Monday, 31 July 2017

Painting of Harshith Sherigar 7th STD : s/o Sathish Sherigar Badanidiyoor Udupi.



ದುಬೈ ಶ್ರೀ ದಿನೇಶ ಸಿ ದೇವಾಡಿಗರು Rs.25,000/ ವನ್ನು ಇಂದು ಉಡುಪಿ ಸಂಘದ ಪಧಾದಿಕಾರಿಗಳಿಗೆ ನೀಡಿದರು.

ಉಡುಪಿ ದೇವಾಡಿಗ ಸಂಘ ಚಿತ್ಪಾಡಿ ಇವರು  ನೀಡುತ್ತಿರುವ ಕರ್ನಾಟಕ ರಾಜ್ಯ ದೇವಾಡಿಗರ ವಿಧ್ಯಾರ್ಥಿ ವೇತನಕ್ಕೆ ದೇವಾಡಿಗರ ಆಪ್ತಭಾಂಧವ ದುಬೈ ಶ್ರೀ ದಿನೇಶ ಸಿ ದೇವಾಡಿಗರು    ರುಪೈ 25,000/ ವನ್ನು ಇಂದು ಉಡುಪಿ ಸಂಘದ ಪಧಾದಿಕಾರಿಗಳಿಗೆ ನೀಡಿದರು.ಚಿತ್ರದಲ್ಲಿ ಉಡುಪಿ ಸಂಘದ ಅಧ್ಯಕ್ಷ ಶ್ರೀ ಸೀತಾರಾಮ್ ದೇವಾಡಿಗ ಮತ್ತು ಮಾಜಿ ಅಧ್ಯಕ್ಷ ಶ್ರೀ ಗಣೇಶ್ ದೇವಾಡಿಗ ಬ್ರಹ್ಮಗಿರಿ ಇವರನ್ನು ನೋಡಬಹುದು.


Thursday, 27 July 2017

ಮರವಂತೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರಧಾನ

ಮರವಂತೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ
ಗುರುವಾರ ನಾಗರ ಪಂಚಮಿಯ ದಿನದಂದು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನೆಡೆಯಿತು

ಈ ಕಾರ್ಯಕ್ರಮದಲ್ಲಿ ನಾಗಸ್ವರ ವಾದನದಲ್ಲಿ ಪರಿಣಿತರಾಗಿ ರಾಜ್ಯ ವಿವಿದೆಡೆಗಳಲ್ಲದೇ ಅನ್ಯ ರಾಜ್ಯದಲ್ಲಿಯೂ ತನ್ನ ಕಲಾ ನೈಪುಣ್ಯತೆಯನ್ನು ಮೆರೆದ ಶ್ರೀ ರಾಘವೇಂದ್ರ ದೇವಾಡಿಗ ಹೆಮ್ಮಾಡಿ ಅವರಿಗೆ ಗಣ್ಯರ ಸಮ್ಮಖದಲ್ಲಿ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ  ಬಿ.ಎಮ್. ಸುಕುಮಾರ್ ಶೆಟ್ಟಿ ಮಾಜಿ ಆಡಳಿತ ಧರ್ಮದರ್ಶಿ ಕೊಲ್ಲೂರು ವಹಿಸಿದ್ದರು ಉದ್ಘಾಟನೆಯನ್ನು  ತಿಮ್ಮ.ವಿ. ದೇವಾಡಿಗ ಧರ್ಮದರ್ಶಿಗಳು  ಶ್ರೀ ಸುಬ್ರಮಣ್ಯ  ದೇವಸ್ಥಾನ    ಮರವಂತೆ  ನೆರವೇರಿಸಿದರು

ಮುಖ್ಯಅತಿಥಿಗಳಾಗಿ  ಶ್ರೀ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದ ಆಡಳಿತ ಧರ್ಮದರ್ಶಿ ರಾಮಚಂದ್ರ ಹೆಬ್ಬಾರ್, ನಾಗೇಶ್ ಹೆಬ್ಬಾರ್ ಉದ್ಯಮಿ ಮರವಂತೆ ಪುರುಷೋತ್ತಮ್ ದಾಸ್ ಉಪ್ಪುಂದ
ಪ್ರಕಾಶ್ ದೇವಾಡಿಗ ಕುದ್ರೊಕೋಡು,  ಉಪಸ್ಥಿತರಿದ್ರು.

ಜೆ.ಪಿ ಬಡಾಕೆರೆ ಸ್ವಾಗತಿಸಿದರು, ಪ್ರಸನ್ನ ಮರವಂತೆ ಧನ್ಯವಾದಗೈದುರು, ಪೂರ್ಣಿಮಾ ಆಚಾರ್ಯ ನಿರೂಪಿಸಿದರು.






Monday, 24 July 2017

Mrs. Jayanthi M. Devadiga won first place in High jump

Mrs. Jayanthi M. Devadiga won first place in High jump today Triple Jump second, Long Jump third in Malaysian International Athletic Meet.





ದೇವಾಡಿಗ ಮಿತ್ರ ( ಕದಂ )ದುಬೈ ಸದಸ್ಯರ ವತಿಯಿಂದ 6 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ತ್ರಾಸಿ ಅಣ್ಣಪ್ಪ ಸಭಾಭವನದಲ್ಲಿ ನಡೆಯಿತು.

ದಿನೇಶ್ ದೇವಾಡಿಗ ಚಿತ್ರಾಡಿ ನಾಗೂರೂ ಇವರ ನೇತ್ರತ್ವದಲ್ಲಿ  ದೇವಾಡಿಗ ಮಿತ್ರ ( ಕದಂ )ದುಬೈ ಸದಸ್ಯರ ವತಿಯಿಂದ  6 ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಆದಿತ್ಯವಾರ ದಿನಾಂಕ 23/07/2017 ರಂದು  ತ್ರಾಸಿ ಅಣ್ಣಪ್ಪ ಸಭಾಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಜು ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ತುಂಗಾ ದೇವಾಡಿಗ ಉದ್ಯಮಿ ಮುಂಬೈ   ಇವರು ನೆರವೇರಿಸಿದರು.ವೆಂಕಟರಮಣ ಭಟ್ ನೆಂಪೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು  ಯೋಗೀಶ್ ಬಂಕೇಶ್ವರ ಕಿರುತೆರೆ ಕಲಾವಿದರು ಹಾಗೂ ಶ್ರೀಮತಿ ಅಂಬಿಕಾ ರಾಜು ದೇವಾಡಿಗ  ತ್ರಾಸಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಶ್ರೀ  ಮುಕಾಂಬಿಕಾ ದೇವಸ್ಥಾನ ಕೊಲ್ಲೂರು ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ದ್ವಿತೀಯ ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕು/ರಾಧಿಕಾ ಎಮ್ ಪೈ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ರಂಜಿತಾ ಆಚಾರ್ಯ  ಇವರ ಪ್ರತಿಭೆಯನ್ನು ಗೌರವಿಸಿ ಪುರಸ್ಕರಿಸಲಾಯಿತು. ಎಸ್ ಎಸ್ ಎಲ್ ಸಿ ಯಲ್ಲಿ
ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರಾದ ಶ್ವೇತಾ ಎಸ್ ದೇವಾಡಿಗ ಮರವಂತೆ,ಅಭಿಷೇಕ್ ಕೆ ದೇವಾಡಿಗ ನಾಗೂರೂ,ಪ್ರಜ್ವಲ್ ದೇವಾಡಿಗ ಉಪ್ಪಿನಕುದ್ರು,ರಕ್ಷಿತಾ ದೇವಾಡಿಗ ಉಪ್ಪುಂದ,ನಿವೇದಿತಾ ಎಸ್ ದೇವಾಡಿಗ ಆಲೂರು,ಇವರ ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸಲಾಯಿತು.ಅತೀ ಹೆಚ್ಚು ಅಂಕ ಗಳಿಸಿದ 161 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಿತು.
ಅನಾರೋಗ್ಯ ಪೀಡಿತರಿಗೆ 20000 ಮಿಕ್ಕಿ ಧನ ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ  ಶ್ರೀಮತಿ ಗೌರಿ ದೇವಾಡಿಗ ಜಿಲ್ಲಾ ಪಂಚಾಯತ್ ಸದಸ್ಯರು, ಶೀನ ದೇವಾಡಿಗ ಮರವಂತೆ ,ರಮೇಶ್ ದೇವಾಡಿಗ ವಂದ್ಸೇ,ಸುಧಾಕರ ದೇವಾಡಿಗ ಕದಂ ದುಬೈ,ಲಕ್ಷ್ಮಣ್ ದೇವಾಡಿಗ ಕದO ದುಬೈ ಬಚ್ಚ ದೇವಾಡಿಗ ಆಲೂರು, ರಘುರಾಮ ದೇವಾಡಿಗ ಆಲೂರು,ಜನಾರ್ದನ ದೇವಾಡಿಗ ಬೈಂದೂರು,ಶಾರದಾ ದೇವಾಡಿಗ ನಾಗೂರೂ,ಶ್ರೀಮತಿ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರು,ಶ್ರೀ ರಾಮ ದೇವಾಡಿಗ ಉಪಪ್ರಾಂಶುಪಾಲರು,ತಮ್ಮಯ್ಯ ದೇವಾಡಿಗ,ವಿವಿಧ ದೇವಾಡಿಗ ಸಂಘಗಳ  ಅಧ್ಯಕ್ಷರಾದ ಮಂಜು ದೇವಾಡಿಗ ಉಪ್ಪುಂದ,ನಾಗರಾಜ ರಾಯಪ್ಪನಮಠ ಕುಂದಾಪುರ,ರಮೇಶ್ ದೇವಾಡಿಗ ಕೋಟೇಶ್ವರ, ಮೊದಲಾದವರು ಉಪಸ್ಥಿತರಿದ್ದರು.ರಾಜೇಶ್ ದೇವಾಡಿಗ ಸ್ವಾಗತಿಸಿದರು.ರವಿ ದೇವಾಡಿಗ ತಲ್ಲೂರು ಮತ್ತು ಮಹೇಶ ಹಟ್ಟಿಯಂಗಡಿ ಕಾರ್ಯಕ್ರಮ ನಿರೂಪಿಸಿದರು ಪುರುಷೋತ್ತಮದಾಸ್ ಉಪ್ಪುಂದ ವಂದಿಸಿದರು.


















ನವಿ ಮುOಬೈ ದೇವಾಡಿಗ ಭವನದಲ್ಲಿ ನವಿ ಮುOಬೈ ಪ್ರದೇಶಿಕ ಸಮಿತಿಯಿಂದ "ಆಷಾಡದಲ್ಲೋಂದು ದಿನ ಸ್ನೇಹ ಸಮ್ಮಿಲನ" ಆಯೋಜನೆ.

ದೇವಾಡಿಗ ಭವನದಲ್ಲಿ ನವಿಮುOಬೈ ಪ್ರದೇಶಿಕ ಸಮಿತಿ ದೇವಾಡಿಗ ಸಂಘ ಮುOಬೈ ಇವರು ನಿನ್ನೆ ಆಷಾಡ ಮಾಸದ ಅಂಗವಾಗಿ ಸ್ನೇಹ ಸಮ್ಮಿಲನ ಆಯೋಜಿಸಿದ್ದರು.ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ  ಶ್ರೀ ಪ್ರಭಾಕರ ದೇವಾಡಿಗರು ಆಷಾಡ ತಿಂಗಳಿನ ಮತ್ತು ಆಷಾಡ ಅಮಾವಾಸ್ಯೆಯ ಬಗ್ಗೆ ,ಶ್ರಾವಣ ಮಾಸದ ಬಗ್ಗೆ  ತುಳು ಕನ್ನಡಿಗರು ಹಿOದೆ ಆಚರಿಸುತ್ತಿದ್ದ ಆಚಾರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು ಪ್ರಾದೇಶಿಕ ಸಮಿತಿಯು ಹೀಗೆಯೇ ಸಣ್ಣ ಸಣ್ಣ ಕಾರ್ಯಕ್ರಮಗಳು ಸದಸ್ಯರ ಪರಸ್ಪರ ಭಾಂಧವ್ಯ ಹೆಚ್ಚಿಸುವು ದಲ್ಲದೆ, ಸಮಿತಿಗಳ ಸದಾ ಕ್ರಿಯಾಶೀಲವಾಗಿರುವುದನ್ನು ತೋರಿಸುತ್ತದೆ ಎOದರು.ಸಂಘದ ಜತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ಮಾತನಾಡುತ್ತಾ ಇಂತಹ ಆಷಾಡದ ಕಾರ್ಯಕ್ರಮಗಳು ಇಂದಿನ ಗ್ಲೋಬಲ್ ಯುಗದಲ್ಲಿ ತುಳು ಕನ್ನಡಿಗರ ಸಂಸ್ಕ್ರತಿಯನ್ನು ಜೀವಂತವಾಗಿಡುವಲ್ಲಿ ಸಹ಼ಕಾರಿಯಾಗುತ್ತದೆ ಮಾತ್ರವಲ್ಲ ಇಂದಿನ ಜನಾOಗಕ್ಕೆ ನಮ್ಮ ಸಂಸ್ಕ್ರತಿಯ ಮಾಹಿತಿ ನೀಡುತ್ತದೆ ಅಂದರು.ಸಂಘದ ಮಾಜಿ ಅಧ್ಯಕ್ಷ ರಾದ ಶ್ರೀ ಎಸ್ ಪಿ ಕರ್ಮರನ್, ಸಂಘದ ವೈದ್ಯ ಕೀಯ ಮತ್ತು ಸಾಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ ಸಂದರ್ಭೋಚಿತವಾಗಿ ಮಾತನಾಡಿದರು.ಅಲ್ಲದೆ ಮಾಜಿ ಕಾರ್ಯಾಧ್ಯಕ್ಷರಾದ ಪಿ ವಿ ಎಸ್ ಮೊಯಿಲಿ,ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಭಾವತೀ ದೇವಾಡಿಗ ಆಷಾಡ ಮಾಸದ ಬಗ್ಗೆ ಮಾಹಿತಿ ನೀಡಿದರು.ಮರಾಟಿ ಸಿನಿಮಾದಲ್ಲಿ ಕಿರು ಪಾತ್ರದಲ್ಲಿ ಅಭಿನಯಿಸುತ್ತಿರುವ ದೇವಾಡಿಗ ಸಂಘದ ಮಾಜಿ ಜತೆ ಕೋಶಾಧಿಕಾರಿ,ಕಲಾವಿದ  ಶ್ರೀ ರಮೇಶ ದೇವಾಡಿಗರನ್ನು ಅಭಿನಂದಿಸಲಾಯಿತು.ನಂತರ ನಮ್ಮ ಶ್ರೀ ಗಿರೀಶ್ ಕೇಶವ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಒಟ್ಟಾರೆಯಾಗಿ  ಕಾರ್ಯಕ್ರಮದಿOದ ಸದಸ್ಯರೇಲ್ಲರು ಸ್ನೇಹ ಸೌಹಾರ್ದತೆಯ ಸಿಂಚನದ ಸವಿಯನ್ನುOಡು ಮನೆಗೆ ತೆರಳಿದರು.

ಗಣೇಶ್ ಎಸ್ ಬ್ರಹ್ಮಾವರ್

ವಾಶಿ ,ನವಿ ಮುOಬೈ 

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...