Monday, 21 August 2017
ದೇವಾಡಿಗ ಸಂಘ (ರಿ)ಉಪ್ಪುಂದ ಇದರ ವಾರ್ಷಿಕೋತ್ಸವ ಸತ್ಯನಾರಾಯಣ ಪೂಜೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಂಸ್ಕ್ರತಿಕ ಸಮಾರಂಭ
ಮುಖ್ಯ ಅತಿಥಿಗಳಾಗಿ ಮೋಹನ್‌ದಾಸ್ ಹಿರಿಯಡ್ಕ,ಮುಂಬ್ಯೆ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ, ವಾಸು ಎಸ್ ದೇವಾಡಿಗ,ಶೀನ ದೇವಾಡಿಗ ಕದO ದುಬೈ ಎಸ್.ಡಿ.ಎಮ್.ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ! ದೇವರಾಜ ಕಂಕನಾಡಿ,
ಶ್ರೀಮತಿ ಗೌರಿ ದೇವಾಡಿಗ
ಜಿಲ್ಲಾಪಂಚಾಯತ್ ಸದಸ್ಯರು ಉಡುಪಿ,
ಶ್ರೀ ಗಣೇಶ್ ದೇವಾಡಿಗ ಸಾಪ್ಟವೇರ್ ಆರ್ಕಿಟೇಕ್ಟ ಬೆOಗಳೂರು,ಸುಧಾಕರ್ ದೇವಾಡಿಗ ಉದ್ಯಮಿಗಳು ಧಾರವಾಡ, ಚೆನ್ನಪ್ಪ ಮೊಯಿಲಿ CEO ತಾಲೂಕು ಪಂಚಾಯತ್ ಕುಂದಾಪುರ,
ಮಹಿಳಾ ಘಟಕದ ಅದ್ಯಕ್ಷರಾದ ನಾಗಮ್ಮ ದೇವಾಡಿಗ,ಶಾರದಾ ದೇವಾಡಿಗ ಚಿತ್ರಾಡಿ ನಾಗೂರು, ಶ್ರೀ ಜಗದೀಶ್ ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ಕುಂದಾಪುರ,ಶ್ರೀಮತಿ ಪ್ರಮೀಳಾ ಕೆ ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ಕುಂದಾಪುರ,ಶ್ರೀ ರಾಮ ದೇವಾಡಿಗ ಇಂಜಿನಿಯರ್ BSNL,ವೆOಕ್ಟಯ್ಯ ದೇವಾಡಿಗ ನೇತ್ರಾವತಿ ಗ್ರಾಮೀಣ ಬ್ಯಾOಕ್,ಮಿಲಿಟರಿ ಸುಬ್ಬ ದೇವಾಡಿಗ ನಾಯ್ಕನಕಟ್ಟೆ,ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟಿಯಾದ ನರಸಿOಹ ದೇವಾಡಿಗ,ಜನಾರ್ಧನ ದೇವಾಡಿಗ,ಮಾತೃಶ್ರೀ ಸಭಾಭವನದ ಮಾಲಕರಾದ ಅರೆಹಾಡಿ ಮಂಜು ದೇವಾಡಿಗ ಸಂಘದ ಸರ್ವ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷರಾದ ಜನಾರ್ಧನ ಎಸ್ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಾಧಕರಾದ ಅಂತರರಾಷ್ಟ್ರೀಯ ಕ್ರೀಡಾಪಟು ಜಯಂತಿ ಎಮ್ ದೇವಾಡಿಗ,ಅಂತರರಾಷ್ಟ್ರೀಯ ಕರಾಟೆಯಲ್ಲಿ ಕಂಚಿನ ಪದಕ ಪಡೆದ ವಿಶ್ವನಾಥ ದೇವಾಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರೆಸ್ಟಿಯಾದ ಅಂಬಿಕಾರಾಜು ದೇವಾಡಿಗ ಕುಂದಾಪುರ ಕ್ರಷಿ ಉತ್ಪನ್ನ ಮಾರುಕಟ್ಟೆ ಸದಸ್ಯರಾದ ಮಂಜು ದೇವಾಡಿಗ ಬಿಜೂರು,
ರಾಷ್ಟ್ರಮಟ್ಟದ ಯೋಗಪಟು ನಿವೇದಿತಾ ನಾಯ್ಕನಕಟ್ಟೆ
2016-17 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ರಕ್ಷಿತಾ ದೇವಾಡಿಗ,ಜಯಲಕ್ಷ್ಮಿ ದೇವಾಡಿಗ,ಸವಿನಯ ದೇವಾಡಿಗ ದೀಪಾ ದೇವಾಡಿಗ,ಮೊದಲಾದವರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ 2016-17 ಸಾಲಿನಲ್ಲಿ 80 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.ರಾಮಚಂದ್ರ ದೇವಾಡಿಗ ಸ್ವಾಗತಿಸಿದರು.ಉಪನ್ಯಾಸಕಿ ಶ್ರೀಮತಿ ಶ್ರೀಲತಾ ಚಂದ್ರ ಕೆ ದೇವಾಡಿಗ ,ಶಿಕ್ಷಕರಾದ ನಾರಾಯಣರಾಜು,ರವೀಂದ್ರ ದೇವಾಡಿಗ ಮಂಜುನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರಾದ ರಾಮಕೃಷ್ಣ ದೇವಾಡಿಗ ವರದಿವಾಚನಗೈದರು,ಜೆ ನಾರಾಯಣ ದೇವಾಡಿಗ ವಂದಿಸಿದರು.ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನರಸಿOಹ ದೇವಾಡಿಗ KRCL ನಿರ್ವಹಿಸಿದರು
ಸುಮಾರು 2500 ಕ್ಕೂ ಮಿಕ್ಕಿ ದೇವಾಡಿಗ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು
Wednesday, 16 August 2017
Monday, 14 August 2017
ಕರಾಟೆ ಪಂದ್ಯಾಟದಲ್ಲಿ ಕನಾ೯ಟಕದ ಪರವಾಗಿ ಕಂಚಿನ ಪ್ರಶಸ್ತಿ.
ನಮ್ಮ ಉಪ್ಪುಂದದ ವಿಶ್ವನಾಥ ದೇವಾಡಿಗ ಅವರು ಇಂದು
ನವದೆಹಲಿಯಲ್ಲಿ ನಡೆದ ಕರಾಟೆ ಪಂದ್ಯಾಟದಲ್ಲಿ ಕನಾ೯ಟಕದ ಪರವಾಗಿ ಕಂಚಿನ ಪ್ರಶಸ್ತಿ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ
Wednesday, 9 August 2017
ಅಲೆವೂರು ನಿವಾಸಿ ತೋಗ್ಗು ಸೇರಿಗಾರ ರ ಮನೆಯು ಕುಸಿದು ಅತೀಹೆಚ್ಚಿನ ನಷ್ಟವಾಗಿದ.
ದಿನಾಂಕ.5.08.2017 ರ ರಾತ್ರಿ 1ಗಂಟೆಯ ಹೊತ್ತಿಗೆ ನಮ್ಮ ಸಮಾಜದ ಕಡು ಬಡವರಾದ ಅಲೆವೂರು ನಿವಾಸಿ ತೋಗ್ಗು ಸೇರಿಗಾರ ರ ಮನೆಯು ಕುಸಿದು ಅತೀಹೆಚ್ಚಿನ ನಷ್ಟವಾಗಿದೆ(ತಾಯಿ ಏಕನಾಥೇಶ್ವರಿ ಅನುಗ್ರಹದಿಂದ ಯಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ)ಇವರ ನೋವಿಗೆ ಸ್ಪಂದಿಸಿದ ಉಡುಪಿ ದೇವಾಡಿಗರ ಸೇವಾ ಸಂಘದ ವತಿಯಿಂದ ರೂ. 10000 ನ್ನು ಸಂಘದ ಅಧ್ಯಕ್ಷರಾದ ಶ್ರೀ.ಕೆ ಸೀತಾರಾಮ್ ದೇವಾಡಿಗ ಮತ್ತು ಪದಾಧಿಕಾರಿಗಳು ಸೇರಿ ದಿನಾಂಕ:-07.08.2017 ರಂದು ನೆರವನ್ನು ನೀಡಿದರು. ಈ ಬಗ್ಗೆ ನೆರವು ನೀಡಬಯಸುವ ಸಮಾಜ ಬಾಂಧವರು ನಮ್ಮ ಸಂಘವನ್ನು ಸಂಪರ್ಕಿಸಬೇಕಾಗಿ ವಿನಂತಿ.
Saturday, 5 August 2017
ಮತ್ತೆ ಬಂದಿದೆ ಸ್ವಾತಂತ್ರ್ಯೋತ್ಸವದ ದಿನ
ಭಾರತ ಸ್ವತಂತ್ರಗೊOಡು 70 ವರ್ಷಗಳಾಗುತ್ತಿದೆ.ಇಡೀ ದೇಶ ಆಚರಣೆಗಾಗಿ ಸದ್ದಾಗುತ್ತಿದೆ.ಆದರೆ ನನಗೇಕೋ ಈ ಆಚರಣೆಗಳು ಇತ್ತೀಚಿನ ವರ್ಷಗಳಲ್ಲಿ ಬರೇ ಡOಬಾಚಾರಕ್ಕಾಗಿ, ತೋರಿಕೆಗಾಗಿ ಆಚರಿಸಲಾಗುತ್ತಿದೆ ಅನಿಸುತ್ತಿದೆ.ಆ ದಿನ ಮಾತ್ರ ಎಲ್ಲಿ ನೋಡಿದರಲ್ಲಿ ದೇಶ ಭಕ್ತಿ ಹಾಡುಗಳು,ಅಖಂಡ ಭಾರತದ ಬಗ್ಗೆ ದೇಶ ಪ್ರೇಮದ ಬಗ್ಗೆ ದೊಡ್ದ ದೊಡ್ದ ಭಾಷಣಗಳು,ಘೋಷಣೆಗಳು ಕೇಳಿ ಬರುತ್ತದೆ.ಜನರು ಹಾಗೂ ದೊಡ್ದ ಮನುಷ್ಯರು ಸಿಹಿ ತಿOದು ಓOಡಸ್ಟ್ ಗಪ್ಪ ಹೊಡೆದು ಮನೆ ಸೇರಿ ಬಿಡುತ್ತಾರೆ.ಅವತ್ತಿನ ಹೇಳಿದ ಕೇಳಿದ ಭಾಷಣವನ್ನು ಕೇಳಿದವರು ಹೇಳಿದವರು ಅದರಂತೆ ನಡೆಯುತ್ತಾರೆಯೇ ಎOಬುದೇ ಯಕ್ಷ ಪ್ರೆಶ್ನೆ ?
ಭಂಧುಗಳೆ ಅಖಂಡ ಭಾರತ, ನಾವೆಲ್ಲ ಒಂದೇ,ನಾವೆಲ್ಲ ಭಾರತೀಯರು,ಏಕತೆಯಲ್ಲಿ ಸಾಗಬೇಕು ಎOದು ಬೊಬ್ಬಿಡುವ ಜನ ಇವತ್ತಿನ ತನಕ ರಾಜ್ಯ ರಾಜ್ಯಗಳ ಗಡಿಗಾಗಿ ಹೋರಾಟ ನಡೆಸುತ್ತಾ ಅದನ್ನು ಅವರ ಬದುಕಾಗಿ ರೂಪಿಸಿಕೊOಡು ಜನ ಸಾಮಾನ್ಯರ ನೆಮ್ಮದಿಗೇ ಕೊಳ್ಳಿ ಇಟ್ಟಿದ್ದಾರೆ. ಬೆಳಗಾವಿಯಲ್ಲಿ ಎಮ್ ಈ ಎಸ್ ನ ಪುಂಡಾಟಿಕೆ ಇನ್ನೂ ನಿಂತಿಲ್ಲ.ಮುOಬೈಯಲ್ಲಿ ಶಿವಸೇನೆ ಮತ್ತು ಮನಸೇ ಪಕ್ಷಗಳು ಪರಪ್ರಾಂತಿಯರನ್ನು ಹೇಗೆ ಯಾವ ರೀತಿ ನಡೆಸಿಕೊಳ್ಳುತ್ತಿದೆ ಅಂತ ಅಲ್ಲಿನ ಪರಪ್ರಾಂತಿಯರಿಗೇ ಗೊತ್ತು.ಮೊನ್ನೆ ಕರ್ನಾಟಕದ ಬೆOಗಳೂರಲ್ಲಿ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಕನ್ನಡ ಇಂಗ್ಲಿಷ್ ಜೊತೆ ರಾಸ್ಯ್ರ ಭಾಷೆ ಹಿOದಿ ಭಾಷೆಯನ್ನೂ ಬರೆಸಿದ್ದರು.ಆದರೆ ಅಲ್ಲಿನ ಮುಖ್ಯಮಂತ್ರಿಯಾಗಿ ಹಿಡಿದು ಕನ್ನಡಪರ ಸಂಘಟನೆಗಳು ಅದನ್ನು ಪ್ರತಿಭಟಿಸಿ ಹಿOದಿ ಭಾಷೆಯಲ್ಲಿ ಬರೆದದ್ದನ್ನು ತೇಗೇಸಿಯೇ ಬಿಟ್ಟರು. ಅದು ಅಲ್ಲಿದ್ದರೇ ಆಗುವ ತೊOದರೆ ಏನೆOದು ಆ ಮೂರ್ಖರಿಗೆ ಗೊತ್ತು. ಕರ್ನಾಟಕದಾದ್ಯಂತ ಪ್ರದರ್ಶನಗೊಳ್ಳುತ್ತಿರುವ ಹಿOದಿ ಚಲನಚಿತ್ರಗಳ ಪ್ರದರ್ಶನವನ್ನು ಇವರು ನಿಲ್ಲಿಸಿಯಾರೇ ? ಅಲ್ಲಿ ಹಿOದಿ ಓಕೆ.ಆದರೆ ಮೆಟ್ರೋ ನಿಲ್ದಾಣದಲ್ಲಿ ಬೇಡ.ಇವರ ಚಿಂತನಾ ಶಕ್ತಿ ಎಸ್ಟು ಬಾಲಿಶತನದ್ದು ಎOದು ದೇಶವೇ ನಿರ್ದರಿಸಬೇಕು.ಅಖಂಡ ಭಾರತದ ಪರಿಕಲ್ಪನೆ ಇಂತವರಿOದ ನಿರೀಕ್ಷಿಸಲು ಸಾದ್ಯವೇ ? ಕೇರಳ ,ತಮಿಳುನಾಡಿನಲ್ಲಿ ಪರಿಸ್ಥಿತಿ ಇದಕ್ಕಿOತ ಭಿನ್ನವಾಗಿಲ್ಲ. ರಾಷ್ಟ್ರಭಾಷೆಯ ಮೇಲಿಲ್ಲದ ಅಭಿಮಾನ ಜನರಿಗೇ ರಾಷ್ಟ್ರಾಭಿಮಾನ ರಾಷ್ಟ್ರ ಪ್ರೇಮ ಎಲ್ಲಿOದ ಬಂದೀತು ? ನೀವೇ ಹೇಳಿ ? ಇವರಿಗೇ ರಾಷ್ಟ್ರಾಭಿಮಾನ, ಅಖಂಡ ಭಾರತದ ಬಗ್ಗೆ, ಭಾರತೀಯತೆ ಬಗ್ಗೆ ಮಾತನಾಡಲು ಅರ್ಹತೆ ಇದೆಯೇ ಎOದು ದೇಶಾಭಿಮಾನಿಗಳು ಚಿಂತಿಸಬೇಕಿದೆ. ದೇಶದ ತಲೆ ಅಂತಿರುವ ಕಾಶ್ಮೀರ ಇಂದು ಹೊತ್ತಿ ಉರಿಯುತ್ತಿದೆ,ಕಾಶ್ಮೀರದ ಜನತೆಗೆ ನಿಜವಾಗಿಯೂ ಏನು ಬೇಕಿದೆ ಅನ್ನುವ ಅOಶವನ್ನು ಸ್ವತಂತ್ರ್ಯಾ ನಂತರ ಅಧಿಕಾರ ಹಿಡಿದವರು ಅರಿಯುವ ಪ್ರಯತ್ನ ಮಾಡಿದ್ದಾರೆಯೇ ಏOಬುದು ಈ ತನಕ ಯಾರೂ ಅರಿಯರು.ಈವರೆಗೂ ಜನರ ಮಾರಣ ಹೋಮ ನಡೆಯುತ್ತಾ ಬOದಿದೆ.ಇದರ ಪರಿಹಾರ ಆ ಭಗವOತನೇ ಬಲ್ಲ.ದೇಶದ ಭ್ರಶ್ಟಾಚಾರ ಮಿತಿಮೀರಿದೆ. ಜಾತಿ ಧರ್ಮಗಳು ಎನ್ನುತ್ತಾ ಒಂದೆಡೇ ಜನತೆ ಕಚ್ಚಾಡಿಕೊOಡು ಸಾಯುತ್ತಿದ್ದಾರೆ.ಸ್ಠ್ರೀ ಭ್ರೂಣ ಹತ್ಯೆ ಹೆಚ್ಚಿದೆ. ದೇಶದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಹತ್ಯೆ ಮೇರೆ ಮೀರಿದೆ.ಮಂಗಳೂರಿನ ಕಾವ್ಯಳ ಸಾವಿನ ಬಗ್ಗೇ ಸ್ಥಿತಿವಂತ ಜನ ಅವಳ ಅದರ ಸತ್ಯಶೋಧನೆಗಾಗಿ ನಿಲ್ಲಬೇಕಿತ್ತು ಆದರೆ ಅದರ ಮುಖ್ಯಸ್ಠ ಆಳ್ವರ ಪರವಾಗಿ ಬ್ರಹತ್ ಮೋರ್ಚ ಕರೆದಿರುವುದು ವಿಧ್ಯಾವಂತರ ನಾಡಿನ ದೊಡ್ದ ದುರಂತ.ಕಾಯಿದೆ ಕಾನೂನು ಎನ್ನುತ್ತಾ ಮಾತಿನ ಮಲ್ಲರ ವಾದಕ್ಕೆ ಸತ್ಯ ಸೋತು ಅನ್ಯಾಯ ಸ್ವತಂತ್ರ ಭಾರತದಲ್ಲಿ ಗಹಗಹಿಸಿ ನಗುತ್ತಿದೆ. ಆದರೂ ಸ್ವಾತಂತ್ರ್ಯೋತ್ಸವದ ಒಂದು ದಿನ ಮಾತ್ರ ಭಾಷಣಕಾರರ ಮತ್ತು ಕೇಳುಗರ ದೇಶಪ್ರೇಮ ಉಕ್ಕಿ ಹರಿವ ಅಲೆಗಳಲ್ಲಿ ಬಡ ಜನತೆ ಕೊಚ್ಚಿ ಹೋಗುತ್ತಿರುವುದನ್ನು ನೋಡುವಾಗ ನನಗೆ ನೆನಪಾಗುತ್ತದೆ ಅದೇ ಹಳೇ ಹಾಡು " ನ್ಯಾಯ ಎಲ್ಲಿದೆ ? ನ್ಯಾಯ ಎಲ್ಲಿದೆ ? .ಆದರೂ ಮತ್ತೆ ಮತ್ತೆ ಬರುತ್ತಿದೆ ಸ್ವಾತಂತ್ರ್ಯೋತ್ಸೊವ. ದೇಶಪ್ರೇಮ, ದೇಶಾಭಿಮಾನ,ಮಾನವತೆ ಮರೀಚಿಕೇಯಾಗುತ್ತಿದೆ. ಪ್ರಜಾಪ್ರಭುತ್ವದ ಹೆಸರಲ್ಲಿ ,ಸ್ವಾತಂತ್ರ್ಯದ ಹೆಸರಲ್ಲಿ ಸರ್ವಾಧೀಕಾರ ಅರಾಜಕತೆ ಪರೋಕ್ಷವಾಗಿ ತಾಂಡವವಾಡುತ್ತಿದೆ ಅಂದರೆ ತಪ್ಪಲ್ಲವೆಲ್ಲವೇ ?
ಏನಂತೀರಿ ?
ಗಣೇಶ್ ಶೇರಿಗಾರ್
ವಾಶಿ ನವಿ ಮುOಬೈ
9594228684
Wednesday, 2 August 2017
ಅತ್ತೆಗೊOದು ಕಾಲ ಸೊಸೆಗೊOದು ಕಾಲ
ವೇದಗಳು ಸುಳ್ಳಾಗಬಹುದು ಆದರೆ ಗಾದೆಗಳು ಸುಳ್ಳಾಗುವುದಿಲ್ಲ ಎ Oಬ ಹಿರಿಯರ ಮಾತು ಇಂದಿಗೂ ಪ್ರಸ್ತುತ.ಹಿOದೆ ಕೇOದ್ರದಲ್ಲಿ ಕಾಂಗ್ರೇಸ್ ಅಧಿಕಾರದಲ್ಲಿದ್ದಾಗ ಅಡ್ಡಮತದಾನದ ಹೆದರಿಕೆ ಬಿಜೆಪಿಗಿತ್ತು. ಅದು ಎಲ್ಲಿಯ ತನಕ ಇತ್ತೇಂದಂದರೇ ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರನ್ನೇ ತನ್ನ ಕಂಟ್ರೋಲ್ ಗೆ ತೆಗೆದುಕೋOಡು ಅವರನ್ನೇ ಕೆ ಜೆ ಪಿ ಸ್ಥಾಪಿಸುವುದರ ಮೂಲಕ ಬಿಜೆಪಿ ಗೆ ದೊಡ್ದ ಹೋಡೇತವನ್ನೇ ಕಳೆದ ವಿಧಾನ ಸಭೆ ಚುನಾವಣೆ ಯಲ್ಲಿ ಕೊಟ್ಟದ್ದನ್ನು ಜನತೆ ಮರೆತಿಲ್ಲ.ಶ್ರೀ ಯಡಿಯೂರಪ್ಪನಂತವರೆ ಕಾಁಗ್ರೇಸ್ಸ ನ ಚದುರಂಗದಾಟಕ್ಕೆ ಬಲಿ ಬಿದ್ದಿದ್ದರು.ಆದರೆ ಇಂದು ಬಿಜೆಪಿ ಕೇOದ್ರದಲ್ಲಿ ಅಧಿಕಾರದಲ್ಲಿದೆ.ಗುಜರಾತ್ ನ 44 ಕ್ಕೂ ಹೆಚ್ಚು ಶಾಸಕರು ಬಿ ಜೆ ಪಿ ಯ ಹೆದರಿಕೆಯಿಂದ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ.ರಾಜ್ಯಸಭೆ ಸದಸ್ಯರ ಆಯ್ಕೆಗಾಗಿ ಅಡ್ಡ ಮತದಾನ ಮಾಡುವರೆOಬ ಹೆದರಿಕೆಯಿಂದ 44 ಕ್ಕೂ ಹೆಚ್ಚು ಗುಜರಾತ್ನ ಶಾಸಕರನ್ನು ಬೆOಗಳೂರಿನ ರೆಸಾರ್ಟ್ನನಲ್ಲಿ ಕಾಂಗ್ರೇಸ್ಸ ಹೈ ಕಮಾOಡ್ ಮೋಜಿನಲ್ಲಿ ಮೂಳುಗಿಸಿದ್ದಾರೆ. . ಇವರ ಉಸ್ತುವಾರಿ ನೋಡುತ್ತಿರುವ ಸಂಸದ ಡಿ ಕೆ ಸುರೇಶ್ ಹೇಳುತ್ತಾರೆ,ಪ್ರಜಾಪ್ರಭುತ್ವದ ಉಳಿವಿಗಾಗಿ ಅವರನ್ನು ಇಲ್ಲಿಗೆ ಕರೆತರಲಾಗಿದೆಯಂತೆ. ಈಗಲಾದರೂ ಕಾಂಗ್ರೇಸ್ಸಿಗರಿಗೆ ತಡವಾಗಿ ಪ್ರಜಾಪ್ರಭೂತ್ವದ ಅರಿವಾಗಿದೆ.ಕರ್ನಾಟಕದಲ್ಲಿ ಇದೇ ಕಾಂಗ್ರೇಸ್ಸ ವಿಧಾನಪರಿಷತ್ ಸದಸ್ಯರ ಆಯ್ಕೆಯ ಸಮಯ 8 ಮಂದಿ ಜೆ ಡಿ ಎಸ್ ಶಾಸಕರನ್ನು ಖರೀದಿಸಿ ವಿಧಾನಪರಿಷತ್ ಮತದಾನದಲ್ಲಿ ಗೆದ್ದಿದ್ದರು.ಆಗ ಪ್ರಜಾಪ್ರಭೂತ್ವ ಉಳಿಸಬೇಕೆOಬ ಆರಿವು ಇರಲಿಲ್ಲವೇ ? ಕೇOದ್ರದಲ್ಲಿ ಯಾರು ಅಧಿಕಾರದಲ್ಲಿರುತ್ತಾರೋ ಅವರನ್ನು ಹೊರತುಪಡಿಸಿ ಬೇರೆ ರಾಜಕೀಯ ಪಕ್ಷಗಳಿಗೆ ಈ ಗಂಡಾOತರ ಮಾಮೂಲು.ಇದಕ್ಕೆ ಹೇಳುವುದು ಅತ್ತೇಗೋಂದು ಕಾಲ ಸೊಸೆಗೊOದು ಕಾಲ.ಇನ್ನು ಗುಜರಾತನಲ್ಲಿನ ಮೂರ್ನಾಲ್ಕು ಕಾಂಗ್ರೇಸ್ಸ ಶಾಸಕರ ಮೊಬೈಲ್ ಫೋನ್ ಹೈಕಮಾOಡ್ ಕಿತ್ತಿಟ್ಟುಕೊOಡು ಅವರನ್ನು ಸOಪರ್ಕರಹಿತರನ್ನಾಗಿ ಮಾಡಿದೆ.ಇಸ್ಟೆಲ್ಲಾ ಆದರೂ ಈ ಪಕ್ಶಾಂತರಿಗಳನ್ನು ಪುನಃ ಆರಿಸಿ ಆಯ್ಕೆ ಮಾಡಿ ಕಳುಹಿಸು ಮತದಾರರೇ ನಿಜವಾಗಿಯೂ ಮೂರ್ಖರು ಮತ್ತು ಸ್ವಂತ ಚಿಂತನೆ ಇಲ್ಲದವರಾಗಿರುತ್ತಾರೆ.ಈ ಮತದಾರರೇ ನಿಜವಾದ ಪ್ರಜಾಪ್ರಭೂತ್ವದ ಕಂಟಕರು.ಇವರಿOದಾಗಿ ಪ್ರಜಾಪ್ರಭೂತ್ವ ತನ್ನ ಮಹತ್ವ ಕಳೆದುಕೊOಡಿದೆ ಎOದರೆ ತಪ್ಪಲ್ಲ.ಇಂದು ಬಿಜೆಪಿ ಹೇಳುತ್ತಿದೆ ಗುಜರಾತ್ ನಲ್ಲಿ ಪ್ರವಾಹ ಪರಿಸ್ತಿತಿ ಇರುವಾಗ ಕಾಂಗ್ರೇಸ್ಸ ಶಾಸಕರೂ ಬೆOಗಳೂರಿನ ರೆಸಾರ್ಟ್ ನಲ್ಲಿ ಮೋಜು ಮಾಡುತ್ತಿರುವುದು ಸಾರಿಯೇ ಎOದು.ಅಂದು ಶ್ರೀ ಯಡಿರುರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವ್ರನ್ನು ಅಂತಂತ್ರಗೊಳಿಸಲು ಓಂದಿಸ್ತು ಬಿಜೆಪಿ ಶಾಸಕರ ಗುOಪು ಕಾಂಗ್ರೇಸ್ಸ ನ ಸಹಾಯದ ಮೂಲಕ ಅಂದ್ರ ಪ್ರದೇಶದ ರೆಸಾರ್ಟ್ನಲ್ಲಿ ಮೋಜು ಮಾಡುತಿದ್ದರು.ಆಗ ಕಾಗ್ರೇಸೀಗರು ಕೇಳುತ್ತಿದ್ದರು ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇರುವಾಗ ಬಿಜೆಪಿ ಶಾಸಕರು ರೆಸಾರ್ಟ್ನಲ್ಲಿ ಮೋಜು ಮಾಡುವುದು ಸಾರಿಯೇ ? ಒಟ್ಟಿನಲ್ಲಿ ಅವರವರು ಅವರವರ ಕಾಲದಲ್ಲಿ ಮಾಡಿದ್ದು ಸರಿ.ಬೇರೆಯವರು ಮಾಡಿದ್ದು ತಪ್ಪು.ಈ ರಾಜಕೀಯ ಪಕ್ಷಗಳು ತಾವುಗಳು ಏನೇ ತಪ್ಪು ಮಾಡಿದರೂ ಅದನ್ನು ಸಮರ್ಥಿಸಿಕೊOಡು ಜನರನ್ನು ಮೂರ್ಖರನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತಿವೆ.ಇನ್ನು ಜನರು ಮೂರ್ಖರಾಗುತ್ತಿರುವುದು ಜನತೆಯ ಕರ್ಮ. ಕರ್ನಾಟಕವಂತೂ ಇತ್ತೀಚೆಗೆ ಮನೋರಂಜನೆಯ ಕೇOದ್ರವಾಗುತ್ತಿದೆ.ಈ ರಾಜಕೀಯ ಪಕ್ಷಗಳ ಮನೋರಂಜನೆಯ ಭರಾಟೇಯಲ್ಲಿ ಅಲ್ಲಿನ ಟಿವಿ ದಾರಾವಾಹಿಗಳು ಪ್ರೇಕ್ಷಕರಿಲ್ಲದೆ ಸೋಲುತ್ತಿವೇಯಂತೇ. ಮೌಲ್ಯಾಧಾರಿತ ರಾಜಕಾರಣ ಹಳ್ಳ ಹಿಡಿಯುತ್ತಿದ್ದು ಇಡೀ ಪ್ರಜಾಪ್ರಭೂತ್ವದ ಮೇಲೆ ಶ್ರೀ ಸಾಮಾನ್ಯ ಭರವಸೆಯನ್ನು ಕಳೆದುಕೊಳ್ಳಲಾರOಭಿಸಿದ್ದಾನೆ .ಏನಂತೀರಿ ?
ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ
9594228684
ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.
ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...
-
Miss Rashmi V Devadiga has been elected as UG division VICE PRESIDENT OF ABVP(Akhila Bharathiya Vidyarthi Parishad) of Mangalore universit...
-
ಸಾಹಿತ್ಯ ಸಂಸ್ಕøತಿ ಸಮಾಜ ಸೇವೆಯ ಮೂಲಕ ಜನಮನ ಗೆದ್ದ , ಯುಎಇಯ ದುಬಾೈಯಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘವನ್ನು ಕಟ್ಟಿದ, ದುಬಾೈ ಕರ್ನಾಟಕ ಸಂಘದ ಅಧ್...
-
ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್ದಾಸ್ರವರ ಕುರಿತಾದ ಕೃತಿ ಅನಾವರಣ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉಡುಪಿಯ ಸುಹಾಸಂರವರು ಇಂದು ಬೆಳಿಗ್ಗೆ ಉಡುಪಿಯ ಕಿದಿಯೂರು ಹೊಟೇ...












