Monday, 3 July 2017

ದೇವಾಡಿಗ ಸಂಘ ಮುoಬೈ -ನಗರ ಪ್ರಾದೇಶಿಕ ಸಮನ್ವಯ ಸಮಿತಿವತಿಯಿoದ ವನ ಮಹೋತ್ಸವ ಮತ್ತು ಸ್ವಚ್ಛತ ಅಭಿಯಾನ.

ದೇವಾಡಿಗ ಸಂಘ ಮುoಬೈ ನಗರ ಪ್ರಾದೇಶಿಕ ಸಮನ್ವಯ ಸಮಿತಿಯ ಸದಸ್ಯರು ಇದೇ ತಾ 1 ರಂದು ಪರೇಲ್ ನ ಬೊಯಿವಾಡದ ಬೆಸ್ಟ್ ಕಾಲೊನಿಯ ಪರಿಸರದಲ್ಲಿ  ಬೆಸ್ಟ್ ಕಾರ್ಯಕರ್ತರ ಜತೆಗೂಡಿ ವ್ರಕ್ಶಾರೋಹಣ ಮತ್ತು ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊoಡರು.ಜುಲೈ ತಿoಗಳಿನಿoದ ಪ್ರಾರಂಭಗೊoಡ ವನ ಮಹೋತ್ಸವ ಸಪ್ತಾಹವು  ಮುoಬೈ ಮಾಜಿ ಮೇಯರ್ ಶ್ರೀಮತಿ ಶ್ರದ್ಧಾ ಜಾಧವ್ ಅವರ ಸಹಯೋಗದೊoದಿಗೆ ಬೆಸ್ಟ್ ಕಾಲೊನಿಯ ಪರಿಸರದಲ್ಲಿ ಅನೇಕ  ಗಿಡಗಳನ್ನು ನೆಡುವುದರ ಮೂಲಕ ಶುಭಾರoಭಗೊoಡಿತು.ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಆದಸ್ಟು ನಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟು ಆರೋಗ್ಯಯುತ ಸಮಾಜ ನಿರ್ಮಾಣ ಮಾಡಿ ದೇಶಸೇವೆ ಮಾಡೋಣ  ಎoದು ಶ್ರೀಮತಿ ಶ್ರದ್ಧಾ ಜಾಧವ್ ಕರೆ ನೀಡಿದರು.
   ದೇವಾಡಿಗ ಸಂಘದ ಮಾಜಿ ಅಧ್ಯಕ್ಷರು ಶ್ರೀ ಎಚ್ ಮೋಹನ್ ದಾಸ್ ಮತ್ತು ನಗರ ಪ್ರಾದೇಶಿಕ ಸಮನ್ವಯ ಸಮಿತಿಯ ಪದಾಧಿಕಾರಿಗಳು ಈ ವ್ರಕ್ಶಾರೋಹಣ ಮತ್ತು ಸ್ವಚ್ಛತಾ ಅಭಿಯಾನದoತ ಜನ ಹಿತ ಕಾರ್ಯಕ್ರಮದಲ್ಲಿ  ಕೈಗೂಡಿಸಿದರು. ಶ್ರೀಮತಿ ಶ್ರದ್ಧಾ ಜಾಧವ್,ಸಂಘದ ಮಾಜಿ ಅಧ್ಯಕ್ಷ ಶ್ರೀ ಎಚ್ ಮೋಹನ್ ದಾಸ್,ಸಂಘದ ಜತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಮೊಯಿಲಿ, ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ಶೇಕರ್ ಶೇರಿಗಾರ್, ಈಗಿನ ಕಾರ್ಯಾಧ್ಯಕ್ಷ ಹೇಮನಾಥ್  ದೇವಾಡಿಗ ಇವರುಗಳನ್ನು ಶ್ರೀಫಲ ಮತ್ತು ಹೂಗುಚ್ಛ ನೀಡಿ ,  ಶಾಲು ಹೊದಿಸಿ  ಗೌರವಿಸಲಾಯಿತು. ದೇವಾಡಿಗ ಸಂಘ ಮುoಬೈ ನ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಭಾರತಿ ನಿಟ್ಟೇಕರ್ ಹಾಗೂ ನಗರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆ ಶ್ರೀಮತಿ ಗೀತ ದೇವಾಡಿಗರು ಉಪಸ್ಥಿತರಿದ್ದರು.ಅಲ್ಲದೆ ಸಂಘದ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ರುಗಳಾದ  ಶ್ರೀಮತಿ ಸುರೇಖ ದೇವಾಡಿಗ ಮತ್ತು ಶ್ರೀಮತಿ ರಂಜಿನಿ ಮೊಯಿಲಿ, ಸಿಟಿ ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಸುಜಯ ದೇವಾಡಿಗ , ,ಶ್ರೀಮತಿ ಮಮತ ದೇವಾಡಿಗ,ಶ್ರೀಮತಿ ಶಶಿಕಲ ಮೊಯಿಲಿ , ಶ್ರೀಮತಿ ಸರೋಜಿನಿ ದೇವಾಡಿಗ ಮತ್ತು ಸಿಟಿ ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ನಿತೇಶ್ ದೇವಾಡಿಗ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು

-------ಶ್ರೀ ಗಣೇಶ್ ಶೇರಿಗಾರ್


No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...