(ಒಂದು ಕುಟುಂಬದಿಂದ ಒಂದು ಅರ್ಜಿ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ)
ಅರ್ಜಿದಾರರ ಅರ್ಹತೆ:
👉🏽 ಕುಟುಂಬದ ವಾರ್ಷಿಕ ಆದಾಯ ಗರಿಷ್ಠ ರೂ.87,000₹ ಮೀರಿರಬಾರದು.
👉🏽 ಕನಿಷ್ಠ 5 ವರ್ಷಗಳಿಂದ ಮೇಲ್ಪಟ್ಟು ಬೆಂಗಳೂರು ನಿವಾಸಿಯಾಗಿರಬೇಕು.
(BDA ವ್ಯಾಪ್ತಿಯಲ್ಲಿ)
👉🏽 ಆಧಾರ್ ಕಾರ್ಡ್ ಹೊಂದಿರಬೇಕು.
👉🏽 ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಯಾಗಿರಬಾರದು.
👉🏽 ರಾಜ್ಯದಲ್ಲಿ ಎಲ್ಲಿಯೂ ಸ್ವಂತ ಮನೆ ಹೊಂದಿರಬಾರದು.
ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳು:
(ಕಂದಾಯ ಇಲಾಖೆಯ RD ನಂಬರನ್ನು ಮಾತ್ರ ನಮೂದಿಸುವುದು)
⏩ ಜಾತಿ ಪ್ರಮಾಣ ಪತ್ರ ಸಂಖ್ಯೆ
⏩ ಆದಾಯ ಪ್ರಮಾಣ ಪತ್ರ ಸಂಖ್ಯೆ
⏩ ವಾಸ ಸ್ಥಳ ದೃಢೀಕರಣ ಪತ್ರ ಸಂಖ್ಯೆ
⏩ ಪಡಿತರ ಚೀಟಿ(ರೇಷನ್ ಕಾರ್ಡ್) ಸಂಖ್ಯೆ
⏩ ಆಧಾರ್ ಕಾರ್ಡ್ ಸಂಖ್ಯೆ
⏩ ಕಾರ್ಮಿಕ ಇಲಾಖೆಯ ನೋಂದಣಿ ಸಂಖ್ಯೆ (ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದಲ್ಲಿ)
⏩ ಚುನಾವಣಾ ಆಯೋಗದ ಗುರುತಿನ ಚೀಟಿ ಸಂಖ್ಯೆ
⏩ ಬ್ಯಾಂಕ್ ಅಕೌಂಟ್ ನಂಬರ್
ಮೀಸಲಾತಿ:
👉🏽 ಪರಿಶಿಷ್ಟ ಜಾತಿಗೆ ಶೇ.30%,
ಪರಿಶಿಷ್ಟ ಪಂಗಡಕ್ಕೆ ಶೇ.10%
👉🏽 ಅಲ್ಪಸಂಖ್ಯಾತರಿಗೆ ಶೇ.10 ರಷ್ಟು, ಸಾಮಾನ್ಯ ವರ್ಗ ಶೇ.50%
★ ಪ್ರತೀ ಘಟಕದ ಅಂದಾಜು ವೆಚ್ಚ ರೂ. 5.50 ಲಕ್ಷದಿಂದ ರೂ.6 ಲಕ್ಷ ₹ರೂಪಾಯಿ. ಘಟಕ ವೆಚ್ಚದ ಬಾಕಿ ಮೊತ್ತವನ್ನು ಅರ್ಜಿದಾರರು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಸೂಚಿಸಿದ ಸಂದರ್ಭದಲ್ಲಿ ಪಾವತಿಸಬೇಕು.
ಸಹಾಯಧನ:
👉🏽 ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳಿಗೆ: ₹ 3.50 ಲಕ್ಷ
👉🏽 ಸಾಮಾನ್ಯ ವರ್ಗಗಳಿಗೆ: ₹ 2.70 ಲಕ್ಷ
ಅರ್ಜಿ ಶುಲ್ಕ: 100₹ ರೂ.
ಅರ್ಜಿ ಶುಲ್ಕ ಪಾವತಿ:
ಆನ್ ಲೈನ್ ನ ಮೂಲಕ ಅರ್ಜಿ ಸಲ್ಲಿಸುವವರು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. ನಗದಾಗಿ ಪಾವತಿಸುವವರು ಬೆಂಗಳೂರು ONE ಕೇಂದ್ರಗಳು, ಆ್ಯಕ್ಸಿಸ್, HDFC ಬ್ಯಾಂಕ್ ಗಳಲ್ಲಿ ಪಾವತಿಸಬಹುದಾಗಿದೆ.
ಅರ್ಜಿ ಸಲ್ಲಿಕೆ:
ಬೆಂಗಳೂರು One ಕೇಂದ್ರಗಳು, BBMP ಯ ಎಲ್ಲಾ ವಾರ್ಡ್ ಕಚೇರಿಗಳಲ್ಲಿ, ಯಾವುದೇ ಬ್ರೌಸಿಂಗ್ ಸೆಂಟರ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಯಾವುದೇ ಪ್ರಮಾಣ ಪತ್ರಗಳನ್ನು ನೀಡುವ ಅಗತ್ಯವಿರುವುದಿಲ್ಲ.
ಅರ್ಜಿ ಸಲ್ಲಿಕೆ, ಮನೆಯ ವಿನ್ಯಾಸ, ಮಾದರಿ, ಸ್ಥಳ, ಇತ್ಯಾದಿಗಳ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ನೋಡಿ:
*http://www.ashraya.kar.nic.in/cmonelakh*
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 05 ಜನವರಿ 2018
👉🏽 ಇದು ಆನ್ ಲೈನ್ ಅರ್ಜಿಯಾಗಿರುವುದರಿಂದ ಕೈಬರಹದ ಅರ್ಜಿ ಸಲ್ಲಿಸುವಂತಿಲ್ಲ.
👉🏽 ಎಲ್ಲಾ ಸೂಚನೆಗಳನ್ನು ಕಾಲಕಾಲಕ್ಕೆ ವೆಬ್ ಸೈಟ್ ನಲ್ಲಿ ನೀಡಲಾಗುತ್ತದೆ.
👉🏽 ಮಧ್ಯವರ್ತಿಗಳಿಗೆ ಯಾವುದೇ ಅವಕಾಶವಿರುವುದಿಲ್ಲ.
👉🏽 ವಸತಿ ನಿರ್ಮಾಣ: ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ.
ವಸತಿ ಇಲಾಖೆ, ಕರ್ನಾಟಕ ಸರ್ಕಾರ
No comments:
Post a Comment