ಹಿOದೆ ಬಾಲ್ಯದಲ್ಲಿರುವಾಗ ನೆರೆ ಮನೆಯ ಅಜ್ಜಿ ಹೇಳುತಿದ್ದರು ಮನುಶ್ಯನಿಗೆ ಯಾವ ಸಹವಾಸವಾದರೂ ಆಗಬಹುದು ಆದರೆ ಕೋರ್ಟು ಮತ್ತು ಆಸ್ಪತ್ರೆಯ ಸಹವಾಸ ಖಂಡಿತಾ ಬೇಡ. ಈ ವಿಷಯ ಈಗ ಯಾಕೆ ಬಂತೆOದರೆ ನಿನ್ನೆ ನಾನು ಮತ್ತು ನನ್ನ ಮಿತ್ರ ದಯಾನಂದ್ ದೇವಾಡಿಗರು ಠಾಣೆ ಸಿವಿಲ್ ಆಸ್ಪತ್ರೆಗೆ ಒಬ್ರು ದೇವಾಡಿಗ ಭಂಧುವಿನ ಮಗನಿಗೆ ವಿಕಲಾಂಗ ಸರ್ಟಿಫಿಕೇಟ್ ಕೊಡಿಸುವ ಸಲುವಾಗಿ ಹೋಗಿದ್ದೆವು.ಸರಿ ಸುಮಾರು 250ಕ್ಕೂ ಹೆಚ್ಚು ಅಪಂಗ ಜನರು ಸರ್ಟಿಫಿಕೇಟ್ ಅಪೇಕ್ಷಿತರು ಅಲ್ಲಿ ಜಮಾಯಿಸಿದ್ದರು. ಆಸ್ಪತ್ರೆಯ ಪ್ರಾಧಿಕಾರ ಅಲ್ಲಿ ವಾರಕ್ಕೆ ಒಂದು ಬಾರಿ ಬುದವಾರ ಮಾತ್ರ ಈ ಸರ್ಟಿಫಿಕೇಟ್ ಪಡೆಯಲು ಕೌಂಟರು ತೆರೆಯುತ್ತಾರೆ. ಇಡೀ ಠಾಣೆ ಜಿಲ್ಲೆಯ ಪ್ರಾಮಾಣಪತ್ರ ಅಪೇಕ್ಷಿತರು ಒಮ್ಮೆಗೆ ಅ ಮುಗಿಬೀಳುವ ದೄಶ್ಯ ನಿಜಕ್ಕೂ ಹ್ರದಯವಿಧ್ರಾಹಕ. ಅಲ್ಲಿ ಸರಿಯಾದ ವ್ಯವಸ್ಥೆಯಿಲ್ಲ. ಮನೆಯವರು ತಮ್ಮ ಹೆಳವ ಅಭ್ಯರ್ಥಿಗಳನ್ನು ಹಿಡಿದು ಐದಾರು ಕೌOಟರ್ ಗಳತ್ತ ಆಲೆದಾಡುವುದನ್ನು ನೋಡುವಾಗ ಸಾರಕಾರ ಮತ್ತು ಸರಕಾರಿ ವ್ಯವಸ್ಥೇಗಳ ಬಗ್ಗೆ ಹಿಡಿಶಾಪ ಮನದಲ್ಲಿ ಮೂಡಿಬರುತ್ತದೆ. ವಾರಕ್ಕೆ ನಾಲ್ಕು ದಿನ ಇವರುಗಳು ಈ ಕೌಂಟರ್ ತೆರೆದಿಟ್ಟರೆ ಇವರಪ್ಪನ ಆಸ್ತಿ ಏನು ಹೋಗುತ್ತದೆಯೇ ಎನ್ನುವ ಅಲ್ಲಿನವರ ಮಾತುಗಳು ಸಮಂಜಸವೆನಿಸುತ್ತದೆ.ಅಂತೂ ಇಂತೂ ಬೆಳಿಗ್ಗೆ 9 ಗಂಟೆಗೆ ಹೋಗಿ ಸಾಕಸ್ಟು ಒದ್ದಾಟಗಳ ನಂತರ ಮಧ್ಯಾಹ್ನ 3 ಗಂಟೆಗೆ ಅಪಂಗ ಪ್ರಾಮಾಣ ಪತ್ರ ಕೈಸೇರುವಾಗ ಯುದ್ದದಲ್ಲಿ ಗೆದ್ದು ಬಂದOತೆ ಭಾಸವಾಗುತ್ತದೆ ಮಾತ್ರವಲ್ಲದೆ ಮನದಲ್ಲಿ ಒಂದು ಕೆಲ್ಸ ಆಯಿತಲ್ಲ ಎನ್ನುವ ಆತ್ಮತ್ರಪ್ತಿ ಟಸಿಲೊಡೆಯುತ್ತದೆ. ಕೊನಗೆ ಈ ಸರಕಾರಿ ಅವ್ಯವಸ್ಥೆಗಳಿಗೆ ಮುಕ್ತಿ ಯಾವಾಗ ಎOಬ ಪ್ರೆಶ್ನೆ ಗೆ ಉತ್ತರ ನಮ್ಮ ದೇಶದಲ್ಲಿಲ್ಲವೇ ಎOಬ ವಿಚಾರ ಮನಸ್ಸಿನಲ್ಲಿ ಮೂಡಿ ಹ್ರದಯ ಭಾರವೆನಿಸುತ್ತದೆ ?
ಏನಂತೀರಿ ?
No comments:
Post a Comment