ಭಾರತ ಸ್ವತಂತ್ರಗೊOಡು 70 ವರ್ಷಗಳಾಗುತ್ತಿದೆ.ಇಡೀ ದೇಶ ಆಚರಣೆಗಾಗಿ ಸದ್ದಾಗುತ್ತಿದೆ.ಆದರೆ ನನಗೇಕೋ ಈ ಆಚರಣೆಗಳು ಇತ್ತೀಚಿನ ವರ್ಷಗಳಲ್ಲಿ ಬರೇ ಡOಬಾಚಾರಕ್ಕಾಗಿ, ತೋರಿಕೆಗಾಗಿ ಆಚರಿಸಲಾಗುತ್ತಿದೆ ಅನಿಸುತ್ತಿದೆ.ಆ ದಿನ ಮಾತ್ರ ಎಲ್ಲಿ ನೋಡಿದರಲ್ಲಿ ದೇಶ ಭಕ್ತಿ ಹಾಡುಗಳು,ಅಖಂಡ ಭಾರತದ ಬಗ್ಗೆ ದೇಶ ಪ್ರೇಮದ ಬಗ್ಗೆ ದೊಡ್ದ ದೊಡ್ದ ಭಾಷಣಗಳು,ಘೋಷಣೆಗಳು ಕೇಳಿ ಬರುತ್ತದೆ.ಜನರು ಹಾಗೂ ದೊಡ್ದ ಮನುಷ್ಯರು ಸಿಹಿ ತಿOದು ಓOಡಸ್ಟ್ ಗಪ್ಪ ಹೊಡೆದು ಮನೆ ಸೇರಿ ಬಿಡುತ್ತಾರೆ.ಅವತ್ತಿನ ಹೇಳಿದ ಕೇಳಿದ ಭಾಷಣವನ್ನು ಕೇಳಿದವರು ಹೇಳಿದವರು ಅದರಂತೆ ನಡೆಯುತ್ತಾರೆಯೇ ಎOಬುದೇ ಯಕ್ಷ ಪ್ರೆಶ್ನೆ ?
ಭಂಧುಗಳೆ ಅಖಂಡ ಭಾರತ, ನಾವೆಲ್ಲ ಒಂದೇ,ನಾವೆಲ್ಲ ಭಾರತೀಯರು,ಏಕತೆಯಲ್ಲಿ ಸಾಗಬೇಕು ಎOದು ಬೊಬ್ಬಿಡುವ ಜನ ಇವತ್ತಿನ ತನಕ ರಾಜ್ಯ ರಾಜ್ಯಗಳ ಗಡಿಗಾಗಿ ಹೋರಾಟ ನಡೆಸುತ್ತಾ ಅದನ್ನು ಅವರ ಬದುಕಾಗಿ ರೂಪಿಸಿಕೊOಡು ಜನ ಸಾಮಾನ್ಯರ ನೆಮ್ಮದಿಗೇ ಕೊಳ್ಳಿ ಇಟ್ಟಿದ್ದಾರೆ. ಬೆಳಗಾವಿಯಲ್ಲಿ ಎಮ್ ಈ ಎಸ್ ನ ಪುಂಡಾಟಿಕೆ ಇನ್ನೂ ನಿಂತಿಲ್ಲ.ಮುOಬೈಯಲ್ಲಿ ಶಿವಸೇನೆ ಮತ್ತು ಮನಸೇ ಪಕ್ಷಗಳು ಪರಪ್ರಾಂತಿಯರನ್ನು ಹೇಗೆ ಯಾವ ರೀತಿ ನಡೆಸಿಕೊಳ್ಳುತ್ತಿದೆ ಅಂತ ಅಲ್ಲಿನ ಪರಪ್ರಾಂತಿಯರಿಗೇ ಗೊತ್ತು.ಮೊನ್ನೆ ಕರ್ನಾಟಕದ ಬೆOಗಳೂರಲ್ಲಿ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಕನ್ನಡ ಇಂಗ್ಲಿಷ್ ಜೊತೆ ರಾಸ್ಯ್ರ ಭಾಷೆ ಹಿOದಿ ಭಾಷೆಯನ್ನೂ ಬರೆಸಿದ್ದರು.ಆದರೆ ಅಲ್ಲಿನ ಮುಖ್ಯಮಂತ್ರಿಯಾಗಿ ಹಿಡಿದು ಕನ್ನಡಪರ ಸಂಘಟನೆಗಳು ಅದನ್ನು ಪ್ರತಿಭಟಿಸಿ ಹಿOದಿ ಭಾಷೆಯಲ್ಲಿ ಬರೆದದ್ದನ್ನು ತೇಗೇಸಿಯೇ ಬಿಟ್ಟರು. ಅದು ಅಲ್ಲಿದ್ದರೇ ಆಗುವ ತೊOದರೆ ಏನೆOದು ಆ ಮೂರ್ಖರಿಗೆ ಗೊತ್ತು. ಕರ್ನಾಟಕದಾದ್ಯಂತ ಪ್ರದರ್ಶನಗೊಳ್ಳುತ್ತಿರುವ ಹಿOದಿ ಚಲನಚಿತ್ರಗಳ ಪ್ರದರ್ಶನವನ್ನು ಇವರು ನಿಲ್ಲಿಸಿಯಾರೇ ? ಅಲ್ಲಿ ಹಿOದಿ ಓಕೆ.ಆದರೆ ಮೆಟ್ರೋ ನಿಲ್ದಾಣದಲ್ಲಿ ಬೇಡ.ಇವರ ಚಿಂತನಾ ಶಕ್ತಿ ಎಸ್ಟು ಬಾಲಿಶತನದ್ದು ಎOದು ದೇಶವೇ ನಿರ್ದರಿಸಬೇಕು.ಅಖಂಡ ಭಾರತದ ಪರಿಕಲ್ಪನೆ ಇಂತವರಿOದ ನಿರೀಕ್ಷಿಸಲು ಸಾದ್ಯವೇ ? ಕೇರಳ ,ತಮಿಳುನಾಡಿನಲ್ಲಿ ಪರಿಸ್ಥಿತಿ ಇದಕ್ಕಿOತ ಭಿನ್ನವಾಗಿಲ್ಲ. ರಾಷ್ಟ್ರಭಾಷೆಯ ಮೇಲಿಲ್ಲದ ಅಭಿಮಾನ ಜನರಿಗೇ ರಾಷ್ಟ್ರಾಭಿಮಾನ ರಾಷ್ಟ್ರ ಪ್ರೇಮ ಎಲ್ಲಿOದ ಬಂದೀತು ? ನೀವೇ ಹೇಳಿ ? ಇವರಿಗೇ ರಾಷ್ಟ್ರಾಭಿಮಾನ, ಅಖಂಡ ಭಾರತದ ಬಗ್ಗೆ, ಭಾರತೀಯತೆ ಬಗ್ಗೆ ಮಾತನಾಡಲು ಅರ್ಹತೆ ಇದೆಯೇ ಎOದು ದೇಶಾಭಿಮಾನಿಗಳು ಚಿಂತಿಸಬೇಕಿದೆ. ದೇಶದ ತಲೆ ಅಂತಿರುವ ಕಾಶ್ಮೀರ ಇಂದು ಹೊತ್ತಿ ಉರಿಯುತ್ತಿದೆ,ಕಾಶ್ಮೀರದ ಜನತೆಗೆ ನಿಜವಾಗಿಯೂ ಏನು ಬೇಕಿದೆ ಅನ್ನುವ ಅOಶವನ್ನು ಸ್ವತಂತ್ರ್ಯಾ ನಂತರ ಅಧಿಕಾರ ಹಿಡಿದವರು ಅರಿಯುವ ಪ್ರಯತ್ನ ಮಾಡಿದ್ದಾರೆಯೇ ಏOಬುದು ಈ ತನಕ ಯಾರೂ ಅರಿಯರು.ಈವರೆಗೂ ಜನರ ಮಾರಣ ಹೋಮ ನಡೆಯುತ್ತಾ ಬOದಿದೆ.ಇದರ ಪರಿಹಾರ ಆ ಭಗವOತನೇ ಬಲ್ಲ.ದೇಶದ ಭ್ರಶ್ಟಾಚಾರ ಮಿತಿಮೀರಿದೆ. ಜಾತಿ ಧರ್ಮಗಳು ಎನ್ನುತ್ತಾ ಒಂದೆಡೇ ಜನತೆ ಕಚ್ಚಾಡಿಕೊOಡು ಸಾಯುತ್ತಿದ್ದಾರೆ.ಸ್ಠ್ರೀ ಭ್ರೂಣ ಹತ್ಯೆ ಹೆಚ್ಚಿದೆ. ದೇಶದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಹತ್ಯೆ ಮೇರೆ ಮೀರಿದೆ.ಮಂಗಳೂರಿನ ಕಾವ್ಯಳ ಸಾವಿನ ಬಗ್ಗೇ ಸ್ಥಿತಿವಂತ ಜನ ಅವಳ ಅದರ ಸತ್ಯಶೋಧನೆಗಾಗಿ ನಿಲ್ಲಬೇಕಿತ್ತು ಆದರೆ ಅದರ ಮುಖ್ಯಸ್ಠ ಆಳ್ವರ ಪರವಾಗಿ ಬ್ರಹತ್ ಮೋರ್ಚ ಕರೆದಿರುವುದು ವಿಧ್ಯಾವಂತರ ನಾಡಿನ ದೊಡ್ದ ದುರಂತ.ಕಾಯಿದೆ ಕಾನೂನು ಎನ್ನುತ್ತಾ ಮಾತಿನ ಮಲ್ಲರ ವಾದಕ್ಕೆ ಸತ್ಯ ಸೋತು ಅನ್ಯಾಯ ಸ್ವತಂತ್ರ ಭಾರತದಲ್ಲಿ ಗಹಗಹಿಸಿ ನಗುತ್ತಿದೆ. ಆದರೂ ಸ್ವಾತಂತ್ರ್ಯೋತ್ಸವದ ಒಂದು ದಿನ ಮಾತ್ರ ಭಾಷಣಕಾರರ ಮತ್ತು ಕೇಳುಗರ ದೇಶಪ್ರೇಮ ಉಕ್ಕಿ ಹರಿವ ಅಲೆಗಳಲ್ಲಿ ಬಡ ಜನತೆ ಕೊಚ್ಚಿ ಹೋಗುತ್ತಿರುವುದನ್ನು ನೋಡುವಾಗ ನನಗೆ ನೆನಪಾಗುತ್ತದೆ ಅದೇ ಹಳೇ ಹಾಡು " ನ್ಯಾಯ ಎಲ್ಲಿದೆ ? ನ್ಯಾಯ ಎಲ್ಲಿದೆ ? .ಆದರೂ ಮತ್ತೆ ಮತ್ತೆ ಬರುತ್ತಿದೆ ಸ್ವಾತಂತ್ರ್ಯೋತ್ಸೊವ. ದೇಶಪ್ರೇಮ, ದೇಶಾಭಿಮಾನ,ಮಾನವತೆ ಮರೀಚಿಕೇಯಾಗುತ್ತಿದೆ. ಪ್ರಜಾಪ್ರಭುತ್ವದ ಹೆಸರಲ್ಲಿ ,ಸ್ವಾತಂತ್ರ್ಯದ ಹೆಸರಲ್ಲಿ ಸರ್ವಾಧೀಕಾರ ಅರಾಜಕತೆ ಪರೋಕ್ಷವಾಗಿ ತಾಂಡವವಾಡುತ್ತಿದೆ ಅಂದರೆ ತಪ್ಪಲ್ಲವೆಲ್ಲವೇ ?
ಏನಂತೀರಿ ?
ಗಣೇಶ್ ಶೇರಿಗಾರ್
ವಾಶಿ ನವಿ ಮುOಬೈ
9594228684
No comments:
Post a Comment