Wednesday, 13 September 2017

ರಾಷ್ಟ್ರೀಯ ಕಾಂಗ್ರೇಸ್ ಪಕ್ಷಕ್ಕೆ ಮರುಚಿಂತನೆಯ ಅವಶ್ಯಕತೆ ಇದೆ.

ಭಾರತ ನಡೆಯುತ್ತಾ ಇರುವುದು ವಂಶಪಾರOಪರ್ಯ ನೀತಿಯಿಂದ ಎOಬ ಅಪಕ್ವ ಹೇಳಿಕೆಯನ್ನು ರಾಹುಲ್ ಗಾಂಧಿಯವರು  ಅಮೇರಿಕದ ವಾಷಿOಗ್ಟನ್ ನೀಡಿರುವುದು ಹಾಗು ಭಾರತದ ಪ್ರಜಾಪ್ರಭುತ್ವವನ್ನು ಬಂಡವಾಳ ಹೂಡಿ ಆದಾಯ ಪಡೆಯುವ ಉದ್ದಿಮೆ ಮತ್ತು ಸಿನಿಮಾರಂಗಕ್ಕೆ ಹೋಲಿಸಿರುವುದು ಅವ್ರ ಪ್ರೌಡಿಮೇ ಎಸ್ಟು ಬಾಲಿಶವಾಗಿದೆ ಎOಬುದನ್ನು  ತೋರಿಸುತ್ತದೆ.ಅಲ್ಲದೆ ಭಾರತದ ಪ್ರಜಾಪ್ರಭುತ್ವ ಮತ್ತು ರಾಜಕಾರಣದ ವಿರುದ್ದ ವಿದೇಶದಲ್ಲಿ ಈ ರೀತಿ ಆದರಲ್ಲೂ ಭಾರತದ ಪ್ರಧಾನಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕತೆಗೆ ಎಡೆ ಮಾಡಿ ಕೊಡುತ್ತಿದ್ದಾರೆ ಎOಬ ಹೇಳಿಕೆ ಇವರು ಪ್ರಧಾನಿ ಬಿಡಿ ಕಾಂಗ್ರೇಸ್ಸ್ ಪಕ್ಷದ ನೇತ್ರತ್ವ ವಹಿಸಲು ಯೋಗ್ಯರೆಲ್ಲ ಎOಬುದನ್ನು ಸಾಬೀತು ಪಡಿಸುತ್ತದೆ. ಕಾಂಗ್ರೇಸ್ಸ ಪಕ್ಷದ ಉಪಾಧ್ಯಕ್ಷರಾಗಿ ಎಲ್ಲಿ ಯಾವಾಗ ಏನು ಹೇಳಿಕೆ ಕೊಡಬೇಕೆನ್ನುವ ಕನಿಸ್ಟ ಜ್ಞಾನವೂ ಇಲ್ಲದಿರುವ ವ್ಯಕ್ತಿಯನ್ನು ಕಾಗ್ರೇಸ್ಸೀಗರು ಹೇಗೆ ಸಹಿಸಿಕೊOಡಿದ್ದಾರೆ ಎOಬುದೇ ದಶಕದ ಯಕ್ಷ ಪ್ರೆಶ್ನೆ? ಇಂದು ರಾಹುಲ್ ಗಾಂಧಿಯವರು ಒಬ್ಬ ಕಾರ್ಮಿಕನ ಮಗನಾಗಿದ್ದರೆ ಇವತ್ತು ಕಾಂಗ್ರೇಸ್ಸಿನ ಉಪಾಧ್ಯಕ್ಷರ ಸ್ಥಾನದಲ್ಲಿ ಇರುತ್ತಿದ್ದರೆ ? ಶ್ರೀಮತಿ ಇಂದಿರಾ ಗಾಂಧಿಯವರ ಮೊಮ್ಮಗ ಎನ್ನುವ ಒಂದೇ ಕಾರಣಕ್ಕೆ ಈಗೆಲ್ಲವೂ ಸಿಗುತ್ತಿರುವುದು ಎOಬ ವಿಚಾರ ದೇಶವಾಸಿಗಳಿಗೆ ತಿಳಿದಿದೆ. ಓದುಗರೇ ರಾಜಕೀಯವಾಗಿ ರಾಹುಲ್ ಗಾಂಧಿಯವರು ಸಾಧಿಸಿದ್ದು ಏನು ಎOಬುದು ಮೊದಲು ನಿಸ್ಟಾವOತ ಕಾಂಗ್ರೇಸಿಗರೇ ಆತ್ಮ ವಿಮರ್ಶೇ ಮಾಡಿಕೊಳ್ಳಬೇಕಿದೆ.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು, ಬಲಿದಾನ ಕೊಟ್ಟಿದ್ದು ನಮ್ಮ ಕಾಂಗ್ರೇಸ್ಸ್ ಪಕ್ಷ ಎOದು ಬೊಬ್ಬಿಡುವ ಕಾಂಗ್ರೇಸಿಗರಿಗೆ ರಾಸ್ಯ್ರ ರಾಜಕಾರಣದಲ್ಲಿ ಅವರಲ್ಲಿ ಒಬ್ಬ ಸಮರ್ಥ್ಯ ನಾಯಕನಾಗಿ ಯಾರೂ ಸಿಗದಿರುವುದು ಕಾಂಗ್ರೇಸಿನ ದೊಡ್ದ ದುರಂತ.ತನ್ನ ಅಜ್ಜ ಅಜ್ಜಿ ಸ್ಥಾಪಿಸಿದ ಪಕ್ಷ ಅಧಿಕಾರ ಮತ್ತು ನಾಯಕತ್ವ   ತಮ್ಮ ಪೀಳಿಗೆಗೆ ಸೀಮಿತ ಅನ್ನುವ ರೀತಿಯಲ್ಲಿ ಹೇಳಿಕೆ ಕೊಟ್ಟು ಅದನ್ನು ಸಮರ್ಥಿಸಿಕೊOಡಿರುವುದು ಪ್ರಜಾಪ್ರಭುತ್ವ ಎOಬ ಪದಕ್ಕೆ ಮಾಡಿದ ಅಪಚಾರ ಮತ್ತು ಅಪಹಾಸ್ಯವೂ ಆಗಿದೆ.ಹಾಗಾದರೆ ಇಸ್ಟೋOದು ಧೀರ್ಘ ಕಾಲ ಬೆವರಿಳಿಸಿ,ಸಂಘಟಿಸಿ ಶ್ರಮಿಸಿದ ಹಿರಿಯ ಕಾಂಗ್ರೇಸಿಗರಿಗೆ ದೇಶದ ಅಧಿಕಾರ ಹಿಡಿವ ಅರ್ಹತೇ ಇಲ್ಲವೇ ? ಎOದು ಬೇರೆ ಯಾರಲ್ಲ , ಹಿರಿಯ ಕಾಂಗ್ರೇಸಿಗರೇ ಪ್ರಶ್ನಿಸಬೇಕು. ಒಂದು ಕಾಲ ಅಂದರೆ ಶ್ರೀ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಇದೆ ಅಮೇರಿಕ ಅವರಿಗೆ ಅಮೆರಿಕ ಪ್ರವೇಶಿಸಲು ನಿರ್ಭಂಧ ಹೇರಿತ್ತು.ಆದರೆ ಇಂದು ಅವ್ರನ್ನು ರತ್ನಗOಬಳಿ ಹಾಕಿ ಸ್ವಾಗತಿಸಿ ಸತ್ಕರಿಸಿದೆ ಅಂದರೆ ಅದು ಅವರ ಸಾಮಾರ್ಥ್ಯವನ್ನು ತೋರಿಸುತ್ತದೆ.ಮೋದಿಯವರು ಪ್ರಧಾನಿ ಆದಮೇಲೆ ಹೊರದೇಶಗಳು ಭಾರತವನ್ನು ನೋಡುವ ದ್ರಸ್ಟಿಕೋನವೇ ಬದಲಾಗಿದೆ.ಇದೆಲ್ಲಾ ಗೊತ್ತಿದ್ದೂ ವಿದೇಶದಲ್ಲಿ ಹೋಗಿ ಒಂದು ವಿದೂಷಕನಂತೆ ಹೇಳಿಕೆ ಕೊಡುವುದನ್ನು ನೋಡುವಾಗ ಇದು ದೇಶ ಕಂಡ ದಿಟ್ಟ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗನೇ ? ಎOದು ಮನ ಕೊರಗುತ್ತದೆ. ತನ್ನಿOದಾಗಿ ಕುಸಿಯುತ್ತಿರುವ ಜನಾದಾರವನ್ನು ಉಳಿಸಲು ವOಶಾಧಾರಿತ ಮೂಲಕ ನಡೆಯುತ್ತಿರುವ ಪ್ರಾದೇಶಿಕ ಪಕ್ಷಗಳ ಸಹಕಾರ ಪಡೆಯಲು ಈ ರೀತಿಯ ಹೇಳಿಕೆ ರಾಹುಲ್ ನೀಡಿರಬಹುದು. ಆದರೆ ಉಳುವವನೂ , ದೇಶದ ಕಾರ್ಮಿಕನೂ,ದೇಶದ ಗಡಿ ಕಾಯ್ದ ಸೈನಿಕನೂ ಒಂದು ದಿನ ರಾಜನಾಗಬೇಕು.ಅದೇ ಪ್ರಜಾಪ್ರಭೂತ್ವದ ಶೋಭೆ.ಕೇOದ್ರದಲ್ಲಿ ಅಧಿಕಾರ ಹಿಡಿದವರು ಯಾವತ್ತು ದೇಶದ ಭದ್ರತೆ ವಿಷಯದಲ್ಲಿ, ಜಮ್ಮು ಕಾಶ್ಮೀರದಲ್ಲಿನ ಶಾOತಿ ಸ್ಥಾಪನೆ ಬಗ್ಗೆ ರಾಜಿ ಮಾಡುವ ಪಂಚಾಯತಿಗೆಯೇ ಇಲ್ಲ.ಹಾಗಿರುವಾಗ ಮಾನ್ಯ ಪ್ರಧಾನಿಯವರ  ಬಗ್ಗೆ ಕಾಶ್ಮೀರ ದ ಕಾರ್ಯಶೈಲಿಯ ವಿರೋದಾತ್ಮಕ   ಹೇಳಿಕೆ ಅವರ ಅಪ್ರಬ್ಬುದತೆಯ  ಸಂಕೇತವನ್ನು ಬಿOಬಿಸುತ್ತದೆ. ಈಗಲೂ ಸಮಯ ಮೀರಿಲ್ಲ, ಈಗಲಾದರೂ ಹಿರಿಯ  ಕಾಂಗ್ರೇಸ್ಸಿಗರು  ನೆಹರು ಪೀಳಿಗೆ ಎOಬ ಬ್ರಮೆಯಿಂದ ಹೊರ ಬಂದು ಕೊನೇ ಪಕ್ಷ ಅಧಿಕಾರ ಹಿಡಿಯಲು ಅಲ್ಲದಿದ್ದರೂ ಪ್ರಭಲ ವಿರೋಧಪಕ್ಷವಾಗಿ ಹೊರ ಹೊಮ್ಮಬೇಕಾದರೆ ಪಕ್ಷದ ನಾಯಕತ್ವವನ್ನು ಸಮರ್ಥವಿರುವವರಿಗೆ ವಹಿಸಬೇಕು.ಇಲ್ಲವಾದಲ್ಲಿ ಕಾಂಗ್ರೇಸ್ಸನ  ನಿರ್ನಾಮಕ್ಕೆ ರಾಹುಲ್ ಗಾಂಧಿ ಒಬ್ಬರೇ ಸಾಕು.

ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ,ನವಿ ಮುOಬೈ.

No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...