Saturday, 30 September 2017

ದೇವಾಡಿಗ ನವೋದಯ ಸಂಘ (ರಿ) ಬೆಂಗಳೂರು

ಆತ್ಮೀಯ ಸಮಾಜ ಭಾಂದವರೇ,
ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಣ ಅತ್ಯಮೂಲ್ಯ ಸಂಪತ್ತು ಅದಕ್ಕಾಗಿಯೇ ಪ್ರತಿ ಸಂಘಟನೆಯು ನವ ಪೀಳಿಗೆಯ ವಿದ್ಯಾರ್ಹತೆಗಾಗಿ ವಿಶೇಷವಾದ ಆದ್ಯತೆಯನ್ನು ನೀಡಿದೆ .ನಮ್ಮ ಸಮುದಾಯದ ಅರ್ಹ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ  "ವಿದ್ಯಾ ನಿಧಿ " ಯನ್ನು  ಸಂಗ್ರಹಿಸಲು ನಾವು ಸಂಕಲ್ಪ ಮಾಡಿದ್ದೇವೆ .ಆರ್ಥಿಕ ತೊಂದರೆ ಮಾತ್ರದಿಂದಲೇ ಯಾವ ಮಗುವಿನ ವಿದ್ಯಾಭ್ಯಾಸವು ಕುಂಠಿತವಾಗಬಾರದು ಎಂಬುದು ನಮ್ಮ ಹೆಬ್ಬಯಕೆ ,ಆಪ್ರಯುಕ್ತ ಸಹೃದಯಿಗಳಾದ ನಿಮ್ಮಿಂದ ದೇಣಿಗೆಯನ್ನು ಪಡೆದು ದೊಡ್ಡ ಮೊತ್ತದ "ವಿದ್ಯಾನಿಧಿಯೊಂದನ್ನು "ಸ್ಥಾಪಿಸಬೇಕೆನ್ನುವ  ನಮ್ಮ ಮಹದಾಸೆಗೆ ತಾವುಗಳು ಕೈಜೋಡಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ .
ಆ ಪ್ರಯುಕ್ತ ದಿನಾಂಕ 04 /11 /2017  ನೇ  ಶನಿವಾರ ಸಂಜೆ  5 .00  ಗಂಟೆಗೆ ಬೆಂಗಳೂರು ನಗರದ  ಬಸವನಗುಡಿಯಲ್ಲಿರುವ "ಬೆಂಗಳೂರು ಗಾಯನ ಸಮಾಜ ದಲ್ಲಿ"ರಾಜ್ಯದ ಶ್ರೇಷ್ಠ ನಾಟಕ ತಂಡದಲ್ಲಿ ಒಂದಾದ,ಹಾಗು ಹಲವಾರು ರಾಜ್ಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ "ಲಾವಣ್ಯ (ರಿ) ಬೈಂದೂರು " ಕಲಾ ತಂಡದಿಂದ "ಮುದ್ದಣ್ಣನ ಪ್ರಮೋಷನ್ ಪ್ರಸಂಗ " ಎನ್ನುವ ಕನ್ನಡ ಹಾಸ್ಯಮಯ ನಾಟಕವನ್ನು ಪ್ರದರ್ಶಿಸಲಿದ್ದೇವೆ .ಈ ಪ್ರದರ್ಶನವು ನಮ್ಮ ಸಂಘಕ್ಕೆ "ವಿದ್ಯಾನಿಧಿ "ಯನ್ನು ಸ್ಥಾಪಿಸಲು  ಸಹಾಯವಾಗುವುದಲ್ಲದೆ  ಅರ್ಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶೈಕ್ಷಣಿಕ  ಜೀವನಕ್ಕೆ ಅನುಕೂಲವಾಗುತ್ತದೆ .ಆದ್ದರಿಂದ ಸಹೃದಯಿಗಳಾದ ತಾವುಗಳು ಈ ನಿಟ್ಟಿನಲ್ಲಿ ದೇಣಿಗೆ ರೂಪದಲ್ಲಿ ಅಥವಾ ಜಾಹಿರಾತು ರೂಪದಲ್ಲಿ ಸಹಾಯವನ್ನು ಮಾಡಬೇಕಾಗಿ ಮತ್ತೊಮ್ಮೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ .
ಟಿಕೆಟ್ ಧರ:
ಸಾಮಾನ್ಯ ಪ್ರವೇಶ :250 ರೂಪಾಯಿ (ಒಬ್ಬರಿಗೆ ಪ್ರವೇಶ )
ಗೌರವ ಪ್ರವೇಶ :1000  ರೂಪಾಯಿ (ಇಬ್ಬರಿಗೆ ಪ್ರವೇಶ )
ದೇಣಿಗೆ ನೀಡುವವರು ನಮ್ಮ ಸಂಘದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ ಸಂಘದ ಸದಸ್ಯರಿಗೆ ತಿಳಿಸಬಹುದು .

ಬ್ಯಾಂಕ್ ಖಾತೆಯ ವಿವರ :
account name :devadiga navodaya sangha bangalore 
Acc  No :50205029232
ifsc: ALLA0212867
Bank :Allahabad  Bank

ಟಿಕೆಟಿಗಾಗಿ ಸಂಪರ್ಕಿಸಿ :
ಚರಣ್ ಬೈಂದೂರ್ :9964605360
ಸುಧೀರ್ ದೇವಾಡಿಗ :9886640428

ಧನ್ಯವಾದಗಳೊಂದಿಗೆ
ದೇವಾಡಿಗ ನವೋದಯ ಸಂಘ (ರಿ ) ಬೆಂಗಳೂರು

ಪರಿಸರ ಪ್ರೇಮಿ ಸಮಿತಿಗೆ ಒಂದು ಆತ್ಮೀಯ ಪತ್ರ.

ಸೆಪ್ಟೆOಬರ್ ಶುಕ್ರವಾರ 15 ರOದು ನಡೆದ ಜಯ ಶ್ರೀ ಕೃಷ್ಣ  ಪರಿಸರ ಪ್ರೇಮಿ ಸಮಿತಿಯ  ವಾರ್ಷಿಕ ಮಹಾಸಭೆಯಲ್ಲಿ ನಾನು ಭಾಗವಹಿಸಿದ್ದೇ. ವಾರ್ಷಿಕ ಸಭೆಯ ನಂತರ ನಡೆದ ವಿಚಾರ ಚಿಂತನ ಮಂಥನದಲ್ಲಿ ಹಲವರು ಕೆಲವು ಸಲಹೆ ಸೂಚನೆಗಳನ್ನು ಇತ್ತರು. ನಾನು ಕಲವು ವಿಚಾರಗಳನ್ನು ಇಡುವ ಚಿಂತನೆಯಲ್ಲಿದ್ದೇ ಆದರೆ ಸಮಯದ ಅಭಾವದಿOದಾಗಿ ಬರೇ ಎರಡು ಅಂದರೆ ಬೆಳ್ತಂಗಡಿಯಲ್ಲಿ ಎಂಡೋ ಸಲ್ಫನ್  ಪರಿಣಾಮದ ವಿಚಾರ ಮತ್ತು ಕೊOಕಣ ರೈಲ್ವೆಯಲ್ಲಿನ ಸುರಕ್ಷತೆಯ ವಿಚಾರವನ್ನು ಭಿನ್ನವಿಸಿಕೊOಡಿದ್ದೇ. ಆವತ್ತು ಸಭೆ ಅನ್ನುವಂತದ್ದು  ಒಂದು  ಮುOಬೈಯಲ್ಲಿನ ಹೆಚ್ಚಿನ ತುಳು ಕನ್ನಡ ಸಂಘಟನೆಗಳ ಒಕ್ಕೂಟದ ಸOಗಮವಾಗಿತ್ತು ಅಂದರೆ ಖಂಡಿತಾ ತಪ್ಪಲ್ಲ.ಹೆಚ್ಚಿನ ಸಂಘಟನೆಗಳ ದಿಗ್ಗಜರುಗಳು, ಪಧಾದಿಕಾರಿಗಳು ಭಾಗವಹಿಸಿದ್ದರು. ಇದು ನಿಜವಾಗಿಯೂ ಮಾನ್ಯ ಶ್ರೀ ಜಯ ಕೃಷ್ಣಣ್ಣನವರ ಸಂಘತನಾ ಚತುರತೆಯನ್ನು ತೋರಿಸುತ್ತದೆ. ಈ ಎಲ್ಲಾ ಸಂಘಟನೆಗಳ ಒಂದು ಏಕತೆಯ ಕೇOದ್ರ ಬಿಂದುವಾಗಿರುವ ಪರಿಸರ  ಪ್ರೇಮಿ ಸಮಿತಿ ಯಾಕೆ ಪರಿಸರಯೇತರ ಸಾಮಾಜಿಕ ಬದ್ದತೆ ಇರುವ ಕೆಲಸಗಳನ್ನು ಮಾಡಿ ಜನರನ್ನು ಅಂದರೆ ನಮ್ಮವರನ್ನು ಸ್ಪಂದಿಸಬಾರದು, ಸ್ಪಂದಿಸಿ ಜನಮನ ಗೆಲ್ಲಬಾರದು ?
    ನಾನು ಈ ಮೇಲೆ ತಿಳಿಸಿದಂತೆ ಸಭೆಯಲ್ಲಿ ಎರಡು  ವಿಚಾರಗಳನ್ನು ಮಾತ್ರ ಇಟ್ಟಿದ್ದೆ.ಮತ್ತೆ  ಕೆಲವು ವಿಚಾರಗಳನ್ನು ನಿಮ್ಮೆಲ್ಲರ ಮುOದೆ ಇಡುತ್ತಿದ್ದೇನೆ.ಮೊದಲನೆಯದಾಗಿ ನಮ್ಮ ಮುOಬೈನಲ್ಲಿ  OBC ಮೀಸಲಾತಿ ಇರುವ ಎಲ್ಲ ನಮ್ಮ ಜಾತಿ ಭಾಂದವರಿಗೆ  ಆದರ ಸರ್ಟಿಫಿಕೇಟ್ ತೆಗೆದು ಕೊಳ್ಳುವಲ್ಲಿ ಬಹಳ ತೊOದರೆಗೆ ಒಳಗಾಗಿದ್ದಾರೆ. ಮಹಾರಸ್ಟ್ರ ಸರಕಾರ ನಮ್ಮವರಿಗೆ  1967 ರ ಮೊದಲಿನ ಪೂರ್ವಜರ ಸಂತತಿ ಸರಪಳಿ ನೀಡಬೇಕು ಎನ್ನುವ ಕಡ್ಡಾಯ ನೀತಿ ನಮ್ಮ ಹಿOದುಳಿದ ಜಾತಿಗಳಿಗೆ ಮಾರಕವಾಗಿ  OBC ಸರ್ಟಿಫಿಕೇಟ  ತೆಗೆಯುವಲ್ಲಿ ವಿಫಲವಾಗಿ ಮೀಸಲಾತೀ ಲಾಭದಿOದ ವಂಚಿತವಾಗಿವೆ.ಇದು ಇಲ್ಲಿನ ಸರಕಾರದ ಮಲತಾಯಿ ಧೋರಣೆಯಾಗಿದೆ.ಈ  ವಿಚಾರದಲ್ಲಿ  ನಮ್ಮ ಎಲ್ಲ ಕನ್ನಡ ತುಳು ಜಾತಿ ಸಂಘಟನೆಗಳ ಒಂದೇ ವೇದಿಕೆ ಯಂತೆ ತೋರುತ್ತಿರುವ ಪರಿಸರ ಸಮಿತಿಯು ಮಹಾರಾಸ್ಟ್ರ್ರ ಸರಕಾರದ  ಮೇಲೆ ಒತ್ತಡ ತಂದು ಇವರ obc ನೀತಿಯನ್ನು ಸ್ವಲ್ಪ ಸರಳಿಕರಿಸಿದರೆ  ಅದೇಸ್ಟೋ ಹಿOದುಳಿದ ವರ್ಗಗಳ ಜಾತಿಗಳಿಗೆ ವಿದ್ಯಾಭ್ಯಾಸ ಮತ್ತು ನೌಕರಿ ರಂಗಗಳಲ್ಲಿ ಲಾಭವಾಗಬಹುದು.
ನಾಲ್ಕನೆಯದಾಗಿ ಊರಲ್ಲಿ ಚತುಶೋನ ರಸ್ತೇ ಗಳಾಗುತ್ತಿವೆ ನಿಜ ಆದರೆ ಎಲ್ಲಿ ಮೇಲ್ಸೇತುವೆಗಳು ಬೇಕೋ ಅಲ್ಲಿ ಮೇಲ್ಸೇತುವೆಗಳಿಲ್ಲ.ಎಲ್ಲಿ ಬೇಡವೋ ಅಲ್ಲಿವೆ, ಹೀಗಾಗಿ ಅದೇಸ್ಟೋ ಅಫಘಾತಗಳು ಸOಭವಿಸುತ್ತಿದ್ದು ಜನರು ಪ್ರಾಣಿಗಳOತೆ ಜೀವ ಕಳೆದು ಕೊಳ್ಳುತ್ತಿದ್ದಾರೆ.ಇದನ್ನು ಅಲ್ಲಿನ ಸOಬOದ ಪಟ್ಟ ಪ್ರಾದಿಕಾರದ ಗಮನಕ್ಕೆ ತಂದರೆ ಮುOದಾಗೂವ ಪ್ರಾಣ ಹಾನಿಗಳನ್ನು ತಡೆಯಬಹುದು
  ಐದನೆಯದಾಗಿ ಅವಿಭಜಿತ ದಕ್ಷಿಣಕನ್ನಡದಲ್ಲಿ  ಅಪಾರ್ಟ್ಮೇಂಟ್ಗಳ ಭರಾಟೆ ಶರವೇಗದಲ್ಲಿದೆ. ನಗರ ಪ್ರದೇಶ ಹೊರತು ಪಡಿಸಿ ಮಿಕ್ಕೆಲ್ಲ ಕಡೆ ಒಳಚರOಡಿ ಯೋಜನೆಗಳಿಲ್ಲ. ಹಾಗಾಗಿ ಮನುಷ್ಯ ತ್ಯಾಜ್ಯ ಮಲೀನಗಳು ಬಿಲ್ಡಿಂಗ್ ಗಳ ಛೇOಬರ್ ಭರ್ತಿಯಾದ ಮೇಲೆ ಊರ ತೆರೆದ ಚರಂಡಿಯೇ ಗತಿ .ಹಿOದೊಮ್ಮೆ ಗುಜರಾತ್ನ ಸೂರತ್ ನಲ್ಲಿ ಆದ ದುರ್ಘಟನೆ  ಇಲ್ಲೂ ಆಗಲು ಸಮಯ ದೂರವಿಲ್ಲ.ಈಗಾಗಲೇ ಆನೆ ಕಾಲು ರೋಗ ಬರಕೂಡದು ಎOದು ಮುOಚಿತವಾಗಿ ಮಾತ್ರೆಗಳನ್ನು ಪ್ರಾಧಿಕಾರ ವಿತರಿಸುತ್ತಿದೆ.
   ಓರ್ವ ಸಾಮಾನ್ಯ ಪರಿಸರ ಪ್ರೇಮಿಯಾಗಿ ನನ್ನ ಕೆಲವು ವಿಚಾರಗಳನ್ನು ನಮ್ರವಾಗಿ ನಿಮ್ಮ ಮುOದೆ ಬಿಚ್ಚಿಟ್ಟಿದ್ದೇನೆ. ತಪ್ಪು ಭಾವಿಸದಿರಿ. ಸಕಾರಾತ್ಮಕವಾಗಿ ಯಾ ನಕಾರಾತ್ಮಕವಾಗಿ ಸ್ವೀಕರಿಸುವುದು ತಮ್ಮೆಲ್ಲರಿಗೆ ಸೇರಿದ್ದು.

ಇಂತಿ ನಿಮ್ಮ ಪರಿಸರ ಪ್ರೇಮಿ
ಗಣೇಶ್ ಎಸ್  ಬ್ರಹ್ಮಾವರ್

Wednesday, 27 September 2017

ಅವ್ಯವಸ್ಥೇಯ ಆಗರವಾಗುವ ಮುನ್ನ ಜಾಗ್ರತರಾಗಿ.

ಮಾನ್ಯರೇ,
  ಸಂಘ ಸಂಸ್ಥೇಗಳು ಹುಟ್ಟುವಾಗ ಇರುವಂತ ಒಂದು ಜವಾಬ್ದಾರಿ, ವಿಶ್ವಾಸ, ಹುಮ್ಮಸ್ಸು,ಒಗ್ಗಟ್ಟು    ,ಏಕಾಗ್ರತೆ,ಸಹಕಾರ ವರ್ಷಗಳು ಉರುಳಿದಂತೆ ಅದೇ ಸಂಸ್ಥೇಗಳಲ್ಲಿ ಇವಲ್ಲವು ಕರಗುತ್ತಾ ಅವಿಶ್ವಾಸ, ಸ್ವಾರ್ಥ,ತಾನು ಹೇಳಿದ್ದೇ ಸರಿ ಎನ್ನುವOತ ಮನೋವಿಕಲತೆ ಜಾಸ್ತಿಯಾಗಿ ಅಲ್ಲಿನ ವಾತವಾರಣ ಯಾವ ಸಮಾಜಕ್ಕೆ ಮಾದರಿ ಆಗಬೇಕೋ ಆದಾಗದೆ ಗೊOದಲದ ಗೂಡಾಗುತ್ತದೆ.ಅದು ಒಂದಕ್ಕಿOತ ಹೆಚ್ಚು ಜನ ನಾಯಕರಿದ್ದರೆ ಅಲ್ಲಿನ ಕತೆ ಅಯೋಮಯ.ಒಂದು ಕಾರ್ಯದಲ್ಲಿ ಯಶಸ್ವಿಯಾದರೇ   ಅದು ನನ್ನಿOದಲೇ ಅದರ ಸOಪೂರ್ಣ ಯಶಸ್ಸು ನನ್ನದೇ ಎನ್ನುವವ, ಕೆಲ್ಸ ಎಡವಟ್ಟಾದರೆ   ಅದು ನನ್ನಿOದಲ್ಲ ಅದಕ್ಕೆ ಕಾರಣ ಬೇರೆಯವ ಅಂತ ಕೈ ತೋರಿಸುತ್ತಾರೆ.ಆದರೆ ಅವರ ಈ ಜಾಣತನ ಕಾರ್ಯಕರ್ತರು,ಜನಸಾಮನ್ಯರ ಅರಿವಿಗೆ ಬರಲಿಕ್ಕಿಲ್ಲ ಎOದು  ಭಾವಿಸಿದರೆ ಅದು ಅವರ ಮೂರ್ಖತೆಯೇ ಸರಿ.ಇನ್ನು ಒಂದೇ ಸಂಸ್ಥೇಯಲ್ಲಿದ್ದುಕೊOಡು ಬರೇ ಸಭೆ ವೇದಿಕೆಗಳಿಗೆ ಸೀಮಿತವಾಗಿದ್ದು ದೈನಂದಿನ ಕೆಲಸ ಕಾರ್ಯಗಳಲ್ಲಿ ಬೇಜವಬ್ದಾರಿಯಿOದ ನಡೆದುಕೊOಡು ಬರೇ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಆಟವಾಡುತ್ತಿದ್ದರೆ ಅಲ್ಲಿ ಕೆಲಸ ಮಾಡುವವರ ದ್ರಸ್ಟಿಯಲ್ಲಿ ಇವರ ಗೌರವ ಹೊರಟುಹೋಗುತ್ತದೆ ಮಾತ್ರವಲ್ಲದೆ ಅದರ ಲಾಭವನ್ನು ಇನ್ನೊಬ್ಬರು ಪಡೆಯುತ್ತಾರೆ.ಇವರ ಒಡಕಿನ ಲಾಭ ಇನ್ನೊಬ್ಬ ಪಡೆದು ಆರ್ಥಿಕವಾಗಿಯೂ ನಸ್ಟ ಅನುಭವಿಸಬೇಕಾಗುತ್ತದೆ. ಇಡೀ ಸಮಾಜ ತಮ್ಮನ್ನು ಗಮನಿಸುತ್ತಿದೆ ಎನ್ನುವ ಕನಿಸ್ಟ ಕಾಳಜಿ ಖಂಡಿತವಾಗಿಯೂ ಇವರಿಗೆ ಇರಬೇಕು. ಸಮಾಜಸೇವೆ ಮಾಡುವ ಕಾರ್ಯಕರ್ತರುಗಳನ್ನು ಹುರಿದುOಬಿಸಬೇಕೇ ವಿನಹಃ ಅಲ್ಲಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಖಂಡಿತ ಮಾಡಬಾರದು. ಇನ್ನೊಬ್ಬರು ಮಾಡಿದ ಒಳ್ಳೆಯ ಕೆಲಸಗಳನ್ನು ಹೋಗಳಿದರೂ ತಪ್ಪೆನ್ನುವ ಕೆಲ ನಾಯಕರುಗಳ ಮನೋಸ್ಥಿತಿ ನೋಡುವಾಗ ಅಯ್ಯೋ ಎನಿ ಸುತ್ತದೆ.ಇವರ ಹ್ರದಯ ಶ್ರೀಮಂತಿಕೆಯಲ್ಲಿ ಕಡು ಬಡವರOತೆ ತೋರಿಬರುತ್ತದೆ.
ತಪ್ಪು ಎನ್ನುವOತದ್ದು ಜನ ಸಾಮನ್ಯ ಮಾಡಿದರೂ ತಪ್ಪು,ಕಾರ್ಯಕರ್ತ ಮಾಡಿದರೂ ತಪ್ಪು,ನಾಯಕ ಎನಿಸಿಕೊOಡವರು ಮಾಡಿದರರೂ ತಪ್ಪು.ತಪ್ಪು ತಪ್ಪೇ.ಎಲ್ಲರೂ ತಾಯಿಯ ಹೊಟ್ಟೆಯಿಂದ ಬಂದವರೇ.ಯಾರೂ ಆಕಾಶದಿOದ ಬಿದ್ದವರಲ್ಲ. ಮಾಡಿದ ತಪ್ಪಿಗೆ ಸಂಸ್ಥೇಯಲ್ಲಿನ ಎಲ್ಲಾ ನಾಯಕರುಗಳೂ ಜವಾಬ್ದಾರರು.ನಾನಲ್ಲ ನಾನಲ್ಲ ಎಂದು ತಪ್ಪಿಸಿಕೊಳ್ಳುವಂತಿಲ್ಲ. ಒಳ್ಳೆಯ ಕೆಲ್ಸಗಳಿಗೆ ಹೇಗೆ ಎಲ್ಲಾರು ಜವಾಬ್ದಾರರೋ ಹಾಗೆ ತಪ್ಪಾದಲ್ಲಿ ಖಂಡಿತವಾಗಿಯೂ ಎಲ್ಲರು ಜವಾಬ್ದಾರರು.ಮಾಡಿದ ಕೆಲವು
ಅಚಾತುರ್ಯಗಳಿಗೆ ಜನ ಸಾಮನ್ಯ ಯಾ ಕಾರ್ಯಕರ್ತ ಪ್ರಶ್ನಿಸಿದಾಗ ಅದನ್ನು ನಾಯಕರೇನಿಸಿಕೊOಡವರು ಸಕಾರಾತ್ಮಕವಾಗಿಯೇ ಸ್ವೀಕರಿಸಿ ಉತ್ತರಿಸಬೇಕು .ಎಲ್ಲವನ್ನು ಎಲ್ಲರನ್ನು  ಒಟ್ಟಿಗೆ ಅವರವರ ವ್ಯಕ್ತಿತ್ವಕ್ಕೆ ದಕ್ಕೆಯಾಗದ ರೀತಿಯಲ್ಲಿ ನಡೆಸಿಕೊOಡು ಹೋಗುವವನೇ ನಿಜವಾದ ಜನನಾಯಕ .

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

Friday, 22 September 2017

ನವಿ ಮುOಬೈ ಜಿಲ್ಲಾ  ಬಿ ಜೆ ಪಿ ಕನ್ನಡ ಘಟಕ ಮಹಿಳಾ ವಿಭಾಗ ಮತ್ತು ಜೈ ಅOಬೆ ಚಾರಿಟೇಬಲ್ ಟ್ರಸ್ಟ್ ವತಿಯಿOದ ಹಳದಿ ಕುOಕುಮ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ನವಿ ಮುOಬೈ ಜಿಲ್ಲಾ ಕನ್ನಡ ಘಟಕದ ಮಹಿಳಾ ವಿಭಾಗ ಮತ್ತು ಜೈ ಅOಬೆ ಚಾರಿಟೇಬಲ್ ಟ್ರಸ್ಟ ಸನ್ಪಾಡ ಇವರು ಜಂಟಿಯಾಗಿ ನವಿ ಮುOಬೈ  ಸನ್ಪಾಡದ ಸೇಕ್ಟರ್ 7 ರಲ್ಲಿ  ಹೋಟೆಲ್ ಸಾಯಿ ತ್ರಿವೇಣಿ ಎದುರುಗಡೆ ಇರುವ ಅಶ್ರಯ ಟ್ರಸ್ಟ್ ಹಾಲ್ ನ ಟೆರೇಸ್ ನಲ್ಲಿ ಹಳದಿ-ಕುOಕುಮ ಕಾರ್ಯಕ್ರಮವನ್ನು ಇದೆ ತಿOಗಳ  ತಾರೀಕು  24  ಭಾನುವಾರ ಸಂಜೆ   ಆಯೋಜಿಸಲಾಗಿದೆ.ಕಾರ್ಯಕ್ರಮವು ಸಂಜೆ 7 ರಿOದ 8.30 ತನಕ ನಡೆಯಲಿದೆ.ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಬಿ ಜೆ ಪಿ  ಕಾರ್ಪೊರೇಟರ್ ಶ್ರೀಮತಿ ವಿಜಯತಾಯಿ ಘರಾಟ್ , ನವಿಮುOಬೈ ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ದುರ್ಗಾತಾಯಿ, ನವಿಮುOಬೈ ಬಿ ಜೆ ಪಿ  ಕನ್ನಡ ಘಟಕದ ಅಧ್ಯಕ್ಷ ಶ್ರೀ ಹರೀಶ್ ಪೂಜಾರಿ, ಕನ್ನಡ ಘಟಕದ ಮಹಿಳಾ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಡಿ ದೇವಾಡಿಗ ಮತ್ತು ಜೈ ಅOಬೆ ಚಾರಿಟೇಬಲ್  ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಪ್ರಭಾ ಆರ್ ದೇವಾಡಿಗರು  ಆಗಮಿಸಲಿದ್ದಾರೆ.ನವಿ ಮುOಬೈನ ಎಲ್ಲಾ ತುಳು ಕನ್ನಡ  ಸುಮಂಗಲೆಯರು ಕ್ಲಪ್ತ ಸಮಯದಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೆOದು  ನವಿ ಮುOಬೈ ಜಿಲ್ಲಾ ಬಿಜೆಪಿ ಕನ್ನಡ ಘಟಕದ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಎಸ್ ಬ್ರಹ್ಮಾವರ್ ಮತ್ತು ಶ್ರೀ ರಮೇಶ ಸನಿಲ್ ವಿನಂತಿಸಿದ್ದಾರೆ.

Wednesday, 13 September 2017

ರಾಷ್ಟ್ರೀಯ ಕಾಂಗ್ರೇಸ್ ಪಕ್ಷಕ್ಕೆ ಮರುಚಿಂತನೆಯ ಅವಶ್ಯಕತೆ ಇದೆ.

ಭಾರತ ನಡೆಯುತ್ತಾ ಇರುವುದು ವಂಶಪಾರOಪರ್ಯ ನೀತಿಯಿಂದ ಎOಬ ಅಪಕ್ವ ಹೇಳಿಕೆಯನ್ನು ರಾಹುಲ್ ಗಾಂಧಿಯವರು  ಅಮೇರಿಕದ ವಾಷಿOಗ್ಟನ್ ನೀಡಿರುವುದು ಹಾಗು ಭಾರತದ ಪ್ರಜಾಪ್ರಭುತ್ವವನ್ನು ಬಂಡವಾಳ ಹೂಡಿ ಆದಾಯ ಪಡೆಯುವ ಉದ್ದಿಮೆ ಮತ್ತು ಸಿನಿಮಾರಂಗಕ್ಕೆ ಹೋಲಿಸಿರುವುದು ಅವ್ರ ಪ್ರೌಡಿಮೇ ಎಸ್ಟು ಬಾಲಿಶವಾಗಿದೆ ಎOಬುದನ್ನು  ತೋರಿಸುತ್ತದೆ.ಅಲ್ಲದೆ ಭಾರತದ ಪ್ರಜಾಪ್ರಭುತ್ವ ಮತ್ತು ರಾಜಕಾರಣದ ವಿರುದ್ದ ವಿದೇಶದಲ್ಲಿ ಈ ರೀತಿ ಆದರಲ್ಲೂ ಭಾರತದ ಪ್ರಧಾನಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕತೆಗೆ ಎಡೆ ಮಾಡಿ ಕೊಡುತ್ತಿದ್ದಾರೆ ಎOಬ ಹೇಳಿಕೆ ಇವರು ಪ್ರಧಾನಿ ಬಿಡಿ ಕಾಂಗ್ರೇಸ್ಸ್ ಪಕ್ಷದ ನೇತ್ರತ್ವ ವಹಿಸಲು ಯೋಗ್ಯರೆಲ್ಲ ಎOಬುದನ್ನು ಸಾಬೀತು ಪಡಿಸುತ್ತದೆ. ಕಾಂಗ್ರೇಸ್ಸ ಪಕ್ಷದ ಉಪಾಧ್ಯಕ್ಷರಾಗಿ ಎಲ್ಲಿ ಯಾವಾಗ ಏನು ಹೇಳಿಕೆ ಕೊಡಬೇಕೆನ್ನುವ ಕನಿಸ್ಟ ಜ್ಞಾನವೂ ಇಲ್ಲದಿರುವ ವ್ಯಕ್ತಿಯನ್ನು ಕಾಗ್ರೇಸ್ಸೀಗರು ಹೇಗೆ ಸಹಿಸಿಕೊOಡಿದ್ದಾರೆ ಎOಬುದೇ ದಶಕದ ಯಕ್ಷ ಪ್ರೆಶ್ನೆ? ಇಂದು ರಾಹುಲ್ ಗಾಂಧಿಯವರು ಒಬ್ಬ ಕಾರ್ಮಿಕನ ಮಗನಾಗಿದ್ದರೆ ಇವತ್ತು ಕಾಂಗ್ರೇಸ್ಸಿನ ಉಪಾಧ್ಯಕ್ಷರ ಸ್ಥಾನದಲ್ಲಿ ಇರುತ್ತಿದ್ದರೆ ? ಶ್ರೀಮತಿ ಇಂದಿರಾ ಗಾಂಧಿಯವರ ಮೊಮ್ಮಗ ಎನ್ನುವ ಒಂದೇ ಕಾರಣಕ್ಕೆ ಈಗೆಲ್ಲವೂ ಸಿಗುತ್ತಿರುವುದು ಎOಬ ವಿಚಾರ ದೇಶವಾಸಿಗಳಿಗೆ ತಿಳಿದಿದೆ. ಓದುಗರೇ ರಾಜಕೀಯವಾಗಿ ರಾಹುಲ್ ಗಾಂಧಿಯವರು ಸಾಧಿಸಿದ್ದು ಏನು ಎOಬುದು ಮೊದಲು ನಿಸ್ಟಾವOತ ಕಾಂಗ್ರೇಸಿಗರೇ ಆತ್ಮ ವಿಮರ್ಶೇ ಮಾಡಿಕೊಳ್ಳಬೇಕಿದೆ.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು, ಬಲಿದಾನ ಕೊಟ್ಟಿದ್ದು ನಮ್ಮ ಕಾಂಗ್ರೇಸ್ಸ್ ಪಕ್ಷ ಎOದು ಬೊಬ್ಬಿಡುವ ಕಾಂಗ್ರೇಸಿಗರಿಗೆ ರಾಸ್ಯ್ರ ರಾಜಕಾರಣದಲ್ಲಿ ಅವರಲ್ಲಿ ಒಬ್ಬ ಸಮರ್ಥ್ಯ ನಾಯಕನಾಗಿ ಯಾರೂ ಸಿಗದಿರುವುದು ಕಾಂಗ್ರೇಸಿನ ದೊಡ್ದ ದುರಂತ.ತನ್ನ ಅಜ್ಜ ಅಜ್ಜಿ ಸ್ಥಾಪಿಸಿದ ಪಕ್ಷ ಅಧಿಕಾರ ಮತ್ತು ನಾಯಕತ್ವ   ತಮ್ಮ ಪೀಳಿಗೆಗೆ ಸೀಮಿತ ಅನ್ನುವ ರೀತಿಯಲ್ಲಿ ಹೇಳಿಕೆ ಕೊಟ್ಟು ಅದನ್ನು ಸಮರ್ಥಿಸಿಕೊOಡಿರುವುದು ಪ್ರಜಾಪ್ರಭುತ್ವ ಎOಬ ಪದಕ್ಕೆ ಮಾಡಿದ ಅಪಚಾರ ಮತ್ತು ಅಪಹಾಸ್ಯವೂ ಆಗಿದೆ.ಹಾಗಾದರೆ ಇಸ್ಟೋOದು ಧೀರ್ಘ ಕಾಲ ಬೆವರಿಳಿಸಿ,ಸಂಘಟಿಸಿ ಶ್ರಮಿಸಿದ ಹಿರಿಯ ಕಾಂಗ್ರೇಸಿಗರಿಗೆ ದೇಶದ ಅಧಿಕಾರ ಹಿಡಿವ ಅರ್ಹತೇ ಇಲ್ಲವೇ ? ಎOದು ಬೇರೆ ಯಾರಲ್ಲ , ಹಿರಿಯ ಕಾಂಗ್ರೇಸಿಗರೇ ಪ್ರಶ್ನಿಸಬೇಕು. ಒಂದು ಕಾಲ ಅಂದರೆ ಶ್ರೀ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಇದೆ ಅಮೇರಿಕ ಅವರಿಗೆ ಅಮೆರಿಕ ಪ್ರವೇಶಿಸಲು ನಿರ್ಭಂಧ ಹೇರಿತ್ತು.ಆದರೆ ಇಂದು ಅವ್ರನ್ನು ರತ್ನಗOಬಳಿ ಹಾಕಿ ಸ್ವಾಗತಿಸಿ ಸತ್ಕರಿಸಿದೆ ಅಂದರೆ ಅದು ಅವರ ಸಾಮಾರ್ಥ್ಯವನ್ನು ತೋರಿಸುತ್ತದೆ.ಮೋದಿಯವರು ಪ್ರಧಾನಿ ಆದಮೇಲೆ ಹೊರದೇಶಗಳು ಭಾರತವನ್ನು ನೋಡುವ ದ್ರಸ್ಟಿಕೋನವೇ ಬದಲಾಗಿದೆ.ಇದೆಲ್ಲಾ ಗೊತ್ತಿದ್ದೂ ವಿದೇಶದಲ್ಲಿ ಹೋಗಿ ಒಂದು ವಿದೂಷಕನಂತೆ ಹೇಳಿಕೆ ಕೊಡುವುದನ್ನು ನೋಡುವಾಗ ಇದು ದೇಶ ಕಂಡ ದಿಟ್ಟ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗನೇ ? ಎOದು ಮನ ಕೊರಗುತ್ತದೆ. ತನ್ನಿOದಾಗಿ ಕುಸಿಯುತ್ತಿರುವ ಜನಾದಾರವನ್ನು ಉಳಿಸಲು ವOಶಾಧಾರಿತ ಮೂಲಕ ನಡೆಯುತ್ತಿರುವ ಪ್ರಾದೇಶಿಕ ಪಕ್ಷಗಳ ಸಹಕಾರ ಪಡೆಯಲು ಈ ರೀತಿಯ ಹೇಳಿಕೆ ರಾಹುಲ್ ನೀಡಿರಬಹುದು. ಆದರೆ ಉಳುವವನೂ , ದೇಶದ ಕಾರ್ಮಿಕನೂ,ದೇಶದ ಗಡಿ ಕಾಯ್ದ ಸೈನಿಕನೂ ಒಂದು ದಿನ ರಾಜನಾಗಬೇಕು.ಅದೇ ಪ್ರಜಾಪ್ರಭೂತ್ವದ ಶೋಭೆ.ಕೇOದ್ರದಲ್ಲಿ ಅಧಿಕಾರ ಹಿಡಿದವರು ಯಾವತ್ತು ದೇಶದ ಭದ್ರತೆ ವಿಷಯದಲ್ಲಿ, ಜಮ್ಮು ಕಾಶ್ಮೀರದಲ್ಲಿನ ಶಾOತಿ ಸ್ಥಾಪನೆ ಬಗ್ಗೆ ರಾಜಿ ಮಾಡುವ ಪಂಚಾಯತಿಗೆಯೇ ಇಲ್ಲ.ಹಾಗಿರುವಾಗ ಮಾನ್ಯ ಪ್ರಧಾನಿಯವರ  ಬಗ್ಗೆ ಕಾಶ್ಮೀರ ದ ಕಾರ್ಯಶೈಲಿಯ ವಿರೋದಾತ್ಮಕ   ಹೇಳಿಕೆ ಅವರ ಅಪ್ರಬ್ಬುದತೆಯ  ಸಂಕೇತವನ್ನು ಬಿOಬಿಸುತ್ತದೆ. ಈಗಲೂ ಸಮಯ ಮೀರಿಲ್ಲ, ಈಗಲಾದರೂ ಹಿರಿಯ  ಕಾಂಗ್ರೇಸ್ಸಿಗರು  ನೆಹರು ಪೀಳಿಗೆ ಎOಬ ಬ್ರಮೆಯಿಂದ ಹೊರ ಬಂದು ಕೊನೇ ಪಕ್ಷ ಅಧಿಕಾರ ಹಿಡಿಯಲು ಅಲ್ಲದಿದ್ದರೂ ಪ್ರಭಲ ವಿರೋಧಪಕ್ಷವಾಗಿ ಹೊರ ಹೊಮ್ಮಬೇಕಾದರೆ ಪಕ್ಷದ ನಾಯಕತ್ವವನ್ನು ಸಮರ್ಥವಿರುವವರಿಗೆ ವಹಿಸಬೇಕು.ಇಲ್ಲವಾದಲ್ಲಿ ಕಾಂಗ್ರೇಸ್ಸನ  ನಿರ್ನಾಮಕ್ಕೆ ರಾಹುಲ್ ಗಾಂಧಿ ಒಬ್ಬರೇ ಸಾಕು.

ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ,ನವಿ ಮುOಬೈ.

Monday, 11 September 2017

ಉಪ್ಪುಂದ ದೇವಾಡಿಗ ಸಂಘದ ಗೌರವಾಧ್ಯಕ್ಷರಾದ ಜನಾರ್ಧನ ದೇವಾಡಿಗ ಉಪ್ಪುಂದ ಇವರನ್ನು ಜೆಸಿಐ ಉಪ್ಪುಂದ ವತಿಯಿಂದ ಗಣ್ಯರ ಸಮ್ಮಖದಲ್ಲಿ ಸನ್ಮಾನಿಸಲಾಯಿತು

Photo Caption By : Purshotamdas


ಹಣ ನೀಡಿಯೇ ಸಮಾಜ ಸೇವೆ ಮಾಡಬೇಕೆOದಿಲ್ಲ.

ಭಂಧುಗಳೇ ,
   ಇದು ಹೇಗೆ ಸಾಧ್ಯ ಎOಬ ವಿಚಾರ ಮೇಲಿನ ಶೀರ್ಷಿಕೆ ನೋಡಿ ನಿಮ್ಮಲ್ಲಿ ಚಿಂತನ ಮಂಥನ ಶುರುವಾಗಿರಬಹುದು.
ಹಣವಿದ್ದವರು ತಾವೇ ಸ್ವತಃ ಹಣ ನೀಡಿ ಸಾಮಾಜಿಕ ಸೇವೆ ಮಾಡಬಹುದು.ಆದರೆ ಹಣ ನೀಡಲು ಅಸಾಧ್ಯವಾದವರು ತಮ್ಮ ತಮ್ಮ ಸೇವಾಕ್ಷೇತ್ರದಲಿದ್ದುಕೊOಡು ಸಾಮಾಜಿಕ ಸೇವೆ ಗೈಯುಬಹುದು.ಅದರ ಎರಡು ಮೂರು ಉದಾಹಾರಣೆಗಳನ್ನು ನಾನು ನಿಮ್ಮೊOದಿಗೆ ಹಂಚಿಕೊಳ್ಳುತ್ತಿದ್ದೇನೆ.ಮೊದಲನೆಯವರಾಗಿ ಠಾಕುರ್ಲಿಯವರಾದ ಶ್ರೀ ಆನಂದ್ ದೇವಾಡಿಗರು.ಇವರು ಮುOಬೈ ದೈನಿಕ ಕನ್ನಡ ಪತ್ರವಾದ ಕರ್ನಾಟಕ ಮಲ್ಲದಲ್ಲಿ ಉದ್ಯೋಗಿಯಾಗಿದ್ದು  ಮುOಬೈ ದೇವಾಡಿಗರ ಎಲ್ಲಾ ಕಾರ್ಯಚಟುವಟಿಕೆಗಳನ್ನು ಅತೀ ಶೀಘ್ರದಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳುತ್ತಾ ತನ್ನದೇ ಆದ ರೀತಿಯಲ್ಲಿ ಸಮುದಾಯದ ಅಳಿಲು ಸೇವೆ ಮಾಡುತ್ತಿದ್ದಾರೆ.
ಎರಡನೆಯವರಾಗಿ ಶ್ರೀ ನಾಗರಾಜ್ ದೇವಾಡಿಗರು.ಇವರು ಮುOಬೈ ಉದಯವಾಣಿ ಆವ್ರತ್ತಿಯ ಉದ್ಯೋಗಿಯಾಗಿದ್ದು ಮುOಬೈ ದೇವಾಡಿಗರ ಕಾರ್ಯ ಚಟುವಟಿಕೆಗಳನ್ನು ತ್ವರಿತವಾಗಿ ಪ್ರಕಟಿಸುತ್ತಾರೆ.ಅಲ್ಲದೆ " ದೇವಾಡಿಗ ಪೋರ್ಟಲ್ ಎOಬ ತಮ್ಮದೇ  ವೆಬ್ಸೈಟ್ ಹುಟ್ಟುಹಾಕಿ ದೇವಾಡಿಗರ ಕತೆ,ಕವನ, ವೈಚಾರಿಕ ವಿಚಾರಗಳು ,ಎಲ್ಲ ದೇವಾಡಿಗ ಸಂಘಗಳ ವರದಿಯನ್ನು ಅದರಲ್ಲಿ ಫೀಡ್ ಮಾಡಿ ಲಕ್ಶಾಂತರ ದೇವಾಡಿಗರಿಗೆ ತಲುಪಿಸುತ್ತಾರೆ.
ಮೂರನೆಯವರಾಗಿ ತಲ್ಲೂರಿನ ರವಿ ದೇವಾಡಿಗರು.ಇವ್ರು ತಮ್ಮ ಸುತ್ತ ಮುತ್ತಲಿನ ಊರಿನ ವೈದ್ಯಕೀಯ ತೋಂದರೇ ಇದ್ದವರನ್ನು ಸ್ವತಃ ಸOಪರ್ಕಿಸಿ ವೈದ್ಯಕೀಯ ಸಹಾಯ ನೀಡುವ ಸಂಘಗಳಿOದ, ಉದಾರ ದಾನಿಗಳಿOದ, ಸರಕಾರದಿOದ, ಎನ್  ಜಿ  ಓ  ಗಳಿOದ ಸಹಾಯ ದೊರಕಿಸಿಕೊಡುವ ಮೂಲಕ ತನ್ನದೇ ರೀತಿಯಲ್ಲಿ ಸಮುದಾಯದ ಆಳಿಲು ಸೇವೆ ಮಾಡುತ್ತಿದ್ದಾರೆ.
ಇನ್ನು ನಾಲ್ಕನೆಯವರಾಗಿ ಶ್ರೀ ದಯಾನಂದ ದೇವಾಡಿಗ ನೇರುಲ್. ಇವ್ರು ಇಂಡಿಯಾ ಬುಲ್ ಕOಪನಿಯ ಉದ್ಯೋಗಿಯಾಗಿದ್ದು ಇವರೂ ಸಹ ತಮ್ಮ ಕOಪನಿ ಕೊಡ ಮಾಡುವ ಆರ್ಥಿಕವಾಗಿ ಹಿOದುಳಿದಿರುವ ಆಯ್ದ  ವಿಧ್ಯಾರ್ಥಿಗಳಿಗೆ ಸOಪೂರ್ಣ ಶುಲ್ಕವನ್ನು ದೇವಾಡಿಗ ಮಕ್ಕಳಿಗೆ ಕೊಡಿಸುವ ಮೂಲಕ ಸಮಾಜದ ಅಳಿಲು ಸೇವೆ ಮಾಡುತ್ತಿದ್ದಾರೆ..ಇತ್ತೀಚೆಗೆ ಮುOಬೈನ ಹೋಟೆಲ್ ಮ್ಯಾನೇಜ್ ಮೆOಟ್ ದೇವಾಡಿಗ  ವಿಧ್ಯಾರ್ಥಿಗೆ ಇಡೀ ವರ್ಷದ ಶುಲ್ಕ ರುಪೈ 80,500/- ಕೋಡಿಸುವಲ್ಲಿ ಸಫಲರಾಗಿದ್ದಾರೆ.ಅದಲ್ಲದೆ ಅದೇಸ್ಟೋ ಊರ,ಮುOಬೈನ ರೋಗಿಗಳಿಗೆ  ವೈದ್ಯಕೀಯ ನೆರೆವನ್ನು ಸೌದಿ ಅರೇಬಿಯಾದ ಎನ್ .ಜಿ .ಓ .ಸಂಸ್ಥೇ ಯಾದ " maasa " ಮೂಲಕ ವೈದ್ಯಕೀಯ ನೆರವನ್ನು ಕೊಡಿಸುತ್ತಾ ಬಂದಿದ್ದಾರೆ. ಆದರೆ ಸಮಾಜ ಹಣ ನೀಡಿ ಸಮಾಜಸೇವೆ ಮಾಡುವವರನ್ನು ಬೇಗನೆ ಗುರುತಿಸುತ್ತದೆ. ಆದರೆ ಎರಡನೆಯ ರೀತಿ ತಿಳಿಸಿದ ಸಮಾಜಸೇವೆ ಮಾಡುವವರನ್ನು ಗುರುತಿಸುವುದು ಬಹಳ ವಿರಳ. ಇನ್ನೂ ನಮ್ಮ ಸಮುದಾಯದಲ್ಲಿ ಅದೇಸ್ಟೋ ಮಂದಿ ಎಲೆ ಮರೆ ಕಾಯಿಯಂತೆ ಕೆಲಸ ಮಾಡುವವರು ಇರಬಹುದು. ಯಾವುದನ್ನೂ ಅಪೇಕ್ಷಿಸದೆ ತಮ್ಮ ಆತ್ಮ ತ್ರಪ್ತಿಗಾಗಿ ಕೆಲಸ ಮಾಡುವ ಈ ಸಮಾಜಸೇವಕರನ್ನು ದೇವರು ಚೆನ್ನಾಗಿಟ್ಟಿರಲಿ ಎOದು ನಾವೆಲ್ಲ ಆಶಿಸುವ

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

Wednesday, 6 September 2017

ಭಾರತದಲ್ಲಿ ವೈಚಾರಿಕತೆ ಪ್ರಶ್ನಿಸುವುದು ತಪ್ಪೇ ?

ಅಂದು  ಶ್ರೀ ದಾಬೋಲ್ಕರ್, ನಿನ್ನೆ ಶ್ರೀ ಕಲಬುರ್ಗಿ, ಶ್ರೀ ಜೆಡೇ ( ಮಿಡ್ ಡೇ ಪತ್ರಿಕೆ ಮುOಬೈ ) ,ಶ್ರೀ ಮಂಜುನಾಥ್ ಆರ್ ಟಿ ಐ ಕಾರ್ಯಕರ್ತ,ಇಂದು ಶ್ರೀಮತಿ ಗೌರಿ ಲಂಕೇಶ್ ಹತ್ಯೆಯಾಗಿರುವುದು ಬರೇ ವ್ಯವಸ್ಠೇ ಯಲ್ಲಿನ ಅವ್ಯವಸ್ಠೇ  ಭ್ರಸ್ಟಾಚಾರ, ಅನ್ಯಾಯ ,ಅಸಮಾನತೆಗಳನ್ನು ಪ್ರಶ್ನಿಸಿದಕ್ಕಾಗಿ.ಓದುಗರೇ ನಮಗೆ ಸOವಿಧಾನ ಅನ್ಯಾಯ  ಭ್ರಸ್ಟಾಚಾರ ನಡೆದಾಗ ಎದುರಿಗಿರುವ ವ್ಯಕ್ತಿ ಎಸ್ಟೇ ಬಲಶಾಲಿಯಾಗಿದ್ದರು ಅದನ್ನು ಬಯಲಿಗೆಳೆವ ಹಾಗು ಪ್ರತಿಭಟಿಸುವ ಹಕ್ಕನ್ನು ನೀಡಿವೆ.ಅದನ್ನು ಹತ್ತಿಕ್ಕುವ ಹಕ್ಕು  ಯಾರಿಗೂ ಇಲ್ಲ.ಆದರೆ ಇಂದು ನಮ್ಮ ದೇಶದಲ್ಲಿ ಅಧಿಕಾರಕ್ಕಾಗಿ, ಸತ್ಯದ ದಮನಕ್ಕಾಗೀ ಮನುಜ  ಮನುಜನನ್ನೇ ಕೊಲ್ಲುವ ಮಾಟ್ಟಿಗೇ ತಲುಪಿದ್ದಾನೆ.ಎಂಜಲು ಕಾಸೀಗೋಸ್ಕರ ಮನುಷ್ಯ ಪಟ್ಟಭದ್ರಹಿತಾಸಕ್ತಿಗಳ ದಾಸನಾಗಿದ್ದಾನೆ.ಈ ಹಿOದೆ ನಾನೋಂದು ಸ್ವಂತಿಕೆ ಮರೆತ ಜನ ಎOಬ ಲೇಖನ ಬರೇದಿದ್ದೆ. ಜನ ತಮ್ಮ ಸ್ವಂತಿಕೆ ಮರೆತು ಅಂದರೆ ಯಾವುದು ಸರಿ ಯಾವುದು ತಪ್ಪು ಎOಬ ವಿಚಾರವನ್ನು ಮಾಡದೆ ಅಧಿಕಾರಿಶಾಹಿಗಳ,ಬಂಡವಾಳ ಶಾಹಿಗಳ , ಧನವಂತರ, ರಾಜ ಕಾರಿಣಿಗಳ  ಕೈಗೊOಬೆಯಾಗಿರುವುದು ಇಂದಿನ ಎಲ್ಲಾ ಅನಁರ್ಥಗಳಿಗೆ ಕಾರಣ.ಇದು ದೊಡ್ದಮಟ್ಟದಲ್ಲಿ  ಕೊಲೆಯಲ್ಲಿ ಅಂತ್ಯ ಕಂಡರೆ ಇನ್ನು ಸಣ್ಣ ಮಟ್ಟದಲ್ಲಿ ಅಂದರೆ ಸಣ್ಣ ಸಣ್ಣ ಸಂಘಟನೆಗಳಲ್ಲಿ ಸತ್ಯ ವಿಚಾರಗಳನ್ನು ಎತ್ತಿ ಮುOದಿಟ್ಟಾಗ ಆ ಸಂಘಟನೆಯ ಮುಖ್ಯಸ್ಠರೇನಿಸಿ ಕೊOಡವರು ಆ ಸತ್ಯ ವಿಚಾರ ಯಾ ಸಲಹೆ ನೀಡಿದವನ ವಿಚಾರಗಳನ್ನು ಸರಿಯಾಗಿ ಅರ್ಥೈಸದೆ ಆತನನ್ನು ಆದಸ್ಟು  ಸಂಘಟನೆಯಿಂದ ದೂರವಿರಿಸಿ  ,ಮೆಟ್ಟಿ ದಬಾಯಿಸಿಡುತ್ತಾರೆ.ಇನ್ನು ಜನ    ಹೊಗಳು ಭಟರಂತೆ,ಚಮಚಾಗಿರಿ ಮಾಡುತ್ತಾ  ಕುರಿ ಮಂದೆಯಂತೆ ಸಾಗುವಾಗ ಇವರು ಮಾನಸಿಕವಾಗಿ ಇನ್ನೂ  ಇಂಗ್ಲಿಷರ  ಜಮಾನದ ಗುಲಾಮರಾಗಿರುವುದನ್ನು ತೋರಿಸುತ್ತದೆ. ಓದುಗರೇ ನೇರ ದಿಟ್ಟ ಪತ್ರಕರ್ತರ, ಆರ್  ಟಿ ಐ ಸಮಾಜ ಸೇವಕರ,ಪ್ರಗತಿಪರ ಚಿಂತಕರ ,ವಿಚಾರವಾದಿಗಳ ಹತ್ಯೆ ಖಂಡನೀಯ.ಇಂತರ ಹತ್ಯೆಗಳ ವಿರುದ್ದ ಜನತೆ ಒಂದಾಗಿ ಪ್ರತಿಭಟಿಸದೆ ಹೋದಲ್ಲಿ ಪುನಃ ಮಗದೊಮ್ಮೆ ಭಾರತ ಗುಲಾಮರಾಗುವುದರಲ್ಲಿ ಸOಶಯವೇ ಇಲ್ಲ. ಜನ ಈಗಲೂ ಎಚ್ಚತ್ತು ಸ್ವಂತ ಚಿಂತನೆಯಂತೆ ನಡೆಯದಿದ್ದರೆ,ಆಗುತ್ತಿರುವ ಎಲ್ಲಾ ಅನಾಚಾರಗಳಿಗೆ ಕಸ್ಟ ನಸ್ಟಗಳಿಗೆ ಜನತೆಯೆ ಜವಾಬ್ದಾರರಾಗುತ್ತಾರೆ.

ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿ ಮುOಬೈ

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...