Tuesday, 11 July 2017
Monday, 3 July 2017
ದೇವಾಡಿಗ ಸಂಘ ಮುoಬೈ -ನಗರ ಪ್ರಾದೇಶಿಕ ಸಮನ್ವಯ ಸಮಿತಿವತಿಯಿoದ ವನ ಮಹೋತ್ಸವ ಮತ್ತು ಸ್ವಚ್ಛತ ಅಭಿಯಾನ.
ದೇವಾಡಿಗ ಸಂಘ ಮುoಬೈ ನಗರ ಪ್ರಾದೇಶಿಕ ಸಮನ್ವಯ ಸಮಿತಿಯ ಸದಸ್ಯರು ಇದೇ ತಾ 1 ರಂದು ಪರೇಲ್ ನ ಬೊಯಿವಾಡದ ಬೆಸ್ಟ್ ಕಾಲೊನಿಯ ಪರಿಸರದಲ್ಲಿ ಬೆಸ್ಟ್ ಕಾರ್ಯಕರ್ತರ ಜತೆಗೂಡಿ ವ್ರಕ್ಶಾರೋಹಣ ಮತ್ತು ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊoಡರು.ಜುಲೈ ತಿoಗಳಿನಿoದ ಪ್ರಾರಂಭಗೊoಡ ವನ ಮಹೋತ್ಸವ ಸಪ್ತಾಹವು ಮುoಬೈ ಮಾಜಿ ಮೇಯರ್ ಶ್ರೀಮತಿ ಶ್ರದ್ಧಾ ಜಾಧವ್ ಅವರ ಸಹಯೋಗದೊoದಿಗೆ ಬೆಸ್ಟ್ ಕಾಲೊನಿಯ ಪರಿಸರದಲ್ಲಿ ಅನೇಕ ಗಿಡಗಳನ್ನು ನೆಡುವುದರ ಮೂಲಕ ಶುಭಾರoಭಗೊoಡಿತು.ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಆದಸ್ಟು ನಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟು ಆರೋಗ್ಯಯುತ ಸಮಾಜ ನಿರ್ಮಾಣ ಮಾಡಿ ದೇಶಸೇವೆ ಮಾಡೋಣ ಎoದು ಶ್ರೀಮತಿ ಶ್ರದ್ಧಾ ಜಾಧವ್ ಕರೆ ನೀಡಿದರು.
ದೇವಾಡಿಗ ಸಂಘದ ಮಾಜಿ ಅಧ್ಯಕ್ಷರು ಶ್ರೀ ಎಚ್ ಮೋಹನ್ ದಾಸ್ ಮತ್ತು ನಗರ ಪ್ರಾದೇಶಿಕ ಸಮನ್ವಯ ಸಮಿತಿಯ ಪದಾಧಿಕಾರಿಗಳು ಈ ವ್ರಕ್ಶಾರೋಹಣ ಮತ್ತು ಸ್ವಚ್ಛತಾ ಅಭಿಯಾನದoತ ಜನ ಹಿತ ಕಾರ್ಯಕ್ರಮದಲ್ಲಿ ಕೈಗೂಡಿಸಿದರು. ಶ್ರೀಮತಿ ಶ್ರದ್ಧಾ ಜಾಧವ್,ಸಂಘದ ಮಾಜಿ ಅಧ್ಯಕ್ಷ ಶ್ರೀ ಎಚ್ ಮೋಹನ್ ದಾಸ್,ಸಂಘದ ಜತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಮೊಯಿಲಿ, ಸಿಟಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ರೀ ಶೇಕರ್ ಶೇರಿಗಾರ್, ಈಗಿನ ಕಾರ್ಯಾಧ್ಯಕ್ಷ ಹೇಮನಾಥ್ ದೇವಾಡಿಗ ಇವರುಗಳನ್ನು ಶ್ರೀಫಲ ಮತ್ತು ಹೂಗುಚ್ಛ ನೀಡಿ , ಶಾಲು ಹೊದಿಸಿ ಗೌರವಿಸಲಾಯಿತು. ದೇವಾಡಿಗ ಸಂಘ ಮುoಬೈ ನ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಭಾರತಿ ನಿಟ್ಟೇಕರ್ ಹಾಗೂ ನಗರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷೆ ಶ್ರೀಮತಿ ಗೀತ ದೇವಾಡಿಗರು ಉಪಸ್ಥಿತರಿದ್ದರು.ಅಲ್ಲದೆ ಸಂಘದ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ರುಗಳಾದ ಶ್ರೀಮತಿ ಸುರೇಖ ದೇವಾಡಿಗ ಮತ್ತು ಶ್ರೀಮತಿ ರಂಜಿನಿ ಮೊಯಿಲಿ, ಸಿಟಿ ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಸುಜಯ ದೇವಾಡಿಗ , ,ಶ್ರೀಮತಿ ಮಮತ ದೇವಾಡಿಗ,ಶ್ರೀಮತಿ ಶಶಿಕಲ ಮೊಯಿಲಿ , ಶ್ರೀಮತಿ ಸರೋಜಿನಿ ದೇವಾಡಿಗ ಮತ್ತು ಸಿಟಿ ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ನಿತೇಶ್ ದೇವಾಡಿಗ ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು
-------ಶ್ರೀ ಗಣೇಶ್ ಶೇರಿಗಾರ್
Saturday, 1 July 2017
ಕಗ್ಗೋಲೇಯತ್ತ ಸಾಗುತ್ತಿರುವ ಪ್ರಜಾಸತ್ತೆ...
ಇತ್ತೀಚಿನ ದೇಶದ ಮತ್ತು ಅವಿಭಜಿತ ದಕ್ಷಿಣಕನ್ನಡದಲ್ಲಿನ ವಿದ್ಯಾಮಾನಗಳು ನಿಜಕ್ಕೂ ಆತಂಕವುoಟು ಮಾಡುವಂತದ್ದು.ದಿನೇ ದಿನೇ ಕೋಮು ಸೌಹಾರ್ದತೆಯನ್ನು ಕೆಡಿಸುವoತ ಘಟನೆಗಳು ನಡೆಯುತ್ತಿವೆ.ಗೋರಕ್ಷಣೆಯ ಹೆಸರಿ ನಲ್ಲಿ ಮನುಷ್ಯರ ಹತ್ಯೆಯಾಗುತ್ತಿರುವುದು ನಿಜಕ್ಕೂ ದಿಗಿಲು ಹೆಚ್ಚಿಸುವಂತದ್ದು. ವಿದ್ಯಾವಂತರ ,ಬುದ್ದಿವಂತರ ನಾಡು ಎoದು ಹೆಸರಾಗಿದ್ದ ಉಡುಪಿ ಮಂಗಳೂರು ಜಿಲ್ಲೆಗಳಿಗೇಕೋ ಗ್ರಹಣ ಹಿಡಿದಂತಿದೆ.ಗೋರಕ್ಷಣೆಯ ಹೆಸರಲ್ಲಿ ಒಂದು ಅಂತರ್ಯುದ್ಧವೇ ಏರ್ಪಟ್ಟಿದೆ ಎoದರೆ ತಪ್ಪಲ್ಲ.ಕಲ್ಲಡ್ಕ ಬೆಳ್ತಂಗಡಿ ,ಬಂಟ್ವಾಳ,ಉಳ್ಳಾಲದ ಘಟನೆಗಳು ಸಮಾಜದ ಸಾಮರಸ್ಯವನ್ನು ಕೆಡಿಸಿವೆ.ಇದರ ನಡುವೆ ಇದನ್ನೆಲ್ಲ ಅರಿತ ಶ್ರೀ ಪೇಜಾವರ ಸ್ವಾಮೀಜಿಯರು ಮುಸ್ಲಿಮ್ ಭಾಂಧ ವರನ್ನು ಕೃಷ್ಣ ಮಟಕ್ಕೆ ಉಪಾಹಾರಕ್ಕೆ ಕರೆಸಿ ಸೌಹಾರ್ದವನ್ನು ಹೆಚ್ಚಿಸಲು ಕೈಗೋಂಡ ಕ್ರಮ ನಿಜಕ್ಕೂ ಸ್ವಾಗತಾರ್ಹ.ಇಲ್ಲಿ ಎಲೆಕ್ಟ್ರೋನಿಕ್ ಮಾಧ್ಯಮದವರು ತಮ್ಮ ಜವಬ್ದಾರಿ ಅರಿತು ಯಾವ ವಿಷಯಕ್ಕೆ ಪ್ರಾಮುಖ್ಯತೆ ನೀಡಬೇಕು ಎoಬುದನ್ನು ಆರಿತು ಕಾರ್ಯಕ್ರಮ ನಿರ್ವಹಿಸಬೇಕಿದೆ, ಹಾಗೂ ಸಮಾಜದ ಹಿತ ಕಾಪಡಬೇಕಿದೆ.
ಒಂದಂತೂ ಸ್ಪಸ್ಟ ಇತ್ತೀಚಿನ ಘಟನೆಗಳನ್ನು ನೋಡುವಾಗ ಇದಕ್ಕೆಲ್ಲ ಕಾರಣ ಜಾತಿ ರಾಜಕಾರಣ.ಇವತ್ತು ವೋಟ್ ಬ್ಯಾoಕ್ ರಾಜಕಾರಣ ಇಡೀ ಸಮಾಜದ ಸ್ವಾಸ್ತ್ಯವನ್ನು ಕೆಡಿಸಿದೆ ಅಂದರೆ ತಪ್ಪಲ್ಲ.ಇದು ಪುನಃ ದೇಶವನ್ನು ಗುಲಾಮಿತನಕ್ಕೆ ಕೊoಡೂಯಿದರೆ ಆಶ್ಚರ್ಯ ಪಡಬೇಕಿಲ್ಲ.ಮೊನ್ನೆ ಉಡುಪಿ ನಗರಸಭೆಯಲ್ಲಿ ಅಲ್ಲಿನ ಸದಸ್ಯರೆ ಒಬ್ಬ ನಾಗರೀಕರನ್ನು ಸಭೆಗೆ ಕರೆಸಿ ಅವರನ್ನು ಹೊಡೆದು ಹೊರಹಾಕಿದ ರೀತಿ ನಿಜಕ್ಕೂ ಪ್ರಜಾಸತ್ತೆಯ ಕಗ್ಗೊಲೆ. ನಗರ ಸೆಭೆಯ ಒಳಗೇ ಜನಸಾಮಾನ್ಯನ ಪರಿಸ್ಥಿತಿ ಹೀಗಾದರೆ ಇನ್ನೂ ಹೊರಗೆ ರಕ್ಷಣೆ ಯಾವ ರೀತಿಯದ್ದು ಎoದು ನೀವೇ ಅರಿಯಬೇಕಿದೆ.ನಿಜಕ್ಕೂ ದೇಶದಲ್ಲಿ ಕಾನೂನು ಇದೆ ಎಂದಾದಲ್ಲಿ ಸಿಸಿಟಿವಿ ಕ್ಯಾಮ್ರಾದಲ್ಲಿ ಸೆರೆಯಾದ ಪ್ರಕಾರ ತಪ್ಪೀಸ್ತತ್ತ ಸದಸ್ಯರನ್ನು ಅವರ ಸದಸ್ಯತ್ವವನ್ನು ವಜಾಗೊಳಿಸಬೇಕಿದೆ.ಇದು ನಮ್ಮ ದೇಶದ ಕಾನೂನಿಗೆ ಅಸ್ಟು ತಾಕತ್ತಿದೆಯೇ ? ಇವತ್ತು ದೇಶದಲ್ಲಿ ಕಾನೂನಿನ ಮೇಲೆ ಹಣ ಮತ್ತು ರಾಜಕೀಯ ಸವಾರಿ ಮಾಡುತ್ತಿರುವುದೇ ಇಂದಿನ ಭಾರತದ ಎಲ್ಲಾ ಕೆಟ್ಟ ವಿದ್ಯಮಾನಗಳ ಉಗಮಕ್ಕೆ ಕಾರಣ.ಆದರೆ ಅದನ್ನರಿತು ಭಾರತೀಯರರು ನಡೆದಾರೆ ? ಎಲ್ಲಕ್ಕೂ ಕಾಲವೇ ಉತ್ತರಿಸಬೇಕಿದೆ. ಮತ್ತೋಂದೆಡೆ ರಾಷ್ಟ್ರಪತಿ ಚುನಾವಣೆಯೇ ನೋಡಿ.ಜಾತಿ ಚದುರಂಗದಾಟದ ಮಹಾನ್ ಕದನವೇ ಏರ್ಪಟ್ಟಿದೆ.ಕರ್ನಾಟಕದ ಕಾಂಗ್ರೇಸ್ಸ್ ನಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ಆಗಾಗ ಕೇಳಿ ಬರುತ್ತಿತ್ತು.ಈಗ ದಲಿತ ವರ್ಗದವರಾದ ಶ್ರೀ ರಮಾನಾಥ್ ಕೋವಿoದ್ ಅ ವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಜೆಪಿ ಯವರು ನಿಲ್ಲಿಸಿದ್ದು ಕಾಂಗ್ರೇಸಿಗರಿಗೆ ಪಥ್ಯವಾಗದೆ ಸೋಲುವುದು ಗೊತ್ತಿದ್ದರು ಅವರೂ ಶ್ರೀಮತಿ ಮೀರಾಕುಮಾರವರನ್ನು ನಿಲ್ಲಿಸಿ ಜಾತಿ ಜಾತಿ ಒಳಗೆ ಕಿಚ್ಚನ್ನು ತಂದಿಟ್ಟಿದ್ದಾರೆ.ಈ ಹೊಲಸು ರಾಜಕೀಯವನ್ನು ಅರಿಯದಸ್ಟು ಭಾರತೀಯರು ಮೂರ್ಖರೇನಲ್ಲ.ಇನ್ನು ಬೈಕಳ ಜೈಲಿನಲ್ಲಿ ಮಹಿಳಾ ಕೈದಿಯು ಮ್ರತ ಪಟ್ಟಿದ್ದಾರೆ.ಆದರೆ ಅದೇ ಜೈಲಿನಲ್ಲಿದ್ದ ಇಂದ್ರಾಣಿ ಮುಖರ್ಜಿ ಯ ಹೇಳಿಕೆ ಪ್ರಕಾರ ಅದು ಆಕಸ್ಮಿಕ ಸಾವು ಅಲ್ಲ ಅವಳನ್ನು ಅತ್ಯಾಚಾರಗೈದು ಹತ್ಯೆಗೈಯಲಾಗಿದೆ ಎoದು ಹೇಳಿಕೆ ನೀಡಿದ್ದಾಳೆ.ಜೈಲಿನಲ್ಲಿ ಉಳಿದ ಮಹಿಳಾ ಕೈದಿಗಳು ಅಲ್ಲಿನ ಪ್ರಶಾನದ ಬಗ್ಗೆ ದಂಗೆ ಎದ್ದಿದ್ದಾರೆ.ಅತ್ಯಾಚಾರ ನಿಜವಾಗಿಯೂ ನಡೆದಿದ್ದರೆ ಅದು ಪ್ರಜಾಸತ್ತೆಯ ಅತ್ಯಾಚಾರಕ್ಕೆ ಸಮ.ಮಹಿಳೆಯರು ಹೊರಗೆ ಸುರಕ್ಷಿತವಲ್ಲ ನಿಜ ಆದರೆ ಜೈಲಿನ ಒಳಗೂ ಸುರಕ್ಷಿತವಲ್ಲ ಅಂದರೆ ಇದು ಕಾನೂನಿನ ಪರಿಹಾಸ್ಯವಲ್ಲವೇ ? ಕಾಶ್ಮೀರದಲ್ಲಿ ದೇಶದ ಗಡಿಭಾಗದಲ್ಲಿ ದೇಶದ ಸುರಕ್ಷತೆಗಾಗಿ ಸೈನಿಕರು ಹಾಗೂ ದೇಶದ ಅನ್ನದಾತ ರೈತರು ದಿನ ನಿತ್ಯವೂ ಸಾಯುತ್ತಿದ್ದರೆ ನಮ್ಮ ಜನರಿಗೆ ಅದರ ವ್ಯತ್ಯಾಸವೇ ಇಲ್ಲ. ನಮ್ಮ ದೇಶದಲ್ಲಿ ಕ್ರಿಕೆಟಿಗರಿಗೆ ಮತ್ತು ಸಿನಿತಾರೆಯರಿಗೆ ಸಿಗುವ ಮರ್ಯಾದೇ ದೇಶದ ರೈತರಿಗೆ ಮತ್ತು ಸೈನಿಕರಿಗೆ ಸಿಗದಿರುವುದು ದೇಶದ ದೌರ್ಭಾಗ್ಯ. ಹಿoದೆ ಜೈ ಜವಾನ್ ಜೈ ಕಿಸಾನ್ ಎನ್ನುತ್ತಿದ್ದ ಜನತೆ ಇಂದು ಜೈ ಸಿನಿಮಾ ತಾರೆ ,ಜೈ ಕ್ರಿಕೆಟಿಗರು,ಜೈ ರಾಜಕಾರಣಿ ಎನ್ನುವoತ ಸ್ಥಿತಿಗೆ ತಲುಪುತ್ತಿರುವುದು ದೇಶದ ವಿಡoಬನೆಯಲ್ಲವೇ ? ದೇಶದಲ್ಲಿ ಧಾರ್ಮಿಕತೆ ಮತ್ತು ಶಿಕ್ಷಣ ವ್ಯಾಪಾರೀಕರಣವಾಗಿರುವಾಗ ಸಹಜವಾಗಿಯೇ ಜನತೆಯ ನೈತಿಕತೆಯ ಮಟ್ಟ ಕುಸಿದಿದೆ.ಮೂರು ದಿನದ ಜೀವನದ ಸಂತೆಯಲ್ಲಿ ಪ್ರೀತಿ ಹಂಚ ಬೇಕೇ ಹೊರತು ದ್ವೇಷವನ್ನಲ್ಲ.ಈ ಭೂಮಿ ಏನಿದ್ದರೂ ನಮ್ಮ ತಾತ್ಕಾಲಿಕ ವಸತಿ, ಉಸಿರು ತೊರೆದ ಬಳಿಕ ಪರಲೋಕವೇ ಶಾಶ್ವತ ವಸತಿ ಎoದು ಅರಿತು ಮನುಜ ನಡೆದಾಗ ಮಾತ್ರ ಇಡೀ ದೇಶ ಏಕೆ ಪ್ರಪಂಚವೇ ಸ್ನೇಹ ಸೌಹಾರ್ದತೆಯ ಬೀಡಾಗುತ್ತದೆ.
ಏನಂತೀರಿ ?
ಗಣೇಶ್ ಎಸ್ ಬ್ರಹ್ಮಾವರ್
ವಾಶಿ, ನವಿಮುoಬೈ
Tuesday, 27 June 2017
ನವಿಮುಂಬಯಿ ಜಿಲ್ಲಾ ಬಿ ಜೆ ಪಿ ಕನ್ನಡ ಘಟಕ ಮತ್ತು ದೇವಾಡಿಗ ಸಂಘ ಮುoಬಯಿ: ಉಚಿತ ವೈದ್ಯಕೀಯ ಶಿಬಿರವು ಯಶಸ್ವಿಯಾಗಿ ಸಂಪನ್ನಗೊoಡಿತು.
-------ಶ್ರೀ ಗಣೇಶ್ ಶೇರಿಗಾರ್.
ನವಿಮುಂಬಯಿ ಜಿಲ್ಲಾ ಬಿ ಜೆ ಪಿ ಕನ್ನಡ ಘಟಕವು ದೇವಾಡಿಗ ಸಂಘ ಮುoಬಯಿ ಜೊತೆ ಜಂಟಿಯಾಗಿ ದೇವಾಡಿಗ ಭವನ ನೆರುಲ್ ನಲ್ಲಿ ತಾರೀಕು 25ರಂದು ಹೆಮ್ಮಿಕೊoಡ ಉಚಿತ ವೈದ್ಯಕೀಯ ಶಿಬಿರವು ಯಶಸ್ವಿಯಾಗಿ ಸಂಪನ್ನಗೊoಡಿತು. ಬೆಳಿಗ್ಗೆ ವರುಣನ ಆರ್ಭಟವಿದ್ದರೂ ಸುಮಾರು 200 ಕ್ಕೂ ಹೆಚ್ಚು ಜನರು ಪಾಲ್ಗೊಂಡು ಉಪಯೋಗ ಪಡೆದುಕೊoಡರು.ಇದು ಜನತೆಗೆ ವೈದ್ಯಕೀಯ ಅವಶ್ಯಕತೆ ಎಷ್ಟು ಇದೆ ಎoಬುದನ್ನು ಸಾದರಪಡಿಸಿತು. ನವಿಮುಂಬಯಿ ಜನಪ್ರಿಯ ಬಿಜೆಪಿ ಶಾಸಕಿ ಶ್ರೀಮತಿ ಮಂದಾ ಮಾತ್ರೆ ಯವರು ನವಿಮುoಬಯಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶ್ರೀ ರಾಮಚಂದ್ರ ಘರಾಟ್, ನವಿ ಮುoಬೈ ಜಿಲ್ಲಾ ಬಿಜೆಪಿ ಕನ್ನಡ ಘಟಕದ ಅಧ್ಯಕ್ಷ ಶ್ರೀ ಹರೀಶ್ ಪೂಜಾರಿ,ದೇವಾಡಿಗ ಸಂಘ ಮುoಬೈ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗ, ಗೌರವ ಪ್ರಧಾನಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ,ಬಿಜೆಪಿ ಕನ್ನಡ ಘಟಕದ ಮಹಿಳಾ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ದೇವಾಡಿಗ, ಮತ್ತು ಬಿಜೆಪಿಯ ಶ್ರೀ ವಿಕ್ರಂ ಪರಂಜುಲಿ,ನಿತಿನ್ ಕಂಡೊರಿ ಯಾವರ ಜತೆಗೂಡಿ ದೀಪ ಪ್ರಜ್ವಲಿಸಿ ವೈದ್ಯಕೀಯ ಶಿಬಿರ ಉದ್ಘಾಟಿಸಿದರು.ಮೊದಲಿಗೆ ಶ್ರೀಮತಿ ತಾರ ಬಂಗೇರ ಪ್ರಾರ್ಥನೆಗೈದರು. ನಂತರ ಕನ್ನಡ ಘಟಕದ ಅದ್ಯಕ್ಷರು ಮತ್ತು ಅವರ ಪದಾದೀಕಾರೀಗಳ ಜತೆಗೂಡಿ ತುಳು ಕನ್ನಡಿಗರ ಮುಖ್ಯ ಸಮಸ್ಯೇ ಯಾದ ಓ.ಬಿ. ಸಿ. ಸರ್ಟಿಫಿಕೇಟ್ ತೆಗೇಯುವಲ್ಲಿ ಇರುವ 1967 ರ ಮೊದಲಿನ ಧಾಖಲೆಯನ್ನು ತೆಗೆದು ಸರಳಿಕರಿಸಿಕೊಡುವoತೆ ಮನವಿ ಸಲ್ಲಿಸಿದರು.ಇದು ಮುoಬೈ ಮಹಾನಗರದಲ್ಲಿ ಅಸಂಖ್ಯಾತ ಪರ ಪ್ರಾಂತಿಯ ಸಂಘಟನೆಗಳಿದ್ದರೂ ಕನ್ನಡ ಬಿಜೆಪಿ ಘಟಕದ ಪ್ರಪಥಮ ಕಾರ್ಯವೈಕರಿಗೆ ಸಾಕ್ಷಿ ಯಾಯಿತು.ಇದಕ್ಕೆ ಉತ್ತರಿಸುತ್ತ ಶ್ರೀಮತಿ ಮಂದಾ ಮಾತ್ರೆಯವರು ಮಹಾರಾಷ್ಟ್ರದ ಹೊರರಾಜ್ಯಗಳಲ್ಲಿ ಅಲ್ಲಿನ ಪರಪ್ರಾಂತಿಯರ ನೀತಿ ಇದಕ್ಕಿoತ ಭಿನ್ನವಾಗಿದ್ದಲ್ಲಿ ಖಂಡಿತವಾಗಿಯೂಁ ಮಹಾರಾಷ್ಟ್ರದಲ್ಲಿ ಪ್ರಯತ್ನೀಸುವ ಭರವಸೇ ನೀಡಿದರು.ಮಾತ್ರವಲ್ಲದೆ ರಾಜೀವ್ ಗಾಂಧಿ ವೈದ್ಯಕೀಯ ಯೋಜನೆ.ಮುಖ್ಯಮಂತ್ರಿ ಮೆಡಿಕಲ್ ಅನುದಾನದ ಸoಪೂರ್ಣ ವಿವರ ನೀಡಿ ಅದನ್ನು ತೆಗೆಸಿಕೊಡುವ ಸoಪೂರ್ಣ ಜವಾಬ್ದಾರಿ ತನ್ನದೆoದರು.ಮುoದೆ ಕನ್ನಡ ಘಟಕದ ಅಧ್ಯಕ್ಷ ಶ್ರೀ ಹರೀಶ್ ಪೂಜಾರಿ ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ ಇತ್ತೀಚೆಗೆ ಒಂದು ಅಪಂಗ ರೋಗಿಗೆ ತಮ್ಮ ಘಟಕವು ನೀಡಿದ ವೈದ್ಯಕೀಯ ನೆರೆವಿನ ಬಗ್ಗೇ ನೆನಪಿಸಿ ಉಚಿತ ವೈದ್ಯಕೀಯ ಶಿಬಿರಕ್ಕೆ ಪ್ರೇರಣೆ ಇದು ಕಾರಣವಾಯಿತು ಅಲ್ಲದೆ ಸರಕಾರದಿoದ ಸಿಗುವ ಸವಲತ್ತೂಗಳನ್ನು ಈ ಶಿಬಿರದ ಮೂಲಕ ಅರಿವು ಮೂಡಿಸುವ ಕನ್ನಡ ಘಟಕದ ಚೊಚ್ಚಲ ಪ್ರಯತ್ನ ಇದೆoದರು. ವ್ಯದ್ಯಕೀಯ ಶಿಬಿರದಲ್ಲಿ ಕಣ್ಣು ತಾಪಷಾಣೆ ಮಾಡಿದ ನಂತರ 100 ಜನರಿಗೆ ಉಚಿತ ಕಣ್ಣಿನ ಗ್ಲಾಸನ್ನು ವಿತರಿಸರಿಸಲಾಯಿತು. 200 ಕ್ಕೂ ಹೆಚ್ಚು ಸ್ಥಳೀಯ ಜನರು ಈ ವ್ಯೆದ್ಯಕೀಯ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶ್ಶ್ವಿ ಮಾಡಲು ಸಹಕರಿದರು. ತದನಂತರ ಬಿಜೆಪಿ ಕನ್ನಡಘಟಕದ ಉಪಾಧ್ಯಕ್ಷರುಗಳು ಹಾಗೂ ದಾನಿಗಳಾದ ಶ್ರೀ ರಘುರಾಮ್ ಆಚಾರ್ಯ,ಶ್ರೀ ಜಗದೀಶ್ ಶೆಟ್ಟಿ, ಶ್ರೀ ರಮೇಶ ಸಾಲ್ಯಾನ್ ಶ್ರೀ ರವಿ ಪೂಜಾರಿ ಬೋಳ ಮತ್ತು ರಾಜೇಶ್ ಗ್ ಡ ಅವರನ್ನು ಹೂಗುಚ್ಛಗಳನ್ನು ನೀಡಿ ಗೌರವೀಸಲಾಯಿತು. ಕಾರ್ಯಕ್ರಮವನ್ನು ಬಿಜೆಪಿ ನವಿಮು oಬೈ ಕನ್ನಡ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ್ ಸೆರೀಗಾರ್ ಕಾರ್ಯಕ್ರಮ ನಿರೂಪಿಸಿದರೆ, ಮತ್ತೋರ್ವ ಪ್ರಧಾನಕಾರ್ಯದರ್ಶಿ ಶ್ರೀ ರಮೇಶ ಸನಿಲ್ ವಂದನಾರ್ಪಣೆಗೈದರು.
Sunday, 18 June 2017
ದೇವಾಡಿಗರ ಒಕ್ಕೂಟ (ರಿ .) ಬೈಂದೂರು ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ
ದಿನಾಂಕ 17/06/2017 ರಂದು ದೇವಾಡಿಗರ ಒಕ್ಕೂಟ (ರಿ .) ಬೈಂದೂರು ಇದರ ಸದಸ್ಯರಿ0ದ ಹೇನಬೇರು ಕಿರಿಯ ಪ್ರಾಥಮಿಕ ಶಾಲಾ ಭೇಟಿ ಹಾಗೂ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ಬೈಂದೂರು ಪಡುವರಿ ಗ್ರಾಮದ ಹೇನಬೇರು ಒಂದೊಮ್ಮೆ ಕುಗ್ರಾಮವೆನಿಸಿದ್ದು ಇದೀಗ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಹಕಾರದೊ0ದಿಗೆ ಅಭಿವದ್ಧಿಯ ಪಥದತ್ತ ಸಾಗುತ್ತಿದೆ .ಒಕ್ಕಲುತನವನ್ನೆ ಆಶ್ರಯಿಸಿಕೊಂಡಿರುವ ಕೇವಲ ದೇವಾಡಿಗ ಕುಟು0ಬಗಳಷ್ಟೆ ಇಲ್ಲಿ ವಾಸಿಸುತ್ತಿರುವುದು ಉಲ್ಲೇಖನೀಯ. ಈ ಭಾಗದಲ್ಲಿರುವ ಏಕೈಕ ಶಾಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೇನಬೇರು.
ಸಮಾರ0ಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ. ಹೆಚ್ .ನಾರಾಯಣ ದೇವಾಡಿಗ ಹೊಸಾಡು ಇವರು ವಹಿಸಿದ್ದರು . ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ.ವೆ0ಕಟರಮಣ ಹೆಚ್ , ಉಪಾಧ್ಯಕ್ಷೆ ಶ್ರೀಮತಿ ರಾಧಾ , ಒಕ್ಕೂಟದ ಕಾರ್ಯದರ್ಶಿ ಶ್ರೀ.ಸತ್ಯಪ್ರಸನ್ನ ,ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಡುವರಿ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶ್ರೀ.ನರಸಿ0ಹ ದೇವಾಡಿಗ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀ.ವೆ0ಕಟರಮಣ ಹೆಚ್ ಒಕ್ಕೂಟದ ಸದಸ್ಯರನ್ನು ಪುಷ್ಪ ನೀಡಿ ಸ್ವಾಗತಿಸಿ ಶಾಲೆಯನ್ನು ಉಳಿಸಿಕೊಳ್ಳುವಲ್ಲಿ ಗ್ರಾಮಸ್ಥರು ಪಟ್ಟ ಪಾಡನ್ನು ವಿವರಿಸುತ್ತ ವಿಧ್ಯಾರ್ಥಿಗಳಿಗೆ ಹೆಚ್ಚಿನ ಸಹಾಯ ಹಾಗೂ ದಾನಿಗಳ ಹೆಚ್ಚಿನ ಸಹಕಾರವನ್ನು ಬಯಸಿದರು. ಒಕ್ಕೂಟದ ಕಾರ್ಯಕ್ರಮವನ್ನು ಶ್ಲಾಘಿಸಿದರು. ದೇವಾಡಿಗ ನವೋದಯ ಸಂಘ (ರಿ.) ಬೆ0ಗಳೂರು ಇವರಿಗೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯದರ್ಶಿ ಶ್ರೀ.ಸತ್ಯಪ್ರಸನ್ನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಅನ್ನು ವಿತರಿಸಲಾಯಿತು. ಒಕ್ಕೂಟದ ಹಿರಿಯ ಸಲಹಾ ಸಮಿತಿ ಸದಸ್ಯ ಶ್ರೀ.ಎಸ್.ಡಿ.ಹೇನಬೇರ್ ಪುಸ್ತಕ ವಿತರಣಾ ಉಸ್ತುವಾರಿ ವಹಿಸಿದ್ದರು . ಪ್ರಾಯೋಜಕರಾದ ದೇವಾಡಿಗ ನವೋದಯ ಸಂಘ (ರಿ.) ಬೆ0ಗಳೂರು ಹಾಗೂ ಸಹಕಾರ ನೀಡಿದ ಒಕ್ಕೂಟದ ಮಾಜಿ ಕಾರ್ಯದರ್ಶಿ ಶ್ರೀ.ರಾಘವೇ0ದ್ರ ದೇವಾಡಿಗ ಇವರಿಗೆ ಒಕ್ಕೂಟ ಹಾಗೂ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಒಕ್ಕೂಟದ ಅಧ್ಯಕ್ಷರು ಮಾತನಾಡುತ್ತಾ ಮು0ದಿನ ದಿನಗಳಲ್ಲಿ ಹೆಚ್ಚಿನ ಸಹಕಾರದ ಭರವಸೆಯನ್ನು ನೀಡುತ್ತ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವತ್ತ ಗಮನಹರಿಸುವಂತೆ ಸಲಹೆ ನೀಡಿದರು. ಗ್ರಾಮದ ಮುಖಂಡರಾದ ಶ್ರೀ.ನರಸಿ0ಹ ದೇವಾಡಿಗ , ಮಂಜುನಾಥ ದೇವಾಡಿಗ , ಎಸ್ ಡಿಎಮ್ ಸಿ ಸದಸ್ಯೆಯರಾದ ಶಶಿಕಲ , ಭಾರತಿ , ಸುಶೀಲ ಇವರು ಭಾಗವಹಿಸಿದ್ದರು. ಒಕ್ಕೂಟದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ.ರಘುರಾಮ್ ಬೈಂದೂರ್, ಶ್ರೀ.ಗುರುಪ್ರಕಾಶ್ ಸಭೆಯಲ್ಲಿ ಹಾಜರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀ.ನರಸಿ0ಹ ದೇವಾಡಿಗರು ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಗ್ರಾಮ ಭೇಟಿ ಮಾಡಲಾಯಿತು. ಸಮಾಜ ಬಂಧುಗಳು ನಡೆಸುತ್ತಿದ್ದ ಕೃಷಿ ನಾಟಿಯನ್ನು ವೀಕ್ಷಿಸಿ ಅಗತ್ಯ ಸಲಹೆಗಳನ್ನು ನೀಡಲಾಯಿತು. ಗ್ರಾಮಸ್ಥರ ಬೀಳ್ಕೊಡುಗೆಯೊ0ದಿಗೆ ಕಾರ್ಯಕ್ರಮ ಸ0ಪನ್ನಗೊ0ಡಿತು.
Saturday, 17 June 2017
Free Medical Camp at Devadiga Bhavana Nerul.
Tulu Kannadigas are requested to take an advantages of Free Medical Camp on 25/06/2017 ( 9 am to 2pm ) at Devadiga Bhavana Nerul West Navi Mumbai.
ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.
ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...
-
Miss Rashmi V Devadiga has been elected as UG division VICE PRESIDENT OF ABVP(Akhila Bharathiya Vidyarthi Parishad) of Mangalore universit...
-
ಸಾಹಿತ್ಯ ಸಂಸ್ಕøತಿ ಸಮಾಜ ಸೇವೆಯ ಮೂಲಕ ಜನಮನ ಗೆದ್ದ , ಯುಎಇಯ ದುಬಾೈಯಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘವನ್ನು ಕಟ್ಟಿದ, ದುಬಾೈ ಕರ್ನಾಟಕ ಸಂಘದ ಅಧ್...
-
ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್ದಾಸ್ರವರ ಕುರಿತಾದ ಕೃತಿ ಅನಾವರಣ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉಡುಪಿಯ ಸುಹಾಸಂರವರು ಇಂದು ಬೆಳಿಗ್ಗೆ ಉಡುಪಿಯ ಕಿದಿಯೂರು ಹೊಟೇ...







