Saturday, 14 October 2017
ರಿಶಾಂಕ್ ದೇವಾಡಿಗ ಅವರ ಅಬ್ಬರಕ್ಕೆ ಜೈಪುರ ಚಿತ್
ಕನ್ನಡಿಗ ರಿಶಾಂಕ್ ದೇವಾಡಿಗ ಅವರ ಅಬ್ಬರದ ರೈಡಿಂಗ್‌ನ ಫಲದಿಂದಾಗಿ ಯುಪಿ ಯೋಧಾ ತಂಡ ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 53-32ರಿಂದ ಭಾರೀ ಜಯ ಸಾಧಿಸಿದೆ.
ಜೈಪುರ ಆತಿಥ್ಯದಲ್ಲೇ ನಡೆದ ಈ ಪಂದ್ಯ ಪ್ಲೇಆಫ್ ಪ್ರವೇಶದ ಹಿನ್ನೆಲೆಯಲ್ಲಿ ಯುಪಿ ಯೋಧಾಕ್ಕೆ ಮಹತ್ವದ್ದಾಗಿತ್ತು. ಈ ನಿಟ್ಟಿನಲ್ಲಿ ಛಲದಿಂದಲೇ ಕಣಕ್ಕೆ ಇಳಿದ ಯೋಧಾ ಆರಂಭದಿಂದಲೇ ಆಕ್ರಮಣಕಾರಿ ಆಟವನ್ನು ಆರಂಭಿಸಿತು. ಇದರಿಂದ ಯೋಧಾ ಅಂಕ ಭಾರೀ ಪ್ರಮಾಣದಲ್ಲಿಯೇ ಏರಿಕೆ ಪಡೆಯುತ್ತಾ ಸಾಗಿತು. ಯೋಧಾ ಹೋರಾಟದ ಮುಂದೆ ಜೈಪುರ ಹೋರಾಟ ಮಂಕಾಯಿತು. ಪಂದ್ಯ ಆರಂಭವಾಗಿ 4ನೇ ನಿಮಿಷದಲ್ಲಿಯೇ ಯೋಧಾ 11-3ರಿಂದ ಭಾರೀ ಮುನ್ನಡೆ ಪಡೆದಿತ್ತು. ಅಂತಿಮವಾಗಿ ಮೊದಲ ಅವಧಿಯ ಅಂತ್ಯದಲ್ಲಿ ಯೋಧಾ 28-16ರಿಂದ ಮುನ್ನಡೆ ಪಡೆಯಿತು. ಯೋಧಾ ತಂಡ ಎರಡನೇ ಅವಧಿಯಲ್ಲಿಯೂ ಅಂಕದ ಬೇಟೆಯನ್ನು ಮುಂದುವರಿಸಿತು. ಈ ಹಂತದಲ್ಲಿ ಜೈಪುರ ಪ್ರತಿ ಹೋರಾಟ ಪ್ರದರ್ಶಿಸಿದರೂ ಪ್ರಯೋಜನವಾಗಲಿಲ್ಲ.
28 ಅಂಕ ಗಳಿಸಿ ರಿಶಾಂಕ್ ದಾಖಲೆ
ಪಂದ್ಯದಲ್ಲಿ ಯೋಧಾ ತಂಡದಲ್ಲಿರುವ ಕನ್ನಡಿಗ ಮತ್ತು ಈ ಪಂದ್ಯದಲ್ಲಿ ನಾಯಕನ ಜವಾಬ್ದಾರಿ ಹೊತ್ತ ರಿಶಾಂಕ್ ದೇವಾಡಿಗ 28 ರೈಡಿಂಗ್ ಅಂಕ ಪಡೆದು ದಾಖಲೆ ನಿರ್ಮಿಸಿದ್ದಾರೆ. ಒಟ್ಟು 27 ರೈಡಿಂಗ್ ಮಾಡಿದ ರಿಶಾಂಕ್ 28 ಅಂಕ ಪಡೆದಿದ್ದಾರೆ. ಇದರಲ್ಲಿ 23 ಟಚ್ ಪಾಯಿಂಟ್, 5 ಬೋನಸ್ ಪಾಯಿಂಟ್ ಸೇರಿವೆ. ಇದು ಪ್ರೊ ಕಬಡ್ಡಿಯ 5ನೇ ಆವೃತ್ತಿಯ ಪಂದ್ಯವೊಂದರಲ್ಲಿ ವೈಯಕ್ತಿಕ ಗರಿಷ್ಠ ಅಂಕದ ಸಾಧನೆಯಾಗಿದೆ.
Friday, 13 October 2017
*ಬೈಂದೂರಿನ ಹೆಮ್ಮೆಯ ಕುವರಿ ವಿನುತಾ ಎಮ್ ದೇವಾಡಿಗ ಸತತ ಎರಡನೇ ಭಾರಿ ರಾಷ್ಟ್ರಮಟ್ಟಕ್ಕೆ*
ವರದಿ : ಪುರುಷೋತ್ತಮ್‍ದಾಸ್ ಉಪ್ಪುಂದ
ದಿನಾಂಕ 10/10/2017 ರಿಂದ 12/10/2017 ರವರೆಗೆ ಮಂಗಳೂರಿನಲ್ಲಿ ನೆಡೆದ 14 ವರ್ಷದೊಳಗಿನ ಬಾಲಕೀಯರ ರಾಜ್ಯಮಟ್ಟದ ಚದುರಂಗ ಸ್ಪರ್ಧೆಯಲ್ಲಿ 4 ನೇ ಸ್ಥಾನ ಪಡೆದು ನವೆಂಬರ್ ನಲ್ಲಿ ತೆಲಂಗಾಣದಲ್ಲಿ ನೆಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಕರ್ನಾಟಕವನ್ನು ಸತತ ಏರಡನೇ ಬಾರಿ ಪ್ರತಿನಿಧಿಸುತ್ತಿದ್ದಾಳೆ. ಬೈಂದೂರಿನ ಮಂಗಳಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶಾಖಾ ವ್ಯವಸ್ಥಾಪಕರಾದ ಸುಬಾಸ್ ದೇವಾಡಿಗ ಹಾಗೂ ಬೆಂಗಳೂರಿನ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಪ್ರಬಂಧಕರಾದ ಚಂದ್ರಶೇಖರ್ ದೇವಾಡಿಗರ ಸೊಸೆಯಾದ ಇವಳು ಸಾಗರದ ಪ್ರಗತಿ ಸಂಯುಕ್ತ ಶಾಲೆಯಲ್ಲಿ 8ನೇ ತರಗತಿ ಕಲಿಯುತ್ತಿದ್ದು ಶಿಕ್ಷಕರಾದ ವೈ ಮೂರ್ತಿ ದೇವಾಡಿಗ ಹಾಗೂ ಸುಜಾತ ದೇವಾಡಿಗ ದಂಪತಿಯ ಪುತ್ರಿಯಾಗಿರುತ್ತಾಳೆ.ಇವಳ ಸಾಧನೆಗೆ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀ ಪಿ ಲಿಂಗಪ್ಪ,ದೈಹಿಕ ನಿರ್ಧೇಶಕರಾದ ಕೆ ಏನ್ ಗಾವುಡಿ,ಹಾಗೂ ಸಾಗರದ ಚೆಸ್ ಅಸೋಸಿಯೇಷನ್ ಪ್ರಮುಖರಾದ ಹುಚ್ಚುರಾಯಪ್ಪ,ಮಂಜುನಾಥ,ಸುರೇಶ್ ಪ್ರಮೋದ ಹೆಗಡೆ,ಛಾಯಾ ಹೆಗಡೆ,ಗವಿಯಪ್ಪ,ಶುಭ ಹಾರೈಸಿದ್ದಾರೆ.
ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.
ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...
-
Miss Rashmi V Devadiga has been elected as UG division VICE PRESIDENT OF ABVP(Akhila Bharathiya Vidyarthi Parishad) of Mangalore universit...
-
ಸಾಹಿತ್ಯ ಸಂಸ್ಕøತಿ ಸಮಾಜ ಸೇವೆಯ ಮೂಲಕ ಜನಮನ ಗೆದ್ದ , ಯುಎಇಯ ದುಬಾೈಯಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘವನ್ನು ಕಟ್ಟಿದ, ದುಬಾೈ ಕರ್ನಾಟಕ ಸಂಘದ ಅಧ್...
-
ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್ದಾಸ್ರವರ ಕುರಿತಾದ ಕೃತಿ ಅನಾವರಣ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉಡುಪಿಯ ಸುಹಾಸಂರವರು ಇಂದು ಬೆಳಿಗ್ಗೆ ಉಡುಪಿಯ ಕಿದಿಯೂರು ಹೊಟೇ...







