ದೇವಾಡಿಗ ಸಂಘಗಳ ಹುಟ್ಟಿನ ಮುಖ್ಯ ಉದ್ದೇಶ ವೈದ್ಯಕೀಯ ಹಾಗು ಶೈಕ್ಷಣಿಕ ನೆರೆವು ನೀಡುವುದು ಆದರೂ ಉಡುಪಿ ದೇವಾಡಿಗ ಸಂಘ ತನ್ನ ವಲಯ ವ್ಯಾಪ್ತಿಯಲ್ಲಿ ಬರುವ ಅತೀ ಬಡವ ದೇವಾಡಿಗ 6 ವಿಕಲಾಂಗರನ್ನು ಗುರುತಿಸಿ ಅವರಿಗೆ ಪ್ರತಿ ತಿಂಗಳಿಗೆ ತಲಾ 500/- ವಿಕಲಾಂಗ ವೇತನ ನೀಡಲು ಪ್ರಾರಂಭಿಸಿದೆ.ಇದು ದೇಶದ ಎಲ್ಲಾ ದೇವಾಡಿಗ ಸಂಘಗಳಿಗೆ ಮಾದರಿ ಎOದರೂ ಅತಿಶಯೋಕ್ತಿಯಲ್ಲ.ಇದು ಉಡುಪಿ ಸಂಘದ ಅಧ್ಯಕ್ಷರಾದ ಶ್ರೀ ಸೀತಾರಾಮ್ ದೇವಾಡಿಗರ ನೇತ್ರತ್ವದಲ್ಲಿ ದೇವಾಡಿಗ ಸಂಘಗಳ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲನ್ನು ದಾಟಿದೆ ಅಂದರೆ ಖಂಡಿತಾ ತಪ್ಪಲ್ಲ.
Tuesday, 31 October 2017
ಉಡುಪಿ ವಲಯದ ವಿಕಲಾಂಗ ದೇವಾಡಿಗರ ಬಾಳಲ್ಲಿ ಆಶಾ ಕಿರಣ ಮೂಡಿಸಿದ ಉಡುಪಿ ದೇವಾಡಿಗ ಸಂಘ .
ದೇವಾಡಿಗ ಸಂಘಗಳ ಹುಟ್ಟಿನ ಮುಖ್ಯ ಉದ್ದೇಶ ವೈದ್ಯಕೀಯ ಹಾಗು ಶೈಕ್ಷಣಿಕ ನೆರೆವು ನೀಡುವುದು ಆದರೂ ಉಡುಪಿ ದೇವಾಡಿಗ ಸಂಘ ತನ್ನ ವಲಯ ವ್ಯಾಪ್ತಿಯಲ್ಲಿ ಬರುವ ಅತೀ ಬಡವ ದೇವಾಡಿಗ 6 ವಿಕಲಾಂಗರನ್ನು ಗುರುತಿಸಿ ಅವರಿಗೆ ಪ್ರತಿ ತಿಂಗಳಿಗೆ ತಲಾ 500/- ವಿಕಲಾಂಗ ವೇತನ ನೀಡಲು ಪ್ರಾರಂಭಿಸಿದೆ.ಇದು ದೇಶದ ಎಲ್ಲಾ ದೇವಾಡಿಗ ಸಂಘಗಳಿಗೆ ಮಾದರಿ ಎOದರೂ ಅತಿಶಯೋಕ್ತಿಯಲ್ಲ.ಇದು ಉಡುಪಿ ಸಂಘದ ಅಧ್ಯಕ್ಷರಾದ ಶ್ರೀ ಸೀತಾರಾಮ್ ದೇವಾಡಿಗರ ನೇತ್ರತ್ವದಲ್ಲಿ ದೇವಾಡಿಗ ಸಂಘಗಳ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲನ್ನು ದಾಟಿದೆ ಅಂದರೆ ಖಂಡಿತಾ ತಪ್ಪಲ್ಲ.
ತೀರ್ಥಳ್ಳಿ ದೇವಾಡಿಗ ಸಂಘದ ಶ್ರೀ ಏಕನಾಥೇಶ್ವರೀ ಸಮುದಾಯ ಭವನದ ನೂತನ ಕಾರ್ಯಾಲಯ ಮತ್ತು ನೂತನ ಮಹಿಳಾ ವಿಭಾಗದ ಉದ್ಘಾಟನೆ.
ತೀರ್ಥಳ್ಳಿ: ದೇವಾಡಿಗ ಸಂಘ ಮುOಬೈ ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ತೀರ್ಥಳ್ಳಿಯ ದೇವಾಡಿಗ ಸಂಘದ ತಾ 29 ರಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 21ನೆಯ ಶತಮಾನದ ಈಗಿರುವ ದೇವಾಡಿಗರೆಲ್ಲರು ಒಗ್ಗೂಡಿ ಶ್ರೀ ಏಕನಾಥೇಶ್ವರೀ ದೇವಾಸ್ಥಾನದ ನಿರ್ಮಾಣದ ಕಾರ್ಯದಲ್ಲಿ ತಮ್ಮನ್ನು ತಾವು ತನು ಮನ ಧನದ ಮೂಲಕ ತೊಡಗಿಸಿಕೊOಡು ಭವೀಶ್ಯತ್ ಕಾಲದಲ್ಲಿ ಇತಿಹಾಸದ ಪುಟಕ್ಕೆ ಸೇರ್ಪಡೆಯಾಗೋಣವೆOದು ತೀರ್ಥಳ್ಳಿಯ ದೇವಾಡಿಗ ಭಾಂಧವರನ್ನು ವಿನಂತಿಸಿದರು. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಶ್ರೀ ಸತ್ಯನಾರಾಯಣ ಪೂಜೆ ಆರOಭಗೊOಡಿತು.ಪೂಜಾವಿಧಿಯನ್ನು ಸಂಘದ ಅಧ್ಯಕ್ಷರಾದ ಶ್ರೀ ಗಣೇಶ್ ಪ್ರಸಾದ್ ದೇವಾಡಿಗ ದOಪತಿಗಳು ಪೂರೈಸಿದರು. ಸಂಘದ ಸ್ವಂತ ಜಾಗಕ್ಕಾಗಿ ಸುಮಾರು 23 ವರ್ಷಗಳ ಹೋರಾಟ ನಡೆಸಿ ಈಗ ಅವರದೆ ಆದ ಒಂದು ಎಕ್ರೆ ಜಾಗವಾದ ತೀರ್ಥಳ್ಳಿಯ ಕುಶವತಿ ನಗರದಲ್ಲಿನ ಇವರ ಪ್ರಪಥಮ ಕಾರ್ಯಕ್ರಮವಾಗಿತ್ತು.ಪೂಜಾವಿಧಿಯ ನOತರ 11.30 ಗೆ ತೀರ್ಥಳ್ಳಿ ದೇವಾಡಿಗ ಸಂಘದ ಶ್ರೀ ಏಕನಾಥೇಶ್ವರೀ ಸಮುದಾಯ ಭವನದ ನೂತನ ಕಾರ್ಯಾಲಯ ಮತ್ತು ಸಂಘದ ಮಹಿಳಾ ವಿಭಾಗದ ಉದ್ಘಾಟನೆಯನ್ನು ಶ್ರೀ ಏಕನಾಥೇಶ್ವರಿ ದೇವಾಸ್ಥಾನ ಬಾರ್ಕೂರು ಇದರ ವಿಶ್ವಸ್ಥರಾದ ಶ್ರೀ ಜನಾರ್ದನ್ ದೇವಾಡಿಗ ಬಾರಕೂರು, ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಟೆ, ಶ್ರೀ ರಘುರಾಮ್ ದೇವಾಡಿಗ ಆಲೂರು, ದೇವಾಡಿಗ ಸಂಘ ಮುOಬೈ ಯ ಜೊತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್, ಉಡುಪಿ ಸಂಘದ ಅಧ್ಯಕ್ಷರಾದ ಶ್ರೀ ಸೀತಾರಾಮ್ ದೇವಾಡಿಗ ತೀರ್ಥಳ್ಳಿ ದೇವಾಡಿಗ ಸಂಘದ ಗೌರವಾಧ್ಯಕ್ಶ ಶ್ರೀ ಅನಂತ ದೇವಾಡಿಗ , ಸಂಘದ ಅಧ್ಯಕ್ಷ ಶ್ರೀ ಗಣೇಶ್ ಪ್ರಸಾದ ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಶ್ ದೇವಾಡಿಗ , ತೀರ್ಥಳ್ಳಿಯ ಕೌನ್ಸಿಲರ್ ಶ್ರೀ ನವೀನ್ ದೇವಾಡಿಗರು ತೀರ್ಥಳ್ಳಿ ಸಂಘದ ಮಹಿಳಾ ಅಧ್ಯಕ್ಷೆ ಶ್ರೀಮತಿ ವಿಜಯ ಪದ್ಮನಾಭ ದೇವಾಡಿಗರು ನೆರೆವೇರಿಸಿದರು. ಇಲ್ಲಿ ಗಣಹೋಮ ನಡೆಯುವಾಗ ಹೋಮಕುಂಡದ ಬೆOಕಿ ಜ್ವಾಲೆ ಶ್ರೀ ಆಂಜನೇಯ ಸ್ವಾಮಿಯ ಪ್ರತಿಕ್ರತಿಯಂತೆ ಗೋಚರಿಸಿದ್ದು ಚಮತ್ಕಾರವೆನಿಸಿ ದೇವಾಡಿಗ ಭಂಧುಗಳು ರೋಮಾಂಚನಗೊOಡರು. ಅಲ್ಲದೆ ಕಾಕತಾಳಿಯವೋ ಎOಬOತೆ ಸಂಘದ ಕಚೇರಿಯ ಎದುರಿನಲ್ಲಿ ಶ್ರೀ ಆಂಜನೇಯ ದೇವಾಸ್ಥಾನ ಇದ್ದು ಹೋಮಕುOಡದಲ್ಲಿ ಶ್ರೀ ಆಂಜನೇಯ ಸ್ವಾಮಿಯOತೆಯೆ ಪ್ರತಿಕ್ರತಿ ಗೋಚರವಾಗಿದದ್ದು ಎಲ್ಲರಿಗೂ ಶ್ರೀ ಸ್ವಾಮಿಯ ಅನುಗ್ರಹವಾದಂತಾಗಿದೆ.
ತದನಂತರ ದೇವಾಡಿಗ ಇಬ್ಬರು ಮಿಲಿಟರಿ ಯೋಧರಾದ ತೀರ್ಥಳ್ಳಿಯ ಶ್ರೀ ಪ್ರಶಾಂತ ದೇವಾಡಿಗ ಮತ್ತು ಶ್ರೀ ಸುಧಾಕರ ದೇವಾಡಿಗರನ್ನು ಗೌರವಿಸಿ ಸತ್ಕರಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಆಮೇಲೆ ಬಂದಿದ್ದ ಅತಿಥಿಗಳಾದ ಶ್ರೀ ಜನಾರ್ಧನ ದೇವಾಡಿಗ ಬಾರಕೂರು, ಶ್ರೀ ನರಸಿಂಹ ದೇವಾಡಿಗ ಕುಕ್ಕಿಕಟ್ಟೆ, ಶ್ರೀ ರಘುರಾಮ್ ದೇವಾಡಿಗ ಆಲೂರು, ಶ್ರೀ ಗಣೇಶ್ ಶೇರಿಗಾರ್ ಮುOಬೈ, ಶ್ರೀ ಸೀತಾರಾಮ್ ದೇವಾಡಿಗ ಉಡುಪಿ, ಶ್ರೀ ಗಣೇಶ್ ದೇವಾಡಿಗ ಬ್ರಹ್ಮಗಿರಿ, ಶ್ರೀ ನಿತ್ಯಾನಂದ ದೇವಾಡಿಗ ನಿಟ್ಟೂರು, ಶ್ರೀ ಕೃಷ್ಣ ದೇವಾಡಿಗ ಉಡುಪಿ, ಶ್ರೀ ರತ್ನಾಕರ ಶೇರಿಗಾರ್ ಉಡುಪಿ, ಶಂಕರನಾರಾಯಣ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ಸಂತೋಷ್ ದೇವಾಡಿಗ , ಶಿವಮೋಗ್ಗ ದೇವಾಡಿಗ ಸಂಘದ ಉಪಾಧ್ಯಕ್ಷ ಶ್ರೀ ವಾಸು ದೇವಾಡಿಗ ,ಶಿವಮೋಗ್ಗ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಕೃಷ್ಣಮೂರ್ತಿ ದೇವಾಡಿಗ , ಶ್ರೀ ಅಂಜಲಿ ದೇವಾಡಿಗ ಬ್ರಹ್ಮಾವರ, ಉಮಾ ದೇವಾಡಿಗ ಬಾರಕೂರು ಇವರನ್ನು ಸತ್ಕರಿಸಿ ಗೌರವಿಸಿದರು. ಗೌರವ ವಂದನೆಯ ನಂತರ ಶ್ರೀ ಏಕನಾಥೇಶ್ವರಿ ದೇವಾಸ್ಥಾನದ ವಿಶ್ವಸ್ಠರಾದ ಶ್ರೀ ಜನಾರ್ದನ ದೇವಾಡಿಗ ಬಾರ್ಕೂರು, ಶ್ರೀ ನರಸಿಂಹ ದೇವಾಡಿಗರು ಬಾರ್ಕುರಿನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಏಕನಾಥೇಶ್ವರಿ ದೇವಾಸ್ಥಾನದ ಸOಪೂರ್ಣ ವಿವರಣೆ ನೀಡಿದರು.ವಿಶ್ವಸ್ತರಾದ ಶ್ರೀ ರಘುರಾಮ್ ದೇವಾಡಿಗ ಆಲೂರು, ಉಡುಪಿ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಶ್ರೀ ಗಣೇಶ್ ದೇವಾಡಿಗ ಬ್ರಹ್ಮಗಿರಿ ಸಂಧರ್ಭೋಚಿತವಾಗಿ ಮಾತನಾಡಿದರು.ಎಲ್ಲಕ್ಕಿOತ ಹೆಚ್ಚಾಗಿ ಅಚ್ಚುಕಟ್ಟಾಗಿ ಸOಪೂರ್ಣ ಸಮಾರOಭ ನಡೆಸಿಕೊಟ್ಟ ತೀರ್ಥಳ್ಳಿಯ ಸಂಘದ ಎಲ್ಲ ಯುವ ಪಧಾಧಿಕಾರಿಗಳು ಇಡೀ ದೇವಾಡಿಗ ಯುವ ಪೀಳಿಗೆಗೆ ಮಾದರಿ ಎನಿಸಿದ್ದು ಹೆಮ್ಮೆಯೆನಿಸಿತು. ಶ್ರೀ ರಾಘವೇಂದ್ರ ದೇವಾಡಿಗರ ಕಾರ್ಯಕ್ರಮದ ನಿರೂಪಣೆ ಮನ ಮೋಹಕವಾಗಿತ್ತು.ಸರಿ ಸುಮಾರು 350ಕ್ಕೊ ಹೆಚ್ಚು ದೇವಾಡಿಗ ಭಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇವರ 8ನೇ ವರ್ಷದ ಸ್ನೇಹ ಸಮ್ಮಿಲನ ಆಜಮಾನ ಬೀಚ್ ಪೋರ್ಟ್ ನಲ್ಲಿ ಜರುಗಿತು.
ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇವರ 8ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಕದಂ ರೂವಾರಿ ಎಲಿಗೆಂಟ್ ಗ್ರೂಪ್ ಕಂಪೆನಿಯ ಆಡಳಿತ ನಿರ್ಧೇಶಕರಾದ ದಿನೇಶ್ ದೇವಾಡಿಗ ನಾಗೂರೂ ಇವರ ನೇತ್ರತ್ವದಲ್ಲಿ ಆಜಮಾನ ಬೀಚ್ ಪೋರ್ಟ್ ನಲ್ಲಿ ಜರುಗಿತು.ರಾಮಚಂದ್ರ ದೇವಾಡಿಗ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು.ಕದಂ ದುಬೈ ಮಹಿಳಾ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ರವಿ ದೇವಾಡಿಗ ನಾಗೂರೂ ಸಂದೇಶ ವಾಚನಗೈದರು.
ಸಭೆಯಲ್ಲಿ ದೇವಾಡಿಗ ಸಂಘ ಮುಂಬೈನ ಅಧ್ಯಕ್ಷರಾದ ರವಿ ಎಸ್ ದೇವಾಡಿಗ,ವಿಮರ್ಶಕ ಶ್ರಮಿಕ ಸಂಘಟಕ ವಾಗ್ಮಿಯಾದ ಹಿರಿಯಡ್ಕ ಮೋಹನ್ ದಾಸ್,ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಂಬಿಕಾ ರಾಜು ದೇವಾಡಿಗ ತ್ರಾಸಿ,ಮೊದಲಾದವರನ್ನು ಅಬಿನಂದಿಸಲಾಯಿತು.ಮನುಕುಲದ ಶ್ರೇಷ್ಠ ದೇವಾಡಿಗ ಸಾಧಕ ಪ್ರಶಸ್ತಿಯನ್ನು ಜಿಲ್ಲಾಪಂಚಾಯತ್ ಸದಸ್ಯೆ ಶ್ರೀಮತಿ ಗೌರಿ ದೇವಾಡಿಗ ಇವರಿಗೆ ನೀಡಲಾಯಿತು.ಕದಂ ವಾರ್ಷಿಕ ವರದಿಯನ್ನು ಕದಂ ಸದಸ್ಯ ವಾಸು ದೇವಾಡಿಗ ಮಂಡಿಸಿದರು.ಸಭೆಗೆ ಆಗಮಿಸಿದ ಸಭಿಕರಿಗೆ ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರವನ್ನು ಸದಸ್ಯ ಶ್ರೀಧರ್ ದೇವಾಡಿಗ ಮತ್ತು ಮಕ್ಕಳಿಗೆ ವಿವಿಧ ಬಗೆಯ ಸ್ಪರ್ಧೆಗಳನ್ನು ಆಶಾ ದೇವಾಡಿಗ ನೆರವೇರಿಸಿದರು .ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ
ತಾಲೂಕು ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ ತ್ರಾಸಿ, ಶೀನ ದೇವಾಡಿಗ ಮರವಂತೆ ಮೊದಲಾದವರು ಉಪಸ್ಥಿತರಿದ್ದರು.ಶಾರದಾ ದೇವಾಡಿಗ ನಾಗೂರೂ,ಸಪ್ತ ಸ್ವರ ಸಹಕಾರಿ ಕಾರ್ಯನಿರ್ವಾಹಣಾಧಿಕಾ ರಿಯಾದ ರವಿ ದೇವಾಡಿಗ ತಲ್ಲೂರು,ಲೀಲಾವತಿ ದೇವಾಡಿಗ ಮತ್ತು ರೇವತಿ ದೇವಾಡಿಗ ಇವರನ್ನು ಗುರುತಿಸಿ ಅಭಿನಂದಿಸಲಾಯಿತು.ನಿತ್ಯಾನಂದ ದೇವಾಡಿಗ ಸಬೆಗೆ ಬಂದ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ನಿರೂಪಿಸಿದರು. ವಿಶಾಲಾಕ್ಷಿ ದಿನೇಶ್ ದೇವಾಡಿಗ ವಂದಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಯುವರಾಜ್ ಕೆ ದೇವಾಡಿಗ,ಮನೋಜ್ ದೇವಾಡಿಗ ಹಾಗೂ ಸಂತೋಷ್ ದೇವಾಡಿಗ ನಿರ್ವಹಿಸಿದರು.
Saturday, 28 October 2017
Friday, 27 October 2017
Celebration of 8th Anniversary KaDaM Dubai.
Shri. Hiriadka Mohandas , Trustee Shee Ekanatheshwari Temple and Shri. Ravi.S.Devadiga
President Devadiga Sangha Mumbai are Special Guests at the programme.
ಸಾಮಾಜಿಕ ಮಾಧ್ಯಮ ವರದಾನವಾಗ ಬೇಕೇ ವಿನಾ ಶಾಪವಾಗ ಬಾರದು !!!
ಮೋಹನ್ ಕುಂದರ್, ಬನ್ನಂಜೆ::
ನಮ್ಮಲ್ಲಿ ಹೆಚ್ಚಿನವರಲ್ಲಿ ಒಂದಲ್ಲಾ ಒಂದು ರೀತಿಯ ವಾಟ್ಸಪ್ ಗುಂಪುಗಳಿವೆ. ಅದು ಕಾರ್ಯ ಕ್ಷೇತ್ರಕ್ಕೆ ಅಥವಾ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕಲೆ, ಸಾಹಿತ್ಯ, ಶೈಕ್ಷಣಿಕ, ಸಂಘ-ಸಂಸ್ಥೆ, ಗೆಳೆಯರ ಹಾಗೂ ಇನ್ನಿತರ ಯಾವುದೇ ಕ್ಷೇತ್ರಕ್ಕೆ ಸಂಬಂಧ ಪಟ್ಟ ಗುಂಪು ಆಗಿರ ಬಹುದು. ಪ್ರತೀ ಗುಂಪಲ್ಲೂ ಆಯಾಯ ಕ್ಷೇತ್ರಕ್ಕೆ ಸಂಬಂಧ ಪಟ್ಟ ಸಂದೇಶಗಳ ಸಂವಹನ ನಡೆಯುವುದು ಸ್ವಾಭಾವಿಕ. ಆದರೆ, ಇಂದು ಹೆಚ್ಚಿನ ಗುಂಪುಗಳಲ್ಲಿ ಸಮಾಜ ಮುಖಿಯ ಬದಲು ರಾಜಕೀಯ ಮುಖಿಗೆ ಹೆಚ್ಚು ಒತ್ತು ಕೊಟ್ಟು, ಅದರಲ್ಲೂ ಕುಹಕ, ಕ್ಷುಲ್ಲಕ ಹಾಸ್ಯ, ವಿಡಂಬನೆ, ಗೇಲಿ ಮಾಡುವ, ಅವಮಾನಿಸುವ, ಆರೋಪ-ಪ್ರತ್ಯಾರೋಪ, ಅವಹೇಳನಕಾರಿ, ಠೀಕೆ-ಟಿಪ್ಪಣಿ, ನಕಾರಾತ್ಮಕ, ಅಶ್ಲೀಲ, ಧಾರ್ಮಿಕ ಭಾವನೆಯನ್ನು ಕೆಣಕುವ ಹಾಗೂ ಸತ್ಯಕ್ಕೆ ದೂರ ಇರುವ ಆಡಿಯೋ, ವೀಡಿಯೋ ಸಂದೇಶಗಳು ವಿಫುಲವಾಗಿ ಹರಿದಾಡುವುದು ಕಂಡು ಬರುತ್ತದೆ. ಚುನಾವಣೆಯ ಸಮಯದಲ್ಲಂತೂ ಇದರ ಹರಿದಾಟ ಕೇಳುವುದೇ ಬೇಡ. ಇಂತಹ ರಾಜಕೀಯ ಪ್ರೇರಿತ, ಬೆಂಬಲಿತ/ವಿರುದ್ಧ, ಗೊಂದಲಯುಕ್ತ ಸಂದೇಶಗಳಿಂದ ಗುಂಪಿನ ಸದಸ್ಯರಿಗೆ ಪ್ರಯೋಜನ ಆಗುವ ಬದಲು ಕಿರಿಕಿರಿ ಆಗುವುದೇ ಜಾಸ್ತಿ. ಕೇವಲ ರಾಜಕೀಯ ಪಕ್ಷಗಳ ಅತಿರೇಕದ ಪ್ರಚಾರ, ಪ್ರಸಾರ ಮತ್ತು ವಿರೋಧಾಭಾಸದ ಸಂದೇಶಗಳು ವಾಟ್ಸಪ್ ಗಳಲ್ಲಿ ಹರಿದಾಡುವುದರಿಂದ ನಮ್ಮ ಹಣ, ಸಮಯ ಮತ್ತು ಶಕ್ತಿಯ ಅನಾವಶ್ಯಕ ವ್ಯಯವಾಗುತ್ತದೆಯೇ ಹೊರತು ಪ್ರಯೋಜನ ಇಲ್ಲ, ಆದರೆ, ಇದರ ಲಾಭ ಪಡೆಯುವವರು ಇಂಟರ್ ನೆಟ್ ಕಂಪನಿ ಮತ್ತು ಸಂಬಂಧ ಪಟ್ಟ ರಾಜಕೀಯ ಪಕ್ಷಗಳು. ಇದು ಸಾಮಾಜಿಕ ಮಾಧ್ಯಮದ ಬಳಕೆಯಲ್ಲಿ ನಮ್ಮ ಸಭ್ಯತೆಯ ಕೊರತೆಯನ್ನು ತೋರಿಸಿ ಕೊಡುತ್ತದೆ.
ಹಾಗಂತ ರಾಜಕೀಯ ಪ್ರಜ್ಞೆ ಬೇಡ ಎಂದು ಅರ್ಥ ಅಲ್ಲ. ಸರಕಾರದ ಜನಪರ ಕಲ್ಯಾಣ ಕೆಲಸ, ನೀತಿ, ಯೋಜನೆ, ಪ್ರಗತಿಯನ್ನು ಪಕ್ಷ ಭೇದ ಮರೆತು ಅದರ ಮೂಲ ಸ್ವರೂಪದಲ್ಲೇ ಆತ್ಮಸಾಕ್ಷಿಯಾಗಿ ಜನರಿಗೆ ತಲುಪಿಸಿ ಅರಿವು, ಜಾಗ್ರತಿ ಮೂಡಿಸುವುದಕ್ಕೆ ಸಾಮಾಜಿಕ ಮಾಧ್ಯಮವನ್ನು ಬಳಸುವುದು ಸರಿ. ಆದರೆ, ಸಂದೇಶದ ನೆಪದಲ್ಲಿ ಪಕ್ಷದ ಬಗ್ಗೆ ಏಕ ನೀತಿ ಅನುಸರಿಸುವುದು ಮತ್ತು ಪಕ್ಷದ ವಕ್ತಾರರಂತೆ ವರ್ತಿಸುವುದು ಸರಿಯಲ್ಲ. ವಾಟ್ಸಪ್ ಗುಂಪು ರಾಜಕೀಯ ಕ್ಷೇತ್ರಕ್ಕೆ ಸಂಬಂಧ ಪಟ್ಟದ್ದಾಗಿದ್ದರೆ ಅದನ್ನು ಪ್ರಶ್ನಿಸುವ ಪ್ರಮೇಯವೇ ಇರುತ್ತಿರಲಿಲ್ಲ. ಅದನ್ನು ಹೊರತು ಪಡಿಸಿದ ಗುಂಪುಗಳಲ್ಲೂ ಅಸಂಖ್ಯಾತ ರಾಜಕೀಯದ ಸಂದೇಶ ಹರಿದಾಡುವಾಗ ಮಾತ್ರ ಈ ಪ್ರಶ್ನೆ ಉದ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅದರ ಇತಿ-ಮಿತಿಯನ್ನು ಅರಿತು ಸಭ್ಯತೆಯನ್ನು ಕಾಪಾಡ ಬೇಕಾಗುತ್ತದೆ.
ಅಲ್ಲದೆ, ಕೆಲವರು ಸಂದೇಶ ಕಳಿಸುವಾಗ ಅದರ ವಸ್ತುನಿಷ್ಠತೆ, ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ದ್ರಢೀಕರಿಸದೆ, ಇತರರಿಂದ ಮೆಚ್ಚುಗೆ ಗಳಿಸುವ ದ್ರಷ್ಟಿಯಿಂದ ಅಥವಾ ತಾನೇ ಮೇಲೆಂದು ತೋರಿಸಲು ಬಂದದ್ದನ್ನೆಲ್ಲಾ ಫಾರ್ವರ್ಡ್ ಮಾಡುವ ಭರಾಟೆಯಲ್ಲಿ ಪೈಪೋಟಿ ನಡೆಸಿದರೆ, ಅನಾವಶ್ಯಕ ಪ್ರತಿಕ್ರಿಯೆ, ವಾದ-ಪ್ರತಿವಾದಕ್ಕಿಳಿದರೆ, ಕ್ಷುಲ್ಲಕ ರಾಜಕೀಯ ಮತ್ತು ವೈರತ್ವ ಬೆಳೆಸಿದರೆ ಆಗ ಒಂದು ಮೂಲ ಉದ್ದೇಶ ಇಟ್ಟು ಕೊಂಡು ನಿರ್ಮಿತವಾದ ವಾಟ್ಸಫ್ ಗುಂಪು ತನ್ನ ಅರ್ಥ ಕಳೆದು ಕೊಳ್ಳುತ್ತದೆ. ಅಲ್ಲದೆ ಇಂತಹ ಕಿರಿಕಿರಿ, ವ್ಯತಿರಿಕ್ತ ಸಂದೇಶ ಗಳಿಂದ ಗುಂಪಿನ ಸದಸ್ಯರ ಭಾವನೆಗಳಿಗೆ ಘಾಸಿಯಾಗುವುದಲ್ಲದೆ ಸಮಾಜವನ್ನೂ ದಾರಿ ತಪ್ಪಿಸುವ ತಪ್ಪಲ್ಲೂ ಪಾಲುದಾರರಾಗುತ್ತೇವೆ ಎನ್ನುವುದನ್ನು ಮನಗಾಣ ಬೇಕು.
ಪ್ರಜ್ಞಾವಂತ ಯುವಕರು ಇಂತಹ ಸಂದೇಶಗಳಿಂದ ಹೆಚ್ಚಾಗಿ ತಲೆಕೆಡಿಸಲು ಹೋಗುವುದಿಲ್ಲ. ಅವರಲ್ಲಿ ವಿಷಯವನ್ನು ವಸ್ತುನಿಷ್ಠವಾಗಿ ಯೋಚಿಸುವ, ಪರಿಶೀಲಿಸುವ ವಿವೇಚನೆ ಮತ್ತು ವಿವೇಕ ಇದೆ. ಹಾಗಾಗಿ ದೇಶದ ಹಿತಕ್ಕಾಗಿ ಕೈ ಗೊಳ್ಳುವ ಯಾವುದೇ ನೀತಿ, ಯೋಜನೆಗಳನ್ನು ಬೆಂಬಲಿಸುತ್ತಾರೆ. ಮತ್ತು ದೇಶಕ್ಕೆ ಅಹಿತ ಎಂದು ಕಂಡು ಬಂದಲ್ಲಿ ಅಷ್ಟೇ ದ್ರಢತೆಯಿಂದ ತಿರಸ್ಕರಿಸುತ್ತಾರೆ. ಅವರು ಕಂಡ ಸುಂದರ, ಸಶಕ್ತ ಭಾರತದ ಕನಸು ನನಸಾಗಲು ದೇಶದಲ್ಲಿ ಎಲ್ಲಾ ಸ್ಥರದಲ್ಲಿ ತೀರ್ವ ಗತಿಯಲ್ಲಿ ಬದಲಾವಣೆ, ಸುಧಾರಣೆ ಮತ್ತು ರೂಪಾಂತರಣ, ಒನ್ಲೈನ್, ಡಿಜಿಟಲೈಜೇಶನ್ ಸಿಸ್ಟಮ್, ಆರ್ಥಿಕ ಸುಧಾರಣೆ, ಉದ್ಯೋಗವಕಾಶ ಹಾಗೂ ಸುಗಮ ಜೀವನಕ್ಕೆ ಶಾಂತಿಯುಕ್ತ ಸಮಾಜ, ಸೂಕ್ತ ವ್ಯವಸ್ಥೆಯ ವಾತಾವರಣದ ಕಲ್ಪನೆ ಕಲ್ಪಿಸುವುದು ಸಹಜ. ದೇಶ ಸ್ತಬ್ಧವಾಗಿ, ನೀರಸವಾಗಿರಲು ಇವರು ಯಾವತ್ತೂ ಬಯಸುವುದಿಲ್ಲ.
ಸಮಾಜ ಮಾಧ್ಯಮದ ಮೂಲಕ, ಪೂರ್ಣ ಬಹುಮತದಿಂದ ಆರಿಸಿ ಬಂದ ಯಾವುದೇ ಸರಕಾರವನ್ನು ಪದೇ ಪದೇ ಠೀಕಿಸುವುದು, ವಿಷಯವನ್ನು ವಸ್ತುನಿಷ್ಠವಾಗಿ ಚರ್ಚಿಸಿದೆ, ವಿರೋಧ ಎಂದು ಎಲ್ಲವನ್ನೂ ವಿರೋಧಿಸುವುದು ಆರೋಗ್ಯವಂತ ಸಮಾಜದ ಲಕ್ಷಣ ಅಲ್ಲ. ಪ್ರಜಾಪ್ರಭುತ್ವದಲ್ಲಿ ಪೂರ್ಣ ಬಹುಮತದಿಂದ ಆರಿಸಿ ಬಂದ ಯಾವುದೇ ಸರಕಾರಕ್ಕೆ ಆಡಳಿತ ನಡೆಸಲು ಸಂಪೂರ್ಣ ಅವಧಿ ನೀಡ ಬೇಕು. ಆ ಸರಕಾರದ ಒಳ್ಳೆಯದು, ಕೆಟ್ಟದ್ದನ್ನು ಅದರ ಅವಧಿಯ ಕೊನೆಯ ವರ್ಷದಲ್ಲಿ ವಿಮರ್ಶಿಸಿ ಅದಕ್ಕೆ ಅನುಗುಣವಾಗಿ ಮುಂದಿನ ಸರಕಾರವನ್ನು ಆಯ್ಕೆ ಮಾಡುವುದು ನಮ್ಮ ಪ್ರಜ್ಞಾವಂತಿಕೆಯನ್ನು ತೋರಿಸುತ್ತದೆ. ಅದರ ಬದಲು ನಾವೇ ಆರಿಸಿ ಕಳಿಸಿದ ಪೂರ್ಣ ಬಹುಮತದ ಸರಕಾರವನ್ನು, ಸಾಮಾಜಿಕ ಮಾಧ್ಯಮದ ಮೂಲಕ ಒಂದಲ್ಲ ಒಂದು ಕಾರಣದಿಂದ ಪದೇ ಪದೇ ಕಾಲು ಎಳೆಯ ತೊಡಗಿದರೆ ಅದು ಪ್ರಜಾಪ್ರಭುತ್ವ ಮಾದರಿ ಎನಿಸಿ ಕೊಳ್ಳುವುದಿಲ್ಲ, ಬದಲು, ಅದು ಪ್ರಜಾಪ್ರಭುತ್ವದ ಮೂಲ ಬೇರನ್ನು ದೌರ್ಬಲ್ಯಗೊಳಿಸಿ ನಾಶ ಪಡಿಸಿದಂತಾಗುತ್ತದೆ.
ಸಾಮಾಜಿಕ ಮಾಧ್ಯಮದ ಮೂಲಕ ಸಣ್ಣ, ಸಣ್ಣ ಕೆಲಸ ಮಾಡಿ ಸಮಾಜ ಸೇವೆ ಮಾಡಲು ನಮ್ಮಲ್ಲಿ ಸಾಕಷ್ಟು ಅವಕಾಶಗಳಿವೆ. ವಾಟ್ಸಪ್ ಮುಖಾಂತರ ನಮ್ಮ ಸಮಾಜದಲ್ಲಿ ಬಹಳಷ್ಟು ಪುರುಷ, ಮಹಿಳೆಯರು, ಸದ್ದು ಗದ್ದಲ ಇಲ್ಲದೆ ಸಮಾಜ ಸೇವೆ ಮಾಡಿ ಸಮಾಜದ ಋಣ ತೀರಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ನಮ್ಮಲ್ಲಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಸ್ಪಂದಿಸುವ ಶಕ್ತಿ, ಬುದ್ಧಿಮತ್ತತೆ, ಪ್ರತಿಭೆ, ಕ್ಷಮತೆ ಇದ್ದೇ ಇದೆ. ಅದಕ್ಕೆ ಸಾಮಾಜಿಕ ಮಾಧ್ಯಮ ಒಂದು ವರದಾನವಾಗ ಬೇಕೇ ವಿನಾ ಶಾಪವಾಗ ಬಾರದು. ಸಮಾಜವನ್ನು ಎಚ್ಚರಿಸುವ, ಜಾಗ್ರತೆಗೊಳಿಸುವ, ತಿದ್ದಿ ತೀಡುವ, ಶಿಕ್ಷಣ ನೀಡುವ ಸಾಮಾಜಿಕ ಮಾಧ್ಯಮ ಇಂದು ಬರೀ ರಾಜಕೀಯದ ಚಾವಡಿ ಆಗಿ ಬಿಟ್ಟರೆ ದೇವರೇ ಕಾಪಾಡ ಬೇಕು!!!
Thursday, 26 October 2017
"Hunger" ಚಿತ್ರ ಸಾಮಾಜಿಕ ಜಾಲತಾಣ ದಲ್ಲಿ ಬಿಡುಗಡೆ.
ಪ್ರಶಸ್ತಿ ವಿಜೇತ ಮತ್ತು ಹಲವಾರು ಗಣ್ಯವ್ಯಕ್ತಿ ಗಳಿಂದ ಪ್ರಶಂಸೆಗೆ ಪಾತ್ರವಾದ ಚಿತ್ರ ಶ್ರೀ ರಜನೀಶ್ ದೇವಾಡಿಗರ ನಿರ್ದೇಶನದ "Hunger" ಚಿತ್ರ ನಾಳೆ 27th ಶುಕ್ರವಾರ ಸಾಮಾಜಿಕ ಜಾಲತಾಣ ದಲ್ಲಿ ಬಿಡುಗಡೆ ಆಗಲಿದೆ ನಿಮ್ಮೆಲ್ಲರ ಆಶೀರ್ವಾದ ಇರಲಿ...
Sunday, 22 October 2017
Saturday, 21 October 2017
ತುಲುನಾಡುಡ್ ಬೊಗ್ರ ಸೇರಿಗಾರ್ಲೆನ ನಾಗಸರ ಕೇನಂದಿನ ನಾಗೆ ಇಪ್ಪಂದ್. ಸೊರೊಕ್ಕ್ ಪಜ್ಜೆ ಪಾಡಂದಿನ ದೈವೊಲು ಇಪ್ಪಯ!
ತುಲುನಾಡುದ_ನಾದಬೆರ್ಮೆ_ಅಲೆವೂರು_ಬೊಗ್ರ_ಸೇರಿಗಾರ್!
ತುಲುನಾಡುದ ಒವ್ವೇ ದೇಸ್ತಾನದ ಉಚ್ಚಯ, ಜಾತ್ರೆ, ದೈವೊಲೆನ ನೇಮ, ಕೋಲೊಗ್ ಕಲೆ ಬರ್ಪಿನೇ ಹಿಮ್ಮೇಲದಸ್ರಾದ್. ಕೋಲ ನೇಮೊದ ಕಲೊಟ್ಟು ಸುರುಟ್ದು ಅಕೆರಿಮುಟ್ಟಲಾ ಮುಖ್ಯಾವಾಯಿನ ನಾಗಸ್ವರವಾದನ ನಮನ್ ಮಿತ್ತ ಮಿರಿಲೋಕೊಗ್ ಕೊನೊಪುಂಡು. ಒಡಿಪು ಪರಿಸರೊದ ಗರೋಡಿಲೆಡ್ ನಾಗಸರ ವಾದನೊಡ್ ಮಸ್ತು ಪುಗರ್ತೆನ್ ಪಡೆಯಿನ ನಾಗಸೊರೊತ ಭೀಷ್ಮೆ ಮೂಡು ಅಲೆವೂರು ಶ್ರೀ ಬೊಗ್ರ ಸೇರಿಗಾರ್ ಮೇರ್ ನೆಗತ್ತ್ ತೊಜುವೆರ್.
ಅಪ್ಪೆ ಅಮ್ಮೆರ್ನ ಪುದರ್ ತುಕ್ರ ಸೇರಿಗಾರ್ ಬೊಕ್ಕ ತುಂಡೆ ಸೇರಿಗಾರ್ತಿ. ರಡ್ನೆ ಕ್ಲಾಸ್ ಸಾಲೆ ಕಲ್ತುಂಡಲಾ ತನ್ನೊ ಒರುಂಬ ವರ್ಸೊದ ಪಿರಯೊಡೇ ಹಿರಿಯೆರೊಟ್ಟು ತನ್ನ ವಾದನ ಚಾತುರ್ಪುನು ತೊಜಾಯಿನ ಪೆರ್ಮೆ ಮೆರೆನವು.
ಮೈಸೂರು ಅರಂತಡೆದ ಆಸ್ಥಾನ ವಿದ್ವಾಂಸೆರಾಯಿನ ಹಳೆ ಅಗ್ರಹಾರ ಕೃಷ್ಣಪ್ಪ ಮೆರೆಡ್ದು ಎಡ್ಮ ವರ್ಸ ಪಾಠ ಕಲ್ತುಪ್ಪುವೆರ್. 1952ಡ್ ಮೈಸೂರುಡಿತ್ತಿನ ದೇಜು ಸೇರಿಗಾರ್ ಮೆರೆನ ಕೈತಿತ್ತ್ ಕೆಲ ವರ್ಸೊ ಕಲ್ತುದು, ಬೊಕ್ಕ ದಿನೊಟು ಚಿಂಗುರು ಸೇರಿಗಾರ್ ಮೆರೆಡ್ದು ರಡ್ಡ್ ವರ್ಸೊ ಅಬ್ಯಸ ಮಲ್ದೆರ್. ಒಡಿಪು, ಕುಂದಪ್ರ, ಕಾರ್ಲದ ಅಂಚಿಂಚಿ ದೇಸ್ತಾನೊದ ಉಚ್ಚಯ ಜಾತ್ರೆ, ಗರೋಡಿದ ನೇಮ, ದೈವೊಲೆನ ಕೋಲ, ಗೊಂದೊಲು, ನಾಗಮಂಡಲ ಇಂಚ ಒಂಜಿ ಕಾಲೊಡ್ ಖಾಯಮ್ ಆದ್ ನಾಗಸರ ಸೇವೆನ್ ಅರ್ತಿಪಿರ್ತಿಡ್ ಮಲ್ತೊಂದಿತ್ತೆರ್.ನಾಗಸರ ಉರಿಪರೆ ಕುಲ್ಯೆರ್ಡ ಅರೆಗ್ ಸಾಕ್ ಪನ್ಪಿನೆನೇ ಇಜ್ಜಾಂಡ್. ಆತ್ ತನ್ಮಯೆಟ್ ತನನ್ ತಾನ್ ಅರ್ಪಿಸನುವೆರ್. ಇನಿಕ್ಕಾವನೊಗ ಅರೆಗ್ ಪಿರಯ ಎನ್ಪ ಆಂಡಲಾ ಇತ್ತೆದ ಜವನೆರೆನ್ ಮೀರ್ಸಾವುನಂಚಿನ ನಾಗಸರನ್ ಇತ್ತೆಲಾ ಉರಿಪುವೆರ್.
ದೈವ ದೇಬೆರ್ ಮೆಚ್ಚಿ ಬರ್ಪಿನಂಚಿನ ಸ್ವರ... ತುಲುನಾಡುಡ್ ಬೊಗ್ರ ಸೇರಿಗಾರ್ಲೆನ ನಾಗಸರ ಕೇನಂದಿನ ನಾಗೆ ಇಪ್ಪಂದ್. ಸೊರೊಕ್ಕ್ ಪಜ್ಜೆ ಪಾಡಂದಿನ ದೈವೊಲು ಇಪ್ಪಯ! ದೈವ ದೇಬೆರೆ ಮಿತ್ತ್ ಅಪಾರೊ ಭಯಬಕುತಿನ್ ದೀವೊಂದಿನ ಬೊಗ್ರ ಸೇರಿಗಾರ್ಲು ತನ್ನೊ ಜೀವಿತೊದ ಸುದೀರ್ಘ ವರ್ಸೊ ನಾಗಸರ ವಾದನ ಸೇವೆಡ್ ಪರಿಪೂರ್ಣವಾಯಿನ ತೃಪ್ತಿನ್ ಪಡೆಯಿನಾರ್.ಆರ್ ದೈವ ದೇಸ್ತಾನೊದ ಏನಾ ವ್ಯವಸ್ತೆಲ್ ಇತ್ತುಂಡಲಾ ಅವೆನ್ ಸರಿತೂಕೊಡ್ ಕೊನೊವೊಂದಿತ್ತೆರ್.
ಗರೋಡಿದ ನೇಮೊದ ಪೊರ್ತು ಗಲಸುನ ರಾಗದ ಬಗೆಟ್ಟ್ ಕೆನುಂಡ, ಒಟ್ಟಾರೆಯಾದ್ ಪೂರ್ವಿ, ರಾಮ ವರ್ಧಿನಿ, ಶಂಕರಾಭರಣ ಪಂತುವರಾಳಿ ರಾಗೊಲೆನ್ ಸಂದರ್ಭೊಗ್ ಸರಿಯಾದ್ ನುಡಿಸವೆರುಂದು ಪನ್ಪೆರ್. ಅರೆನ ನಾಗಸರ ವಾದ್ಯ ಎಪಗುಲಾ ಗರೋಡಿ, ದೈವೊಸಾನ ಅಂಚೆನೇ ಅರೆನ ಮಸ್ತು ಅಭಿಮಾನಿಲು ಕೊರ್ತಿನ ಬಂಗಾರ್ದ ಪದೆಕಿಡ್ ಮಿನ್ಕೊಂದುಪ್ಪುಂಡು! ಅರೆನ ಜೊಕುಲುಲಾ ಅರನವೇ ಸಾದಿಡ್ ಇತ್ತುದು ಕಲಾ ಸೇವೆನ್ ದುಂಬರಿತೊಂದುಲ್ಲೆರ್.
ಕರಿನ 65 ವರ್ಸೊಡ್ಲಾ ಜಾಸ್ತಿ ನಾಗಸ್ವರ ವಾದನೊದ ಕಲಾ ಸೇವೆಡ್ ಇತ್ತಿನ ಅರೆಗ್ ಮಸ್ತು ಪ್ರಶಸ್ತಿ ತಮ್ಮನೊಲೆನ್ ನಾಡ್ದು ಬೊಯಿದುಂಡು. ಬೈದಶ್ರೀ ವಾರ್ಷಿಕ ಶೇಷ್ಠ ಪ್ರಶಸ್ತಿ, ಶೇಷ್ಠ ಕಲಾವಿದ ಪ್ರಶಸ್ತಿ, ಬನ್ನಂಜೆ ಬಾಬು ಅಮೀನ್ ಸಂಶೋಧನಾ ಪ್ರಶಸ್ತಿಲೆನ ಕೆದಿ ಅರೆನ ಮುಡಿ ಏರ್ದುಂಡು. ಅರ್ಹವಾದೆ ಬೊಗ್ರ ಸೇರಿಗಾರ್ಲೆಗ್ ಕರ್ನಾಟಕ ರಾಜ್ಯ ಪ್ರಶಸ್ತಿಲಾ ಸಿಕ್ಕಡುಂದು ಅಭಿಮಾನಿಲೆನ ಅಂಗಲಪ್ಪು. ಅರೆನ ನಾಗಸರತ ಸ್ವರೊ ತುಳುನಾಡೊರ್ಮೆ ನನಾತ್ ವರ್ಸಲಾ ಕೆನೊಂದು ಬರಡ್.
ಬರಹ: ಮಹೇಶ್ ಬೋಳೂರು.
ಚಿತ್ರ ಕೃಪೆ: ಶಶಾಂಕ್ ರಾವ್.
© boloorgarodi@gmail.com
ಯೋಗ ಸ್ಪರ್ಧೆಯಲ್ಲಿ ನಿವೇದಿತಾ ಎಮ್ ದೇವಾಡಿಗ ರಾಷ್ಟ್ರಮಟ್ಟಕ್ಕೆ .
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಚಿತ್ರದುರ್ಗದಲ್ಲಿ ನೆಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ನಿವೇದಿತಾ ಎಸ್ ದೇವಾಡಿಗ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಯೋಗಗುರು ಸುಬ್ಬಯ್ಯ ದೇವಾಡಿಗ ಅರೇಹೊಳೆ ತರಭೇತಿ ನೀಡಿದ್ದಾರೆ
Thursday, 19 October 2017
ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಣ್ಣಗುಡ್ಡ ಮಂಗಳೂರು. ಮಹಿಳಾ ಸಂಘಟನೆ ಹಾಗೂ ಯುವ ಸಂಘಟನೆ ಇದರ ಆಶ್ರಯದಲ್ಲಿ, ಸಾಂಸ್ಕ್ರತಿಕ ಕಾರ್ಯಕ್ರಮ.
ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಣ್ಣಗುಡ್ಡ ಮಂಗಳೂರು.
ಮಹಿಳಾ ಸಂಘಟನೆ ಹಾಗೂ ಯುವ ಸಂಘಟನೆ
ಇದರ ಆಶ್ರಯದಲ್ಲಿ,
*ಗೂಡುದೀಪ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ*
*ಮತ್ತು*
*ಸಾಂಸ್ಕ್ರತಿಕ ಕಾರ್ಯಕ್ರಮ*.
ದಿನಾಂಕ:- 22-10-2017ನೇ ಆದಿತ್ಯವಾರ . ಗಂಟೆ:- 05:00
*ಸ್ಥಳ:- ಸಮಾಜ ಭವನ,ಮಣ್ಣಗುಡ್ಡ.**
*ಸ್ಪರ್ಧಾ ನಿಯಮಗಳು:-*
*------------------------*
1. ವಯಸ್ಸಿನ ಮಿತಿ ಇರುವುದಿಲ್ಲ.
2. ಸಾಂಪ್ರದಾಯಿಕ ಗೂಡುದೀಪಕ್ಕೆ ಮೊದಲ ಪ್ರಾಶಸ್ತ್ಯ.
3. ಸ್ಪರ್ಧಿಗಳು ಗಂಟೆ 04:00 ಕ್ಕೆ ಕಡ್ಡಾಯವಾಗಿ ಸಂಘದಲ್ಲಿರತಕ್ಕದ್ದು.
4. ಸಂಘಟಕರ ತೀರ್ಮಾನವೇ ಅಂತಿಮ.
5. ಸ್ಪರ್ಧಿಗಳು ತಮ್ಮ ಹೆಸರನ್ನು ದಿನಾಂಕ:- 21-10-2017ರ ಒಳಗೆ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು.
9008926141
8904864920
7204356555
8892079314.
*ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
Wednesday, 18 October 2017
ಉಡುಪಿ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ೪೫ ದಿನಗಳ ಊಟ-ವಸತಿಯೋಂದಿಗೆ ಉಚಿತ ಕಂಪ್ಯೂಟರ್ ಡಿಟಿಪಿ ತರಬೇತಿ.
ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಗಳ ಸಹಯೋಗ ದೊಂದಿಗೆ ನಡೆಯುವ. ಉಡುಪಿ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ೪೫ ದಿನಗಳ ಊಟ-ವಸತಿಯೋಂದಿಗೆ ಉಚಿತ ಕಂಪ್ಯೂಟರ್ ಡಿಟಿಪಿ -(ಕೊರಲ್ಡ್ರಾ, ಫೊಟೊಶಾಪ್, ಪೇಜ್ ಮೇಕರ್) ತರಬೇತಿಯು ನವೆಂಬರ್ ೧ ರಿಂದ ಡಿಸೆಂಬರ್ ೧೫ ರ ವರೆಗೆ ಪ್ರಾರಂಭವಾಗಲಿದೆ ಆಸಕ್ತ ಸ್ವ ಉದ್ಯೋಗ ಆಕಾಂಕ್ಷಿಗಳು ಕೆಳಗಿನ ಲಿಂಕ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಬಹುದು.
https://docs.google.com/forms/d/e/1FAIpQLSemJqYhkWJiI4wRx-K-BacuxcxLQLOwxOI8qgALcAxl6ncq7Q/viewform
for more information please contact 0820-2563455.
Monday, 16 October 2017
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ
ಕರ್ನಾಟಕ ರಾಜ್ಯ ಸರಕಾರ ಬೆOಗಳೂರಿನ ವಿಧಾನ ಸೌಧದ ನಿರ್ಮಾಣದ ವಜ್ರಮಹೋತ್ಸವದ ಅಂಗವಾಗಿ ರೂಪೈ 27 ಕೋಟಿ ಖರ್ಚಿನ ಬಜೆಟನ್ನು ಹಾಕಿ ಕೊOಡಿದೆ. ಎಲ್ಲಾ ವಿಧಾನಸಭಾ ಸದಸ್ಯರಿಗೆ 50 ಸಾವಿರ ರೂಪೈ ಬೆಲೆಯ ಚಿನ್ನದ ಬಿಸ್ಕೆಟ್ ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಬೆಳ್ಳಿಯ ತಾಟು ಮತ್ತು ಲೋಟ ಅಲ್ಲದೆ ವಿಧಾನ ಸಭಾ ಸದಸ್ಯರಿಗೆ ಈ ಎರಡು ದಿನದ ಸಮಾರOಭದಲ್ಲಿ ಪಂಚ ತಾರ ಹೋಟೆಲ್ ನಲ್ಲಿ ಆದರಾತಿಥ್ಯ ಕೊಡುವ ವ್ಯವಸ್ಠೇ ಮಾಡಿಕೊOಡಿದೆಯOತೆ. ಜನರಿಗಾಗಿ ಜನರಿಂದ ಆಯ್ಕೆ ಗೊOಡು ಜನ ಸೇವೆ ಮಾಡಲು ವಿಧಾನ ಸಭೆ ಪ್ರವೇಶಿಸಿದ ಇವರು ಈ ರೀತಿ ಜನರ ತೆರಿಗೆ ಹಣವನ್ನು ಹಗಲು ದರೋಡೆ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯೇ ಸರಿ. ಸಮಾಜವಾದದಿOದ, ಅಹಿಂದ ನಾಯಕರಾಗಿ ಬೆಳೆದು ಬಂದ ಸಿದ್ದರಾಮಯ್ಯ ಜನರ ತೆರಿಗೆ ಹಣವನ್ನು ಲೂಟಿಗೈಯಲು ಹೊರಟಿರುವುದು ಕರ್ನಾಟಕದ ಜನರ ಮಾತ್ರವಲ್ಲ ಸಮಾಜವಾದದ ದುರಂತವೇ ಸರಿ. ವಿಧಾನಸೌಧದ ದ ವಜ್ರ ಮಹೋತ್ಸವಕ್ಕಾಗಿ ಖರ್ಚು ಮಾಡಲೇ ಬೇಕೆOದಿದ್ದರೇ ಆ 27 ಕೋಟಿ ರೂಪಾಯಿಯನ್ನು ಒಂದೊ ಎರಡೋ ಕುಗ್ರಾಮವನ್ನು ದತ್ತು ತೆಗೆದುಕೊOಡು ಅದಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕೊಟ್ಟು ಅದರಲ್ಲಿ ಸಾರ್ಥಕತೆಯನ್ನು ಮೆರೆಯಬಹುದಿತ್ತು.ಅದು ಬಿಟ್ಟು ಈ ರೀತಿ ಜನರ ಹಣವನ್ನು ಮೋಜು ಮಾಡಲು ಹೊರಟಿರುವ ಈ ಸರಕಾರವನ್ನು ಜನರು ಕಿತ್ತೊಗೆಯ ಬೇಕಿದೆ. ಸಭಾಧ್ಯಕ್ಶ ಶ್ರೀ ಕೋಳಿವಾಡರ 27 ಕೋಟಿ ಯಲ್ಲದಿದ್ದರೂ ಪರ್ವಾಗಿಲ್ಲ 15 ಕೋಟಿ ಖರ್ಚು ಮಾಡಲು ಅನುಮತಿ ಸಿಕ್ಕರೂ ಸಾಕೇನ್ನೂವ ಬೇಜವಾಬ್ದಾರಿ ಹೇಳಿಕೆ ಕೇಳುವಾಗ ಇವರ ನಾಚಿಕೆಬಿಟ್ಟತನವನ್ನು ಸಾಕ್ಷೀ ಕರಿಸುತ್ತದೆ.ರಾಜ್ಯದಲ್ಲಿ ಅದೇಸ್ಟೋ ಕುಗ್ರಾಮಗಳು ಇನ್ನೂ ನೀರು, ಬೆಳಕು, ಸೇತುವೆ ರಸ್ತೆ ಸOಪರ್ಕಗಳನ್ನು ಹೋಂದಿಲ್ಲ.ಅದೇಸ್ಟೋ ಬಡ ಜನ ಕ್ಯಾನ್ಸರ್, ಕಿಡ್ನಿ ಸಮಸ್ಯೆಗಳಿOದ ದುಬಾರಿ ವೈದ್ಯಕೀಯ ವೆಚ್ಚದಿOದಾಗಿ ಅವರಿಗೆ ಬೇಕಾದ ಸೌಲಭ್ಯ ಸಿಗದೇ ಸಾಯುತ್ತಿರುವಾಗ, ಇಂಥದಕ್ಕೆ ಖರ್ಚು ಮಾಡುವುದನ್ನು ಬಿಟ್ಟು ದುಂದು ವೆಚ್ಚಕ್ಕೆ ಚಿಂತಿಸುತ್ತಿರುವ ಇಂಥ ರಾಜಕೀಯ ನಾಯಕರು ರಾಜ್ಯಕ್ಕೆ ದೇಶಕ್ಕೆ ಬೇಕೇ ಎಂದು ಪ್ರಜ್ಞಾವಂತ ಜನ ಚಿಂತಿಸಬೇಕಿದೆ. ಇತ್ತೀಚೆಗೆ ಕರ್ಣಾಟಕದಲ್ಲಿ ಬಿದ್ದ ಅತಿವೃಷ್ಟಿಯಿಂದಾಗಿ ಅಲ್ಲಿನ ರೈತಾಪಿವರ್ಗ ಬೆಳೆದ ಬೆಳೆ ನಾಶವಾಗಿ ಕಂಗಾಲಾಗಿದ್ದಾರೆ ಮಾತ್ರವಲ್ಲದೆ ಹಲವಾರು ಮಂದಿ ತಮ್ಮ ಸೂರನ್ನೇ ಕಳಕೊOಡು ಕಂಗೆಟ್ಟಿರುವಾಗ ಅಲ್ಲಿOದ ಗೆದ್ದು ಬಂದ ಶಾಸಕರು ಮಂತ್ರಿ ಮಹೋದಯರು ಐಷಾರಾಮಿ ವಜ್ರ ಮಹೋತ್ಸೊವಕ್ಕೆ ಆಣಿಯಾಗುತ್ತಿರುವುದು ಕನ್ನಡಿಗರ ದೌರ್ಭಾಗ್ಯವೇ ಸರಿ. ಇದೆಲ್ಲಾ ಬೆಳವಣಿಗೆಗಳನ್ನು ನೋಡುವಾಗ ಇದು ಪ್ರಜಾಪ್ರಭುತ್ವವೇ ಯಾ ರಾಜಾಪ್ರಭುತ್ವವೇ ಎOದು ಜನ ಗೋಂದಲಕ್ಕೀಡಾಗಿದ್ದಾರೆ.
ಓದುಗರೇ ಬರೇ ಅಧಿಕಾರ ಹಿಡಿದ ಸರಕಾರಗಳು ಮಾತ್ರವಲ್ಲ, ತನ್ನ ಜಾತಿಗಾಗಿ ತನ್ನ ಜನರಿಗಾಗಿ, ತಮ್ಮ ಭಾಷೆಗಳಿಗಾಗಿ ಹುಟ್ಟಿಕೊOಡ ಸಾಮಾಜಿಕ ಸಂಘಟನೆಗಳು ಕೂಡ ವಾರ್ಶೀಕೋತ್ಸವ, ದಶಮಾನೋತ್ಸೊವ ಬೆಳ್ಳಿ ಚಿನ್ನ ವಜ್ರಮಹೋತ್ಸೊವ ಗಳಿಗೆ ಲಕ್ಶಾಂತರ ರೂಪಾಯಿ ಖರ್ಚು ಮಾಡುವುದನ್ನು ಬಿಟ್ಟು ಶೈಕ್ಷಣಿಕವಾಗಿ ಬಡ ಮಕ್ಕಳನ್ನು ಶಿಕ್ಷಣಕೊಡುವುದಕ್ಕೆ ದತ್ತು ತೆಗೆದುಕೊಳ್ಳುವುದು, ಕಿಡ್ನಿ ಕ್ಯಾನ್ಸೆರ್ ಸಮಸ್ಯೇ ಯಿಂದ ಬಳಲುತ್ತಿರುವ ಬಡವರಿಗೆ ವೈದ್ಯಕೀಯ ನೆರೆವು ನೀಡುವುದರ ಮೂಲಕ ಸಂಘಟನೆಗಳ ಮೂಲ ಉದ್ದೇಶಗಳನ್ನು ಸದಾ ಜೀವಂತವಾಗಿರಿಸಬೇಕು. .ಹಾಗಾದಾಗ ಮಾತ್ರ ಅದು ಜನಸೇವೆಯಾಗುತ್ತದೆ.ಇಲ್ಲವಾದಲ್ಲೀ ಅದು ಸ್ವಾರ್ಥ ಸಾಧನೆಗಾಗಿ ಸ್ವಸೇವೆಗಾಗಿ ಎನಿಸುತ್ತದೆಯಲ್ಲವೇ ?
ನೀವೇನಂತೀರಿ ?
ಗಣೇಶ್ ಎಸ್ ಬ್ರಹ್ಮಾವರ್
ವಾಶಿ ,ನವಿ ಮುOಬೈ
9594228684
Sunday, 15 October 2017
Saturday, 14 October 2017
ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.
ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...
-
Miss Rashmi V Devadiga has been elected as UG division VICE PRESIDENT OF ABVP(Akhila Bharathiya Vidyarthi Parishad) of Mangalore universit...
-
Mr Mukesh devadiga Mangalore won Gold Medal in Karnataka state Junior Powerlifting ChampionShip held at Kinnigoli on 05/11/2017.
-
ದಿನೇಶ್ ದೇವಾಡಿಗರ ನೇತ್ರತ್ವದಲ್ಲಿ ದೇವಾಡಿಗ ಮಿತ್ರ ಕುಂದಾಪುರ ಕದಂ ದುಬೈ ಸದಸ್ಯರ ವತಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೇರಂಜಾಲಿನ ಸತೀಶ್ ದೇವಾಡಿಗ ಮತ...