Wednesday, 2 August 2017

ಅತ್ತೆಗೊOದು ಕಾಲ ಸೊಸೆಗೊOದು ಕಾಲ

ವೇದಗಳು ಸುಳ್ಳಾಗಬಹುದು ಆದರೆ ಗಾದೆಗಳು ಸುಳ್ಳಾಗುವುದಿಲ್ಲ ಎ Oಬ ಹಿರಿಯರ ಮಾತು ಇಂದಿಗೂ ಪ್ರಸ್ತುತ.ಹಿOದೆ ಕೇOದ್ರದಲ್ಲಿ ಕಾಂಗ್ರೇಸ್ ಅಧಿಕಾರದಲ್ಲಿದ್ದಾಗ ಅಡ್ಡಮತದಾನದ ಹೆದರಿಕೆ ಬಿಜೆಪಿಗಿತ್ತು.  ಅದು ಎಲ್ಲಿಯ ತನಕ ಇತ್ತೇಂದಂದರೇ ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರನ್ನೇ ತನ್ನ ಕಂಟ್ರೋಲ್ ಗೆ ತೆಗೆದುಕೋOಡು ಅವರನ್ನೇ ಕೆ ಜೆ ಪಿ ಸ್ಥಾಪಿಸುವುದರ ಮೂಲಕ ಬಿಜೆಪಿ ಗೆ ದೊಡ್ದ ಹೋಡೇತವನ್ನೇ ಕಳೆದ ವಿಧಾನ ಸಭೆ ಚುನಾವಣೆ ಯಲ್ಲಿ ಕೊಟ್ಟದ್ದನ್ನು ಜನತೆ ಮರೆತಿಲ್ಲ.ಶ್ರೀ ಯಡಿಯೂರಪ್ಪನಂತವರೆ ಕಾಁಗ್ರೇಸ್ಸ ನ ಚದುರಂಗದಾಟಕ್ಕೆ ಬಲಿ ಬಿದ್ದಿದ್ದರು.ಆದರೆ ಇಂದು ಬಿಜೆಪಿ ಕೇOದ್ರದಲ್ಲಿ ಅಧಿಕಾರದಲ್ಲಿದೆ.ಗುಜರಾತ್ ನ 44 ಕ್ಕೂ ಹೆಚ್ಚು ಶಾಸಕರು ಬಿ ಜೆ ಪಿ ಯ ಹೆದರಿಕೆಯಿಂದ  ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ.ರಾಜ್ಯಸಭೆ ಸದಸ್ಯರ ಆಯ್ಕೆಗಾಗಿ ಅಡ್ಡ ಮತದಾನ ಮಾಡುವರೆOಬ ಹೆದರಿಕೆಯಿಂದ 44 ಕ್ಕೂ ಹೆಚ್ಚು ಗುಜರಾತ್ನ ಶಾಸಕರನ್ನು  ಬೆOಗಳೂರಿನ ರೆಸಾರ್ಟ್ನನಲ್ಲಿ ಕಾಂಗ್ರೇಸ್ಸ ಹೈ ಕಮಾOಡ್  ಮೋಜಿನಲ್ಲಿ ಮೂಳುಗಿಸಿದ್ದಾರೆ. . ಇವರ   ಉಸ್ತುವಾರಿ ನೋಡುತ್ತಿರುವ ಸಂಸದ ಡಿ ಕೆ ಸುರೇಶ್  ಹೇಳುತ್ತಾರೆ,ಪ್ರಜಾಪ್ರಭುತ್ವದ  ಉಳಿವಿಗಾಗಿ ಅವರನ್ನು ಇಲ್ಲಿಗೆ ಕರೆತರಲಾಗಿದೆಯಂತೆ. ಈಗಲಾದರೂ ಕಾಂಗ್ರೇಸ್ಸಿಗರಿಗೆ ತಡವಾಗಿ ಪ್ರಜಾಪ್ರಭೂತ್ವದ ಅರಿವಾಗಿದೆ.ಕರ್ನಾಟಕದಲ್ಲಿ ಇದೇ ಕಾಂಗ್ರೇಸ್ಸ  ವಿಧಾನಪರಿಷತ್ ಸದಸ್ಯರ ಆಯ್ಕೆಯ ಸಮಯ  8 ಮಂದಿ ಜೆ ಡಿ ಎಸ್ ಶಾಸಕರನ್ನು ಖರೀದಿಸಿ ವಿಧಾನಪರಿಷತ್ ಮತದಾನದಲ್ಲಿ ಗೆದ್ದಿದ್ದರು.ಆಗ ಪ್ರಜಾಪ್ರಭೂತ್ವ ಉಳಿಸಬೇಕೆOಬ ಆರಿವು ಇರಲಿಲ್ಲವೇ ? ಕೇOದ್ರದಲ್ಲಿ ಯಾರು ಅಧಿಕಾರದಲ್ಲಿರುತ್ತಾರೋ ಅವರನ್ನು ಹೊರತುಪಡಿಸಿ ಬೇರೆ ರಾಜಕೀಯ ಪಕ್ಷಗಳಿಗೆ ಈ ಗಂಡಾOತರ ಮಾಮೂಲು.ಇದಕ್ಕೆ ಹೇಳುವುದು ಅತ್ತೇಗೋಂದು ಕಾಲ ಸೊಸೆಗೊOದು ಕಾಲ.ಇನ್ನು ಗುಜರಾತನಲ್ಲಿನ ಮೂರ್ನಾಲ್ಕು ಕಾಂಗ್ರೇಸ್ಸ ಶಾಸಕರ ಮೊಬೈಲ್ ಫೋನ್ ಹೈಕಮಾOಡ್ ಕಿತ್ತಿಟ್ಟುಕೊOಡು ಅವರನ್ನು ಸOಪರ್ಕರಹಿತರನ್ನಾಗಿ ಮಾಡಿದೆ.ಇಸ್ಟೆಲ್ಲಾ ಆದರೂ ಈ ಪಕ್ಶಾಂತರಿಗಳನ್ನು ಪುನಃ ಆರಿಸಿ ಆಯ್ಕೆ ಮಾಡಿ ಕಳುಹಿಸು ಮತದಾರರೇ ನಿಜವಾಗಿಯೂ ಮೂರ್ಖರು ಮತ್ತು ಸ್ವಂತ ಚಿಂತನೆ ಇಲ್ಲದವರಾಗಿರುತ್ತಾರೆ.ಈ ಮತದಾರರೇ ನಿಜವಾದ ಪ್ರಜಾಪ್ರಭೂತ್ವದ ಕಂಟಕರು.ಇವರಿOದಾಗಿ ಪ್ರಜಾಪ್ರಭೂತ್ವ ತನ್ನ ಮಹತ್ವ ಕಳೆದುಕೊOಡಿದೆ ಎOದರೆ ತಪ್ಪಲ್ಲ.ಇಂದು ಬಿಜೆಪಿ ಹೇಳುತ್ತಿದೆ  ಗುಜರಾತ್ ನಲ್ಲಿ ಪ್ರವಾಹ ಪರಿಸ್ತಿತಿ ಇರುವಾಗ ಕಾಂಗ್ರೇಸ್ಸ ಶಾಸಕರೂ ಬೆOಗಳೂರಿನ ರೆಸಾರ್ಟ್ ನಲ್ಲಿ ಮೋಜು ಮಾಡುತ್ತಿರುವುದು ಸಾರಿಯೇ ಎOದು.ಅಂದು ಶ್ರೀ ಯಡಿರುರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವ್ರನ್ನು ಅಂತಂತ್ರಗೊಳಿಸಲು ಓಂದಿಸ್ತು  ಬಿಜೆಪಿ ಶಾಸಕರ ಗುOಪು ಕಾಂಗ್ರೇಸ್ಸ ನ ಸಹಾಯದ ಮೂಲಕ ಅಂದ್ರ ಪ್ರದೇಶದ ರೆಸಾರ್ಟ್ನಲ್ಲಿ ಮೋಜು ಮಾಡುತಿದ್ದರು.ಆಗ ಕಾಗ್ರೇಸೀಗರು ಕೇಳುತ್ತಿದ್ದರು ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇರುವಾಗ ಬಿಜೆಪಿ ಶಾಸಕರು ರೆಸಾರ್ಟ್ನಲ್ಲಿ ಮೋಜು ಮಾಡುವುದು ಸಾರಿಯೇ ? ಒಟ್ಟಿನಲ್ಲಿ ಅವರವರು ಅವರವರ ಕಾಲದಲ್ಲಿ ಮಾಡಿದ್ದು ಸರಿ.ಬೇರೆಯವರು ಮಾಡಿದ್ದು ತಪ್ಪು.ಈ ರಾಜಕೀಯ ಪಕ್ಷಗಳು  ತಾವುಗಳು ಏನೇ ತಪ್ಪು ಮಾಡಿದರೂ ಅದನ್ನು ಸಮರ್ಥಿಸಿಕೊOಡು ಜನರನ್ನು ಮೂರ್ಖರನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತಿವೆ.ಇನ್ನು ಜನರು ಮೂರ್ಖರಾಗುತ್ತಿರುವುದು ಜನತೆಯ ಕರ್ಮ. ಕರ್ನಾಟಕವಂತೂ ಇತ್ತೀಚೆಗೆ ಮನೋರಂಜನೆಯ ಕೇOದ್ರವಾಗುತ್ತಿದೆ.ಈ  ರಾಜಕೀಯ ಪಕ್ಷಗಳ ಮನೋರಂಜನೆಯ ಭರಾಟೇಯಲ್ಲಿ ಅಲ್ಲಿನ ಟಿವಿ ದಾರಾವಾಹಿಗಳು ಪ್ರೇಕ್ಷಕರಿಲ್ಲದೆ ಸೋಲುತ್ತಿವೇಯಂತೇ. ಮೌಲ್ಯಾಧಾರಿತ ರಾಜಕಾರಣ ಹಳ್ಳ ಹಿಡಿಯುತ್ತಿದ್ದು ಇಡೀ ಪ್ರಜಾಪ್ರಭೂತ್ವದ ಮೇಲೆ ಶ್ರೀ ಸಾಮಾನ್ಯ ಭರವಸೆಯನ್ನು ಕಳೆದುಕೊಳ್ಳಲಾರOಭಿಸಿದ್ದಾನೆ .ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

9594228684

No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...