ಪುಣೆ : ದೇವಾಡಿಗ ಸಂಘ ಪುಣೆ (ರಿ )ಇದರ ವತಿಯಿಂದ ಸಮಾಜಬಾಂಧವ ಮಹಿಳೆಯರಿಗಾಗಿ ಆಯೋಜಿಸಿದ ಅರಸಿನ ಕುಂಕುಮ ಕಾರ್ಯಕ್ರಮವು ಜ ೨೧ ರಂದು ನಗರದ ಸ್ವಾರ್ ಗೇಟ್ ನಲ್ಲಿರುವ ಜಯಶ್ರೀ ಸಭಾಂಗಣದಲ್ಲಿ ನಡೆಯಿತು . ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಮಹಿಳೆಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು .ಗೀತಾ ಮಹಾಬಲ ದೇವಾಡಿಗ ,ಅಮಿತಾ ಸುಕೇಶ್ ದೇವಾಡಿಗ ಮತ್ತು ಶಶಿಕಾಂತಿ ನರಸಿಂಹ ದೇವಾಡಿಗ ಪ್ರಾರ್ಥಿಸಿದರು . ಶಿಲ್ಪಾ ಸಚಿನ್ ದೇವಾಡಿಗ ,,ವಸಂತಿ ಪುರಂದರ ದೇವಾಡಿಗ ,ರೇಖಾ ಅಜಯ್ ದೇವಾಡಿಗ ,ಯಶೋಧಾ ಸುರೇಶ ಶ್ರೀಯಾನ್ ಮತ್ತು ಉಷಾ ವಿಜಯ್ ಮೊಯಿಲಿ ಮತ್ತು ಸದಸ್ಯೆಯರು ಸೇರಿದ್ದ ಮಹಿಳೆಯರಿಗೆ ಅರಸಿನ ಕುಂಕುಮ ಹಚ್ಚಿ ,ನೆನಪಿನ ಕಾಣಿಕೆಗಳನ್ನು ನೀಡಿ ಶುಭ ಹಾರೈಸಿದರು .
ಕಾರ್ಯಕ್ರಮದಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಪ್ರಭಾಕರ ಜಿ ದೇವಾಡಿಗ ,ಗೌರವ ಸಲಹಾಗಾರರಾದ ನರಸಿಂಹ ದೇವಾಡಿಗ ,ಅಧ್ಯಕ್ಷರಾದ ಸಚಿನ್ ದೇವಾಡಿಗ ,ಕೋಶಾಧಿಕಾರಿ ಸುರೇಶ್ ಶ್ರೀಯಾನ್ ,ಪದಾಧಿಕಾರಿಗಳಾದ ಸುಧಾಕರ ದೇವಾಡಿಗ ,ನವೀನ್ ದೇವಾಡಿಗ ,ಜಗದೀಶ್ ದೇವಾಡಿಗ ,ನಾರಾಯಣ ದೇವಾಡಿಗ ,ಸತೀಶ್ ದೇವಾಡಿಗ ,ಉದಯ ದೇವಾಡಿಗ ,ಸಂತೋಷ್ ದೇವಾಡಿಗ ,ಪುರಂದರ ದೇವಾಡಿಗ ,ವಿಠಲ್ ದೇವಾಡಿಗ ,ಜನಾರ್ಧನ್ ದೇವಾಡಿಗ ,ಯಶವಂತ ದೇವಾಡಿಗ ,ಲತಾ ದೇವಾಡಿಗ ಮತ್ತು ವಸಂತಿ ದೇವಾಡಿಗ ಉಪಸ್ಥಿತರಿದ್ದರು . ಪ್ರಿಯಾ ಹೆಚ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು . ಕಾರ್ಯಕ್ರಮದ ಕೊನೆಗೆ ಲಘು ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು .
No comments:
Post a Comment