Saturday, 1 July 2017

ಕಗ್ಗೋಲೇಯತ್ತ ಸಾಗುತ್ತಿರುವ ಪ್ರಜಾಸತ್ತೆ...

ಇತ್ತೀಚಿನ ದೇಶದ ಮತ್ತು ಅವಿಭಜಿತ ದಕ್ಷಿಣಕನ್ನಡದಲ್ಲಿನ ವಿದ್ಯಾಮಾನಗಳು ನಿಜಕ್ಕೂ ಆತಂಕವುoಟು ಮಾಡುವಂತದ್ದು.ದಿನೇ ದಿನೇ ಕೋಮು ಸೌಹಾರ್ದತೆಯನ್ನು ಕೆಡಿಸುವoತ ಘಟನೆಗಳು ನಡೆಯುತ್ತಿವೆ.ಗೋರಕ್ಷಣೆಯ ಹೆಸರಿ ನಲ್ಲಿ ಮನುಷ್ಯರ ಹತ್ಯೆಯಾಗುತ್ತಿರುವುದು ನಿಜಕ್ಕೂ ದಿಗಿಲು ಹೆಚ್ಚಿಸುವಂತದ್ದು. ವಿದ್ಯಾವಂತರ ,ಬುದ್ದಿವಂತರ ನಾಡು ಎoದು ಹೆಸರಾಗಿದ್ದ ಉಡುಪಿ ಮಂಗಳೂರು ಜಿಲ್ಲೆಗಳಿಗೇಕೋ ಗ್ರಹಣ ಹಿಡಿದಂತಿದೆ.ಗೋರಕ್ಷಣೆಯ ಹೆಸರಲ್ಲಿ ಒಂದು ಅಂತರ್ಯುದ್ಧವೇ ಏರ್ಪಟ್ಟಿದೆ ಎoದರೆ ತಪ್ಪಲ್ಲ.ಕಲ್ಲಡ್ಕ ಬೆಳ್ತಂಗಡಿ  ,ಬಂಟ್ವಾಳ,ಉಳ್ಳಾಲದ ಘಟನೆಗಳು  ಸಮಾಜದ ಸಾಮರಸ್ಯವನ್ನು ಕೆಡಿಸಿವೆ.ಇದರ ನಡುವೆ ಇದನ್ನೆಲ್ಲ ಅರಿತ ಶ್ರೀ ಪೇಜಾವರ ಸ್ವಾಮೀಜಿಯರು ಮುಸ್ಲಿಮ್ ಭಾಂಧ ವರನ್ನು ಕೃಷ್ಣ ಮಟಕ್ಕೆ ಉಪಾಹಾರಕ್ಕೆ ಕರೆಸಿ ಸೌಹಾರ್ದವನ್ನು ಹೆಚ್ಚಿಸಲು ಕೈಗೋಂಡ ಕ್ರಮ ನಿಜಕ್ಕೂ ಸ್ವಾಗತಾರ್ಹ.ಇಲ್ಲಿ ಎಲೆಕ್ಟ್ರೋನಿಕ್ ಮಾಧ್ಯಮದವರು ತಮ್ಮ ಜವಬ್ದಾರಿ  ಅರಿತು ಯಾವ ವಿಷಯಕ್ಕೆ ಪ್ರಾಮುಖ್ಯತೆ ನೀಡಬೇಕು ಎoಬುದನ್ನು ಆರಿತು ಕಾರ್ಯಕ್ರಮ ನಿರ್ವಹಿಸಬೇಕಿದೆ, ಹಾಗೂ ಸಮಾಜದ ಹಿತ ಕಾಪಡಬೇಕಿದೆ.
ಒಂದಂತೂ ಸ್ಪಸ್ಟ ಇತ್ತೀಚಿನ ಘಟನೆಗಳನ್ನು ನೋಡುವಾಗ ಇದಕ್ಕೆಲ್ಲ ಕಾರಣ ಜಾತಿ ರಾಜಕಾರಣ.ಇವತ್ತು ವೋಟ್ ಬ್ಯಾoಕ್ ರಾಜಕಾರಣ ಇಡೀ ಸಮಾಜದ ಸ್ವಾಸ್ತ್ಯವನ್ನು ಕೆಡಿಸಿದೆ ಅಂದರೆ ತಪ್ಪಲ್ಲ.ಇದು ಪುನಃ ದೇಶವನ್ನು ಗುಲಾಮಿತನಕ್ಕೆ ಕೊoಡೂಯಿದರೆ ಆಶ್ಚರ್ಯ ಪಡಬೇಕಿಲ್ಲ.ಮೊನ್ನೆ ಉಡುಪಿ ನಗರಸಭೆಯಲ್ಲಿ ಅಲ್ಲಿನ ಸದಸ್ಯರೆ ಒಬ್ಬ ನಾಗರೀಕರನ್ನು ಸಭೆಗೆ ಕರೆಸಿ  ಅವರನ್ನು ಹೊಡೆದು ಹೊರಹಾಕಿದ ರೀತಿ ನಿಜಕ್ಕೂ ಪ್ರಜಾಸತ್ತೆಯ ಕಗ್ಗೊಲೆ. ನಗರ ಸೆಭೆಯ ಒಳಗೇ ಜನಸಾಮಾನ್ಯನ ಪರಿಸ್ಥಿತಿ ಹೀಗಾದರೆ ಇನ್ನೂ ಹೊರಗೆ ರಕ್ಷಣೆ ಯಾವ ರೀತಿಯದ್ದು ಎoದು ನೀವೇ ಅರಿಯಬೇಕಿದೆ.ನಿಜಕ್ಕೂ ದೇಶದಲ್ಲಿ ಕಾನೂನು ಇದೆ ಎಂದಾದಲ್ಲಿ ಸಿಸಿಟಿವಿ ಕ್ಯಾಮ್ರಾದಲ್ಲಿ ಸೆರೆಯಾದ  ಪ್ರಕಾರ ತಪ್ಪೀಸ್ತತ್ತ ಸದಸ್ಯರನ್ನು ಅವರ ಸದಸ್ಯತ್ವವನ್ನು ವಜಾಗೊಳಿಸಬೇಕಿದೆ.ಇದು ನಮ್ಮ ದೇಶದ ಕಾನೂನಿಗೆ ಅಸ್ಟು ತಾಕತ್ತಿದೆಯೇ ? ಇವತ್ತು ದೇಶದಲ್ಲಿ ಕಾನೂನಿನ ಮೇಲೆ ಹಣ ಮತ್ತು ರಾಜಕೀಯ ಸವಾರಿ ಮಾಡುತ್ತಿರುವುದೇ ಇಂದಿನ ಭಾರತದ ಎಲ್ಲಾ ಕೆಟ್ಟ ವಿದ್ಯಮಾನಗಳ ಉಗಮಕ್ಕೆ ಕಾರಣ.ಆದರೆ ಅದನ್ನರಿತು ಭಾರತೀಯರರು ನಡೆದಾರೆ ? ಎಲ್ಲಕ್ಕೂ ಕಾಲವೇ ಉತ್ತರಿಸಬೇಕಿದೆ. ಮತ್ತೋಂದೆಡೆ ರಾಷ್ಟ್ರಪತಿ ಚುನಾವಣೆಯೇ ನೋಡಿ.ಜಾತಿ ಚದುರಂಗದಾಟದ ಮಹಾನ್ ಕದನವೇ ಏರ್ಪಟ್ಟಿದೆ.ಕರ್ನಾಟಕದ ಕಾಂಗ್ರೇಸ್ಸ್ ನಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ಆಗಾಗ ಕೇಳಿ ಬರುತ್ತಿತ್ತು.ಈಗ ದಲಿತ ವರ್ಗದವರಾದ  ಶ್ರೀ ರಮಾನಾಥ್ ಕೋವಿoದ್ ಅ ವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಜೆಪಿ ಯವರು ನಿಲ್ಲಿಸಿದ್ದು ಕಾಂಗ್ರೇಸಿಗರಿಗೆ ಪಥ್ಯವಾಗದೆ ಸೋಲುವುದು ಗೊತ್ತಿದ್ದರು  ಅವರೂ ಶ್ರೀಮತಿ ಮೀರಾಕುಮಾರವರನ್ನು ನಿಲ್ಲಿಸಿ ಜಾತಿ ಜಾತಿ ಒಳಗೆ ಕಿಚ್ಚನ್ನು ತಂದಿಟ್ಟಿದ್ದಾರೆ.ಈ ಹೊಲಸು ರಾಜಕೀಯವನ್ನು ಅರಿಯದಸ್ಟು ಭಾರತೀಯರು ಮೂರ್ಖರೇನಲ್ಲ.ಇನ್ನು ಬೈಕಳ ಜೈಲಿನಲ್ಲಿ ಮಹಿಳಾ ಕೈದಿಯು ಮ್ರತ ಪಟ್ಟಿದ್ದಾರೆ.ಆದರೆ ಅದೇ ಜೈಲಿನಲ್ಲಿದ್ದ ಇಂದ್ರಾಣಿ ಮುಖರ್ಜಿ ಯ ಹೇಳಿಕೆ ಪ್ರಕಾರ ಅದು ಆಕಸ್ಮಿಕ ಸಾವು ಅಲ್ಲ ಅವಳನ್ನು ಅತ್ಯಾಚಾರಗೈದು ಹತ್ಯೆಗೈಯಲಾಗಿದೆ ಎoದು ಹೇಳಿಕೆ  ನೀಡಿದ್ದಾಳೆ.ಜೈಲಿನಲ್ಲಿ ಉಳಿದ ಮಹಿಳಾ ಕೈದಿಗಳು ಅಲ್ಲಿನ ಪ್ರಶಾನದ ಬಗ್ಗೆ ದಂಗೆ ಎದ್ದಿದ್ದಾರೆ.ಅತ್ಯಾಚಾರ ನಿಜವಾಗಿಯೂ ನಡೆದಿದ್ದರೆ ಅದು ಪ್ರಜಾಸತ್ತೆಯ ಅತ್ಯಾಚಾರಕ್ಕೆ ಸಮ.ಮಹಿಳೆಯರು ಹೊರಗೆ ಸುರಕ್ಷಿತವಲ್ಲ ನಿಜ ಆದರೆ ಜೈಲಿನ ಒಳಗೂ ಸುರಕ್ಷಿತವಲ್ಲ ಅಂದರೆ ಇದು ಕಾನೂನಿನ ಪರಿಹಾಸ್ಯವಲ್ಲವೇ ? ಕಾಶ್ಮೀರದಲ್ಲಿ  ದೇಶದ ಗಡಿಭಾಗದಲ್ಲಿ ದೇಶದ ಸುರಕ್ಷತೆಗಾಗಿ ಸೈನಿಕರು ಹಾಗೂ ದೇಶದ ಅನ್ನದಾತ ರೈತರು ದಿನ ನಿತ್ಯವೂ ಸಾಯುತ್ತಿದ್ದರೆ ನಮ್ಮ ಜನರಿಗೆ ಅದರ ವ್ಯತ್ಯಾಸವೇ ಇಲ್ಲ. ನಮ್ಮ ದೇಶದಲ್ಲಿ ಕ್ರಿಕೆಟಿಗರಿಗೆ  ಮತ್ತು ಸಿನಿತಾರೆಯರಿಗೆ ಸಿಗುವ ಮರ್ಯಾದೇ ದೇಶದ ರೈತರಿಗೆ ಮತ್ತು ಸೈನಿಕರಿಗೆ ಸಿಗದಿರುವುದು ದೇಶದ ದೌರ್ಭಾಗ್ಯ. ಹಿoದೆ ಜೈ ಜವಾನ್ ಜೈ ಕಿಸಾನ್ ಎನ್ನುತ್ತಿದ್ದ ಜನತೆ ಇಂದು ಜೈ ಸಿನಿಮಾ ತಾರೆ ,ಜೈ ಕ್ರಿಕೆಟಿಗರು,ಜೈ ರಾಜಕಾರಣಿ ಎನ್ನುವoತ ಸ್ಥಿತಿಗೆ ತಲುಪುತ್ತಿರುವುದು ದೇಶದ ವಿಡoಬನೆಯಲ್ಲವೇ ?   ದೇಶದಲ್ಲಿ ಧಾರ್ಮಿಕತೆ ಮತ್ತು ಶಿಕ್ಷಣ ವ್ಯಾಪಾರೀಕರಣವಾಗಿರುವಾಗ ಸಹಜವಾಗಿಯೇ ಜನತೆಯ ನೈತಿಕತೆಯ ಮಟ್ಟ ಕುಸಿದಿದೆ.ಮೂರು ದಿನದ ಜೀವನದ ಸಂತೆಯಲ್ಲಿ ಪ್ರೀತಿ ಹಂಚ ಬೇಕೇ ಹೊರತು ದ್ವೇಷವನ್ನಲ್ಲ.ಈ  ಭೂಮಿ ಏನಿದ್ದರೂ  ನಮ್ಮ ತಾತ್ಕಾಲಿಕ ವಸತಿ, ಉಸಿರು ತೊರೆದ ಬಳಿಕ  ಪರಲೋಕವೇ ಶಾಶ್ವತ ವಸತಿ ಎoದು ಅರಿತು ಮನುಜ ನಡೆದಾಗ ಮಾತ್ರ ಇಡೀ ದೇಶ ಏಕೆ ಪ್ರಪಂಚವೇ ಸ್ನೇಹ ಸೌಹಾರ್ದತೆಯ ಬೀಡಾಗುತ್ತದೆ.
ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್
ವಾಶಿ, ನವಿಮುoಬೈ

No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...