Friday, 22 September 2017

ನವಿ ಮುOಬೈ ಜಿಲ್ಲಾ  ಬಿ ಜೆ ಪಿ ಕನ್ನಡ ಘಟಕ ಮಹಿಳಾ ವಿಭಾಗ ಮತ್ತು ಜೈ ಅOಬೆ ಚಾರಿಟೇಬಲ್ ಟ್ರಸ್ಟ್ ವತಿಯಿOದ ಹಳದಿ ಕುOಕುಮ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ನವಿ ಮುOಬೈ ಜಿಲ್ಲಾ ಕನ್ನಡ ಘಟಕದ ಮಹಿಳಾ ವಿಭಾಗ ಮತ್ತು ಜೈ ಅOಬೆ ಚಾರಿಟೇಬಲ್ ಟ್ರಸ್ಟ ಸನ್ಪಾಡ ಇವರು ಜಂಟಿಯಾಗಿ ನವಿ ಮುOಬೈ  ಸನ್ಪಾಡದ ಸೇಕ್ಟರ್ 7 ರಲ್ಲಿ  ಹೋಟೆಲ್ ಸಾಯಿ ತ್ರಿವೇಣಿ ಎದುರುಗಡೆ ಇರುವ ಅಶ್ರಯ ಟ್ರಸ್ಟ್ ಹಾಲ್ ನ ಟೆರೇಸ್ ನಲ್ಲಿ ಹಳದಿ-ಕುOಕುಮ ಕಾರ್ಯಕ್ರಮವನ್ನು ಇದೆ ತಿOಗಳ  ತಾರೀಕು  24  ಭಾನುವಾರ ಸಂಜೆ   ಆಯೋಜಿಸಲಾಗಿದೆ.ಕಾರ್ಯಕ್ರಮವು ಸಂಜೆ 7 ರಿOದ 8.30 ತನಕ ನಡೆಯಲಿದೆ.ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಬಿ ಜೆ ಪಿ  ಕಾರ್ಪೊರೇಟರ್ ಶ್ರೀಮತಿ ವಿಜಯತಾಯಿ ಘರಾಟ್ , ನವಿಮುOಬೈ ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ದುರ್ಗಾತಾಯಿ, ನವಿಮುOಬೈ ಬಿ ಜೆ ಪಿ  ಕನ್ನಡ ಘಟಕದ ಅಧ್ಯಕ್ಷ ಶ್ರೀ ಹರೀಶ್ ಪೂಜಾರಿ, ಕನ್ನಡ ಘಟಕದ ಮಹಿಳಾ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಡಿ ದೇವಾಡಿಗ ಮತ್ತು ಜೈ ಅOಬೆ ಚಾರಿಟೇಬಲ್  ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಪ್ರಭಾ ಆರ್ ದೇವಾಡಿಗರು  ಆಗಮಿಸಲಿದ್ದಾರೆ.ನವಿ ಮುOಬೈನ ಎಲ್ಲಾ ತುಳು ಕನ್ನಡ  ಸುಮಂಗಲೆಯರು ಕ್ಲಪ್ತ ಸಮಯದಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೆOದು  ನವಿ ಮುOಬೈ ಜಿಲ್ಲಾ ಬಿಜೆಪಿ ಕನ್ನಡ ಘಟಕದ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಎಸ್ ಬ್ರಹ್ಮಾವರ್ ಮತ್ತು ಶ್ರೀ ರಮೇಶ ಸನಿಲ್ ವಿನಂತಿಸಿದ್ದಾರೆ.

No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...