Friday, 6 October 2017

ಮಹಾರಾಸ್ಟ್ರದಲ್ಲಿ ಬಿಜೆಪಿ ಅವಸರವಾದಿತನದಲ್ಲಿದೆಯೇ ?

ಮಾನ್ಯರೇ
  ಮಹಾರಾಸ್ಯ್ರದಲ್ಲಿ ಬಿಜೆಪಿ ಭ್ರಸ್ಟಾಚಾರ ರಹಿತ ಮತ್ತು ಜನ  ಹಿತ ಆಳ್ವಿಕೆ ನೀಡಿದರೆ ಖಂಡಿತವಾಗಿಯೂ ಇನ್ನೊOದು ಬಾರಿ ಭಾರೀ ಬಹುಮತದ ಮೂಲಕ ಆಧಿಕಾರ ಗದ್ದುಗೆಗೆ ಏರಬಹುದು.ಅದುಬಿಟ್ಟು ನಾರಾಯಣ ರಾಣೆಯವರನ್ನು ಎನ್ ಡಿ ಎ ಕೂಟಕ್ಕೆ ಬರಮಾಡುವುದರಿOದ ಲಾಭಕ್ಕಿOತ ನಸ್ಟವೇ ಹೆಚ್ಚು. ಶ್ರೀ ನಾರಾಯಣ ರಾಣೆಯವರು ಈಗ ಮೊದಲಿನಂತೆ ತನ್ನ ಪ್ರಾಭಲ್ಯವನ್ನು ಕೊOಕಣ ವಿಭಾಗದಲ್ಲಿ ಉಳಿಸಿಕೊOಡಿಲ್ಲ ಎOಬುದು ಕಳೆದ ಸಲದ ಚುನಾವಣೆಯಿOದ ಸಾಭೀತಾಗಿದೆ.ಅವರೂ ಸೋತದ್ದು ಮಾತ್ರವಲ್ಲ,ಅವರ ಮಗ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು.ಅವರು ಒಂದು ಕಾಲದಲ್ಲಿ ಶಿವಸೇನೆ ಬಿಡುವಾಗ ಅವರ ಜೊತೆಗೇ ಕೋಂಗ್ರೇಸ್ಸ್ ಸೇರಿದ್ದ ಅವರ ಅನುಯಾಯಿ ವಿಧಾನಸಭಾ ಸದಸ್ಯರುಗಳು ಈಗ ಅವರ ಜೊತೆಗಿಲ್ಲ.ಹೆಚ್ಚಿನವರು ಪುನಃ ಶಿವಸೇನೆಗೆ ವಾಪಾಸಾಗಿದ್ದರೆ ಕೆಲವರು ಕಾಂಗ್ರೇಸ್ ನಲ್ಲಿ ಉಳಿದಿದ್ದಾರೆ. ಮೊನ್ನೆ ಶ್ರೀ ರಾಣೆ ಮತ್ತು ಅವರ ಮಕ್ಕಳು ಕೊOಕಣದಲ್ಲಿ ಕರೆದಿದ್ದ ಸಮಾವೇಷದಲ್ಲಿ  ಪರೇಲ್ ಶಾಸಕರಾದ ಶ್ರೀ ಕೋಲOಬಕರ್ ಸಹ ಭಾಗವಹಿಸಲಿಲ್ಲ. ಅವರೂ ಸಹ ನೇರಾವಾಗಿ ಬಿಜೆಪಿ ಗೆ ಸೇರಿದರೆ ಆಶ್ಚರ್ಯ ಪಡಬೇಕಿಲ್ಲ. ಶ್ರೀ ರಾಣೆಯವರಿಗೆ ಅವರ ಅನುಯಾಯಿಗಳಿಗಿOತ ಅವರ  ಮಕ್ಕಳ ರಾಜಕೀಯ ಭವಿಷ್ಯ ಮುಖ್ಯ.ಹಾಗಾಗಿ ಆವರ ಅನುಯಾಯಿಗಳ ಸಂಖ್ಯೆ ಇಳಿಮುಖವಾಗುತ್ತಾ ಹೋಯಿತು.ಕರ್ನಾಟಕದಲ್ಲಿ ಶ್ರೀ ಎಸ್ ಎಮ್ ಕೃಷ್ಣರವರನ್ನು ಈ ಇಳಿ ವಯಸ್ಸಿನಲ್ಲಿ ತನ್ನ ಪಕ್ಷಕ್ಕೆ ಸೇರಿಸಿಕೊOಡು ಬಿಜೆಪಿ  ಸಾಧಿಸಿದ್ದಾದರೂ ಏನು ? ಎಲ್ಲಾ ರಾಜಕೀಯ ಸವಿಯನ್ನು ಶ್ರೀ ಎಸ್ ಎಮ್ ಕೃಷ್ಣರು ಕಾಂಗ್ರೇಸ್ಸ ನಲ್ಲಿ ಉಂಡು ಕೊನಗೆ ಇಳಿ ವಯಸ್ಸಲ್ಲಿ ಬಿಜೆಪಿ ಗೆ ಹೋದರೆ ಜನ ಖಂಡಿತಾ ಬೆOಬಲಿಸಲಾರರು.ಕೊನೆ ಪಕ್ಷ  ಎಸ್ ಎಮ್ ಕೃಷ್ಣರು ತನ್ನ ಅಳಿಯನನ್ನು ಆದಾಯ ತೆರಿಗೆ ಇಲಾಖೆಯ ದಾಳಿಯಿಂದ ರಕ್ಷಿಸಿಕೊಳ್ಳಲಾಗಲಿಲ್ಲ.ಉಪ್ಪು ತಿಂದವ ನೀರು ಕುಡಿಯಲೇ ಬೇಕು.ಅಂತೆಯೇ ಮಹಾರಾಸ್ಟ್ರ ದಲ್ಲಿ ಇಂದು ಬಿಜೆಪಿಗೆ ಉತ್ತಮ ಅವಕಾಶವಿದೆ. ಇಲ್ಲಿ ಈಗ ಇರುವ ರೈಲ್ವೆಯ ವ್ಯವಸ್ಥೆಯನ್ನು ಉತ್ತಮ ದರ್ಜೆಗೆ ಏರಿಸುವ ಮೂಲಕ ಜನತೆಯನ್ನು ಸ್ಪಂದಿಸುವುದನ್ನು ಬಿಟ್ಟು ವಿಶ್ವ ಬ್ಯಾOಕ್ ಸಾಲ ನೀಡುತ್ತದೆ ಎOದು ಬುಲ್ಲೆಟ್ ಟ್ರೈನ್ ಈಗಂತೂ ಖಂಡತಾ ಭಾರತೀಯರಿಗೆ ಬೇಡ. ಇರುವ ಕೊOಕಣ ರೈಲ್ವೆಯ ಅವಸ್ಥೇ ಮಹಾರಾಸ್ಟ್ರ ಮತ್ತು ಕನ್ನಡಿಗರಿಗೆ ಗೊತ್ತು. ಅದು ಬಿಟ್ಟು ಬಡ ಗಂಗಮ್ಮನ ಜುಟ್ಟಿಗೆ ಮಲ್ಲಿಗೇ ಏರಿಸುವ ಹುOಬತನ ಬೇಡವೇ ಬೇಡ ಏಕೇಂದರೆ ನಮ್ಮ ಮುOಬಯಿ ಯ ಮಧ್ಯ, ಪಶ್ಚಿಮ, ಹಾರ್ಬರ್ ಲೋಕಲ್ ರೈಲ್ವೆಯಿಂದ ಬರುವ ಆದಾಯ ಇಲ್ಲಿನ ರೈಲ್ವೆ ಯ ಸುಧಾರೀಕರಣಕ್ಕಾಗಿ ಉಪಯೋಗವಾಗದೆ ಇಡೀ ದೇಶಕ್ಕೆ ಸೇರಿಹೋಗುತ್ತಿದೆ.ಕಳೆದ ಮೂರ್ನಾಲ್ಕು ತಿOಗಳಿನಿOದ ದೇಶದಲ್ಲಾಗುತ್ತೀರುವ ರೈಲ್ವೆ ಅಫಘಾತಗಳಿಗೆ ಕಾರಣಗಳೇನು ? ಅದರ ಸುಧಾರೀಕರಣ ಮಾಡದೆ ಬುಲೆಟ್ ಟ್ರೈನ್ ಹಿOದೆ ಬಿಜೆಪಿ ಮೂತೂವರ್ಜಿ ವಹಿಸಿದರೆ ಖಂಡಿತವಾಗಿಯೂಁ ಮುOದಿನ ಚುನಾವಣೆಯಲ್ಲಿ ಇದು ಬಿಜೆಪಿ ಗೆ ಮಾರಕವಾಗಬಹುದು.ಇತ್ತ ಮಹಾರಾಸ್ಟ್ರ ರಾಜಕಾರಣದಲ್ಲಿ ಕಾಂಗ್ರೇಸ್ ನಲ್ಲಿ ಜನಾರ್ಶಕ ನಾಯಕರುಗಳಿಲ್ಲ.ಇರುವ ಶ್ರೀ ಅಶೋಕ್ ಚವಾಣ್ ಗೆ ಆದರ್ಶ ಹಗರಣ ಬಿಗಿ ಆದರೆ ಅಲ್ಲಿಗೆ ಕಾಂಗ್ರೇಸ್ ಕತೆ ಮುಗಿದಂತೆ.ಇನ್ನು ಎನ್ ಸಿ ಪಿ  ಶ್ರೀ ಶರದ್ ಪವಾರ್ ಅವರOತೆ ವಯಸ್ಸಾಗದಿದ್ದರೂ , ವಯಸ್ಸಾದಂತೇ ಬಳಲಿ ಬೆOಡಾದಂತೆ ಕಾಣುತ್ತಿದೆ.ಮನಸೆ ಯ ರಾಜ್ ಠಾಕ್ರೆ ಪರ ಪ್ರಾಂತಿಯ ಧ್ವೇಷ ರಾಜಕಾರಣ ಬಿಟ್ಟು ಅಭಿವ್ರದ್ದಿ ಮಂತ್ರ ದತ್ತ ಗಮನ ಹರಿಸಿದರೆ ನಿಜವಾಗಿಯೂಁ ಒಂದು ಪ್ರಮುಖ ರಾಜಕೀಯ ಪಕ್ಷವಾಗಿ ಹೊರ ಹೊಮ್ಮಬಹುದು.ಇಂತಹ ಸಂಕೀರ್ಣ ಕಾಲದಲ್ಲಿ ಮಹಾರಾಸ್ಟ್ರದಲ್ಲಿನ ಬಿಜೆಪಿ  ಹಲವಾರು ವರ್ಷಗಳಿOದ ತನ್ನ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರುಗಳಿಗೆ ಅವಕಾಶ ಕೊಡದೆ ಬೇರೆ ಪಕ್ಷದವರನ್ನು ಪಕ್ಷದವರನ್ನು ಕರೆತಂದು ಮಣೆ ಹಾಕಿದರೆ ಅದು ತನ್ನ ಕಾಲ ಮೇಲೆ ಕೊಡಲಿ ಹಾಕಿಕೊOಡOತೆ ಅಲ್ಲವೇ ?
ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...