತೀಯ ಚಿತ್ರರOಗದ ಪ್ರಾಭಾವವೂ ಇದಕ್ಕೆ ಮತ್ತೋಂದು ಕಾರಣ ಎನ್ನಬಹುದು. ಸಿನಿಮಾ ನಟಿಯರು ಮದುವೆ ಆಗಿ ಮಕ್ಕಳಿರುವ ಪುರುಷರನ್ನು ಒಲಿಸಿ ವಿಚ್ಛೇದನ ಕೊಡಿಸಿ ಮದುವೆ ಆಗುತ್ತಿರುವುದೂ ಒಂದು ರೀತಿಯಲ್ಲಿ ಅನೈತಿಕತೆಯನ್ನು ನೈತಿಕತೆಯತ್ತ ಕೊOಡೊಯ್ಯುವ ವಿಧಾನ ಅಂದರೆ ತಪ್ಪಲ್ಲ. ಇದರಲ್ಲೀ ನಾನು ಈ ಮೊದಲೇ ತಿಳಿಸಿದOತೆ ಪುರುಷರ ಪಾಲೂ ಇದೆ. ಮದುವೆ ಆಗಿ ಮಕ್ಕಳಿದ್ದ ಮೇಲೂ ಅನೈತಿಕ ಲೈOಗಿಕತೆಗಾಗಿ ತಮ್ಮ ಮಕ್ಕಳು, ಗಂಡ, ಹೆOಡತಿಯರನ್ನು ಬಿಟ್ಟೊಡುವವರನ್ನು  ಸಮಾಜ ಬಹಿಷ್ಕರಿಸಬೇಕು. ಗಂಡ ಹೆOಡತಿಯ ನಡುವೆ ಪ್ರೀತಿ ಪ್ರೇಮ ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿರಬೇಕು. ತಾಳ್ಮೆ, ಸಹನೆ, ಹೊOದಾಣಿಕೆ, ಕ್ಷಮೆ ಇವೇ ಯಶಸ್ವಿ ದಾOಪತ್ಯದ ಸರಳ ಸೂತ್ರಗಳು.ಹಾಗೆಯೇ ವೈವಾಹಿಕ ಚೌಕಟ್ಟಿನ ಒಳಗೇ ಲೈಂಗಿಕ ಸOಬOದಗಳು ನಡೆಯಬೇಕು.ಆದರೆ ಅದು ವೈ ವಾಹಿಕ ಚೌಕಟ್ಟನ್ನು ಮೀರಿದರೆ ಅದು ನೈತಿಕತೆಯ ಅಧಪತನಕ್ಕೆ ದಾರಿ.
  ಇತ್ತೀಚೆಗೆ ಹಳ್ಳಿಯಿಂದ ಹಿಡಿದು ನಗರದಲ್ಲಿರುವ ಸಂಘ ಸಂಸ್ಥೇಗಳು ಹಳದಿ ಕುಂಕುಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಇದು ನಿಜವಾಗಿಯೂಁ ಒಂದು ಸಕಾರಾತ್ಮಕ ಕಾರ್ಯಕ್ರಮ.ಮಹಿಳೆಯರು ಇದರಲ್ಲಿ ಪಾಲ್ಗೊಳ್ಳುವಾಗ ತಮ್ಮ ಹೆಣ್ಣು ಮಕ್ಕಳನ್ನು ಜೊತೆಯಲ್ಲಿ ಕೊOಡೊಯ್ಯುಬೇಕು.ಅಲ್ಲಿನ ಆ ಕಾರ್ಯಕ್ರಮದ ಮೂಲ ಉದ್ದೇಶಗಳು ಮಕ್ಕಳಿಗೆ ಬಾಲ್ಯದಿOದ ಕಿಶೋರಾವಸ್ಠೇಗೆ ತಲುಪುವಾಗ ತನ್ನಿOತಾನೆ ಅರಿವು ಮೂಡಲು ಸಾಹಾಯಕವಾಗುತ್ತದೆ. ಇಂದು ದೇಶ ಪ್ರಗತಿ ಪಥದಲ್ಲಿದೆ. ಸ್ತ್ರೀ ಪುರುಷರಿಬ್ಬರು ಸಮಾನವಾಗಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆ ಯುತ್ತಿದ್ದಾರೆ ಆದರೆ ಎಲ್ಲಾ ಇದ್ದು ನೈತಿಕತೆಯೇ ಇಲ್ಲವಾದಲ್ಲಿ ಎಲ್ಲಾವೂ ವ್ಯರ್ಥ. ನಮ್ಮ ಕಲಿಕಾ ರೀತಿಯಲ್ಲೇ ಲೋಪವಿದೆ. ಹಣ ಗಳಿಸುವುದಕಸ್ಟೇ ಶಿಕ್ಷಣ ಸೀಮಿತವಾಗಿದೆ.ಹಿOದೆ ನಮ್ಮ ಬಾಲ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ನೀತಿಬೋಧೆ ಎನ್ನುವ ಪಾಠಕ್ಕೆ ಒಂದು ಪೀರೀಯಡ್ ಮೀಸಲೀರುತೀತ್ತು. ನ್ಯಾಯ, ನೀತಿ, ಧರ್ಮದ ಬಗ್ಗೆ ಅರಿವು ಮೂಡಿಸುತ್ತಿತ್ತು. ಪ್ರೇಮ ಕವಿ  ಕೆ.ಎಸ್ ಸರಸಿಂಹ ಸ್ವಾಮಿಯ ಕವನಗಳಲ್ಲಿ ಪತಿ ಪತ್ನಿಯ ನಡುವೆ ನವಿರಾದ ಪ್ರೇಮ ದಾOಪತ್ಯ ಸOಬOದಗಳ ಹಾಡುಗಳು ಜನ ಜೀವನದ ಮೇಲೆ ಪರಿಣಾಮ ಬೀರುತಿದ್ದವು.ಇದೆಲ್ಲ ಬಿಡಿ ಅಂದಿನ ಸದಭಿರುಚಿಯ ಮೌಲ್ಯಾಧಾರಿತ ಚಲನಚಿತ್ರಗಳು ನೀತಿ ಭೋಧಕವಾಗಿದ್ದವು.ಡಾ ರಾಜ್ ರ ಭಾಗ್ಯವOತರು ಚಿತ್ರದಲ್ಲಿ ಪತಿ ಪತ್ನಿ ಜೀವನದುದ್ದಕ್ಕು ಒಂದಾಗಿ ಕೊನೆಗೆ ಸಾವಿನಲ್ಲೂ ಜೊತೆಯಾಗಿದ್ದದ್ದು ಮಧುರ ದಾOಪ೉ತ್ಯ ಜೀವನಕ್ಕೆ ಮಾದರಿ ಎನಿಸಿತ್ತು ಆ ಕಾಲದಲ್ಲಿ. ಭದ್ರಗಿರಿ ಶ್ರೀ ಅಚ್ಚ್ಯುತ ದಾಸರ, ಶ್ರೀ ಕೇಶವ ದಾಸರ ಹ಼ರಿಕಥೆಗಳು ಅಂದು ಜನರ ಜೀವನದ ಹಾಸುಹೊಕ್ಕಾಗಿ ಸೇರಿ ಜನತೆ ಸನ್ಮಾರ್ಗ ಮುಖಿಯಾಗಿದ್ದರು.ಆದರೆ ಇಂದು ಶಿಕ್ಷಕಿಯೇ ವಿಧ್ಯಾರ್ಥಿಯ ಪ್ರೇಮಪಾಶದಲ್ಲಿ ಬಿದ್ದು ಓಡಿ ಹೋಗುವ ಪ್ರಸಂಗಗಳು, ತಾಯಿ ವಯಸ್ಸಿನ ಮಹಿಳೆ ಮಗನ ವಯಸ್ಸಿನವನ ಜೊತೆಗಿನ ಅನೈತಿಕ ಸOಬOದಗಳ ವಾರ್ತೆಗಳನ್ನು ಓದುವಾಗ ನೋಡುವಾಗ ಈ ನೀಚ ಲೈಂಗಿಕತೆ ಅಂದರೆ ಅನೈತಿಕ ಸOಬOದಗಳು ಮಾನವನ ಬದುಕಿನ ಮೇಲೆ  ಹೇಗೆ ಅಟ್ಟಹಾಸಗೈಯುತ್ತಿದೆ ಎOಬುದನ್ನು ತೋರಿಸುತ್ತದೆ.  ಇಸ್ಟೆಲ್ಲಾ ಸಾಲದು ಎOಬOತೆ ದೇಶದಲ್ಲಿನ ಲೀವ್ ಇನ್ ರಿಲೇಶನ್ ಶಿಪ್ ನ ಅಡಿ ಮದುವೆ ಆಗದೆ ಜೊತೆಯಾಗಿ ಬಾಳುವOತದ್ದು ಭಾರತೀಯ ಸಮಾಜದಲ್ಲಿ  ನಿಜವಾಗಿಯೂ ಅನೈತಿಕತೆಯೆOಬ ಉರಿಯುವ ಬೆOಕಿಗೆ ಇನ್ನೂ ಪೆಟ್ರೋಲ್ ಸುರಿದOತೆ ಅಂದರೆ ತಪ್ಪಲ್ಲ.ವಿದ್ಯೆ ಇದ್ದು ಸOಸ್ಕಾರವೇ ಇಲ್ಲವೆOದಲ್ಲಿ ಅದು ಅನಾಗರಿಕ ಸಮಾಜಕ್ಕೆ ದಾರಿ. ಬದುಕಿನಲ್ಲಿ ಕಾಮ, ಲೈಂಗಿಕತೇ ಅನ್ನುವಂತದ್ದು ಊಟದ ಬಾಳೆ ಎಲೆ ಯ ಮೇಲಿನ ಉಪ್ಪಿನಕಾಯಿ ಎನ್ನುವ ವ್ಯಂಜನದ ಸ್ಥಾನದಲ್ಲೇ ಇರಬೇಕು. ಸOಪೂರ್ಣ ಉಪ್ಪಿನಕಾಯಿಯೇ ಊಟದ ಸ್ಥಾನವನ್ನು ಅಲಂಕರಿಸುತ್ತದೆಯೆ? ಇಲ್ಲ ತಾನೆ.ಯಾವುದು ಯಾವ ಪ್ರಾಮಾಣದಲ್ಲಿರಬೇಕೇ ಅದೇ ಪ್ರಾಮಾಣದಲ್ಲಿದ್ದೇರೇನೇ ಅದಕ್ಕೊOದು ಚಂದ ಅಂದ. ಒಟ್ಟಾರೆಯಾಗಿ ಕಡವಾಚೌತ್ ವ್ರತ, ಭೀಮನ ಅಮಾವಾಸ್ಯೆಯ ಆಚರಣೆ, ಹೋಟಸಾವಿತ್ರಿ ವ್ರತಾಚರಣೆಗಳ ಭಾರತದ ಸಂಸ್ಕತಿಗೆ ಇಂತಹ ಹೆಚ್ಚುತ್ತಿರುವ ಅನೈತಿಕ ಸOಬOದ ಕಾOಡಗಳು ಕಪ್ಪು ಚುಕ್ಕೆ. ಎಲ್ಲಿಯೂ ಯಾವುದನ್ನು ನOಬುವOತಿಲ್ಲ. ಎಲ್ಲಿ ಧರ್ಮದ ಆಚಾರಣೆಗಳು ಹೆಚ್ಚಿವೆಯೋ ಅಲ್ಲಿ ಅಧರ್ಮ ಅನೀತಿಗಳು ಹುಟ್ಟುತ್ತವೆ ಎನ್ನುವುದಕ್ಕೇ ಅಶಾರಾಮ್ ಬಾಪೂಜಿ, ಬಿಡದಿ ನಿತ್ಯಾನಂದ ಸ್ವಾಮಿ ಪಂಜಾಬ್ ನ ರಾಮ್ ರಹೀಮ್  ಎನಿಸಿಕೊOಡವರು ಜ್ವಲಂತ ಉದಾಹರಣೆ. ವಿಜ್ಞಾನಿ ಡಾರ್ವಿನ್ ನವರ ಸಿದ್ದಾಂತದ ಪ್ರಕಾರ ಮನುಷ್ಯ ಮಂಗನಿOದ ಮಾನವನಾಗಿ ರೂಪಾಂತರಗೊOಡನಂತೆ.ಆದರೆ ಅದೇ ಈಗ ಉಲ್ಟಾ ಹೊಡೆದಂತೆ ಭಾಸವಾಗುತ್ತಿದೆ.ಏಕೇಂದರೆ ಈ ಅನೈತಿಕ ಲೈಂಗಿಕ ಸ್ವೇಚ್ಛಾಚಾರದ ಮೂಲಕ ಮನುಷ್ಯ ಪಶುವಿನಂತೇ ವರ್ತಿಸತೊಡಗಿದ್ದಾನೆ.
ನನ್ನ ಕೋರಿಕೆ ಇಷ್ಟೇ. ನಮ್ಮನ್ನೇ ನಂಬಿ ಬದುಕುವವರಿಗೆ, ಆತ್ಮೀಯರಿಗೆ, ಸಹಜೀವಿಗಳಿಗೆ ಒಂದಷ್ಟು ಪ್ರೀತಿ ಕೊಡೋಣ. ನಮ್ಮ ಶತ್ರುಗಳಿಗೂ ಒಂದಿಷ್ಟು ಪ್ರೀತಿ ಹಂಚೋಣ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರೇಮ  ಅಸ್ತ್ರವೇ ಹೊರತು ಕಾಮ ಅಲ್ಲ .
ಏನಂತೀರಿ ?
ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

Friday, 1 December 2017

A donor of Kidneys is available.

A person aged 27 is in his death bed . His last wish is to donate his kidneys. His blood group is : *AB+ve*
Mob: *7339681726*
Plz Share ..
Someone somewhere may require.
Forward to as many as possible
We may save a life.

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...