Saturday, 30 September 2017

ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು

ಆತ್ಮೀಯ ಸಮಾಜ ಭಾಂದವರೇ,
ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಣ ಅತ್ಯಮೂಲ್ಯ ಸಂಪತ್ತು ಅದಕ್ಕಾಗಿಯೇ ಪ್ರತಿ ಸಂಘಟನೆಯು ನವ ಪೀಳಿಗೆಯ ವಿದ್ಯಾರ್ಹತೆಗಾಗಿ ವಿಶೇಷವಾದ ಆದ್ಯತೆಯನ್ನು ನೀಡಿದೆ .ನಮ್ಮ ಸಮುದಾಯದ ಅರ್ಹ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ  "ವಿದ್ಯಾ ನಿಧಿ " ಯನ್ನು  ಸಂಗ್ರಹಿಸಲು ನಾವು ಸಂಕಲ್ಪ ಮಾಡಿದ್ದೇವೆ .ಆರ್ಥಿಕ ತೊಂದರೆ ಮಾತ್ರದಿಂದಲೇ ಯಾವ ಮಗುವಿನ ವಿದ್ಯಾಭ್ಯಾಸವು ಕುಂಠಿತವಾಗಬಾರದು ಎಂಬುದು ನಮ್ಮ ಹೆಬ್ಬಯಕೆ ,ಆಪ್ರಯುಕ್ತ ಸಹೃದಯಿಗಳಾದ ನಿಮ್ಮಿಂದ ದೇಣಿಗೆಯನ್ನು ಪಡೆದು ದೊಡ್ಡ ಮೊತ್ತದ "ವಿದ್ಯಾನಿಧಿಯೊಂದನ್ನು "ಸ್ಥಾಪಿಸಬೇಕೆನ್ನುವ  ನಮ್ಮ ಮಹದಾಸೆಗೆ ತಾವುಗಳು ಕೈಜೋಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ .
ಆ ಪ್ರಯುಕ್ತ ದಿನಾಂಕ 04 /11 /2017  ನೇ  ಶನಿವಾರ ಸಂಜೆ  5 .00  ಗಂಟೆಗೆ ಬೆಂಗಳೂರು ನಗರದ  ಬಸವನಗುಡಿಯಲ್ಲಿರುವ "ಬೆಂಗಳೂರು ಗಾಯನ ಸಮಾಜ ದಲ್ಲಿ"ರಾಜ್ಯದ ಶ್ರೇಷ್ಠ ನಾಟಕ ತಂಡದಲ್ಲಿ ಒಂದಾದ,ಹಾಗು ಹಲವಾರು ರಾಜ್ಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ "ಲಾವಣ್ಯ (ರಿ) ಬೈಂದೂರು " ಕಲಾ ತಂಡದಿಂದ "ಮುದ್ದಣ್ಣನ ಪ್ರಮೋಷನ್ ಪ್ರಸಂಗ " ಎನ್ನುವ ಕನ್ನಡ ಹಾಸ್ಯಮಯ ನಾಟಕವನ್ನು ಪ್ರದರ್ಶಿಸಲಿದ್ದೇವೆ .ಈ ಪ್ರದರ್ಶನವು ನಮ್ಮ ಸಂಘಕ್ಕೆ "ವಿದ್ಯಾನಿಧಿ "ಯನ್ನು ಸ್ಥಾಪಿಸಲು  ಸಹಾಯವಾಗುವುದಲ್ಲದೆ  ಅರ್ಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶೈಕ್ಷಣಿಕ  ಜೀವನಕ್ಕೆ ಅನುಕೂಲವಾಗುತ್ತದೆ .ಆದ್ದರಿಂದ ಸಹೃದಯಿಗಳಾದ ತಾವುಗಳು ಈ ನಿಟ್ಟಿನಲ್ಲಿ ದೇಣಿಗೆ ರೂಪದಲ್ಲಿ ಅಥವಾ ಜಾಹಿರಾತು ರೂಪದಲ್ಲಿ ಸಹಾಯವನ್ನು ಮಾಡಬೇಕಾಗಿ ಮತ್ತೊಮ್ಮೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ .
ಟಿಕೆಟ್ ಧರ:
ಸಾಮಾನ್ಯ ಪ್ರವೇಶ :250 ರೂಪಾಯಿ (ಒಬ್ಬರಿಗೆ ಪ್ರವೇಶ )
ಗೌರವ ಪ್ರವೇಶ :1000  ರೂಪಾಯಿ (ಇಬ್ಬರಿಗೆ ಪ್ರವೇಶ )
ದೇಣಿಗೆ ನೀಡುವವರು ನಮ್ಮ ಸಂಘದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ಸಂಘದ ಸದಸ್ಯರಿಗೆ ತಿಳಿಸಬಹುದು .

ಬ್ಯಾಂಕ್ ಖಾತೆಯ ವಿವರ :
account name :devadiga navodaya sangha bangalore 
Acc  No :50205029232
ifsc: ALLA0212867
Bank :Allahabad  Bank

ಟಿಕೆಟಿಗಾಗಿ ಸಂಪರ್ಕಿಸಿ :
ಚರಣ್ ಬೈಂದೂರ್ :9964605360
ಸುಧೀರ್ ದೇವಾಡಿಗ :9886640428

ಧನ್ಯವಾದಗಳೊಂದಿಗೆ
ದೇವಾಡಿಗ ನವೋದಯ ಸಂಘ (ರಿ ) ಬೆಂಗಳೂರು

No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...