-------ಶ್ರೀ ಗಣೇಶ್ ಶೇರಿಗಾರ್.
ನವಿಮುಂಬಯಿ ಜಿಲ್ಲಾ ಬಿ ಜೆ ಪಿ ಕನ್ನಡ ಘಟಕವು ದೇವಾಡಿಗ ಸಂಘ ಮುoಬಯಿ ಜೊತೆ ಜಂಟಿಯಾಗಿ ದೇವಾಡಿಗ ಭವನ ನೆರುಲ್ ನಲ್ಲಿ ತಾರೀಕು 25ರಂದು ಹೆಮ್ಮಿಕೊoಡ ಉಚಿತ ವೈದ್ಯಕೀಯ ಶಿಬಿರವು ಯಶಸ್ವಿಯಾಗಿ ಸಂಪನ್ನಗೊoಡಿತು. ಬೆಳಿಗ್ಗೆ ವರುಣನ ಆರ್ಭಟವಿದ್ದರೂ ಸುಮಾರು 200 ಕ್ಕೂ ಹೆಚ್ಚು ಜನರು ಪಾಲ್ಗೊಂಡು ಉಪಯೋಗ ಪಡೆದುಕೊoಡರು.ಇದು ಜನತೆಗೆ ವೈದ್ಯಕೀಯ ಅವಶ್ಯಕತೆ ಎಷ್ಟು ಇದೆ ಎoಬುದನ್ನು ಸಾದರಪಡಿಸಿತು. ನವಿಮುಂಬಯಿ ಜನಪ್ರಿಯ ಬಿಜೆಪಿ ಶಾಸಕಿ ಶ್ರೀಮತಿ ಮಂದಾ ಮಾತ್ರೆ ಯವರು ನವಿಮುoಬಯಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀ ರಾಮಚಂದ್ರ ಘರಾಟ್, ನವಿ ಮುoಬೈ ಜಿಲ್ಲಾ ಬಿಜೆಪಿ ಕನ್ನಡ ಘಟಕದ ಅಧ್ಯಕ್ಷ ಶ್ರೀ ಹರೀಶ್ ಪೂಜಾರಿ,ದೇವಾಡಿಗ ಸಂಘ ಮುoಬೈ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ, ಗೌರವ ಪ್ರಧಾನಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ,ಬಿಜೆಪಿ ಕನ್ನಡ ಘಟಕದ ಮಹಿಳಾ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇವಾಡಿಗ, ಮತ್ತು ಬಿಜೆಪಿಯ ಶ್ರೀ ವಿಕ್ರಂ ಪರಂಜುಲಿ,ನಿತಿನ್ ಕಂಡೊರಿ ಯಾವರ ಜತೆಗೂಡಿ ದೀಪ ಪ್ರಜ್ವಲಿಸಿ ವೈದ್ಯಕೀಯ ಶಿಬಿರ ಉದ್ಘಾಟಿಸಿದರು.ಮೊದಲಿಗೆ ಶ್ರೀಮತಿ ತಾರ ಬಂಗೇರ ಪ್ರಾರ್ಥನೆಗೈದರು. ನಂತರ ಕನ್ನಡ ಘಟಕದ ಅದ್ಯಕ್ಷರು ಮತ್ತು ಅವರ ಪದಾದೀಕಾರೀಗಳ ಜತೆಗೂಡಿ ತುಳು ಕನ್ನಡಿಗರ ಮುಖ್ಯ ಸಮಸ್ಯೇ ಯಾದ ಓ.ಬಿ. ಸಿ. ಸರ್ಟಿಫಿಕೇಟ್ ತೆಗೇಯುವಲ್ಲಿ ಇರುವ 1967 ರ ಮೊದಲಿನ ಧಾಖಲೆಯನ್ನು ತೆಗೆದು ಸರಳಿಕರಿಸಿಕೊಡುವoತೆ ಮನವಿ ಸಲ್ಲಿಸಿದರು.ಇದು ಮುoಬೈ ಮಹಾನಗರದಲ್ಲಿ ಅಸಂಖ್ಯಾತ ಪರ ಪ್ರಾಂತಿಯ ಸಂಘಟನೆಗಳಿದ್ದರೂ ಕನ್ನಡ ಬಿಜೆಪಿ ಘಟಕದ ಪ್ರಪಥಮ ಕಾರ್ಯವೈಕರಿಗೆ ಸಾಕ್ಷಿ ಯಾಯಿತು.ಇದಕ್ಕೆ ಉತ್ತರಿಸುತ್ತ ಶ್ರೀಮತಿ ಮಂದಾ ಮಾತ್ರೆಯವರು ಮಹಾರಾಷ್ಟ್ರದ ಹೊರರಾಜ್ಯಗಳಲ್ಲಿ ಅಲ್ಲಿನ ಪರಪ್ರಾಂತಿಯರ ನೀತಿ ಇದಕ್ಕಿoತ ಭಿನ್ನವಾಗಿದ್ದಲ್ಲಿ ಖಂಡಿತವಾಗಿಯೂಁ ಮಹಾರಾಷ್ಟ್ರದಲ್ಲಿ ಪ್ರಯತ್ನೀಸುವ ಭರವಸೇ ನೀಡಿದರು.ಮಾತ್ರವಲ್ಲದೆ ರಾಜೀವ್ ಗಾಂಧಿ ವೈದ್ಯಕೀಯ ಯೋಜನೆ.ಮುಖ್ಯಮಂತ್ರಿ ಮೆಡಿಕಲ್ ಅನುದಾನದ ಸoಪೂರ್ಣ ವಿವರ ನೀಡಿ ಅದನ್ನು ತೆಗೆಸಿಕೊಡುವ ಸoಪೂರ್ಣ ಜವಾಬ್ದಾರಿ ತನ್ನದೆoದರು.ಮುoದೆ ಕನ್ನಡ ಘಟಕದ ಅಧ್ಯಕ್ಷ ಶ್ರೀ ಹರೀಶ್ ಪೂಜಾರಿ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ ಇತ್ತೀಚೆಗೆ ಒಂದು ಅಪಂಗ ರೋಗಿಗೆ ತಮ್ಮ ಘಟಕವು ನೀಡಿದ ವೈದ್ಯಕೀಯ ನೆರೆವಿನ ಬಗ್ಗೇ ನೆನಪಿಸಿ ಉಚಿತ ವೈದ್ಯಕೀಯ ಶಿಬಿರಕ್ಕೆ ಪ್ರೇರಣೆ ಇದು ಕಾರಣವಾಯಿತು ಅಲ್ಲದೆ ಸರಕಾರದಿoದ ಸಿಗುವ ಸವಲತ್ತೂಗಳನ್ನು ಈ ಶಿಬಿರದ ಮೂಲಕ ಅರಿವು ಮೂಡಿಸುವ ಕನ್ನಡ ಘಟಕದ ಚೊಚ್ಚಲ ಪ್ರಯತ್ನ ಇದೆoದರು. ವ್ಯದ್ಯಕೀಯ ಶಿಬಿರದಲ್ಲಿ ಕಣ್ಣು ತಾಪಷಾಣೆ ಮಾಡಿದ ನಂತರ 100 ಜನರಿಗೆ ಉಚಿತ ಕಣ್ಣಿನ ಗ್ಲಾಸನ್ನು ವಿತರಿಸರಿಸಲಾಯಿತು. 200 ಕ್ಕೂ ಹೆಚ್ಚು ಸ್ಥಳೀಯ ಜನರು ಈ ವ್ಯೆದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶ್ಶ್ವಿ ಮಾಡಲು ಸಹಕರಿದರು. ತದನಂತರ ಬಿಜೆಪಿ ಕನ್ನಡಘಟಕದ ಉಪಾಧ್ಯಕ್ಷರುಗಳು ಹಾಗೂ ದಾನಿಗಳಾದ ಶ್ರೀ ರಘುರಾಮ್ ಆಚಾರ್ಯ,ಶ್ರೀ ಜಗದೀಶ್ ಶೆಟ್ಟಿ, ಶ್ರೀ ರಮೇಶ ಸಾಲ್ಯಾನ್ ಶ್ರೀ ರವಿ ಪೂಜಾರಿ ಬೋಳ ಮತ್ತು ರಾಜೇಶ್ ಗ್ ಡ ಅವರನ್ನು ಹೂಗುಚ್ಛಗಳನ್ನು ನೀಡಿ ಗೌರವೀಸಲಾಯಿತು. ಕಾರ್ಯಕ್ರಮವನ್ನು ಬಿಜೆಪಿ ನವಿಮು oಬೈ ಕನ್ನಡ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ್ ಸೆರೀಗಾರ್ ಕಾರ್ಯಕ್ರಮ ನಿರೂಪಿಸಿದರೆ, ಮತ್ತೋರ್ವ ಪ್ರಧಾನಕಾರ್ಯದರ್ಶಿ ಶ್ರೀ ರಮೇಶ ಸನಿಲ್ ವಂದನಾರ್ಪಣೆಗೈದರು.