Tuesday, 6 June 2017

ದೇವಾಡಿಗ ಸಮಾಜದ ನಾಲ್ಕು ಮುತ್ತುಗಳು ....


ಭಂಧುಗಳೇ ,
  ಪ್ರತಿಭೆ ಅನ್ನುವಂತದ್ದು ದೈವದತ್ತ ವರ.ಹುಟ್ಟಿದ ಎಲ್ಲರಲ್ಲೂ ಕಾಣಸಿಗುವoತದಲ್ಲ.ಆದರೆ ಪ್ರತಿಭೆ ಇರುವವರಲ್ಲಿ  ಸರಿಯಾದ ಕ್ಲಪ್ತ ಸಮಯದಲ್ಲಿ  ಅವಕಾಶ ಸಿಕ್ಕಾಗ ಮಾತ್ರ ಅದು ಬೆಳೆಯಲು ಸಾಧ್ಯ.ನಾನೀಗ ಹೇಳ ಹೊರಟಿರುವುದು ನಮ್ಮ ಸಮೂದಾಯದ   ಹೆಮ್ಮೆಯ ನಾಲ್ಕು ಮುತ್ತುಗಳ ಬಗ್ಗೆ.
1) ಶ್ರೀ ಲೋಕು ಕುಡ್ಲ
2) ಶ್ರೀ ಶ್ರೀನಿವಾಸ್ ದೇವಾಡಿಗ
3) ಶ್ರೀ ವಿಜೇಶ್  ದೇವಾಡಿಗ
4)ಶ್ರೀ  ವಿ ಜೆ  ವಿನೀತ್

ಈ ನಾಲ್ಕು ಮುತ್ತುಗಳಿಗೆ ಒಬ್ಬರನ್ನು ಒಬ್ಬರು ಮೀರಿಸುವ ಸರಸ್ವತಿ ಒಲುಮೆಯಿದೆ. ಒಬ್ಬರು ಸಾಹಿತ್ಯಕಾರರಾದರೆ ಇನ್ನೊಬ್ಬರು ಕಥಾ ಲೇಖಕರು,ಮಗದೊಬ್ಬರು ಗಾಯಕರಾದರೆ ಮತ್ತೊಬ್ಬರು ಅತ್ಯುತ್ತಮ ಸೆಭಾ ನಿರೂಪಕರೂ ಅಲ್ಲದೆ ನಟರೂ ಕೂಡ.ಇರುವವರಲ್ಲಿ ಲೋಕು ಅವರಿಗೆ ಸ್ವಲ್ಪ ತುಳು ಚಿತ್ರರoಗದಲ್ಲಿ ಅವಕಾಶ ಸಿಕ್ಕಿದೆ ಅದು ಸಾಲದು.ನಮ್ಮೆಲ್ಲಿಯ ಗಣ್ಯ ವ್ಯಕ್ತಿಗಳು ತುಳು ಯಾ ಕನ್ನಡ ಟಿ ವಿ ಉದ್ಯಮ ಯಾ ಸ್ಯಾoಡಲ್ ಉದ್ಯಮದ ಸoಪರ್ಕ ಇದ್ದಲ್ಲಿ ಖಂಡಿತವಾಗಿಯೂ ಈ ಪ್ರತಿಬೆಗಳನ್ನು ಅವರಿಗೆ ಪರಿಚಯಿಸಬೇಕಾದ ಅಗತ್ಯತೆ ಇದೆ.ಹಾಗಾದಲ್ಲಿ ಮಾತ್ರ ನಮ್ಮ ಈ ಯುವ ಪ್ರತಿಭೆಗಳೂ ರಾಸ್ತ್ರಿಯ ಮಟ್ಟದಲ್ಲಿ ಮಿಂಚಲು ಸಾದ್ಯ. ಲೋಕು ಅವರ ಪರ್ಬ ಟೆಲಿ ಫಿಲ್ಮ್ಲ್,ನಿರೆಲ್ ಅವರ ಪ್ರತಿಭೆ ಎಲ್ಲರಿಗೂ ತಿಳಿದ ವಿಚಾರ,ಶ್ರೀನಿವಾಸ್ ಅವರ ಕೋರಗಜ್ಜನ ಭಕ್ತಿಗೀತೆಗಳು ಪ್ರಸಿದ್ದಿಯನ್ನು ನಾವು ಮರೇಯುವಂತಿಲ್ಲ.ಇನ್ನು ವಿಜೇಶ್  ಅವ್ರ ಸಾಹಿತ್ಯ  ಇರುವ ಕುಶಾಲ್ಡ ಜವನೇರ್ ಮುoಬರುವ ಚೌಕಿ ಟೆಲಿ ಫಿಲ್ಮಲ್ಲಿ ಬಹಳಸ್ಟು ನಿರೀಕ್ಷೆ ಇಟ್ಟುಕೊoಡಿದ್ದಾರೆ.ಇವರು ಜಾನಪದ ಶೈಲಿಯ ಗಾಯಕರಲ್ಲದೇ ರಂಗಭೂಮಿ/ಯಕ್ಷಗಾನ  ಹಿನ್ನಲೆ ಉಳ್ಳವರು. ಇನ್ನೂ ವಿ ಜೆ ವಿನೀತ್ ಉತ್ತಮ ನಟ ಎoಬುದನ್ನು ರಂಭಾರೂಟಿ ಸಿನಿಮಾದಲ್ಲಿ ಸಾಭೀತು ಪಡಿಸಿದ್ದಾರೆ.
ಈ ಯುವ ಪ್ರತಿಭೆಗಳು ಯಾವತ್ತು ಸನ್ಮಾನ,ಪುರಾಸ್ಕಾರಕ್ಕಾಗಿ ಹಂಬಲಿಸಿದವರಲ್ಲ.ಆದರೂ ಸಮಾಜಕ್ಕೆ ಅದರ ಬದ್ದತೆಯಿರಬೇಕು.ಅವಿಭಜಿತ ದಕ್ಷಿಣ ಕನ್ನಡದಲ್ಲಿ ಸಾಕಸ್ಟು ದೇವಾಡಿಗ ಸಂಘಗಳು ವಾರ್ಶೀಕೋತ್ಸವ, ದಶಮಾನೋ ೉ತ್ಸವ, ಬೆಳ್ಳಿ ಹಬ್ಬಗಳ್ಳನ್ನು ಆಚರಿಸಿಕೊoಡು ಬರುತ್ತಿವೆ.ಆದರೆ ನನ್ನ ನೆನಪಿನoಗಳದಲ್ಲಿ ಈ ಯುವ ಪ್ರತಿಭೆಗಳನ್ನು ಪುರಸ್ಕರಿಸಿದoತೆ ತೋರುತ್ತಿಲ್ಲ.( ಪುರಸ್ಕರಿಸಿದ್ದರೆ ಕ್ಶಮಿಸಿ) ಪುರಾಸ್ಕಾರ ,ಸನ್ಮಾನ ಎoಬುವಂತದ್ದು ಇನ್ನಸ್ಟು ಹುರುಪನ್ನು ಕೊಡುತ್ತದೆ ಅಲ್ಲದೆ ಇನ್ನಸ್ಟು ಜವಾಬ್ದಾರಿಯನ್ನು ಕೊಡುತ್ತದೆ.ಇವರ ದ್ವನಿ ಸುರುಳಿ ಮಾರುಕಟ್ಟೆಗೆ ಪ್ರವೇಶಿಸಿದಾಗ ಅದನ್ನು ಸಮುದಾಯದ ಎಲ್ಲರು ಖರೀದಿಸುವ ಮೂಲಕ ನಾವೆಲ್ಲರು ತೆರೆಮರೆಯಲ್ಲಿ ಸಹಕಾರ ನೀಡಬಹುದು ಈಗ ಅವರಿಗೆ ಓರ್ವ ಉತ್ತಮ ಗಾಡ್ ಫಾದರ್ ಆವಶ್ಯಕತೆಯಿದೆ. .ಸಾಮುದಾಯದ ಈ ನಾಲ್ಕು ಮುತ್ತುಗಳು ಆದಸ್ಟು ಶೀಘ್ರದಲ್ಲಿ ದೊಡ್ಡ ರಂಗೇಗೌಡ,ಚಿ.ಉದಯಶಂಕರ್, ಉಪೇಂದ್ರ ರಂತೆ ಯಶಸ್ಸನ್ನು ಗಳಿಸಲಿ ಎoದು ಹಾರೈಸುವ , .

-------ಶ್ರೀ ಗಣೇಶ್ ಶೇರಿಗಾರ್


No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...