ಅಮೃತಸಂಜೀವಿನಿ® ಎಂಬ ಸೇವೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ದೀರಾಜ್ ದೇವಾಡಿಗ ಇವರ 18 ವರ್ಷದ ಹುಟ್ಟು ಹಬ್ಬಕ್ಕೆ.... ಅಮೃತಸಂಜೀವಿನಿಯ ಸುಶಾಂತ್ ಆಮಿನ್ ಮತ್ತು ಎಲ್ಲಾ ಸದಸ್ಯರು ಇಪ್ಪತ್ತೊಂಬತ್ತನೆಯ ಸೇವಾ ಯೋಜನೆಯನ್ನು , ಮಂಗಳೂರು ತಾಲ್ಲೂಕಿನ ಮೂಡಬಿದ್ರೆಯ ಪುತ್ತಿಗೆ ಗ್ರಾಮದ ಸಂಪಿಗೆ ಬಳಿಯ ಬೀರೇಬೆಟ್ಟು ನಿವಾಸಿ ಕುಮಾರಿ ಅಕ್ಷತಾ ತನ್ನ ಹೆತ್ತವರೊಂದಿಗೆ ಬಾಲ್ಯದಿಂದಲೂ ಬಹಳ ಕಷ್ಟದಿಂದ ತನ್ನ 3 ಸಹೋದರಿಯರೊಂದಿಗೆ ಜೀವನ ಸಾಗಿಸುತ್ತಿದ್ದಾಕೆ. ತನ್ನ ತಂದೆಯ ಸಂಪಾದನೆಯಲ್ಲಿ ಕಲಿಯುತ್ತಿದ್ದಾಗ ದುರದೃಷ್ಟವೆಂಬಂತೆ ತನ್ನ ತಂದೆ ಸಕ್ಕರೆ ಕಾಯಿಲೆಗೆ ತುತ್ತಾಗಿ ತೀವ್ರವಾಗಿ ಕುಗ್ಗಿ ಸಂಪಾದನೆ ಮೊಟಕುಗೊಂಡಿತು. ಜೀವನೋಪಾಯಕ್ಕಾಗಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ನಿಲ್ಲಿಸಿ ಉದ್ಯೋಗ ಅರಸಿಕೊಳ್ಳಬೇಕಾಗಿ ಬಂದಾಗ ಈಕೆ ಒಂದು ಖಾಸಗಿ ಉದ್ಯೋಗವನ್ನು ಮೂಡಬಿದ್ರಿಯಲ್ಲಿ ಪಡೆದು ತನ್ನ ಪೋಷಕರ ಜವಾಬ್ದಾರಿಯನ್ನು ನಿಭಾಯಿಸಿ ಕೊಂಡು ಬರುತ್ತಿದ್ದಾಗ ವಿಧಿ ಈಕೆಯ ಬಾಳಲ್ಲೂ ಕ್ರೂರ ಆಟ ಆಡಿಯೇ ಬಿಟ್ಟ..ಕಳೆದ 2 ವರ್ಷಗಳಿಂದೀಚೆ ಈಕೆ ಕಿಡ್ನಿ ಸಮಸ್ಸ್ಯೆಯಿಂದ ಬಳಲುತ್ತಿದ್ದು ಇತ್ತೀಚಿನ ದಿನಗಳಲ್ಲಿ ಸಮಸ್ಯೇ ಉಲ್ಬಣಗೊಂಡಿದ್ದು ವೈದ್ಯರು ಡಯಾಳಿಸೀಸ್ ಮಾಡಿರುತ್ತಾರೆ. ಇದಕ್ಕೆ ಮಾಸಿಕ 20ಸಾವಿರ ರೂಪಾಯಿ ಖರ್ಚಾಗುತಿದೆ ಆದರೆ ಇದರಿಂದ ಈ ಸಮಸ್ಯೇ ಶಾಶ್ವತವಾಗಿ ನಿವಾರಿಸಲು ಸಾಧ್ಯವಿಲ್ಲ.
ಇದಕ್ಕಾಗಿ ಕಿಡ್ನಿ ಕಸಿ ಮಾಡಲು ವೈದ್ಯರು ತಿಳಿಸಿದ್ದು, ಇವರ ತಾಯಿ ಮಗಳಿಗೆ ತನ್ನ ಒಂದು ಕಿಡ್ನಿಯನ್ನು ನೀಡುತಿದ್ದು, ಇದಕ್ಕೆ ಸುಮಾರು 6ರಿಂದ8 ಲಕ್ಷ ಖರ್ಚೂ ತಗಲಬಹುದೆಂದು ಮಂಗಳೂರಿನ KMC ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ. ಮೊದಲೇ ಬಡತನದ ಬೇಗೆಯಿಂದ ಬದುಕುತ್ತಿದ್ದ ಈ ಕುಟುಂಬಕ್ಕೆ ಚಿಕಿತ್ಸೆಗಾಗಿ ಮಾಡಿರುವ ಸಾಲವನ್ನು ತೀರಿಸುವುದೇ ಕಷ್ಟಕರವಾಗಿರುವಾಗ, ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಕೂಡಿ ಹಾಕುವುದು ತುಂಬಾ ಕಷ್ಟವಾಗಿದ್ದು ಪೋಷಕರು ಕಂಗಾಲಾಗಿದ್ದರು. ಇರುವ ತಂದೆ ಕೆಲಸ ಮಾಡಲು ಅಸಾಧ್ಯವಾದ ಸ್ಥಿತಿಯಲ್ಲಿದ್ದು ದಿನನಿತ್ಯದ ಆಹಾರಕ್ಕೂ ಪಡಬಾರದ ಕಷ್ಟ ಅನುಭವಿಸುತ್ತಿದೆ ಈ ಬಡ ಕುಟುಂಬ. ಜೊತೆಗೆ ದಿನ ನಿತ್ಯದ ಔಷಧಿಗೂ ಕಷ್ಟವಾಗಿದ್ದು ಮಾಡಿದ ಸಾಲ ತೀರಿಸುವುದೋ ಹಸಿವು ತಾಳದ ಹೊಟ್ಟೆಗೆ ಅನ್ನ ತರುವುದೋ ಎಂದು ದಿಕ್ಕು ತೋಚದಾಗಿತ್ತು. ಈ ಸಮಸ್ಯೆಯನ್ನು ಅರಿತ ಅಮೃತಸಂಜೀವಿನಿ® ಆ ಕುಟುಂಬವನ್ನು ಭೇಟಿಯಾಗಿ ಸಶಕ್ತ ಸಮಾಜದಿಂದ ಕೂಡಿಸಿ ಸಂಗ್ರಹವಾದ ಒಟ್ಟು 60,000₹ ಹಣವನ್ನು ಅವರ ಕುಟುಂಬಕ್ಕೆ ಎಲ್ಲಾ ಸಂಜೀವಿನಿಗಳ ಉಪಸ್ಥಿತಿಯಲ್ಲಿ ದೀರಾಜ್ ದೇವಾಡಿಗ ಮತ್ತು ಆರ್ಚನ ರವರ ಮೂಲಕ ಹಸ್ತಾಂತರಿಸಲಾಯಿತು.
No comments:
Post a Comment