Friday, 23 February 2018

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.


ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ
ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂದು ಖ್ಯಾತ ನ್ಯೂರೋ ಸರ್ಜನ್‌ ಡಾ| ಕೆ.ವಿ. ದೇವಾಡಿಗ ಮಂಗಳೂರು ಹೇಳಿದರು.
ಅವರು ಗುರುವಾರ ಬಾರಕೂರು ಶ್ರೀ ಏಕ ನಾಥೇಶ್ವರೀ ದೇಗುಲದಲ್ಲಿ ದೇವಿ ಪ್ರತಿಷ್ಠಾಪನೆಮತ್ತು ಬ್ರಹ್ಮಕುಂಭಾಭಿಷೇಕ ಪ್ರಯುಕ್ತ ದೇವಾಡಿಗ ಸಮಾಜೋತ್ಸವ ಉದ್ಘಾಟಿಸಿ ಮಾತನಾಡಿದರು.
ಜನಸೇವೆಯೇ ದೇವಿ ಸೇವೆ. ಈ ನಿಟ್ಟಿನಲ್ಲಿ ಸ್ವತ್ಛತೆ, ಅನ್ನದಾನ, ಶಿಕ್ಷಣ, ಆರೋಗ್ಯ ಸುಧಾರಣೆ ಯತ್ತ ದೇಗುಲ ಗಮನ ಹರಿಸಬೇಕು, ಸಮು ದಾಯದ ಕೌಶಲ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಬಿ. ಅಣ್ಣಯ್ಯ ಶೇರಿಗಾರ್‌ ಪುಣೆ, ಬಿ. ಜನಾರ್ದನ ದೇವಾಡಿಗ ಬಾಕೂìರು, ನರಸಿಂಹ ಬಿ. ದೇವಾಡಿಗ ಉಡುಪಿ, ಹಿರಿಯಡ್ಕ ಮೋಹನ್‌ದಾಸ್‌, ಪಿ. ರಾಮಣ್ಣ ಶೇರಿಗಾರ್‌ ಬೆಳಗಾವಿ, ವಾಮನ ಮರೋಳಿ ಮಂಗಳೂರು, ಗೋಪಾಲ ಎಂ. ಮೊಲಿ ಮುಂಬಯಿ, ಸುರೇಶ್‌ಡಿ. ಪಡುಕೋಣೆ. ತುಂಗಾ ಕೃಷ್ಣ ದೇವಾಡಿಗ ಮುಂಬಯಿ, ನಾರಾಯಣ್‌ ಎಂ.ಡಿ. ದುಬಾೖ, ಹರೀಶ್‌ ಶೇರಿಗಾರ್‌ ದುಬಾೖ, ದಿನೇಶ್‌ ಸಿ. ದೇವಾಡಿಗ ನಾಗೂರು, ಎನ್‌. ರಘುರಾಮ ದೇವಾಡಿಗ ಶಿವಮೊಗ್ಗ, ದಿನೇಶ್‌ ಕುಮಾರ್‌ ದುಬಾೖ, ಸುರೇಶ್‌ ದೇವಾಡಿಗ ದುಬಾೖ, ಜನಾರ್ದನ ಎಸ್‌. ದೇವಾಡಿಗ ಉಪ್ಪುಂದ, ನಾಗರಾಜ್‌ ಪಡುಕೋಣೆ, ಸುಬ್ಬ ಜಿ. ದೇವಾಡಿಗಮುಂಬಯಿ, ಸುರೇಶ್‌ ದೇವಾಡಿಗ ಕಂಚಿಕಾನ್‌,ರಾಜೀವ ದೇವಾಡಿಗ ತ್ರಾಸಿ, ಶೀನ ದೇವಾಡಿಗ ತ್ರಾಸಿ, ಡಾ| ಕೆ. ದೇವರಾಜ್‌ ಮಂಗಳೂರು, ರವಿ ಎಸ್‌. ದೇವಾಡಿಗ ಮುಂಬಯಿ, ಸೀತಾರಾಮ ಕೆ. ಉಡುಪಿ, ರಾಘವೇಂದ್ರ ದೇವಾಡಿಗ ಸಾಂಗ್ಲಿ, ಶೇಖರ ದೇವಾಡಿಗ ಐರೋಳಿ, ರಮೇಶ್‌ ದೇವಾಡಿಗ ವಂಡ್ಸೆ, ವಾಸು ಎಸ್‌. ದೇವಾಡಿಗ ಮುಂಬಯಿ, ಮಂಜುನಾಥ ದೇವಾಡಿಗ ಪಡುಕೋಣೆ, ಕೆ. ನಾರಾಯಣ ದೇವಾಡಿಗ ಕುಂದಾ ಪುರ, ಗಣೇಶ ದೇವಾಡಿಗ ಇಸ್ಲಾಂಪುರ, ಎಸ್‌.ಎಂ. ಚಂದ್ರ ಬೆಂಗಳೂರು, ನರಸಿಂಹ ದೇವಾಡಿಗ ಪುಣೆ, ಮಹಾಬಲೇಶ್ವರ ದೇವಾಡಿಗ ಪುಣೆ, ಕೆ.ಮಂಜುನಾಥ ದೇವಾಡಿಗ ದಾವಣಗೆರೆ, ಮಹಾ ಬಲ ದೇವಾಡಿಗ ಹೊಸದಿಲ್ಲಿ, ಗಣೇಶ್‌ ಆರ್‌. ದೇವಾಡಿಗ ಬೆಂಗಳೂರು, ಬಿ.ವಿ. ಪ್ರಶಾಂತ್‌ ಬಾಕೂìರು, ರಾಜು ದೇವಾಡಿಗ ಕಾರ್ಕಡ, ಕೆ. ಗೋವಿಂದ ದೇವಾಡಿಗ ದಾಸರಹಳ್ಳಿ, ಅಣ್ಣು ದೇವಾಡಿಗ ಧರ್ಮಸ್ಥಳ, ನೆಲ್ಲಿಬೆಟ್ಟು ನರಸಿಂಹ ದೇವಾಡಿಗ ಕಾರ್ಕಡ, ಬಿ. ನರಸಿಂಹನ್‌ ಪೊವಾç, ಚೆನ್ನಪ್ಪ ಮೊಲಿ ಉಡುಪಿ, ನಿತೇಶ್‌ ದೇವಾಡಿಗ ಬೆಂಗಳೂರು, ರಮೇಶ್‌ ಜಿ. ದೇವಾಡಿಗ ಮಾರ್ಪಳ್ಳಿ, ಸಿಎ ಸಾರಿಕಾ ದೇವಾಡಿಗ ಬೆಂಗಳೂರು, ಗೋಪಾಲ ದೇವಾಡಿಗ ಕಾರ್ಕಡ ಉಪಸ್ಥಿತರಿದ್ದರು.
ಸಮಾಜೋತ್ಸವ ಸಂಯೋಜಕ ಹಿರಿಯಡ್ಕ ಮೋಹನದಾಸ್‌ ದಂಪತಿಯನ್ನು ಸಮ್ಮಾನಿಸ ಲಾಯಿತು. ಜನಾರ್ದನ ದೇವಾಡಿಗ ಸ್ವಾಗತಿಸಿ, ರವಿ ದೇವಾಡಿಗ  ನಿರೂಪಿಸಿದರು.













ನೀತಿಯಿಂದ ಸತ್ಯವಂತರಾಗಿ ಬಾಳುವುದೇ ಧರ್ಮ: ಡಾ| ವೀರೇಂದ್ರ ಹೆಗ್ಗಡೆ.



ಧರ್ಮ ಸಹಜ ಜೀವನದ ಭಾಗ. ನ್ಯಾಯ, ನೀತಿಯಿಂದ ಸತ್ಯವಂತರಾಗಿ ಬಾಳುವುದೇ ಧರ್ಮ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಬುಧವಾರ ಬಾರಕೂರು ಶ್ರೀ ಏಕನಾಥೇ ಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೈತಿಕ ಶಿಕ್ಷಣ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಲಿ ಮಾತನಾಡಿ, ಶ್ರದ್ಧೆ, ನಂಬಿಕೆ, ಸಂಸ್ಕಾರ ನಮ್ಮ ಜೀವನದಲ್ಲಿ ಅಳವಡಿಸಬೇಕು. ಜತೆಗೆ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂದರು. ಮೊಲಿ ಅವರು ದೇಗುಲಕ್ಕೆ ಸರಕಾರದಿಂದ 2 ಕೋಟಿ ರೂ. ಅನುದಾನ ನೀಡುವ ಭರವಸೆ ನೀಡಿದರು.
ಮಣಿಪಾಲ ಮಾಹೆ ವಿಶ್ವಸ್ತ ಟಿ. ಅಶೋಕ್‌ ಪೈ, ಮಾಲತಿ ವಿ. ಮೊಲಿ ಬೆಂಗಳೂರು, ಶಾಸಕರಾದ ಗೋಪಾಲ ಪೂಜಾರಿ, ವಿನಯ ಕುಮಾರ್‌ ಸೊರಕೆ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅದಾನಿ ಸಮೂಹ ಸಂಸ್ಥೆ ಜತೆ ಆಡಳಿತ ನಿರ್ದೇಶಕ ಕಿಶೋರ್‌ ಆಳ್ವ, ಉದ್ಯಮಿ ಅನಿಲ್‌ ಜೈನ್‌, ದೇವಸ್ಥಾನ ನಿರ್ಮಾಣ ಸಮಿತಿ ಗೌರ ವಾಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಬಿ. ಅಣ್ಣಯ್ಯ ಶೇರಿಗಾರ್‌, ಪ್ರಧಾನ ಕಾರ್ಯದರ್ಶಿ ನರಸಿಂಹ ಬಿ. ದೇವಾಡಿಗ, ಕೋಶಾಧಿಕಾರಿ ಬಿ. ಜನಾರ್ದನ ದೇವಾಡಿಗ, ಮುಖ್ಯ ಸಂಚಾಲಕ ಹಿರಿಯಡ್ಕ ಮೋಹನ್‌ದಾಸ್‌, ವಿಶ್ವಸ್ತರಾದ ಸುರೇಶ ಡಿ. ಪಡುಕೋಣೆ, ಹರೀಶ್‌ ಶೇರಿಗಾರ್‌, ನಾರಾಯಣ ಎಂ. ದೇವಾಡಿಗ, ದಿನೇಶ್‌ ಸಿ. ದೇವಾಡಿಗ, ಜನಾರ್ದನ ಎಸ್‌. ದೇವಾಡಿಗ ಎನ್‌. ರಘುರಾಮ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಡಾ| ದೇವರಾಜ್‌ ಕೆ. ಸ್ವಾಗತಿಸಿ, ಮೋಹನದಾಸ್‌ ಹಿರಿಯಡ್ಕ ಸಮ್ಮಾನಿತರನ್ನು ಪರಿಚಯಿಸಿದರು. ವಿಜೇಶ್‌ ದೇವಾಡಿಗ, ನಾರಾಯಣ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು

Tuesday, 20 February 2018

ಬಾರ್ಕೂರು: ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಸಂಭ್ರಮ, ನೆರೆದ ಸಾವಿರಾರು ಭಕ್ತರು.



ಕುಂದಾಪುರ: ಜಿಲ್ಲೆಯ ಬಾರ್ಕೂರಿನ ಕಚ್ಚೂರು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದ ಸಮೀಪದ ವಿಶಾಲ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಏಕನಾಥೇಶ್ವರೀ ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ, ಸುತ್ತು ಪೌಳಿ, ರಕ್ತೇಶ್ವರೀ, ಗುಳಿಗ, ಬ್ರಹ್ಮ, ನಾಗದೇವರ ಗುಡಿ ಮತ್ತು ಸುತ್ತು ಪೌಳಿ ಸಮರ್ಪಣೆಯೊಂದಿಗೆ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ಸೋಮವಾರ ಬೆಳಿಗ್ಗೆನಿಂದ ಶ್ರೀದೇವಳದಲ್ಲಿ ನಡೆಯುತ್ತಿದೆ.

ಶ್ರೀ ಏಕನಾಥೇಶ್ವರೀ ದೇವಿ ವಿಗ್ರಹ ಪ್ರತಿಷ್ಠೆ ಮಹೋತ್ಸವವು ಭವ್ಯ ಶಿಲಾಮಯ ಮಂದಿರದಲ್ಲಿ ವಿದ್ವಾನ್ ಶ್ರೀ ಲಕ್ಷ್ಮೀನಾರಾಯಣ ಸೋಮಯಾಜಿಯವರ ಆಚಾರ್ಯ ಅವರ ನೇತ್ರತ್ವದಲ್ಲಿ ನಡೆಯುತ್ತಿದ್ದು ಪ್ರಾತಃಕಾಲ 6.30ರಿಂದ ಪುಣ್ಯಾಹವಾಚನ ಸಂಕಲ್ಪ ರತ್ನನ್ಯಾಸಪೂರ್ವಕ ನಡೆದಿದ್ದು ಬಳಿಕ 8.00 ಗಂಟೆಗೆ ಶುಭಲಗ್ನ ಸುಮುಹೂರ್ತದಲ್ಲಿ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನಾ ಕಾರ್ಯವು ನೆರವೇರಿತು. ಬಳಿಕ ಅಷ್ಟಬಂಧ ಮಂತ್ರನ್ಯಾಸ ನಿದ್ರಾ ಕಲಶಾಭಿಷೇಕ, ಜೀವಕಲಶಾಭಿಷೇಕ, ಅಲಂಕಾರ ಮಹಾಪೂಜೆ, ಮಹಾಮಂಗಳಾರತಿ ಈ ಮಧ್ಯೆ ಶಿಖರ ಪ್ರತಿಷ್ಠೆ ನೆರವೇರಿತು. ಪ್ರತಿಷ್ಠಾಫಲ, ಕೀರ್ತನೆ ಪ್ರಸಾದ ವಿತರಣೆ, ಆ ಮೇಲೆ ನಿತ್ಯ ಪೂಜೆ ವೇದಪಾರಾಯಣ ಪೂಜಾ ಹೋಮಾದಿಗಳು ಸದ್ಯ ನಡೆಯುತ್ತಿದೆ. ಸಾಂಸ್ಕೃತಿಕ  ಕಾರ್ಯಕ್ರಮದ ಅಂಗವಾಗಿ ಸಾಕ್ಸೋಫೋನ್ ವಾದನ ಹಾಗೂ ವಿವಿಧ ಭಜನಾತಂಡಗಳಿಂದ ಭಕ್ತಿ ಸಂಕೀರ್ತನೆ ಮೊದಲಾದವು ನಡೆಯುತ್ತಿದೆ.

ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ (ರಿ.) ಬಾರ್ಕೂರಿನ ಪರವಾಗಿ ಅಧ್ಯಕ್ಷರು ಮತ್ತು ಆಡಳಿತ ವಿಶ್ವಸ್ಥರಾದ ಬಿ. ಅಣ್ಣಯ್ಯ ಶೇರಿಗಾರ್, ಪುಣೆ, ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವಸ್ಥ ನರಸಿಂಹ ಬಿ. ದೇವಾಡಿಗ ಉಡುಪಿ, ಕೋಶಾಧಿಕಾರಿ ಹಾಗೂ ವಿಶ್ವಸ್ಥ ಬಿ. ಜನಾರ್ಧನ ದೇವಾಡಿಗ ಬಾರ್ಕೂರು, ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಹಾಗೂ ವಿಶ್ವಸ್ಥರಾದ ಧರ್ಮಪಾಲ ಯು ದೇವಾಡಿಗ ಮುಂಬೈ, ಮುಖ್ಯ ಸಂಚಾಲಕರು ಮತ್ತು ವಿಶ್ವಸ್ಥರಾದ ಹಿರಿಯಡ್ಕ ಮೋಹನ್‌ದಾಸ್ ಮುಂಬೈ, ವಿಶ್ವಸ್ಥರಾದ ಸುರೇಶ ಡಿ. ಪಡುಕೋಣೆ ಮುಂಬೈ, ಹರೀಶ್ ಶೇರಿಗಾರ್ ದುಬೈ, ನಾರಾಯಣ ಎಂ. ದೇವಾಡಿಗ ದುಬೈ, ದಿನೇಶ್ ಸಿ. ದೇವಾಡಿಗ ದುಬೈ, ಜನಾರ್ಧನ ಎಸ್. ದೇವಾಡಿಗ ಮುಂಬೈ, ಎನ್. ರಘುರಾಮ ದೇವಾಡಿಗ ಶಿವಮೊಗ್ಗ ಇದ್ದರು. ದೇವಾಡಿಗ ಸಮಾಜದ ಮುಖಂಡರಾದ ಶರ್ಮಿಳಾ ಹರೀಶ್ ಶೇರಿಗಾರ್, ಗಣೇಶ್ ಶೇರಿಗಾರ್ ಮುಂಬೈ, ನಾರಾಯಣ ದೇವಾಡಿಗ ಕುಂದಾಪುರ, ಯುವರಾಜ್ ದೇವಾಡಿಗ ದುಬೈ, ಗೌರವ ಸಲಹೆಗಾರರು, ದೇವಸ್ಥಾನ ನಿರ್ಮಾಣ ಸಮಿತಿ ಸದಸ್ಯರು, ದೇವಾಡಿಗ ಸಮಾಜದ ಸರ್ವ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಸಮಸ್ತ ದೇವಾಡಿಗ ಬಂಧುಗಳು ಇದ್ದರು.


















Friday, 16 February 2018

ಶ್ರೀ ಏಕನಾಥೇಶ್ವರೀ ಭಕ್ತಿ ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು.


ಶ್ರೀ ಜನಾರ್ದನ ದೇವಾಡಿಗ ಪಡುಪಣoಬೂರು ಮತ್ತು ಶ್ರೀ ಯುವರಾಜ್ ದೇವಾಡಿಗ ದುಬೈ ಇವರ ಭಕ್ತಿ ಧ್ವನಿ ಸುರುಳಿಯನ್ನು ಶ್ರೀ ಏಕನಾಥೇಶ್ವರೀ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ದೇವಳದ ವಿಶ್ವಸ್ಠರು ಮತ್ತು ದೇವಾಡಿಗ ಸಂಘ ಮುoಬೈ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಿನ್ನೆ ಬಿಡುಗಡೆಗೊಳಿಸಲಾಯಿತು.

'ಮಣಿಪಾಲ್ ಮ್ಯಾರತಾನ್ 2018' ರ 5 ಕಿಮಿ ಓಟದಲ್ಲಿ ಚೈತ್ರ ದೇವಾಡಿಗ ಪ್ರಥಮ ಸ್ಥಾನ.


ಇತ್ತೀಚೆಗೆ ಮಣಿಪಾಲದಲ್ಲಿ ನಡೆದ 'ಮಣಿಪಾಲ್ ಮ್ಯಾರತಾನ್ 2018' ರ 5 ಕಿಮಿ ಓಟದಲ್ಲಿ ಆಳ್ವಾಸ್ ಕಾಲೇಜಿನ ಪ್ರಥಮ ಬಿ. ಕಾಮ್ ವಿಧ್ಯಾರ್ಥಿನಿ ಚೈತ್ರ ದೇವಾಡಿಗ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಇಥಿಯೋಪಿಯಾ, ಆಫ್ರಿಕ , ಅಮೇರಿಕ ದಂತಹ ರಾಷ್ಟ್ರಗಳಿಂದ ಆಗಮಿಸಿದ್ದ ಸ್ಪರ್ಧಿಗಳನ್ನು ಹಿಂದಿಕ್ಕಿದ ಈ ದೇವಾಡಿಗರ ಹುಡುಗಿಗೆ ನಮ್ಮ ಹ್ಯಾಟ್ಸ್ ಆಫ್.

ನಿರ್ದೇಶಕ ಗಣೇಶ್ ದೇವಾಡಿಗ ಇವರ ಚೊಚ್ಚಲ ನಿರ್ದೇಶನದಲ್ಲಿ " ನಿಲುಕದ ನಕ್ಷತ್ರ " ಸದ್ಯದಲ್ಲಿ ತೆರೆಕಾಣಲಿದೆ.

ರುದಿರಾ ಪಿಲಂಸ್ ರವರ ಮೋದಲ ಕಾಣಿಕೆ....





ಬಹು ಅಪೇಕ್ಷಿತ...
ಕರಾವಳಿಯ ಯುವ ಪ್ರತಿಬೆಗಳು ಅಬಿನಯಿಸಿರುವ
ನಯನ ಮನೋಹರ ತಾಣಗಳಲ್ಲಿ ಚಿತ್ರೀಕಣಗೋಂಡ
ನಿಲುಕದ ನಕ್ಷತ್ರ
ಕನ್ನಡ ಚಲನಚಿತ್ರದ ಸುಂದರ ಹಾಡುಗಳ ಟೀಸರ್ ಇಂದು ಬಿಡುಗಡೆಗೋಂಡಿದೆ...

ಈ ಚಿತ್ರದ ನಂತರ ಇನ್ನೂ ಎರಡು ಕನ್ನಡ ಹಾಗು ಎರಡು ತುಳು ಚಿತ್ರ ನಿರ್ಮಾಣದ ಜವಾಬ್ದಾರಿ ಇದೆ. ಇವರನ್ನು ದೇವಾಡಿಗ ಸಮಾಜ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ.
ಈ ಚಿತ್ರದಲ್ಲಿ ಇವರು ನಿರ್ದೇಶನ ಮಾತ್ರವಲ್ಲದೆ, ಕಥೆ ,ಚಿತ್ರಕಥೆ ,ಸಂಭಾಷಣೆ ,ಸಂಗೀತ ,ಸಾಹಿತ್ಯ, ರಾಗ ಸಂಯೋಜನೆ ಹಾಗು ಗೌರವ ಪಾತ್ರ ಮಾಡುವುದರ ಮೂಲಕ ತನ್ನ ಆಲ್ ರೌಂಡರ್ ಪ್ರತಿಬೆಯನ್ನು ಮೆರೆದಿದ್ದಾರೆ.




Thursday, 15 February 2018

ದಿವ್ಯಾ ದೇವಾಡಿಗ ತ್ರಾಸಿ ಇವರು ಬಿ ಕಾಂ ವಿಭಾಗದಲ್ಲಿ ಏಳನೇ ರ‍್ಯಾಂಕ್ ಪಡೆದಿದ್ದಾರೆ.


ಮಂಗಳೂರು ವಿಶ್ವವಿದ್ಯಾಲಯವು ಕಳೆದ 2017 ರ ಏಪ್ರಿಲ ಹಾಗೂ ಮೇ ತಿಂಗಳಿನಲ್ಲಿ ನೆಡೆಸಿದ ಪದವಿ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾದ ದಿವ್ಯಾ ದೇವಾಡಿಗ ತ್ರಾಸಿ ಇವರು ಬಿ ಕಾಂ ವಿಭಾಗದಲ್ಲಿ ಏಳನೇ ರ‍್ಯಾಂಕ್ ಪಡೆದಿದ್ದಾರೆ

ಕುಮಾರಿ ಶ್ರೀಷ್ಮಲ್ ಭವ್ಯ ಮಂಗಳೂರು ವಿಶ್ವ ವಿಧ್ಯಾನಿಲಯ ಮಂಗಳಗಂಗೋತ್ರೀಯಲ್ಲಿ MSc.Physics ನಲ್ಲಿ ಪ್ರಥಮ ಸ್ಥಾನ .


ಕೋಟೇಶ್ವರದ ಬೀಜಾಡಿ ಗ್ರಾಮದ ಹೂಸಮನೆ ಮಹಾಬಲ ದೇವಾಡಿಗ ಮತ್ತು ಶ್ರೀಮತಿ ಲೈಲಾ ದಂಪತಿಗಳಾ ಮಗಳು..

       ತಂದೆಗೆ ಸ್ಥಳೀಯ ಮೆಡಿಕಲ್ ನಲ್ಲಿ ಕೆಲಸ ತಾಯಿ ಗ್ರಹೀಣಿ ಅಕ್ಕ ಕಾಲೇಜು ಉಪನ್ಯಾಸಕಿ
   ಪ್ರಾಥಮಿಕ. ಪ್ರೌಢ ಹಾಗೂ ಪಿಯುಸಿ ಶಿಕ್ಷಣ ವನ್ನು ಕೋಟೇಶ್ವರ ಪದವಿ ಪೂರ್ವ ಕಾಲೇಜಿನ ನಲ್ಲಿ ಮುಗಿಸಿದ್ದು ಬಿ.ಎಸ್ಸಿ ಯನ್ನು ಕುಂದಾಪುರದ ಭಂಡಾಕರ್ಸ ಕಾಲೇನಲ್ಲಿ ಮುಗಿಸಿದ್ದಿರಾ.ಪ್ರಸ್ತುತ ಮಂಗಳೂರು ವಿಶ್ವ ವಿಧ್ಯಾನಿಲಯ ಮಂಗಳಗಂಗೋತ್ರೀಯಲ್ಲಿ MSc.Physics ನಲ್ಲಿ  ಪ್ರಥಮ ಸ್ಥಾನ ಪಡೆದು ಘಟಿಕೋತ್ಸವದಲ್ಲಿ ಕೊಡಲ್ಪಡುವ ಚಿನ್ನದ ಪದಕ ಹಾಗೂ ಐದು ನಗದು ಪುರಸ್ಕಾರ ವನ್ನು ತಮ್ಮದಾಗಿಸಿ  ಈ ವರೆಡಗಿನ ಎಲ್ಲಾ ತರಗತಿಗಳಲ್ಲಿಯೂ ಪ್ರಥಮ ಸ್ಥಾನಿಯಾಗಿ ಕೇಂದ್ರ ದ Scienc & Technology Department New Deli ಇವರಿಂದ ನಾಲ್ಕು ಲಕ್ಷ ರೂ INSPIRE AWARD ಹಾಗೂ Research Project Award ತಮ್ಮದಾಗಿಸಿ ಗುಜರಾತಿನಿಂದ ವಿದ್ಯಾಶ್ರೀ ಅವಾರ್ಡ್  ಕೋಟೀಲಿಂಗೆಶ್ವರ ದೇವಸ್ಥಾನದ ವತಿಯಿಂದ ಮೂರು ಪ್ರತಿಭಾ ಪುರಸ್ಕಾರ ಹಾಗೂDr.N.R.Acharya Memorial Trust Koteswara ಇವರಿಂದ Merit scholarship ನ್ನು ಪಡೆದು ಕೊಂಡಿರುತ್ತಾರೆ..

         ಬಹುಮುಖ ಪ್ರತಿಭೆ ಹೊಂದಿರುವ ಇವರು  ಶ್ಯೆಕ್ಷಣಿಕ,ಕ್ಷೇತ್ರ ವಲ್ಲದೆ ಚಿತ್ರ ಕಲೆ, ಕಾರ್ಟನ್ ಕವನ, ಭಾಷಣ, ಪ್ರಬಂದ, ಚರ್ಚಾಸ್ಪರ್ದೆ,ಪ್ಲವರ ಡೆಕೋರೆಟೇಡ್ ,ರಂಗೂಲಿ,ಮುಂತಾದ ಸ್ಪರ್ಧೆಯಲ್ಲಿ ಅನೇಕ ಬಹುಮಾನ ಪಡೆದು ಕೊಂಡಿರುತ್ತಾರೆ.
      

Sunday, 11 February 2018

ಗಾಂಧಿ ನಗರದಲ್ಲಿ ನಮ್ಮ ದೇವಾಡಿಗ ಪ್ರತಿಭೆ.


:ಗಣೇಶ್ ಎಸ್ ಬ್ರಹ್ಮಾವರ್:
ಮೂಲತಃ ಕಾರ್ಕಳ ದವರಾದ ಶ್ರೀ ಗಣೇಶ್ ದೇವಾಡಿಗರು ಸಿನಿಮಾ ಪ್ರಪಂಚದಲ್ಲಿ ಏನಾದರೂ ಸಾಧನೆ ಮಾಡಬೇಕೆoದು ಬೆoಗಳೂರು ಸೇರಿ ಕಠಿಣ ಪರಿಶ್ರಮದ ಮೂಲಕ ಮೊದಲು ಸಣ್ಣ ಪುಟ್ಟ ಆಲ್ಬುಮ್ ಸೊಂಗ್ ಮಾಡಿ ಈಗ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗಿ ಹೊರಹೊಮ್ಮಿರುವುದು ನಮ್ಮ ದೇವಾಡಿಗರು ಮಾತ್ರವಲ್ಲ ಇಡೀ ತುಳು ಕನ್ನಡಿಗರು ಹೆಮ್ಮೆ ಪಡುವಂತಾಗಿದೆ. ನೂರಾರು ಕನಸುಗಳನ್ನು ಹೊತ್ತ ಇವರ ಚೊಚ್ಚಲ ನಿರ್ದೇಶನದಲ್ಲಿ " ನಿಲುಕದ ನಕ್ಷತ್ರ " ಸದ್ಯದಲ್ಲಿ ತೆರೆಕಾಣಲಿದೆ. ಈ ಚಿತ್ರದಲ್ಲಿ ಇವರು ನಿರ್ದೇಶನ ಮಾತ್ರವಲ್ಲದೆ
ಕಥೆ 
ಚಿತ್ರಕಥೆ
ಸಂಭಾಷಣೆ
ಸಂಗೀತ
ಸಾಹಿತ್ಯ ( 5 ಹಾಡುgalu)
ರಾಗ ಸಂಯೋಜನೆ
ಹಾಗು
ಗೌರವ ಪಾತ್ರ ಮಾಡುವುದರ ಮೂಲಕ ತನ್ನ ಆಲ್ ರೌಂಡರ್ ಪ್ರತಿಬೆಯನ್ನು ಮೆರೆದಿದ್ದಾರೆ.

ಈ ಚಿತ್ರದ ನಂತರ ಇನ್ನೂ ಎರಡು ಕನ್ನಡ ಹಾಗು ಎರಡು ತುಳು ಚಿತ್ರ ನಿರ್ಮಾಣದ ಜವಾಬ್ದಾರಿ ಇದೆ. ಇವರನ್ನು ದೇವಾಡಿಗ ಸಮಾಜ ಪ್ರೋತ್ಸಾಹಿಸಬೇಕಾದ ಅಗತ್ಯತೆ ಇದೆ. ತಾಯಿ ಏಕನಾಥೇಶ್ವರೀ ಅವರ ಎಲ್ಲಾ ಸಿನಿ ಕನಸುಗಳನ್ನು ನನಸಾಗಿಸಲಿ ಎಂದು ಪ್ರಾರ್ಥಿಸುವ 






Tuesday, 6 February 2018

ಹರೀಶ್ ಶೇರಿಗಾರ್ ಅವರಿಗೆ “ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

‘ಮಾರ್ಚ್-22 ” ಸಿನೆಮಾ ನಿರ್ಮಾಪಕರಾದ , ದುಬೈಯ ಖ್ಯಾತ ಉದ್ಯಮಿ, ಸಮಾಜ ಸೇವಕರು , ಗಾಯಕರೂ ಆಗಿರುವ ಹರೀಶ್ ಶೇರಿಗಾರ್ ಅವರಿಗೆ HMC(ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ )ಯುನೈಟೆಡ್ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ “ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ” ನೀಡಿ ಗೌರವಿಸಲಾಯಿತು.


Saturday, 3 February 2018

ಅಮೃತಸಂಜೀವಿನಿ® ಎಂಬ ಸೇವೆ ಸಂಸ್ಥೆ ಮೂಲಕ ಬೀರೇಬೆಟ್ಟು ನಿವಾಸಿ ಕುಮಾರಿ ಅಕ್ಷತಾ ಇವರಿಗೆ ಧನಸಹಾಯ.


ಅಮೃತಸಂಜೀವಿನಿ®  ಎಂಬ ಸೇವೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ದೀರಾಜ್ ದೇವಾಡಿಗ ಇವರ 18 ವರ್ಷದ ಹುಟ್ಟು ಹಬ್ಬಕ್ಕೆ.... ಅಮೃತಸಂಜೀವಿನಿಯ ಸುಶಾಂತ್ ಆಮಿನ್ ಮತ್ತು ಎಲ್ಲಾ ಸದಸ್ಯರು ಇಪ್ಪತ್ತೊಂಬತ್ತನೆಯ ಸೇವಾ ಯೋಜನೆಯನ್ನು , ಮಂಗಳೂರು ತಾಲ್ಲೂಕಿನ ಮೂಡಬಿದ್ರೆಯ ಪುತ್ತಿಗೆ ಗ್ರಾಮದ ಸಂಪಿಗೆ ಬಳಿಯ ಬೀರೇಬೆಟ್ಟು ನಿವಾಸಿ ಕುಮಾರಿ ಅಕ್ಷತಾ ತನ್ನ ಹೆತ್ತವರೊಂದಿಗೆ ಬಾಲ್ಯದಿಂದಲೂ  ಬಹಳ ಕಷ್ಟದಿಂದ ತನ್ನ 3 ಸಹೋದರಿಯರೊಂದಿಗೆ ಜೀವನ ಸಾಗಿಸುತ್ತಿದ್ದಾಕೆ. ತನ್ನ ತಂದೆಯ ಸಂಪಾದನೆಯಲ್ಲಿ ಕಲಿಯುತ್ತಿದ್ದಾಗ ದುರದೃಷ್ಟವೆಂಬಂತೆ ತನ್ನ ತಂದೆ ಸಕ್ಕರೆ ಕಾಯಿಲೆಗೆ ತುತ್ತಾಗಿ ತೀವ್ರವಾಗಿ ಕುಗ್ಗಿ ಸಂಪಾದನೆ ಮೊಟಕುಗೊಂಡಿತು. ಜೀವನೋಪಾಯಕ್ಕಾಗಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ನಿಲ್ಲಿಸಿ ಉದ್ಯೋಗ ಅರಸಿಕೊಳ್ಳಬೇಕಾಗಿ ಬಂದಾಗ ಈಕೆ ಒಂದು ಖಾಸಗಿ ಉದ್ಯೋಗವನ್ನು ಮೂಡಬಿದ್ರಿಯಲ್ಲಿ ಪಡೆದು ತನ್ನ ಪೋಷಕರ ಜವಾಬ್ದಾರಿಯನ್ನು ನಿಭಾಯಿಸಿ ಕೊಂಡು ಬರುತ್ತಿದ್ದಾಗ ವಿಧಿ ಈಕೆಯ ಬಾಳಲ್ಲೂ ಕ್ರೂರ ಆಟ ಆಡಿಯೇ ಬಿಟ್ಟ..ಕಳೆದ 2 ವರ್ಷಗಳಿಂದೀಚೆ ಈಕೆ ಕಿಡ್ನಿ ಸಮಸ್ಸ್ಯೆಯಿಂದ ಬಳಲುತ್ತಿದ್ದು ಇತ್ತೀಚಿನ ದಿನಗಳಲ್ಲಿ ಸಮಸ್ಯೇ ಉಲ್ಬಣಗೊಂಡಿದ್ದು ವೈದ್ಯರು ಡಯಾಳಿಸೀಸ್ ಮಾಡಿರುತ್ತಾರೆ. ಇದಕ್ಕೆ ಮಾಸಿಕ 20ಸಾವಿರ ರೂಪಾಯಿ ಖರ್ಚಾಗುತಿದೆ  ಆದರೆ ಇದರಿಂದ ಈ ಸಮಸ್ಯೇ ಶಾಶ್ವತವಾಗಿ ನಿವಾರಿಸಲು ಸಾಧ್ಯವಿಲ್ಲ.

ಇದಕ್ಕಾಗಿ ಕಿಡ್ನಿ ಕಸಿ ಮಾಡಲು ವೈದ್ಯರು ತಿಳಿಸಿದ್ದು, ಇವರ ತಾಯಿ ಮಗಳಿಗೆ ತನ್ನ ಒಂದು ಕಿಡ್ನಿಯನ್ನು ನೀಡುತಿದ್ದು, ಇದಕ್ಕೆ ಸುಮಾರು 6ರಿಂದ8 ಲಕ್ಷ ಖರ್ಚೂ ತಗಲಬಹುದೆಂದು ಮಂಗಳೂರಿನ  KMC ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ. ಮೊದಲೇ ಬಡತನದ ಬೇಗೆಯಿಂದ ಬದುಕುತ್ತಿದ್ದ ಈ ಕುಟುಂಬಕ್ಕೆ ಚಿಕಿತ್ಸೆಗಾಗಿ ಮಾಡಿರುವ ಸಾಲವನ್ನು ತೀರಿಸುವುದೇ ಕಷ್ಟಕರವಾಗಿರುವಾಗ,  ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಕೂಡಿ ಹಾಕುವುದು ತುಂಬಾ ಕಷ್ಟವಾಗಿದ್ದು ಪೋಷಕರು ಕಂಗಾಲಾಗಿದ್ದರು. ಇರುವ ತಂದೆ ಕೆಲಸ ಮಾಡಲು ಅಸಾಧ್ಯವಾದ ಸ್ಥಿತಿಯಲ್ಲಿದ್ದು ದಿನನಿತ್ಯದ ಆಹಾರಕ್ಕೂ ಪಡಬಾರದ ಕಷ್ಟ ಅನುಭವಿಸುತ್ತಿದೆ ಈ ಬಡ ಕುಟುಂಬ. ಜೊತೆಗೆ ದಿನ ನಿತ್ಯದ ಔಷಧಿಗೂ ಕಷ್ಟವಾಗಿದ್ದು ಮಾಡಿದ ಸಾಲ ತೀರಿಸುವುದೋ ಹಸಿವು ತಾಳದ ಹೊಟ್ಟೆಗೆ ಅನ್ನ ತರುವುದೋ ಎಂದು ದಿಕ್ಕು ತೋಚದಾಗಿತ್ತು. ಈ ಸಮಸ್ಯೆಯನ್ನು ಅರಿತ ​ಅಮೃತಸಂಜೀವಿನಿ®​ ಆ ಕುಟುಂಬವನ್ನು ಭೇಟಿಯಾಗಿ ಸಶಕ್ತ ಸಮಾಜದಿಂದ  ಕೂಡಿಸಿ  ಸಂಗ್ರಹವಾದ ಒಟ್ಟು  60,000₹ ಹಣವನ್ನು ಅವರ ಕುಟುಂಬಕ್ಕೆ ಎಲ್ಲಾ ಸಂಜೀವಿನಿಗಳ ಉಪಸ್ಥಿತಿಯಲ್ಲಿ ದೀರಾಜ್ ದೇವಾಡಿಗ ಮತ್ತು ಆರ್ಚನ ರವರ ಮೂಲಕ ಹಸ್ತಾಂತರಿಸಲಾಯಿತು.

ಶ್ರೀ ಗುರು ಯೋಗ ಸಂಘದ ಅಧ್ಯಕ್ಷರಾಗಿ ಶ್ರೀ ನಾರಾಯಣ ದೇವಾಡಿಗ ಬಿಜೂರೂ ಮತ್ತು ಕಾರ್ಯದರ್ಶಿಯಾಗಿ ಶ್ರೀ ಮಂಜುನಾಥ ದೇವಾಡಿಗ.


ಶ್ರೀ ಕ್ಷೇತ್ರ ಧರ್ಮಸ್ಥಳದ  ಉಡುಪಿ ಜಿಲ್ಲಾ ಶ್ರೀ ಗುರು ಯೋಗ ಸಂಘದ  ಅಧ್ಯಕ್ಷರಾಗಿ ಶ್ರೀ ನಾರಾಯಣ ದೇವಾಡಿಗ ಬಿಜೂರೂ  ಮತ್ತು   ಕಾರ್ಯದರ್ಶಿಯಾಗಿ ಶ್ರೀ ಮಂಜುನಾಥ  ದೇವಾಡಿಗ ಇವರು  ಆಯ್ಕೆಯಾಗಿದ್ದಾರೆ.
ಪರಮ ಪೂಜ್ಯ ಶ್ರೀ ಡಿ .ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ,ಕನ್ನಡ ಚಲನಚಿತ್ರನಟ ವಿಜಯರಾಘವೇಂದ್ರ ,ಶಾಂತಿವನ ಟ್ರಸ್ಟನ ನಿರ್ದೇಶಕ ಡಾ .ಶಶಿಕಾಂತ ಜೈನ್ ,ಶ್ರೀಮತಿ ಹೇಮಾವತಿ  ವೀ . ಹೆಗ್ಗಡೆ ,ಮುOತಾದವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...