Thursday, 31 August 2017

ಸರಕಾರಗಳ ಇಚ್ಛಾಶಕ್ತಿ ಯಾವಾಗ ಜಾಗ್ರತಗೊOಡಾವು ?

ಭಾರತ ಸ್ವತಂತ್ರಗೊOಡು 70 ವರ್ಷಗಳು ಕಳೆದರೂ ಭಾರತ  ಸಾದಿಸಿದ್ದು ಅಂಗೈಸ್ಟು. ಸಾದಿಸಲು ಬಾಕಿ ಉಳಿದಿರುವುದು ಸಾಗರದಸ್ಟು. ಓದುಗರೆ ಇಂದು ಭಾರತದಲ್ಲಿ ಮುಖ್ಯವಾಗಿ ಬದಲಾವಣೆ ಆಗಬೇಕಿರುವುದು ಒಂದು ಶಿಕ್ಷಣ ಕ್ಷೇತ್ರ , ಎರಡನೇಯಾಗಿ  ಆರೋಗ್ಯ ಕ್ಷೇತ್ರ,ಮೂರನೆಯದಾಗಿ ಕಾನೂನು ಕ್ಷೇತ್ರ, ನಾಲ್ಕನೆಯದಾಗಿ ಸಣ್ಣ ಅಂದರೆ ಲಘು ಉದ್ಯೋಗ ಕ್ಸೇತ್ರ. ವಿಧ್ಯಾಭ್ಯಾಸದ ವಿಷಯಕ್ಕೆ ಬಂದರೆ ಇಂದು ಸಾಮಾನ್ಯ ಮತ್ತು ಬಡ ಜನತೆಗೆ ಉನ್ನತಮಟ್ಟದ ವಿಧ್ಯಾಬ್ಯಾಸ ಅನ್ನುವಂತದ್ದು ಗಗನ ಕುಸುಮವಾಗಿದೆ.ಖಾಸಗಿ ಶಾಲೆಗಳ ಶುಲ್ಕ( ಡೋನೇಶನ್ ಬೇರೆ ) ಎನ್ನುವಂತದ್ದು ಬಡ ಹಾಗು ಸಾಮಾನ್ಯ ಜನತೆ ಮಕ್ಕಳನ್ನು ಖಾಸಗಿ  ಶಾಲೆಗಳಿಗೆ ಕಳುಹಿಸಲಾಸಧ್ಯವಾಗಿದೆ.ಇನ್ನು ಸರಕಾರಿ ಶಾಲೆಗಳ ದುರವಸ್ತೇ ನೋಡಿದರೆ ಜಾನುವಾರುಗಳ ದೊಡ್ಡಿಗೇ ಸಮ.ಸ್ವಾತಂತ್ರ್ಯದ 70 ವರ್ಷಗಳ ನಂತರವೂ ಸಾರಕಾರೀ ಶಾಲೆಗಳ ಗುಣಮಟ್ಟ ಖಾಸಗಿ ಶಾಲೆಗಳಿಗೆ ಸಮನಾಗಿ ಏರದೆ ಇರುವುದು ಸಾರಕಾರಗಳ ಅಲಕ್ಷ್ಯ ಮತ್ತು ಅಸಡ್ಡೆಯೆ ಕಾರಣ.ಇಂದು ಸಾರಕಾರೀ ಶಾಲಾ ಕಾಲೇಜುಗಳು ಖಾಸಗಿ ಗೆ ತಕ್ಕಂತೆ ಪೈಪೋಟಿ ನೀಡುವOತಾಗಿದ್ದರೆ ಇಂದು ದೇಶ ಸOಪೂರ್ಣ ಸಾಕ್ಶರತೇ ಕಾಣುವುದರಲ್ಲಿ ಸಾಧ್ಯತೆ ಇರುತಿತ್ತು.ಆದರೆ ಅಧಿಕಾರ ಹಿಡಿದವರು ಅದಕ್ಕೆ ಕೈ ಹಾಕದೆ  ಬಡ ಜನತೆ ವಿಧ್ಯಾ ವಂಚಿತರನ್ನಾಗಿ ಮಾಡಿದೆ.ಇನ್ನು ಶಿಕ್ಷಣ ಸಂಸ್ಥೇ ಗಳನ್ನು ಸ್ಥಾಪಿಸಿಕೊOಡ ಧಾರ್ಮಿಕ ಕೇOದ್ರಗಳು ಜನರಿOದ ಬಂದ ಹಣವನ್ನು ಒಂದಿಸ್ಟು ಜನರಿಗೇ ಖರ್ಚು ಮಾಡುವುದನ್ನು ಬಿಟ್ಟು ಅಂದರೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡುವುದನ್ನು ಬಿಟ್ಟು ಅವುಗಳು ಇನ್ನಸ್ಟು ಹಣ ಲೂಟುತ್ತಿರುವುದು ಭಾರತದ ಬಡ ಜನತೆಯ ದೌರ್ಭಾಗ್ಯ.ಹೀಗಾಗಿ ಸಾರಕಾರಗಳು ದೇಶದ ಸಾರಕಾರೀ ಶಾಲಾಕಾಲೇಜುಗಳ ಕಲಿಕೆಯ ಗುಣಮಟ್ಟವನ್ನು ಏರಿಸಿ ಸರ್ವರಿಗೂ ವಿದ್ಯೆ ಕೈಗೇಟಗುವOತೆ ಮಾಡುವುದು ಮಾತ್ರವಲ್ಲದೇ ಖಾಸಗಿಯವರ ಮೊನೊಪಲಿಯನ್ನು ತಡೆಗಟ್ಟಬೇಕಿದೆ.ಎರಡನೆಯದು ಆರೋಗ್ಯ ಕ್ಷೇತ್ರ.ಇದನ್ನು ಹೇಳಲೇ ಬೇಕಿಲ್ಲ.ಖಾಸಗಿ ಆಸ್ಪತ್ರೆಗಳ ಶುಲ್ಕ ನೋಡಿದರೆ ಜನ ಸಾಮಾನ್ಯರಿಗೆ ಅಲ್ಲಿ ಶುಶ್ರೂಷೆ ಪಡೆಯುವಂತಿಲ್ಲ.ಏಳು ಎಂಟು ತಿOಗಳಿಗೆ ಮಗುವನ್ನು ಹಡೆದರೆ ಆ ಮಕ್ಕಳನ್ನು ತುರ್ತುಚಿಕಿತ್ಸಾ ಘಟಕದಲ್ಲಿ ಇಡಬೇಕೇಂದರೆ ಕನಿಸ್ಟ ನಾಲ್ಕು ಲಕ್ಷ ರುಪೈ ಆಸ್ಪತ್ರೆಗೆ ತೆರಬೇಕಿದೆ.ಬಡ ಜನತೆ ಅಸ್ಟೊOದು ಹಣ ಹೋಂದಿಸುದಾದರೂ ಏಲ್ಲಿಂದ ? ಇನ್ನೂOದು ಕಡೆ ಬಡ ಜನತೆಗಾಗಿ ನೀಡಿರುವ ಸವಲತ್ತು ಮುಖ್ಯಮಂತ್ರಿ ಪರಿಹಾರ ನಿಧಿ ಯೋಜನೆಯ ಹಣ,ರಾಜೀವ್ಗಾಂಧಿ ಯೋಜನೆಯ ಹಣವನ್ನೆಲ್ಲಾ ಸOಪೂರ್ಣ ನುಂಗುವಂತ ಪರಿಪಾಠವನ್ನು ಖಾಸಗಿ ಆಸ್ಪತ್ರೆಗಳು ಶುಲ್ಕಗಳನ್ನು ಸರಿದೂಗಿಸಿ ಕೊಳ್ಳೆಹೊಡೆಯುತ್ತಿವೆ.ಇದನ್ನೆಲ್ಲ ಸಾರಕಾರ ಕಣ್ಮುಚ್ಚಿಕೊOಡು ಕುಳಿತಿವೆ.ಆದರೆ ಸಾರಕಾರಗಳು ಈ ಖಾಸಗಿ ಆಸ್ಪತ್ರೆಗಳ ಈ ಅತೀ ಶುಲ್ಕಾಟದ ಹುಚ್ಚಿಗೆ ಕಡಿವಾಣ ಹಾಕಬೇಕು.ಅಂತೆಯೇ ಪ್ರತೀ ತಾಲೂಕಿಗೆ ಎಲ್ಲಾ ವ್ಯವಸ್ಥೇ ಹೋಂದಿರುವ ಸುಸಜ್ಜಿತ ಸಾರಕಾರೀ  ಆಸ್ಪತ್ರೆಗಳನ್ನು ಸ್ಥಾಪಿಸಿ ಬಡ ಜನತೆಗೆ ಅವಶ್ಯವಿರುವ ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡಬೇಕಿದೆ.ಹಾಗಾದಾಗ ಮಾತ್ರ ಖಾಸಗಿ ಆಸ್ಪತ್ರೆಗಳ ಮದ ಅಡಗಬಹುದು.ಮೂರನೆಯದು ನ್ಯಾಯಾOಗ ಕ್ಷೇತ್ರ. ಮೊನ್ನೆ ಸ್ವಯಮ್ ಘೋಷಿತ ದೇವಮಾನವ ಗೂರ್ಮಿತ್ ಸಿOಗ್ ಗೆ ಅತ್ಯಾಚಾರ ಪ್ರಕರಣದಲ್ಲಿ ಕೊನೆಗೂ ಅಂದರೆ ಅದಸ್ಟೋ   ವರ್ಷಗಳ ನಂತರ ತೀರ್ಪು ಹೊರಬಿದ್ದು ಜೈಲು ಪಾಲಾಗಿದ್ದಾನೆ.ಆದರೆ ಓದುಗರೇ ಅತ್ಯಾಚಾರ ಮತ್ತು ಭ್ರಸ್ಟಾಚಾರ ಪ್ರಕರಣಗಳಲ್ಲಿ ನಮ್ಮ ದೇಶದಲ್ಲಿ ತ್ವರಿತ ಕೋರ್ಟುಗಳು ಅದಕ್ಕಾಗಿಯೇ  ಸ್ಥಾಪನೆಗೊOಡು   ತೀರ್ಪು ಅನ್ನುವಂತದ್ದು ಮೂರು ತಿOಗಳ ಒಳಗೇನೇ ಹೊರಬಿದ್ದು ಅಪರಾಧಿಗಳು ಜೈಲು ಪಾಲಾಗಬೇಕು. ತಪ್ಪಿತಸ್ಥರು ವಿಚಾರಣಾದೀನವೆOದು ಹತ್ತಿಪ್ಪತ್ತು ವರ್ಷಗಳು ಹೊರಗಿದ್ದು ಮಜಾ ಮಾಡಲು ಅವಕಾಶ ಕೊಡಲೇಬಾರದು. ಅಲ್ಲದೇ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯೇ ಅಂತಿಮವಾಗಬೇಕು.ಹಾಗಾದಾಗ ಮಾತ್ರ ಕಾನೂನಿನ ಬಗ್ಗೆ ಭಯವಿರುತ್ತದೆ.ಇಂದು ಅತ್ಯಾಚಾರ ಎಗ್ಗಿಲ್ಲದೆ ನಡೆದು ಮಹಿಳೆ ಹಾಗು ಹೆಣ್ಣು ಮಕ್ಕಳ ಕೊಲೆಗೆ ಕಾರಣವೇ ಭಾರತದ ಕಾನೂನಿನ ಬಗ್ಗೆ ಭಯ ಇಲ್ಲದೆ ಇರುವುದು. ದುಬೈ ನಲ್ಲಿ ಇಂದು ಮಹಿಳೆ ಚಿನ್ನಾಭರಣ ಹಾಕಿಕೊOಡು ಒಬ್ಬಳೆ ರಾತ್ರಿ  12 ಗಂಟೆಗೆ ತಿರುಗಬಲ್ಲಳು ಆದರೆ ಮಾಹಾತ್ಮ ಗಾಂಧಿಯ ಕನಸಿನ ಭಾರತದಲ್ಲಿ ಇದು ಸಾಧ್ಯವಾಗದಿರುವುದು ಸ್ವಾತಂತ್ರ್ಯಾ ನಂತರ ಅಧಿಕಾರ ಹಿಡಿದವರ ಇಚ್ಛಾ ಶಕ್ತಿಯ ವೈಫಲ್ಯವಲ್ಲವೇ ?
ನಾಲ್ಕನೆಯದು ಉದ್ಯಮ ಕ್ಷೇತ್ರ.ಇಂದು ಭಾರತದಲ್ಲಿ ಬ್ರಹತ್ ಉದ್ಯಮಗಳಿಗೆ ಮಾತ್ರ ಉತ್ತಮ ಅವಕಾಶ.ಸಣ್ಣ ಲಘು ಉದ್ಯಮಗಳು ಸಾರಕಾರದ ನೀತಿಯಿOದಾಗಿ ನೆಲಕಚ್ಚಿವೇ.ಸಿದ್ದ ಉಡುಪುಗಳ ರಪ್ತು, ಸ್ಟೀಲ್ ಪಾತ್ರೆಗಳ ರಪ್ತು  ಕOಪನಿಗಳು, ಚರ್ಮಕೈಗಾರಿಕ  ಘಟಕಗಳು  ಇಂದು ಬಾಗಿಲು ಎಳೆದುಕೊOಡಿವೆ.ಅದನ್ನು ಅವಲOಬಿಸಿಕೊOಡಿದ್ದ ಅದೇಸ್ಟೋ ಕ್ರಾಫ್ಟ್ ಪೇಪರ್,ಪ್ಲಾಸ್ಟಿಕ್ ಬ್ಯಾಗ್ ಘಟಕಗಳು ಬಾಗಿಲು ಮುಚ್ಚಿವೆ.ಒಂದೊಮ್ಮೆ ಸಿದ್ದ ಉಡುಪುಗಳ ತಯಾರಿಕಾ ಘಟಕ ಮತ್ತು ರಪ್ತು ಘಟಕಗಳ ಸ್ವರ್ಗವಾಗಿದ್ದ ಲೋವರ್ ಪರೇಲ್, ಸಿವ್ರಿ, ಜೋಗೇಶ್ವರಿ,ಗೋರೇಗಾವ್ ಗಳಲ್ಲಿನ ಇಂಡಸ್ಟ್ರಿಯಲ್ ಏಸ್ಟೇಟ್ಗಲ್ಲಿನ ಅವಸ್ಥೇ ನೋಡಿದರೆ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.ಒಂದೊಮ್ಮೆ ಸ್ಟೀಲ್ ಅಟೇನ್ಸಿಲ್ಸ್ ನ ಸ್ವರ್ಗವಾಗಿದ್ದ ಕಲ್ಬಾದೇವೀ, ಸಿ ಪಿ ಟ್ಯಾOಕ್ ನ ಮಾರುಕಟ್ಯೇಗಳು ಬಿಕೋ ಅನ್ನುತ್ತಿದೆ.ಅಲ್ಲೆಲ್ಲ ಕೆಲಸ ಮಾಡುತಿದ್ದ ಕೆಲಸಗಾರರು ಬೀದಿಪಾಲಾಗಿದ್ದಾರೆ.ಬಟ್ಟೆ ಗಿರಣಿಗಳು ಮೊದಲೇ ಕಾರ್ಮಿಕ ಸಂಘಟನೆ ಮತ್ತು ಸಾರಕಾರದ ಆರ್ಥಿಕ ನೀತಿಯಿOದಾಗಿ ದ್ವಿ ದಶಕದ ಮೊದಲೇ ಸ್ವರ್ಗವಾಸಿಯಾಗಿದೆ. ಸರಕಾರಗಳು  ಮಂದಿರ ಮಸೀದಿಗಳಿಗೆ ಅನುದಾನ ನೀಡುವುದನ್ನು ತಕ್ಷಣವೇ ನಿಲ್ಲಿಸಿ ಆ ಹಣವನ್ನು ಸಾರಕಾರೀ ಆಸ್ಪತ್ರೆಗಳು ಮತ್ತು ಸಾರಕಾರೀ ಶಾಲಾಕಾಲೇಜುಗಳ ಗುಣಮಟ್ಟವನ್ನು ಏರಿಸೂವಲ್ಲಿ ನೀಡಬೇಕು.ಮಂದಿರ ಮಸೀದಿ ಚರ್ಚುಗಳ ಆಡಳಿತಕ್ಕೊಳಪಟ್ಟಿರುವ ಶಾಲಾಕಾಲೇಜುಗಳ ಆಸ್ಪತ್ರೆಗಳು ಜನರ ಮೇಲೆ ಹೇರುವ ಅತ್ಯಧಿಕ ಶುಲ್ಕಗಳಿಗೆ ತಕ್ಷಣವೇ ಕಡಿವಾಣ ಹಾಕಿ ಜನ ಸಾಮಾನ್ಯರಿಗೆ ಕೈಗೆಟುವ ದರದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಎಲೆಕ್ಟ್ರೋನಿಕ್ ಮಾದ್ಯಮಗಳು  24 ಗಂಟೆ ಸಿನಿಮಾ ರಂಗ, ಕ್ರಿಕೆಟ್ ರಂಗದ ಬೆನ್ನು ಹಿOದೆ ಸುತ್ತುವುದನ್ನು ಬಿಟ್ಟು ಈ ಮೇಲಿನ ಸಮಸ್ಯೇಗಳ ಮೇಲೆ ಸಾಧ್ಯವಿದ್ದಸ್ಟು  ಪದೇ ಪದೇ ಬೆಳಕು ಚೆಲ್ಲಿದರೆ, ಆಗಲಾ ದರೂ  ಅಧಿಕಾರ ಹಿಡಿದ ಸರಕಾರಗಳು ಎಚ್ಚೆತ್ತು ತಮ್ಮ ಇಚ್ಛಾ ಶಕ್ತಿಯನ್ನು ಜಾಗ್ರತಗೊಳಿಸಿ ಶಿಕ್ಷಣ,ವೈದ್ಯಕೀಯ, ಕಾನೂನು ಮತ್ತು ಸಣ್ಣ ಮತ್ತು ಲಘು ಕೈಗಾರಿಕಾ ಉದ್ಯಮಗಳ ಮೇಲೆ ಸುಧಾರೀಕರಣ ನೀತಿಯನ್ನು ಜಾರಿಗೊಳಿಸಿದರೆ  ಖಂಡಿತವಾಗಿಯೂ ಆಧುನಿಕ ಸಮ್ರದ್ದಿಯ ಭಾರತವನ್ನು ಕಾಣಲು ಸಾಧ್ಯ.
ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

Monday, 21 August 2017

State level Merit Scholarship distribution programme held on Sunday at Devadiga seva sangha Udupi.




ದೇವಾಡಿಗ ಸಂಘ (ರಿ)ಉಪ್ಪುಂದ ಇದರ ವಾರ್ಷಿಕೋತ್ಸವ ಸತ್ಯನಾರಾಯಣ ಪೂಜೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಂಸ್ಕ್ರತಿಕ ಸಮಾರಂಭ

ದೇವಾಡಿಗ ಸಂಘ (ರಿ)ಉಪ್ಪುಂದ ಇದರ ವಾರ್ಷಿಕೋತ್ಸವ ಸತ್ಯನಾರಾಯಣ ಪೂಜೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಾಂಸ್ಕ್ರತಿಕ ಸಮಾರಂಭವು ಉಪ್ಪುಂದ ಮಾತೃಶ್ರೀ ಸಭಾ ಭವನದಲ್ಲಿ ನಡೆಯಿತು ದುಬೈ ಅಕ್ಮೇ ಬಿಲ್ಡಿಂಗ್ ಮೇಟಿರಿಯಲ್ಸ್ ಟ್ರೆಡಿಂಗ್ ನ ಆಡಳಿತ ನಿರ್ಧೇಶಕರಾದ ಶ್ರೀ ಹರೀಶ್ ಶೇರಿಗಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಸಂಘದ ಅಧ್ಯಕ್ಷರಾದ ಬಿ.ಎ ಮಂಜು ದೇವಾಡಿಗ ಸಭೆಯ ಅದ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮೋಹನ್‌ದಾಸ್ ಹಿರಿಯಡ್ಕ,ಮುಂಬ್ಯೆ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ, ವಾಸು ಎಸ್ ದೇವಾಡಿಗ,ಶೀನ ದೇವಾಡಿಗ ಕದO ದುಬೈ   ಎಸ್.ಡಿ.ಎಮ್.ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ! ದೇವರಾಜ ಕಂಕನಾಡಿ,
ಶ್ರೀಮತಿ ಗೌರಿ ದೇವಾಡಿಗ
ಜಿಲ್ಲಾಪಂಚಾಯತ್ ಸದಸ್ಯರು ಉಡುಪಿ,
ಶ್ರೀ ಗಣೇಶ್ ದೇವಾಡಿಗ ಸಾಪ್ಟವೇರ್ ಆರ್ಕಿಟೇಕ್ಟ ಬೆOಗಳೂರು,ಸುಧಾಕರ್ ದೇವಾಡಿಗ ಉದ್ಯಮಿಗಳು ಧಾರವಾಡ, ಚೆನ್ನಪ್ಪ ಮೊಯಿಲಿ CEO ತಾಲೂಕು ಪಂಚಾಯತ್ ಕುಂದಾಪುರ,
ಮಹಿಳಾ ಘಟಕದ ಅದ್ಯಕ್ಷರಾದ ನಾಗಮ್ಮ ದೇವಾಡಿಗ,ಶಾರದಾ ದೇವಾಡಿಗ ಚಿತ್ರಾಡಿ ನಾಗೂರು, ಶ್ರೀ ಜಗದೀಶ್ ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ಕುಂದಾಪುರ,ಶ್ರೀಮತಿ ಪ್ರಮೀಳಾ ಕೆ ದೇವಾಡಿಗ ತಾಲೂಕು ಪಂಚಾಯತ್ ಸದಸ್ಯರು ಕುಂದಾಪುರ,ಶ್ರೀ ರಾಮ ದೇವಾಡಿಗ ಇಂಜಿನಿಯರ್ BSNL,ವೆOಕ್ಟಯ್ಯ ದೇವಾಡಿಗ ನೇತ್ರಾವತಿ ಗ್ರಾಮೀಣ ಬ್ಯಾOಕ್,ಮಿಲಿಟರಿ ಸುಬ್ಬ ದೇವಾಡಿಗ ನಾಯ್ಕನಕಟ್ಟೆ,ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟಿಯಾದ ನರಸಿOಹ ದೇವಾಡಿಗ,ಜನಾರ್ಧನ ದೇವಾಡಿಗ,ಮಾತೃಶ್ರೀ ಸಭಾಭವನದ ಮಾಲಕರಾದ ಅರೆಹಾಡಿ ಮಂಜು ದೇವಾಡಿಗ ಸಂಘದ ಸರ್ವ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷರಾದ ಜನಾರ್ಧನ ಎಸ್ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಾಧಕರಾದ ಅಂತರರಾಷ್ಟ್ರೀಯ ಕ್ರೀಡಾಪಟು ಜಯಂತಿ ಎಮ್ ದೇವಾಡಿಗ,ಅಂತರರಾಷ್ಟ್ರೀಯ ಕರಾಟೆಯಲ್ಲಿ ಕಂಚಿನ ಪದಕ ಪಡೆದ ವಿಶ್ವನಾಥ ದೇವಾಡಿಗ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರೆಸ್ಟಿಯಾದ ಅಂಬಿಕಾರಾಜು ದೇವಾಡಿಗ ಕುಂದಾಪುರ ಕ್ರಷಿ ಉತ್ಪನ್ನ ಮಾರುಕಟ್ಟೆ ಸದಸ್ಯರಾದ ಮಂಜು ದೇವಾಡಿಗ ಬಿಜೂರು,
ರಾಷ್ಟ್ರಮಟ್ಟದ ಯೋಗಪಟು ನಿವೇದಿತಾ ನಾಯ್ಕನಕಟ್ಟೆ
2016-17 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ರಕ್ಷಿತಾ ದೇವಾಡಿಗ,ಜಯಲಕ್ಷ್ಮಿ ದೇವಾಡಿಗ,ಸವಿನಯ ದೇವಾಡಿಗ ದೀಪಾ ದೇವಾಡಿಗ,ಮೊದಲಾದವರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ 2016-17 ಸಾಲಿನಲ್ಲಿ 80 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.ರಾಮಚಂದ್ರ ದೇವಾಡಿಗ ಸ್ವಾಗತಿಸಿದರು.ಉಪನ್ಯಾಸಕಿ ಶ್ರೀಮತಿ ಶ್ರೀಲತಾ ಚಂದ್ರ ಕೆ ದೇವಾಡಿಗ ,ಶಿಕ್ಷಕರಾದ ನಾರಾಯಣರಾಜು,ರವೀಂದ್ರ ದೇವಾಡಿಗ ಮಂಜುನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರಾದ ರಾಮಕೃಷ್ಣ ದೇವಾಡಿಗ ವರದಿವಾಚನಗೈದರು,ಜೆ ನಾರಾಯಣ ದೇವಾಡಿಗ ವಂದಿಸಿದರು.ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನರಸಿOಹ ದೇವಾಡಿಗ KRCL ನಿರ್ವಹಿಸಿದರು
ಸುಮಾರು 2500 ಕ್ಕೂ ಮಿಕ್ಕಿ ದೇವಾಡಿಗ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು

 







                   

Monday, 14 August 2017

ಕರಾಟೆ ಪಂದ್ಯಾಟದಲ್ಲಿ ಕನಾ೯ಟಕದ ಪರವಾಗಿ ಕಂಚಿನ ಪ್ರಶಸ್ತಿ.

ನಮ್ಮ ಉಪ್ಪುಂದದ ವಿಶ್ವನಾಥ ದೇವಾಡಿಗ ಅವರು ಇಂದು
ನವದೆಹಲಿಯಲ್ಲಿ ನಡೆದ ಕರಾಟೆ ಪಂದ್ಯಾಟದಲ್ಲಿ ಕನಾ೯ಟಕದ ಪರವಾಗಿ ಕಂಚಿನ ಪ್ರಶಸ್ತಿ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ

Wednesday, 9 August 2017

ಅಲೆವೂರು ನಿವಾಸಿ ತೋಗ್ಗು ಸೇರಿಗಾರ ರ ಮನೆಯು ಕುಸಿದು ಅತೀಹೆಚ್ಚಿನ ನಷ್ಟವಾಗಿದ.

ದಿನಾಂಕ.5.08.2017 ರ ರಾತ್ರಿ 1ಗಂಟೆಯ ಹೊತ್ತಿಗೆ ನಮ್ಮ ಸಮಾಜದ ಕಡು ಬಡವರಾದ ಅಲೆವೂರು ನಿವಾಸಿ ತೋಗ್ಗು ಸೇರಿಗಾರ ರ ಮನೆಯು ಕುಸಿದು ಅತೀಹೆಚ್ಚಿನ ನಷ್ಟವಾಗಿದೆ(ತಾಯಿ ಏಕನಾಥೇಶ್ವರಿ ಅನುಗ್ರಹದಿಂದ ಯಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ)ಇವರ ನೋವಿಗೆ ಸ್ಪಂದಿಸಿದ ಉಡುಪಿ ದೇವಾಡಿಗರ ಸೇವಾ ಸಂಘದ ವತಿಯಿಂದ ರೂ. 10000 ನ್ನು ಸಂಘದ  ಅಧ್ಯಕ್ಷರಾದ ಶ್ರೀ.ಕೆ ಸೀತಾರಾಮ್ ದೇವಾಡಿಗ ಮತ್ತು ಪದಾಧಿಕಾರಿಗಳು ಸೇರಿ ದಿನಾಂಕ:-07.08.2017 ರಂದು   ನೆರವನ್ನು ನೀಡಿದರು. ಈ ಬಗ್ಗೆ ನೆರವು ನೀಡಬಯಸುವ ಸಮಾಜ ಬಾಂಧವರು ನಮ್ಮ ಸಂಘವನ್ನು ಸಂಪರ್ಕಿಸಬೇಕಾಗಿ ವಿನಂತಿ.

Saturday, 5 August 2017

ಮತ್ತೆ ಬಂದಿದೆ ಸ್ವಾತಂತ್ರ್ಯೋತ್ಸವದ ದಿನ

ಭಾರತ ಸ್ವತಂತ್ರಗೊOಡು 70 ವರ್ಷಗಳಾಗುತ್ತಿದೆ.ಇಡೀ ದೇಶ ಆಚರಣೆಗಾಗಿ ಸದ್ದಾಗುತ್ತಿದೆ.ಆದರೆ ನನಗೇಕೋ ಈ ಆಚರಣೆಗಳು ಇತ್ತೀಚಿನ ವರ್ಷಗಳಲ್ಲಿ  ಬರೇ ಡOಬಾಚಾರಕ್ಕಾಗಿ, ತೋರಿಕೆಗಾಗಿ ಆಚರಿಸಲಾಗುತ್ತಿದೆ ಅನಿಸುತ್ತಿದೆ.ಆ ದಿನ ಮಾತ್ರ  ಎಲ್ಲಿ ನೋಡಿದರಲ್ಲಿ ದೇಶ ಭಕ್ತಿ ಹಾಡುಗಳು,ಅಖಂಡ ಭಾರತದ ಬಗ್ಗೆ ದೇಶ ಪ್ರೇಮದ ಬಗ್ಗೆ  ದೊಡ್ದ ದೊಡ್ದ ಭಾಷಣಗಳು,ಘೋಷಣೆಗಳು ಕೇಳಿ ಬರುತ್ತದೆ.ಜನರು ಹಾಗೂ ದೊಡ್ದ ಮನುಷ್ಯರು ಸಿಹಿ ತಿOದು ಓOಡಸ್ಟ್ ಗಪ್ಪ ಹೊಡೆದು ಮನೆ ಸೇರಿ ಬಿಡುತ್ತಾರೆ.ಅವತ್ತಿನ ಹೇಳಿದ ಕೇಳಿದ ಭಾಷಣವನ್ನು ಕೇಳಿದವರು ಹೇಳಿದವರು ಅದರಂತೆ ನಡೆಯುತ್ತಾರೆಯೇ ಎOಬುದೇ ಯಕ್ಷ ಪ್ರೆಶ್ನೆ ?
    ಭಂಧುಗಳೆ ಅಖಂಡ ಭಾರತ, ನಾವೆಲ್ಲ ಒಂದೇ,ನಾವೆಲ್ಲ ಭಾರತೀಯರು,ಏಕತೆಯಲ್ಲಿ ಸಾಗಬೇಕು ಎOದು ಬೊಬ್ಬಿಡುವ ಜನ ಇವತ್ತಿನ ತನಕ ರಾಜ್ಯ ರಾಜ್ಯಗಳ ಗಡಿಗಾಗಿ ಹೋರಾಟ ನಡೆಸುತ್ತಾ ಅದನ್ನು ಅವರ ಬದುಕಾಗಿ ರೂಪಿಸಿಕೊOಡು ಜನ ಸಾಮಾನ್ಯರ ನೆಮ್ಮದಿಗೇ ಕೊಳ್ಳಿ ಇಟ್ಟಿದ್ದಾರೆ. ಬೆಳಗಾವಿಯಲ್ಲಿ ಎಮ್ ಈ ಎಸ್ ನ ಪುಂಡಾಟಿಕೆ ಇನ್ನೂ ನಿಂತಿಲ್ಲ.ಮುOಬೈಯಲ್ಲಿ ಶಿವಸೇನೆ ಮತ್ತು ಮನಸೇ ಪಕ್ಷಗಳು ಪರಪ್ರಾಂತಿಯರನ್ನು ಹೇಗೆ ಯಾವ ರೀತಿ ನಡೆಸಿಕೊಳ್ಳುತ್ತಿದೆ ಅಂತ ಅಲ್ಲಿನ ಪರಪ್ರಾಂತಿಯರಿಗೇ ಗೊತ್ತು.ಮೊನ್ನೆ ಕರ್ನಾಟಕದ  ಬೆOಗಳೂರಲ್ಲಿ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಕನ್ನಡ ಇಂಗ್ಲಿಷ್ ಜೊತೆ ರಾಸ್ಯ್ರ ಭಾಷೆ ಹಿOದಿ ಭಾಷೆಯನ್ನೂ ಬರೆಸಿದ್ದರು.ಆದರೆ ಅಲ್ಲಿನ ಮುಖ್ಯಮಂತ್ರಿಯಾಗಿ ಹಿಡಿದು ಕನ್ನಡಪರ ಸಂಘಟನೆಗಳು ಅದನ್ನು ಪ್ರತಿಭಟಿಸಿ ಹಿOದಿ ಭಾಷೆಯಲ್ಲಿ ಬರೆದದ್ದನ್ನು ತೇಗೇಸಿಯೇ ಬಿಟ್ಟರು. ಅದು ಅಲ್ಲಿದ್ದರೇ ಆಗುವ ತೊOದರೆ ಏನೆOದು ಆ ಮೂರ್ಖರಿಗೆ ಗೊತ್ತು.  ಕರ್ನಾಟಕದಾದ್ಯಂತ ಪ್ರದರ್ಶನಗೊಳ್ಳುತ್ತಿರುವ ಹಿOದಿ ಚಲನಚಿತ್ರಗಳ ಪ್ರದರ್ಶನವನ್ನು ಇವರು ನಿಲ್ಲಿಸಿಯಾರೇ ? ಅಲ್ಲಿ ಹಿOದಿ ಓಕೆ.ಆದರೆ ಮೆಟ್ರೋ ನಿಲ್ದಾಣದಲ್ಲಿ ಬೇಡ.ಇವರ ಚಿಂತನಾ ಶಕ್ತಿ ಎಸ್ಟು ಬಾಲಿಶತನದ್ದು ಎOದು ದೇಶವೇ ನಿರ್ದರಿಸಬೇಕು.ಅಖಂಡ ಭಾರತದ ಪರಿಕಲ್ಪನೆ ಇಂತವರಿOದ ನಿರೀಕ್ಷಿಸಲು ಸಾದ್ಯವೇ ? ಕೇರಳ ,ತಮಿಳುನಾಡಿನಲ್ಲಿ ಪರಿಸ್ಥಿತಿ ಇದಕ್ಕಿOತ ಭಿನ್ನವಾಗಿಲ್ಲ. ರಾಷ್ಟ್ರಭಾಷೆಯ ಮೇಲಿಲ್ಲದ ಅಭಿಮಾನ  ಜನರಿಗೇ ರಾಷ್ಟ್ರಾಭಿಮಾನ  ರಾಷ್ಟ್ರ ಪ್ರೇಮ   ಎಲ್ಲಿOದ ಬಂದೀತು ? ನೀವೇ ಹೇಳಿ ? ಇವರಿಗೇ ರಾಷ್ಟ್ರಾಭಿಮಾನ, ಅಖಂಡ ಭಾರತದ ಬಗ್ಗೆ, ಭಾರತೀಯತೆ ಬಗ್ಗೆ ಮಾತನಾಡಲು ಅರ್ಹತೆ ಇದೆಯೇ ಎOದು ದೇಶಾಭಿಮಾನಿಗಳು ಚಿಂತಿಸಬೇಕಿದೆ. ದೇಶದ ತಲೆ ಅಂತಿರುವ ಕಾಶ್ಮೀರ ಇಂದು ಹೊತ್ತಿ ಉರಿಯುತ್ತಿದೆ,ಕಾಶ್ಮೀರದ ಜನತೆಗೆ ನಿಜವಾಗಿಯೂ ಏನು ಬೇಕಿದೆ ಅನ್ನುವ ಅOಶವನ್ನು  ಸ್ವತಂತ್ರ್ಯಾ ನಂತರ ಅಧಿಕಾರ ಹಿಡಿದವರು ಅರಿಯುವ ಪ್ರಯತ್ನ ಮಾಡಿದ್ದಾರೆಯೇ ಏOಬುದು ಈ ತನಕ ಯಾರೂ ಅರಿಯರು.ಈವರೆಗೂ ಜನರ ಮಾರಣ ಹೋಮ ನಡೆಯುತ್ತಾ  ಬOದಿದೆ.ಇದರ ಪರಿಹಾರ ಆ ಭಗವOತನೇ ಬಲ್ಲ.ದೇಶದ ಭ್ರಶ್ಟಾಚಾರ ಮಿತಿಮೀರಿದೆ. ಜಾತಿ ಧರ್ಮಗಳು ಎನ್ನುತ್ತಾ ಒಂದೆಡೇ ಜನತೆ ಕಚ್ಚಾಡಿಕೊOಡು ಸಾಯುತ್ತಿದ್ದಾರೆ.ಸ್ಠ್ರೀ ಭ್ರೂಣ ಹತ್ಯೆ ಹೆಚ್ಚಿದೆ. ದೇಶದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಹತ್ಯೆ ಮೇರೆ ಮೀರಿದೆ.ಮಂಗಳೂರಿನ ಕಾವ್ಯಳ ಸಾವಿನ ಬಗ್ಗೇ  ಸ್ಥಿತಿವಂತ ಜನ ಅವಳ ಅದರ ಸತ್ಯಶೋಧನೆಗಾಗಿ ನಿಲ್ಲಬೇಕಿತ್ತು ಆದರೆ ಅದರ ಮುಖ್ಯಸ್ಠ ಆಳ್ವರ ಪರವಾಗಿ ಬ್ರಹತ್ ಮೋರ್ಚ ಕರೆದಿರುವುದು ವಿಧ್ಯಾವಂತರ ನಾಡಿನ ದೊಡ್ದ ದುರಂತ.ಕಾಯಿದೆ ಕಾನೂನು ಎನ್ನುತ್ತಾ ಮಾತಿನ ಮಲ್ಲರ ವಾದಕ್ಕೆ ಸತ್ಯ ಸೋತು ಅನ್ಯಾಯ ಸ್ವತಂತ್ರ ಭಾರತದಲ್ಲಿ ಗಹಗಹಿಸಿ ನಗುತ್ತಿದೆ. ಆದರೂ ಸ್ವಾತಂತ್ರ್ಯೋತ್ಸವದ ಒಂದು ದಿನ ಮಾತ್ರ  ಭಾಷಣಕಾರರ ಮತ್ತು ಕೇಳುಗರ ದೇಶಪ್ರೇಮ ಉಕ್ಕಿ ಹರಿವ ಅಲೆಗಳಲ್ಲಿ ಬಡ ಜನತೆ ಕೊಚ್ಚಿ ಹೋಗುತ್ತಿರುವುದನ್ನು ನೋಡುವಾಗ ನನಗೆ ನೆನಪಾಗುತ್ತದೆ ಅದೇ ಹಳೇ ಹಾಡು " ನ್ಯಾಯ ಎಲ್ಲಿದೆ ? ನ್ಯಾಯ ಎಲ್ಲಿದೆ ? .ಆದರೂ ಮತ್ತೆ ಮತ್ತೆ ಬರುತ್ತಿದೆ ಸ್ವಾತಂತ್ರ್ಯೋತ್ಸೊವ. ದೇಶಪ್ರೇಮ, ದೇಶಾಭಿಮಾನ,ಮಾನವತೆ ಮರೀಚಿಕೇಯಾಗುತ್ತಿದೆ. ಪ್ರಜಾಪ್ರಭುತ್ವದ ಹೆಸರಲ್ಲಿ ,ಸ್ವಾತಂತ್ರ್ಯದ  ಹೆಸರಲ್ಲಿ ಸರ್ವಾಧೀಕಾರ  ಅರಾಜಕತೆ  ಪರೋಕ್ಷವಾಗಿ ತಾಂಡವವಾಡುತ್ತಿದೆ ಅಂದರೆ ತಪ್ಪಲ್ಲವೆಲ್ಲವೇ ?
ಏನಂತೀರಿ ?

ಗಣೇಶ್ ಶೇರಿಗಾರ್
ವಾಶಿ ನವಿ ಮುOಬೈ

9594228684

Wednesday, 2 August 2017

ಅತ್ತೆಗೊOದು ಕಾಲ ಸೊಸೆಗೊOದು ಕಾಲ

ವೇದಗಳು ಸುಳ್ಳಾಗಬಹುದು ಆದರೆ ಗಾದೆಗಳು ಸುಳ್ಳಾಗುವುದಿಲ್ಲ ಎ Oಬ ಹಿರಿಯರ ಮಾತು ಇಂದಿಗೂ ಪ್ರಸ್ತುತ.ಹಿOದೆ ಕೇOದ್ರದಲ್ಲಿ ಕಾಂಗ್ರೇಸ್ ಅಧಿಕಾರದಲ್ಲಿದ್ದಾಗ ಅಡ್ಡಮತದಾನದ ಹೆದರಿಕೆ ಬಿಜೆಪಿಗಿತ್ತು.  ಅದು ಎಲ್ಲಿಯ ತನಕ ಇತ್ತೇಂದಂದರೇ ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರನ್ನೇ ತನ್ನ ಕಂಟ್ರೋಲ್ ಗೆ ತೆಗೆದುಕೋOಡು ಅವರನ್ನೇ ಕೆ ಜೆ ಪಿ ಸ್ಥಾಪಿಸುವುದರ ಮೂಲಕ ಬಿಜೆಪಿ ಗೆ ದೊಡ್ದ ಹೋಡೇತವನ್ನೇ ಕಳೆದ ವಿಧಾನ ಸಭೆ ಚುನಾವಣೆ ಯಲ್ಲಿ ಕೊಟ್ಟದ್ದನ್ನು ಜನತೆ ಮರೆತಿಲ್ಲ.ಶ್ರೀ ಯಡಿಯೂರಪ್ಪನಂತವರೆ ಕಾಁಗ್ರೇಸ್ಸ ನ ಚದುರಂಗದಾಟಕ್ಕೆ ಬಲಿ ಬಿದ್ದಿದ್ದರು.ಆದರೆ ಇಂದು ಬಿಜೆಪಿ ಕೇOದ್ರದಲ್ಲಿ ಅಧಿಕಾರದಲ್ಲಿದೆ.ಗುಜರಾತ್ ನ 44 ಕ್ಕೂ ಹೆಚ್ಚು ಶಾಸಕರು ಬಿ ಜೆ ಪಿ ಯ ಹೆದರಿಕೆಯಿಂದ  ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ.ರಾಜ್ಯಸಭೆ ಸದಸ್ಯರ ಆಯ್ಕೆಗಾಗಿ ಅಡ್ಡ ಮತದಾನ ಮಾಡುವರೆOಬ ಹೆದರಿಕೆಯಿಂದ 44 ಕ್ಕೂ ಹೆಚ್ಚು ಗುಜರಾತ್ನ ಶಾಸಕರನ್ನು  ಬೆOಗಳೂರಿನ ರೆಸಾರ್ಟ್ನನಲ್ಲಿ ಕಾಂಗ್ರೇಸ್ಸ ಹೈ ಕಮಾOಡ್  ಮೋಜಿನಲ್ಲಿ ಮೂಳುಗಿಸಿದ್ದಾರೆ. . ಇವರ   ಉಸ್ತುವಾರಿ ನೋಡುತ್ತಿರುವ ಸಂಸದ ಡಿ ಕೆ ಸುರೇಶ್  ಹೇಳುತ್ತಾರೆ,ಪ್ರಜಾಪ್ರಭುತ್ವದ  ಉಳಿವಿಗಾಗಿ ಅವರನ್ನು ಇಲ್ಲಿಗೆ ಕರೆತರಲಾಗಿದೆಯಂತೆ. ಈಗಲಾದರೂ ಕಾಂಗ್ರೇಸ್ಸಿಗರಿಗೆ ತಡವಾಗಿ ಪ್ರಜಾಪ್ರಭೂತ್ವದ ಅರಿವಾಗಿದೆ.ಕರ್ನಾಟಕದಲ್ಲಿ ಇದೇ ಕಾಂಗ್ರೇಸ್ಸ  ವಿಧಾನಪರಿಷತ್ ಸದಸ್ಯರ ಆಯ್ಕೆಯ ಸಮಯ  8 ಮಂದಿ ಜೆ ಡಿ ಎಸ್ ಶಾಸಕರನ್ನು ಖರೀದಿಸಿ ವಿಧಾನಪರಿಷತ್ ಮತದಾನದಲ್ಲಿ ಗೆದ್ದಿದ್ದರು.ಆಗ ಪ್ರಜಾಪ್ರಭೂತ್ವ ಉಳಿಸಬೇಕೆOಬ ಆರಿವು ಇರಲಿಲ್ಲವೇ ? ಕೇOದ್ರದಲ್ಲಿ ಯಾರು ಅಧಿಕಾರದಲ್ಲಿರುತ್ತಾರೋ ಅವರನ್ನು ಹೊರತುಪಡಿಸಿ ಬೇರೆ ರಾಜಕೀಯ ಪಕ್ಷಗಳಿಗೆ ಈ ಗಂಡಾOತರ ಮಾಮೂಲು.ಇದಕ್ಕೆ ಹೇಳುವುದು ಅತ್ತೇಗೋಂದು ಕಾಲ ಸೊಸೆಗೊOದು ಕಾಲ.ಇನ್ನು ಗುಜರಾತನಲ್ಲಿನ ಮೂರ್ನಾಲ್ಕು ಕಾಂಗ್ರೇಸ್ಸ ಶಾಸಕರ ಮೊಬೈಲ್ ಫೋನ್ ಹೈಕಮಾOಡ್ ಕಿತ್ತಿಟ್ಟುಕೊOಡು ಅವರನ್ನು ಸOಪರ್ಕರಹಿತರನ್ನಾಗಿ ಮಾಡಿದೆ.ಇಸ್ಟೆಲ್ಲಾ ಆದರೂ ಈ ಪಕ್ಶಾಂತರಿಗಳನ್ನು ಪುನಃ ಆರಿಸಿ ಆಯ್ಕೆ ಮಾಡಿ ಕಳುಹಿಸು ಮತದಾರರೇ ನಿಜವಾಗಿಯೂ ಮೂರ್ಖರು ಮತ್ತು ಸ್ವಂತ ಚಿಂತನೆ ಇಲ್ಲದವರಾಗಿರುತ್ತಾರೆ.ಈ ಮತದಾರರೇ ನಿಜವಾದ ಪ್ರಜಾಪ್ರಭೂತ್ವದ ಕಂಟಕರು.ಇವರಿOದಾಗಿ ಪ್ರಜಾಪ್ರಭೂತ್ವ ತನ್ನ ಮಹತ್ವ ಕಳೆದುಕೊOಡಿದೆ ಎOದರೆ ತಪ್ಪಲ್ಲ.ಇಂದು ಬಿಜೆಪಿ ಹೇಳುತ್ತಿದೆ  ಗುಜರಾತ್ ನಲ್ಲಿ ಪ್ರವಾಹ ಪರಿಸ್ತಿತಿ ಇರುವಾಗ ಕಾಂಗ್ರೇಸ್ಸ ಶಾಸಕರೂ ಬೆOಗಳೂರಿನ ರೆಸಾರ್ಟ್ ನಲ್ಲಿ ಮೋಜು ಮಾಡುತ್ತಿರುವುದು ಸಾರಿಯೇ ಎOದು.ಅಂದು ಶ್ರೀ ಯಡಿರುರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವ್ರನ್ನು ಅಂತಂತ್ರಗೊಳಿಸಲು ಓಂದಿಸ್ತು  ಬಿಜೆಪಿ ಶಾಸಕರ ಗುOಪು ಕಾಂಗ್ರೇಸ್ಸ ನ ಸಹಾಯದ ಮೂಲಕ ಅಂದ್ರ ಪ್ರದೇಶದ ರೆಸಾರ್ಟ್ನಲ್ಲಿ ಮೋಜು ಮಾಡುತಿದ್ದರು.ಆಗ ಕಾಗ್ರೇಸೀಗರು ಕೇಳುತ್ತಿದ್ದರು ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇರುವಾಗ ಬಿಜೆಪಿ ಶಾಸಕರು ರೆಸಾರ್ಟ್ನಲ್ಲಿ ಮೋಜು ಮಾಡುವುದು ಸಾರಿಯೇ ? ಒಟ್ಟಿನಲ್ಲಿ ಅವರವರು ಅವರವರ ಕಾಲದಲ್ಲಿ ಮಾಡಿದ್ದು ಸರಿ.ಬೇರೆಯವರು ಮಾಡಿದ್ದು ತಪ್ಪು.ಈ ರಾಜಕೀಯ ಪಕ್ಷಗಳು  ತಾವುಗಳು ಏನೇ ತಪ್ಪು ಮಾಡಿದರೂ ಅದನ್ನು ಸಮರ್ಥಿಸಿಕೊOಡು ಜನರನ್ನು ಮೂರ್ಖರನ್ನಾಗಿ ಮಾಡುವಲ್ಲಿ ಯಶಸ್ವಿಯಾಗುತ್ತಿವೆ.ಇನ್ನು ಜನರು ಮೂರ್ಖರಾಗುತ್ತಿರುವುದು ಜನತೆಯ ಕರ್ಮ. ಕರ್ನಾಟಕವಂತೂ ಇತ್ತೀಚೆಗೆ ಮನೋರಂಜನೆಯ ಕೇOದ್ರವಾಗುತ್ತಿದೆ.ಈ  ರಾಜಕೀಯ ಪಕ್ಷಗಳ ಮನೋರಂಜನೆಯ ಭರಾಟೇಯಲ್ಲಿ ಅಲ್ಲಿನ ಟಿವಿ ದಾರಾವಾಹಿಗಳು ಪ್ರೇಕ್ಷಕರಿಲ್ಲದೆ ಸೋಲುತ್ತಿವೇಯಂತೇ. ಮೌಲ್ಯಾಧಾರಿತ ರಾಜಕಾರಣ ಹಳ್ಳ ಹಿಡಿಯುತ್ತಿದ್ದು ಇಡೀ ಪ್ರಜಾಪ್ರಭೂತ್ವದ ಮೇಲೆ ಶ್ರೀ ಸಾಮಾನ್ಯ ಭರವಸೆಯನ್ನು ಕಳೆದುಕೊಳ್ಳಲಾರOಭಿಸಿದ್ದಾನೆ .ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

9594228684

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...