ಸೆಪ್ಟೆOಬರ್ ಶುಕ್ರವಾರ 15 ರOದು ನಡೆದ ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ನಾನು ಭಾಗವಹಿಸಿದ್ದೇ. ವಾರ್ಷಿಕ ಸಭೆಯ ನಂತರ ನಡೆದ ವಿಚಾರ ಚಿಂತನ ಮಂಥನದಲ್ಲಿ ಹಲವರು ಕೆಲವು ಸಲಹೆ ಸೂಚನೆಗಳನ್ನು ಇತ್ತರು. ನಾನು ಕಲವು ವಿಚಾರಗಳನ್ನು ಇಡುವ ಚಿಂತನೆಯಲ್ಲಿದ್ದೇ ಆದರೆ ಸಮಯದ ಅಭಾವದಿOದಾಗಿ ಬರೇ ಎರಡು ಅಂದರೆ ಬೆಳ್ತಂಗಡಿಯಲ್ಲಿ ಎಂಡೋ ಸಲ್ಫನ್ ಪರಿಣಾಮದ ವಿಚಾರ ಮತ್ತು ಕೊOಕಣ ರೈಲ್ವೆಯಲ್ಲಿನ ಸುರಕ್ಷತೆಯ ವಿಚಾರವನ್ನು ಭಿನ್ನವಿಸಿಕೊOಡಿದ್ದೇ. ಆವತ್ತು ಸಭೆ ಅನ್ನುವಂತದ್ದು ಒಂದು ಮುOಬೈಯಲ್ಲಿನ ಹೆಚ್ಚಿನ ತುಳು ಕನ್ನಡ ಸಂಘಟನೆಗಳ ಒಕ್ಕೂಟದ ಸOಗಮವಾಗಿತ್ತು ಅಂದರೆ ಖಂಡಿತಾ ತಪ್ಪಲ್ಲ.ಹೆಚ್ಚಿನ ಸಂಘಟನೆಗಳ ದಿಗ್ಗಜರುಗಳು, ಪಧಾದಿಕಾರಿಗಳು ಭಾಗವಹಿಸಿದ್ದರು. ಇದು ನಿಜವಾಗಿಯೂ ಮಾನ್ಯ ಶ್ರೀ ಜಯ ಕೃಷ್ಣಣ್ಣನವರ ಸಂಘತನಾ ಚತುರತೆಯನ್ನು ತೋರಿಸುತ್ತದೆ. ಈ ಎಲ್ಲಾ ಸಂಘಟನೆಗಳ ಒಂದು ಏಕತೆಯ ಕೇOದ್ರ ಬಿಂದುವಾಗಿರುವ ಪರಿಸರ ಪ್ರೇಮಿ ಸಮಿತಿ ಯಾಕೆ ಪರಿಸರಯೇತರ ಸಾಮಾಜಿಕ ಬದ್ದತೆ ಇರುವ ಕೆಲಸಗಳನ್ನು ಮಾಡಿ ಜನರನ್ನು ಅಂದರೆ ನಮ್ಮವರನ್ನು ಸ್ಪಂದಿಸಬಾರದು, ಸ್ಪಂದಿಸಿ ಜನಮನ ಗೆಲ್ಲಬಾರದು ?
ನಾನು ಈ ಮೇಲೆ ತಿಳಿಸಿದಂತೆ ಸಭೆಯಲ್ಲಿ ಎರಡು ವಿಚಾರಗಳನ್ನು ಮಾತ್ರ ಇಟ್ಟಿದ್ದೆ.ಮತ್ತೆ ಕೆಲವು ವಿಚಾರಗಳನ್ನು ನಿಮ್ಮೆಲ್ಲರ ಮುOದೆ ಇಡುತ್ತಿದ್ದೇನೆ.ಮೊದಲನೆಯದಾಗಿ ನಮ್ಮ ಮುOಬೈನಲ್ಲಿ OBC ಮೀಸಲಾತಿ ಇರುವ ಎಲ್ಲ ನಮ್ಮ ಜಾತಿ ಭಾಂದವರಿಗೆ ಆದರ ಸರ್ಟಿಫಿಕೇಟ್ ತೆಗೆದು ಕೊಳ್ಳುವಲ್ಲಿ ಬಹಳ ತೊOದರೆಗೆ ಒಳಗಾಗಿದ್ದಾರೆ. ಮಹಾರಸ್ಟ್ರ ಸರಕಾರ ನಮ್ಮವರಿಗೆ 1967 ರ ಮೊದಲಿನ ಪೂರ್ವಜರ ಸಂತತಿ ಸರಪಳಿ ನೀಡಬೇಕು ಎನ್ನುವ ಕಡ್ಡಾಯ ನೀತಿ ನಮ್ಮ ಹಿOದುಳಿದ ಜಾತಿಗಳಿಗೆ ಮಾರಕವಾಗಿ OBC ಸರ್ಟಿಫಿಕೇಟ ತೆಗೆಯುವಲ್ಲಿ ವಿಫಲವಾಗಿ ಮೀಸಲಾತೀ ಲಾಭದಿOದ ವಂಚಿತವಾಗಿವೆ.ಇದು ಇಲ್ಲಿನ ಸರಕಾರದ ಮಲತಾಯಿ ಧೋರಣೆಯಾಗಿದೆ.ಈ ವಿಚಾರದಲ್ಲಿ ನಮ್ಮ ಎಲ್ಲ ಕನ್ನಡ ತುಳು ಜಾತಿ ಸಂಘಟನೆಗಳ ಒಂದೇ ವೇದಿಕೆ ಯಂತೆ ತೋರುತ್ತಿರುವ ಪರಿಸರ ಸಮಿತಿಯು ಮಹಾರಾಸ್ಟ್ರ್ರ ಸರಕಾರದ ಮೇಲೆ ಒತ್ತಡ ತಂದು ಇವರ obc ನೀತಿಯನ್ನು ಸ್ವಲ್ಪ ಸರಳಿಕರಿಸಿದರೆ ಅದೇಸ್ಟೋ ಹಿOದುಳಿದ ವರ್ಗಗಳ ಜಾತಿಗಳಿಗೆ ವಿದ್ಯಾಭ್ಯಾಸ ಮತ್ತು ನೌಕರಿ ರಂಗಗಳಲ್ಲಿ ಲಾಭವಾಗಬಹುದು.
ನಾಲ್ಕನೆಯದಾಗಿ ಊರಲ್ಲಿ ಚತುಶೋನ ರಸ್ತೇ ಗಳಾಗುತ್ತಿವೆ ನಿಜ ಆದರೆ ಎಲ್ಲಿ ಮೇಲ್ಸೇತುವೆಗಳು ಬೇಕೋ ಅಲ್ಲಿ ಮೇಲ್ಸೇತುವೆಗಳಿಲ್ಲ.ಎಲ್ಲಿ ಬೇಡವೋ ಅಲ್ಲಿವೆ, ಹೀಗಾಗಿ ಅದೇಸ್ಟೋ ಅಫಘಾತಗಳು ಸOಭವಿಸುತ್ತಿದ್ದು ಜನರು ಪ್ರಾಣಿಗಳOತೆ ಜೀವ ಕಳೆದು ಕೊಳ್ಳುತ್ತಿದ್ದಾರೆ.ಇದನ್ನು ಅಲ್ಲಿನ ಸOಬOದ ಪಟ್ಟ ಪ್ರಾದಿಕಾರದ ಗಮನಕ್ಕೆ ತಂದರೆ ಮುOದಾಗೂವ ಪ್ರಾಣ ಹಾನಿಗಳನ್ನು ತಡೆಯಬಹುದು
ಐದನೆಯದಾಗಿ ಅವಿಭಜಿತ ದಕ್ಷಿಣಕನ್ನಡದಲ್ಲಿ ಅಪಾರ್ಟ್ಮೇಂಟ್ಗಳ ಭರಾಟೆ ಶರವೇಗದಲ್ಲಿದೆ. ನಗರ ಪ್ರದೇಶ ಹೊರತು ಪಡಿಸಿ ಮಿಕ್ಕೆಲ್ಲ ಕಡೆ ಒಳಚರOಡಿ ಯೋಜನೆಗಳಿಲ್ಲ. ಹಾಗಾಗಿ ಮನುಷ್ಯ ತ್ಯಾಜ್ಯ ಮಲೀನಗಳು ಬಿಲ್ಡಿಂಗ್ ಗಳ ಛೇOಬರ್ ಭರ್ತಿಯಾದ ಮೇಲೆ ಊರ ತೆರೆದ ಚರಂಡಿಯೇ ಗತಿ .ಹಿOದೊಮ್ಮೆ ಗುಜರಾತ್ನ ಸೂರತ್ ನಲ್ಲಿ ಆದ ದುರ್ಘಟನೆ ಇಲ್ಲೂ ಆಗಲು ಸಮಯ ದೂರವಿಲ್ಲ.ಈಗಾಗಲೇ ಆನೆ ಕಾಲು ರೋಗ ಬರಕೂಡದು ಎOದು ಮುOಚಿತವಾಗಿ ಮಾತ್ರೆಗಳನ್ನು ಪ್ರಾಧಿಕಾರ ವಿತರಿಸುತ್ತಿದೆ.
ಓರ್ವ ಸಾಮಾನ್ಯ ಪರಿಸರ ಪ್ರೇಮಿಯಾಗಿ ನನ್ನ ಕೆಲವು ವಿಚಾರಗಳನ್ನು ನಮ್ರವಾಗಿ ನಿಮ್ಮ ಮುOದೆ ಬಿಚ್ಚಿಟ್ಟಿದ್ದೇನೆ. ತಪ್ಪು ಭಾವಿಸದಿರಿ. ಸಕಾರಾತ್ಮಕವಾಗಿ ಯಾ ನಕಾರಾತ್ಮಕವಾಗಿ ಸ್ವೀಕರಿಸುವುದು ತಮ್ಮೆಲ್ಲರಿಗೆ ಸೇರಿದ್ದು.
ಇಂತಿ ನಿಮ್ಮ ಪರಿಸರ ಪ್ರೇಮಿ
ಗಣೇಶ್ ಎಸ್ ಬ್ರಹ್ಮಾವರ್
No comments:
Post a Comment