Wednesday, 27 September 2017

ಅವ್ಯವಸ್ಥೇಯ ಆಗರವಾಗುವ ಮುನ್ನ ಜಾಗ್ರತರಾಗಿ.

ಮಾನ್ಯರೇ,
  ಸಂಘ ಸಂಸ್ಥೇಗಳು ಹುಟ್ಟುವಾಗ ಇರುವಂತ ಒಂದು ಜವಾಬ್ದಾರಿ, ವಿಶ್ವಾಸ, ಹುಮ್ಮಸ್ಸು,ಒಗ್ಗಟ್ಟು    ,ಏಕಾಗ್ರತೆ,ಸಹಕಾರ ವರ್ಷಗಳು ಉರುಳಿದಂತೆ ಅದೇ ಸಂಸ್ಥೇಗಳಲ್ಲಿ ಇವಲ್ಲವು ಕರಗುತ್ತಾ ಅವಿಶ್ವಾಸ, ಸ್ವಾರ್ಥ,ತಾನು ಹೇಳಿದ್ದೇ ಸರಿ ಎನ್ನುವOತ ಮನೋವಿಕಲತೆ ಜಾಸ್ತಿಯಾಗಿ ಅಲ್ಲಿನ ವಾತವಾರಣ ಯಾವ ಸಮಾಜಕ್ಕೆ ಮಾದರಿ ಆಗಬೇಕೋ ಆದಾಗದೆ ಗೊOದಲದ ಗೂಡಾಗುತ್ತದೆ.ಅದು ಒಂದಕ್ಕಿOತ ಹೆಚ್ಚು ಜನ ನಾಯಕರಿದ್ದರೆ ಅಲ್ಲಿನ ಕತೆ ಅಯೋಮಯ.ಒಂದು ಕಾರ್ಯದಲ್ಲಿ ಯಶಸ್ವಿಯಾದರೇ   ಅದು ನನ್ನಿOದಲೇ ಅದರ ಸOಪೂರ್ಣ ಯಶಸ್ಸು ನನ್ನದೇ ಎನ್ನುವವ, ಕೆಲ್ಸ ಎಡವಟ್ಟಾದರೆ   ಅದು ನನ್ನಿOದಲ್ಲ ಅದಕ್ಕೆ ಕಾರಣ ಬೇರೆಯವ ಅಂತ ಕೈ ತೋರಿಸುತ್ತಾರೆ.ಆದರೆ ಅವರ ಈ ಜಾಣತನ ಕಾರ್ಯಕರ್ತರು,ಜನಸಾಮನ್ಯರ ಅರಿವಿಗೆ ಬರಲಿಕ್ಕಿಲ್ಲ ಎOದು  ಭಾವಿಸಿದರೆ ಅದು ಅವರ ಮೂರ್ಖತೆಯೇ ಸರಿ.ಇನ್ನು ಒಂದೇ ಸಂಸ್ಥೇಯಲ್ಲಿದ್ದುಕೊOಡು ಬರೇ ಸಭೆ ವೇದಿಕೆಗಳಿಗೆ ಸೀಮಿತವಾಗಿದ್ದು ದೈನಂದಿನ ಕೆಲಸ ಕಾರ್ಯಗಳಲ್ಲಿ ಬೇಜವಬ್ದಾರಿಯಿOದ ನಡೆದುಕೊOಡು ಬರೇ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಆಟವಾಡುತ್ತಿದ್ದರೆ ಅಲ್ಲಿ ಕೆಲಸ ಮಾಡುವವರ ದ್ರಸ್ಟಿಯಲ್ಲಿ ಇವರ ಗೌರವ ಹೊರಟುಹೋಗುತ್ತದೆ ಮಾತ್ರವಲ್ಲದೆ ಅದರ ಲಾಭವನ್ನು ಇನ್ನೊಬ್ಬರು ಪಡೆಯುತ್ತಾರೆ.ಇವರ ಒಡಕಿನ ಲಾಭ ಇನ್ನೊಬ್ಬ ಪಡೆದು ಆರ್ಥಿಕವಾಗಿಯೂ ನಸ್ಟ ಅನುಭವಿಸಬೇಕಾಗುತ್ತದೆ. ಇಡೀ ಸಮಾಜ ತಮ್ಮನ್ನು ಗಮನಿಸುತ್ತಿದೆ ಎನ್ನುವ ಕನಿಸ್ಟ ಕಾಳಜಿ ಖಂಡಿತವಾಗಿಯೂ ಇವರಿಗೆ ಇರಬೇಕು. ಸಮಾಜಸೇವೆ ಮಾಡುವ ಕಾರ್ಯಕರ್ತರುಗಳನ್ನು ಹುರಿದುOಬಿಸಬೇಕೇ ವಿನಹಃ ಅಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಖಂಡಿತ ಮಾಡಬಾರದು. ಇನ್ನೊಬ್ಬರು ಮಾಡಿದ ಒಳ್ಳೆಯ ಕೆಲಸಗಳನ್ನು ಹೋಗಳಿದರೂ ತಪ್ಪೆನ್ನುವ ಕೆಲ ನಾಯಕರುಗಳ ಮನೋಸ್ಥಿತಿ ನೋಡುವಾಗ ಅಯ್ಯೋ ಎನಿ ಸುತ್ತದೆ.ಇವರ ಹ್ರದಯ ಶ್ರೀಮಂತಿಕೆಯಲ್ಲಿ ಕಡು ಬಡವರOತೆ ತೋರಿಬರುತ್ತದೆ.
ತಪ್ಪು ಎನ್ನುವOತದ್ದು ಜನ ಸಾಮನ್ಯ ಮಾಡಿದರೂ ತಪ್ಪು,ಕಾರ್ಯಕರ್ತ ಮಾಡಿದರೂ ತಪ್ಪು,ನಾಯಕ ಎನಿಸಿಕೊOಡವರು ಮಾಡಿದರರೂ ತಪ್ಪು.ತಪ್ಪು ತಪ್ಪೇ.ಎಲ್ಲರೂ ತಾಯಿಯ ಹೊಟ್ಟೆಯಿಂದ ಬಂದವರೇ.ಯಾರೂ ಆಕಾಶದಿOದ ಬಿದ್ದವರಲ್ಲ. ಮಾಡಿದ ತಪ್ಪಿಗೆ ಸಂಸ್ಥೇಯಲ್ಲಿನ ಎಲ್ಲಾ ನಾಯಕರುಗಳೂ ಜವಾಬ್ದಾರರು.ನಾನಲ್ಲ ನಾನಲ್ಲ ಎಂದು ತಪ್ಪಿಸಿಕೊಳ್ಳುವಂತಿಲ್ಲ. ಒಳ್ಳೆಯ ಕೆಲ್ಸಗಳಿಗೆ ಹೇಗೆ ಎಲ್ಲಾರು ಜವಾಬ್ದಾರರೋ ಹಾಗೆ ತಪ್ಪಾದಲ್ಲಿ ಖಂಡಿತವಾಗಿಯೂ ಎಲ್ಲರು ಜವಾಬ್ದಾರರು.ಮಾಡಿದ ಕೆಲವು
ಅಚಾತುರ್ಯಗಳಿಗೆ ಜನ ಸಾಮನ್ಯ ಯಾ ಕಾರ್ಯಕರ್ತ ಪ್ರಶ್ನಿಸಿದಾಗ ಅದನ್ನು ನಾಯಕರೇನಿಸಿಕೊOಡವರು ಸಕಾರಾತ್ಮಕವಾಗಿಯೇ ಸ್ವೀಕರಿಸಿ ಉತ್ತರಿಸಬೇಕು .ಎಲ್ಲವನ್ನು ಎಲ್ಲರನ್ನು  ಒಟ್ಟಿಗೆ ಅವರವರ ವ್ಯಕ್ತಿತ್ವಕ್ಕೆ ದಕ್ಕೆಯಾಗದ ರೀತಿಯಲ್ಲಿ ನಡೆಸಿಕೊOಡು ಹೋಗುವವನೇ ನಿಜವಾದ ಜನನಾಯಕ .

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...